Ration Card application-2023: ಇಂದಿನಿಂದ ರೇಷನ್ ಕಾರ್ಡ ಕುಟುಂಬದ ಮುಖ್ಯಸ್ಥರ ಬದಲಾವಣೆ ಮತ್ತು ತಿದ್ದುಪಡಿ ಪ್ರಾರಂಭ! ಇಲ್ಲಿದೆ ಅರ್ಜಿ ಸ್ಥಿತಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

ಆಹಾರ ಇಲಾಖೆ ಪ್ರಕಟಣೆ: ರೇಶನ್ ಕಾರ್ಡ್ ನಲ್ಲಿ ಮರಣ ಹೊಂದಿರುವ ಸದಸ್ಯರನ್ನು ತೆಗೆಯಲು ಹಾಗೂ ಕುಟುಂಬದ ಮುಖ್ಯಸ್ಥರನ್ನು(Ration card) ಬದಲಾವಣೆ ಮಾಡಲು ನ್ಯಾಯ ಬೆಲೆ ಅಂಗಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ, ಆದ್ದರಿಂದ ಎಲ್ಲಾ ರೇಷನ್ ಕಾರ್ಡ್ ಗ್ರಾಹಕರು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಯನ್ನು ಸಂಪರ್ಕಿಸಿ, ರೇಷನ್ ಕಾರ್ಡ್ ನಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲು ಇಲಾಖೆ ಸೂಚಿಸಿದೆ.

Ration Card application-2023: ಇಂದಿನಿಂದ ರೇಷನ್ ಕಾರ್ಡ ಕುಟುಂಬದ ಮುಖ್ಯಸ್ಥರ ಬದಲಾವಣೆ ಮತ್ತು ತಿದ್ದುಪಡಿ ಪ್ರಾರಂಭ! ಇಲ್ಲಿದೆ ಅರ್ಜಿ ಸ್ಥಿತಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.
Ration card head change details

ಆಹಾರ ಇಲಾಖೆ ಪ್ರಕಟಣೆ ರೇಶನ್ ಕಾರ್ಡ್ ನಲ್ಲಿ ಮರಣ ಹೊಂದಿರುವ ಸದಸ್ಯರನ್ನು ತೆಗೆಯಲು ಹಾಗೂ ಕುಟುಂಬದ ಮುಖ್ಯಸ್ಥರನ್ನು(Ration card) ಬದಲಾವಣೆ ಮಾಡಲು ನ್ಯಾಯ ಬೆಲೆ ಅಂಗಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ, ಆದ್ದರಿಂದ ಎಲ್ಲಾ ರೇಷನ್ ಕಾರ್ಡ್ ಗ್ರಾಹಕರು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಬರುವ ನ್ಯಾಯಬೆಲೆ ಅಂಗಡಿಯನ್ನು ಸಂಪರ್ಕಿಸಿ, ರೇಷನ್ ಕಾರ್ಡ್ ನಲ್ಲಿ ಬದಲಾವಣೆಯನ್ನು ಮಾಡಿಕೊಳ್ಳಲು ಇಲಾಖೆ ಸೂಚಿಸಿದೆ.

ರಾಜ್ಯ ಸರಕಾರದ ನೂತನ ಯೋಜನೆಗಳಾದ  ಅನ್ನ ಭಾಗ್ಯ(Annabhagya yojana) ಮತ್ತು ಗೃಹಲಕ್ಷ್ಮಿ(Gruhalakshmi yojana) ಯೋಜನೆಯಡಿ ಸವಲತ್ತು ಪಡೆಯಲು  ರೇಷನ್ ಕಾರ್ಡನಲ್ಲಿ ಮಾಹಿತಿಗಳು ಸರಿಯಾಗಿರುವುದು ಅತೀ ಮುಖ್ಯವಾಗಿದೆ ಅದರಲ್ಲೂ ಗೃಹಲಕ್ಷ್ಮಿ ಯೋಜನೆಯಡಿ ಮಾಸಿಕ ರೂ 2,000 ಪಡೆಯಲು ರೇಷನ್ ಕಾರ್ಡನಲ್ಲಿ ಯಜಮಾನಿ ಎಂದು ನಮೂದಿಸಿದವರಿಗೆ ಈ ಸೌಲಭ್ಯ ಸಿಗುತ್ತದೆ.

ಈ ಎಲ್ಲಾ ಕಾರಣಗಳಿಂದ ಹಲವು ಜನರು ತಮ ರೇಷರ್ ಕಾರ್ಡ(Ration card application) ಮಾಹಿತಿಯನ್ನು ಸರಿಪಡಿಸಿಕೊಳ್ಳಬೇಕೆಂದು ಇಲಾಖೆಯ ಪ್ರಕಟಣೆಗೆ ಕಾಯುತ್ತಿದ್ದರು ಈಗ ಅಹಾರ ಇಲಾಖೆಯ ವೆಬ್ಸೈಟ್ ಒಪನ್ ಮಾಡಲಾಗಿದ್ದು ಸ್ಥಳೀಯ ನ್ಯಾಯ ಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರು ಭೇಟಿ ಮಾಡಿ ತಮ್ಮ ರೇಷನ್ ಕಾರ್ಡ ತಿದ್ದುಪಡಿ ಮಾಡಿಸಿಕೊಳ್ಳಬವುದು.

How to change ration card details- ಹಾಲಿ ಪಡಿತರ ಚೀಟಿ ಬದಲಾವಣೆಗಳಿಗೆ ಪಡಿತರ ಚೀಟಿದಾರರು ಅನುಸರಿಸಲು ಕಾರ್ಯವಿಧಾನ:

ಹಾಲಿ ಇರುವ ಪಡಿತರ ಚೀಟಿಯಲ್ಲಿನ ಯಾವುದೇ ಬದಲಾವಣೆಗಾಗಿ ಹತ್ತಿರದ ಯಾವುದೇ ಬಯೋ ಫೋಟೋ ಸೇವಾ ಕೇಂದ್ರಕ್ಕೆ ಹೋಗಿ ನಿಮ್ಮ ವ.ಚೀ..ಯ ಸ್ಥಿತಿಯನ್ನು ಪರಿಶೀಲಿಸಿ (ಗ್ರಾಮಾಂತರ ಪ್ರದೇಶದವರು ಅವರ ಗ್ರಾಮ ಪಂಚಾಯಿತಿ ಕಛೇರಿಗೆ ಹೋಗುವುದು.)

ನಿಮ್ಮ ಪಡಿತರ ಚೀಟಿ ರದ್ದಾಗಿದ್ದಲ್ಲಿ, ಯಾವುದೇ ಬದಲಾವಣೆಗೆ ಅವಕಾಶವಿಲ್ಲ., ನೀವು ಹೊಸ ಪ.ಚೀ.ಗಾಗಿ ಆನ್ ಲೈನ್ ಅರ್ಜಿ ಸಲ್ಲಿಸಬೇಕು.

ನಿಮ್ಮ ಪಡಿತರ ಚೀಟಿ ಚಾಲ್ತಿಯಲ್ಲಿದ್ದಲ್ಲಿ ತಮಗೆ ಈ ಕೆಳಗಿನ ಯಾವುದೇ ಬದಲಾವಣೆಗೆ ಅವಕಾಶವಿದೆ.

ವಿಳಾಸ ಬದಲಾವಣೆ, ಸದಸ್ಯರ ಹೆಸರು ಸೇರ್ಪಡೆ/ಬೇರ್ಪಡೆ, ಫೋಟೋ ಮತ್ತು ಬಯೋಮೆಟ್ರಿಕ್ ಸೇರಿಸುವುದು,ಸದಸ್ಯರ ವಿವರದಲ್ಲಿ ಯಾವುದೇ ತಿದ್ದುಪಡಿ ಇವುಗಳ ಅಗತ್ಯವಿದ್ದಲ್ಲಿ.

ಇದನ್ನೂ ಓದಿ: ಬೆಳೆ ಹಾನಿ ಪರಿಹಾರ ಪರಿಷ್ಕೃತ ಮೊತ್ತದ ವಿವರ, ಮತ್ತು ಬೆಳೆ ಪರಿಹಾರದ ಅರ್ಜಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್.

ತಾವು ಈಗ ವಾಸಿಸುವ ಮನೆಯ ಇತ್ತೀಚಿನ ವಿದ್ಯುತ್ ಬಿಲ್ಲು ಮತ್ತು ಅಗತ್ಯ ಬದಲಾವಣೆಗಾಗಿ ಹೋಲಿಕೆ ದಾಖಲೆಗಳೊಂದಿಗೆ ಸೇವಾ ಕೇಂದ್ರದಲ್ಲಿಯೇ ಬದಲಾವಣೆಗಳನ್ನು ಮಾಡಿಸಿಕೊಂಡು ಕಂಪ್ಯೂಟರ್ ಮುದ್ರಿತ ಸ್ವೀಕೃತಿಯನ್ನು ಪಡೆಯಿರಿ.

ಈ ರೀತಿ ಬದಲಾಯಿಸುವಾಗ ನಿಮ್ಮ ಪಡಿತರ ಚೀಟಿ ತಾತ್ಕಾಲಿಕವೇ ಅಥವಾ "ಖಾಯಂ" ಪಡಿತರ ಚೀಟಿಯೇ ಎಂದು ತಿಳಿದುಕೊಳ್ಳಿ.

ಖಾಯಂ ಪಡಿತರ ಚೀಟಿ ಯಾಗಿದ್ದಲ್ಲಿ ತಿದ್ದುಪಡಿಗಳ ನಂತರ ಸೇವಾ ಕೇಂದ್ರದಲ್ಲಿ ಪಡೆದ ಸ್ವೀಕೃತಿ ಮತ್ತು ಹಾಲಿ ಪ.ಚೀ.ಯೊಂದಿಗೆ ಆಹಾರ ಕಛೇರಿಗೆ ಕುಟುಂಬದ ಮುಖ್ಯಸ್ಥರು ಹೋಗಿ ಪರಿಷ್ಕೃತ ಪಡಿತರ ಚೀಟಿ ಪಡೆಯಿರಿ.

ತಾತ್ಕಾಲಿಕ ವ.ಟೀ.ಯಾಗಿದ್ದಲ್ಲಿ, ಆಹಾರ ಕಛೇರಿಯಿಂದಲೇ ಪಡಿತರ ಚೀಟಿ ಪಡೆದುಕೊಳ್ಳಲು ತಿಳಿಸಿ ನಿಮಗೆ ಎಸ್.ಎಮ್.ಎಸ್. ಮೂಲಕ ಸಂದೇಶ ಬರುವವರೆಗೂ ಕಾಯುವುದು.

ತಾತ್ಕಾಲಿಕ ಪ.ಚೀ.ಹೊಂದಿರುವವರು ಖಾಯಂ ಪಡಿತರ ಚೀಟಿ ಪಡೆಯಲು SMS ಸಂದೇಶ ಬಂದ ನಂತರ ಕುಟುಂಬದ ಮುಖ್ಯಸ್ಥರು ಮಾತ್ರ ಈಗ ನಿಮ್ಮ ಬಳಿ ಇರುವ ಪ.ಚೀ.ಯೊಂದಿಗೆ ಕಛೇರಿಗೆ ಹೋಗಿ, ನಿಮ್ಮ ಬಯೋಮೆಟ್ರಿಕ್ ಹೊಂದಾಣಿಕೆ ಮಾಡಿ, ಈಗಿನ ಪ.ಚೀ. ವಾಪಸು ನೀಡಿ, ಹೊಸ ಪ.ಚೀ. ಶುಲ್ಕ ರೂ.20 ಪಾವತಿಸಿ ಹೊಸ ಪರಿಸ್ಕೃತ ಪಡಿತರ ಚೀಟಿ ಪಡೆಯುವಿರಿ.

ನಿಮ್ಮ ಕುಟುಂಬವು ಈಗಿರುವ ತಾಲ್ಲೂಕುದಲಯದಿಂದ ಬೇರೆ ತಾಲ್ಲೂಕು/ವಲಯಕ್ಕೆ ವರ್ಗಾವಣೆಯಾಗಬೇಕಿದ್ದಲ್ಲಿ ವಟೀಯನ್ನು ವರ್ಗಾಯಿಸುವ ವಿಧಾನ:

ನಿಮ್ಮದು ಹಾಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿ ಯಾಗಿರಬೇಕು.

ನಿಮ್ಮ ಪಡಿತರ ಚೀಟಿ ವಿತರಣೆಯಾಗಿರುವ ಆಹಾರ ಕಛೇರಿಗೆ ಭೇಟಿ ನೀಡಿ, ಹಾಲಿ ಪಡಿತರ ಚೀಟಿಯೊಂದಿಗೆ ವರ್ಗಾವಣೆಗಾಗಿ ಕೋರಿಕೆ ಸಲ್ಲಿಸಿ, ಆನ್ ಲೈನ್ ವರ್ಗಾನಣೆ ಸ್ಥಳದಲ್ಲೇ ಮಾಡಿಸಿ, ಸರಂಡರ್ ಸರ್ಟಿಫಿಕೇಟ್ ಪಡೆಯಿರಿ. ವರ್ಗಾವಣೆಯಾಗಿ ಹೋಗುವ ತಾಲ್ಲೂಕು ಮತ್ತು ಜಿಲ್ಲೆಯ ಹೆಸರನ್ನು ತಪ್ಪಿಲ್ಲದೇ ತಿಳಿಸುವುದು ಕಡ್ಡಾಯ.

ಸರೆಂಡರ್ ಸರ್ಟಿಫಿಕೇಟ್ ನೊಂದಿಗೆ ನೀವೀಗ ವಾಸವಿರುವ ಹೊಸ ತಾಲ್ಲೂಕು/ವಲಯ ವ್ಯಾಪ್ತಿಯ ಯಾವುದೇ “ಸೇವಾಕೇಂದ್ರ”ಕ್ಕೆ ಹೋಗಿ, ನಿಮ್ಮ ಮೊಬೈಲ್ ನಂಬರ್, ಮನೆಯ ವಿದ್ಯುತ್ ಆರ್.ಆರ್. ನಂಬರ್, ಅಡಿಗೆ ಅನಿಲ ವಿವರಗಳೊಂದಿಗೆ ನಿಮ್ಮ ಪಡಿತರ ಚೀಟಿಯ ವಿವರ ತೆರೆದು, ಅದರಲ್ಲಿ ಈಗಿನ ವಿಳಾಸ, ಕುಟುಂಬದ ಸದಸ್ಯರ ವಿವರ ಫೋಟೋ,ಬಯೋಮೆಟ್ರಿಕ್, ಇತ್ಯಾದಿ ವಿವರಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಮಾಡಿಸಿ ಅನ್ ಲೈನ್ ಅಪ್ ಲೋಡ್ ಮಾಡಿಸಿ. ಹಾಗೂ ಈ ಬಗ್ಗೆ ಕಂಪ್ಯೂಟರ್ ಮುದ್ರಿತ ಸ್ವೀಕೃತಿ ಪಡೆಯಿರಿ.

ಸ್ವೀಕೃತಿಯೊಂದಿಗೆ ಸಂಬಂಧಪಟ್ಟ ಆಹಾರ ಕಛೇರಿಗೆ ಭೇಟಿ ನೀಡಿ, ಹೊಸ ಪಡಿತರ ಚೀಟಿ ಪಡೆಯಿರಿ.

ವಿಶೇಷ ಸೂಚನೆ: 1) ಹೊರ ರಾಜ್ಯದಿಂದ ಸರೆಂಡರ್ ಅಥವಾ ಡಿಲಿಷನ್ ಪತ್ರ ಪಡೆದವರು ಹೊಸ ಪಡಿತರ ಚೀಟಿಗಾಗಿ ಆನ್ ಅರ್ಜಿಯನ್ನೇ ಸಲ್ಲಿಸಬೇಕು. 

2) ಪಡಿತರ ಚೀಟಿದಾರರ ಬಳಿ ಇರುವುದು ತಾತ್ಕಾಲಿಕ ಪಡಿತರ ಚೀಟಿ ಆಗಿದ್ದಲ್ಲಿ, ಅದನ್ನು ಖಾಯಂ ಗೊಳಿಸಿದ ನಂತರವೇ ವರ್ಗಾವಣೆ ಮಾಡಿಕೊಳ್ಳಲು ಅವಕಾಶವಿರುತ್ತದೆ.

How to check ration card status- ರೇಷರ್ನ್ ಕಾರ್ಡ ಅರ್ಜಿ ಸ್ಥಿತಿ ಚೆಕ್ ಮಾಡುವ ವೆಬ್ಸೈಟ್ ಲಿಂಕ್:

ಮೊದಲಿಗೆ ಈ https://ahara.kar.nic.in/lpg/ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ 3 ವಿಭಾಗಕ್ಕೆ ಮೂರು ಲಿಂಕ್ ಗಳು ಗೋಚರಿಸುತ್ತದೆ ಅದರಲ್ಲಿ ನಿಮ್ಮ ಜಿಲ್ಲೆಯ ಹೆಸರಿನ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಲಿ ರೇಷನ್ ಕಾರ್ಡ ಬದಲಾವಣೆ ಅರ್ಜಿ ಸ್ಥಿತಿ, ಹೊಸ ರೇಷನ್ ಕಾರ್ಡ ಅರ್ಜಿ ಸ್ಥಿತಿ ಚೆಕ್ ಮಾಡಬವುದು. ಇದಲ್ಲದೇ ರೇಷನ್ ಕಾರ್ಡ ಗೆ ಆಧಾರ್ ಲಿಂಕ್ ಸಹ ಮಾಡಬವುದು.

ಗಮನಿಸಿ: ಈ ಜಾಲತಾಣವು(Ahara website) ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ/ಒಪನ್ ಅಗುತ್ತದೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಈಗ ಮತ್ತಷ್ಟು ಸರಳ! ಅರ್ಜಿ ಸಲ್ಲಿಸಲು ಇನ್ನು ಮುಂದೆ ಮೇಸೆಜ್ ಗಾಗಿ ಕಾಯಬೇಕಿಲ್ಲ- ಸಚಿವೆ ಲಕ್ಷ್ಮಿ ಹೆಬ್ಬಾಲಕರ್.