Yashaswini Card-2026: ಯಶಸ್ವಿನಿ ಕಾರ್ಡ ನೊಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ!

March 5, 2026 | Siddesh
Yashaswini Card-2026: ಯಶಸ್ವಿನಿ ಕಾರ್ಡ ನೊಂದಣಿ ಆರಂಭ! ಕೂಡಲೇ ಅರ್ಜಿ ಸಲ್ಲಿಸಿ!
Share Now:

ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯು ರಾಜ್ಯದ ಸಹಕಾರಿ ಸಂಘಗಳ ಸದಸ್ಯರಿಗಾಗಿ ಅತ್ಯಂತ ಮಹತ್ವಾಕಾಂಕ್ಷೆಯ 'ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆ'ಯ 2026-27ನೇ ಸಾಲಿನ ನೋಂದಣಿ ಪ್ರಕ್ರಿಯೆಯನ್ನು(Yashaswini Card New Application) ಅಧಿಕೃತವಾಗಿ ಆರಂಭಿಸಿದೆ. "ಆರೋಗ್ಯವೇ ಐಶ್ವರ್ಯ" ಎಂಬ ಘೋಷವಾಕ್ಯದೊಂದಿಗೆ ನಡೆಯುತ್ತಿರುವ ಈ ಯೋಜನೆಯು ರೈತ ಕುಟುಂಬಗಳು ಮತ್ತು ಸಹಕಾರಿ ಸದಸ್ಯರಿಗೆ ಅತ್ಯಂತ ಕಡಿಮೆ ಪ್ರಿಮೀಯಂ ಅನ್ನು ಪಡೆದುಕೊಂಡು ಅತ್ಯುತ್ತಮ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವ ಉದ್ದೇಶ ಹೊಂದಿದೆ. ರಾಜ್ಯದ ಸಾವಿರಾರು ಕುಟುಂಬಗಳಿಗೆ ಆಪತ್ಕಾಲದಲ್ಲಿ ಆಸರೆಯಾಗುವ ಈ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು 25 ದಿನ ಮಾತ್ರ ಬಾಕಿ ಇರುತ್ತದೆ.

ಈ ಬಾರಿ ಯೋಜನೆಯಲ್ಲಿ ಹಲವು ವಿಶೇಷತೆಗಳಿದ್ದು, ನವಜಾತ ಶಿಶುವಿನಿಂದ ಹಿಡಿದು ಕುಟುಂಬದ ಯಾವುದೇ ವಯಸ್ಸಿನ ಸದಸ್ಯರು(Yashaswini Scheme) ಕೂಡ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನಗದು ರಹಿತ (Cashless) ಚಿಕಿತ್ಸೆಯ ಮೂಲಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆಸ್ಪತ್ರೆಯ ದೊಡ್ಡ ಮೊತ್ತದ ವೆಚ್ಚದ ಹೊರೆ ತಪ್ಪಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದ್ದು, ಅರ್ಹ ಫಲಾನುಭವಿಗಳು ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ: Gas Level Check-ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಈ ಟ್ರಿಕ್ಸ್‌ ಪಾಲಿಸಿ!

ಯಶಸ್ವಿನಿ ಯೋಜನೆಯಡಿ ನೋಂದಾಯಿತ ಸದಸ್ಯರು ರಾಜ್ಯದ ವಿವಿಧ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನೂರಾರು ವಿಧದ ಶಸ್ತ್ರಚಿಕಿತ್ಸೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಎಪಿಎಲ್ (APL) ಅಥವಾ ಬಿಪಿಎಲ್ (BPL) ಎಂಬ ಯಾವುದೇ ಕಾರ್ಡ್‌ಗಳ ಭೇದವಿಲ್ಲದೆ ಎಲ್ಲಾ ಅರ್ಹ ಸಹಕಾರಿ ಸದಸ್ಯರಿಗೂ(Yashaswini Card Details In Kannada) ಈ ಯೋಜನೆ ಅನ್ವಯವಾಗುವುದು ಈ ವರ್ಷದ ವಿಶೇಷ. ಯೋಜನೆಯ ಲಾಭ ಪಡೆಯಲು ಅಗತ್ಯವಿರುವ ಅರ್ಹತೆಗಳು, ಶುಲ್ಕ ಮತ್ತು ಕೊನೆಯ ದಿನಾಂಕದ ವಿವರಗಳು ಈ ಕೆಳಗಿನಂತಿವೆ.

Yashaswini Card Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಯಶಸ್ವಿನಿ ಕಾರ್ಡ ಅನ್ನು ಪಡೆಯಲು ಈ ಕೆಳಗಿನ ಮಾನದಂಡಗಳನ್ನು ಹೊಂದಿರುವ ಸಾರ್ವಜನಿಕರು ಕೂಡಲೇ ಅಗತ್ಯ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿ ನೋಂದಣಿಯನ್ನು ಮಾಡಿಕೊಳ್ಳಬಹುದು.

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.

ರಾಜ್ಯದ ಯಾವುದೇ ಸಹಕಾರಿ ಸಂಘ ಅಥವಾ ಬ್ಯಾಂಕ್‌ಗಳಲ್ಲಿ ಸದಸ್ಯರಾಗಿರುವವರು.

ಸಹಕಾರಿ ಸಂಘಗಳ ಸದಸ್ಯರ ಕುಟುಂಬದ ಎಲ್ಲಾ ಸದಸ್ಯರು (ನವಜಾತ ಶಿಶುವಿನಿಂದ ಯಾವುದೇ ವಯೋಮಿತಿ ಇಲ್ಲದೆ).

ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ಹೊಂದಿರುವ ಎಲ್ಲಾ ಅರ್ಹ ಸಹಕಾರಿ ಸದಸ್ಯರು ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: RTE Online Application-RTE ಕಾಯ್ದೆ ಸೀಟು ಹಂಚಿಕೆಗೆ ದಿನಾಂಕ ಪ್ರಕಟ: ನಿಮ್ಮ ಮಗುವಿಗೆ ಖಾಸಗಿ ಶಾಲೆ ಪ್ರವೇಶಕ್ಕೆ ಉಚಿತ ಸೀಟ್!

Yashaswini Card Regitration

ಇದನ್ನೂ ಓದಿ: Diesel Pumpset Subsidy-ಕೃಷಿ ಇಲಾಖೆಯಿಂದ ಡಿಸೇಲ್ ಪಂಪ್ ಪಡೆಯಲು ಅರ್ಜಿ ಆಹ್ವಾನ!

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

  • ನೋಂದಣಿ ಆರಂಭ: ಜನವರಿ 03, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 31, 2026
  • ಯೋಜನೆಯ ಅವಧಿ: ಏಪ್ರಿಲ್ 01, 2026 ರಿಂದ ಮಾರ್ಚ್ 31, 2027 ರವರೆಗೆ ಚಿಕಿತ್ಸೆ ಲಭ್ಯವಿರುತ್ತದೆ.

Yashaswini Card Application-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಸದಸ್ಯರು ತಾವು ಸದಸ್ಯರಾಗಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು ಅಥವಾ ಸಮೀಪದ ಸಹಕಾರಿ ಸಂಘಗಳ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: Mudra Yojane-ಮುದ್ರಾ ಯೋಜನೆ ಗ್ಯಾರಂಟಿಯಿಲ್ಲದೆ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ!

Yashaswini Card Registration Fee-ಸದಸ್ಯತ್ವ ನೋಂದಣಿ ಶುಲ್ಕದ ವಿವರ:

ಗ್ರಾಮೀಣ ಪ್ರದೇಶದವರಿಗೆ: ವಾರ್ಷಿಕ ಸದಸ್ಯತ್ವ ವಂತಿಗೆ ರೂ. 500/- (ಒಂದು ಕುಟುಂಬದ 4 ಸದಸ್ಯರಿಗೆ).

ನಗರ ಪ್ರದೇಶದವರಿಗೆ: ವಾರ್ಷಿಕ ಸದಸ್ಯತ್ವ ವಂತಿಗೆ ರೂ. 1000/- (ಒಂದು ಕುಟುಂಬದ 4 ಸದಸ್ಯರಿಗೆ).

ಸೂಚನೆ: ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಸದಸ್ಯರಿಗೆ ಅವರ ಸದಸ್ಯತ್ವ ವಂತಿಗೆಯನ್ನು ಸರ್ಕಾರವೇ ಭರಿಸಲಿದೆ.

Required Documents For Yashaswini Card-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಯಶಸ್ವಿನಿ ಕಾರ್ಡ ಅನ್ನು ಪಡೆಯಲು ಅಗತ್ಯವಾಗಿ ಒದಗಿಸಬೇಕಾದ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಆಧಾರ್ ಕಾರ್ಡ್ ಪ್ರತಿ.
  • ರೇಷನ್ ಕಾರ್ಡ್ (ಪಡಿತರ ಚೀಟಿ) ಪ್ರತಿ.
  • ಕುಟುಂಬದ ಸದಸ್ಯರ ಫೋಟೋಗಳು.

ಇದನ್ನೂ ಓದಿ: FID Update-ಪಿಎಂ ಕಿಸಾನ್ ಮತ್ತು ಬೆಳೆ ಪರಿಹಾರ ಹಣ ಪಡೆಯಲು FID ಅಪ್ಡೇಟ್ ಕಡ್ಡಾಯ!

Yashaswini Card Benefits-ಯಶಸ್ವಿನಿ ಕಾರ್ಡ್ ಪ್ರಯೋಜನಗಳು:

ನಗದು ರಹಿತ ಚಿಕಿತ್ಸೆ: ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ 5 ಲಕ್ಷ ರೂ.ವರೆಗೆ ನಗದು ರಹಿತ (Cashless) ಚಿಕಿತ್ಸಾ ಸೌಲಭ್ಯ ದೊರೆಯುತ್ತದೆ.

ಶಸ್ತ್ರಚಿಕಿತ್ಸೆಗಳು: ಯೋಜನೆಯಡಿ ಒಟ್ಟು 2,128 ವಿವಿಧ ರೀತಿಯ ಚಿಕಿತ್ಸೆಗಳು ಹಾಗೂ ಶಸ್ತ್ರಚಿಕಿತ್ಸೆಗಳಿಗೆ ಅವಕಾಶವಿರುತ್ತದೆ.

ವಯೋಮಿತಿ ಇಲ್ಲ: ಕುಟುಂಬದ ನವಜಾತ ಶಿಶುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೆ ಎಲ್ಲರೂ ಚಿಕಿತ್ಸೆ ಪಡೆಯಬಹುದು.

ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸಮೀಪದ ಸಹಕಾರಿ ಸಂಘವನ್ನು ಸಂಪರ್ಕಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: