IDFC First Bank Scholarship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ IDFC First ಬ್ಯಾಂಕ್ ನಿಂದ 1.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

September 11, 2025 | Siddesh
IDFC First Bank Scholarship-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ IDFC First ಬ್ಯಾಂಕ್ ನಿಂದ 1.0 ಲಕ್ಷ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!
Share Now:

IDFC First ಬ್ಯಾಂಕ್ ವತಿಯಿಂದ ಉನ್ನತ ಶಿಕ್ಷಣಕ್ಕೆ ಉತೇಜನ ನೀಡಲು ದೇಶದ ವಿವಿಧ ಪ್ರದೇಶದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸಲು IDFC First ಬ್ಯಾಂಕ್ ವಿದ್ಯಾರ್ಥಿವೇತನ ಕಾರ್ಯಕ್ರಮ(IDFC First Bank Engineeringn Scholarship) ಅಡಿಯಲ್ಲಿ ಸ್ಕಾಲರ್ಶಿಪ್ ಅನ್ನು ಒದಗಿಸಲು ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ IDFC First ಬ್ಯಾಂಕ್ ವಿದ್ಯಾರ್ಥಿವೇತನ ಕಾರ್ಯಕ್ರಮ(IDFC First Bank Scholarship) ಅಡಿಯಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮಾಡಲು ಪ್ರಥಮ ವರ್ಷಕ್ಕೆ ಪ್ರವೇಶವನ್ನು ಪಡೆದಿರುವ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ಮಾಡಿಕೊಡಲಾಗಿದ್ದು ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದರ ಕುರಿತು ಸಂಪೂರ್ಣ ವಿವರವನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Traffic Fine 50% Offer-ವಾಹನ ಸವಾರರಿಗೆ ಸಿಹಿ ಸುದ್ದಿ: ಟ್ರಾಫಿಕ್ ಬಾಕಿ ದಂಡ ಪಾವತಿಗೆ ಶೇ 50% ರಿಯಾಯಿತಿ!

IDFC First ಬ್ಯಾಂಕ್ ವಿದ್ಯಾರ್ಥಿವೇತನ(IDFC First Bank Scholarship Application) ಕಾರ್ಯಕ್ರಮ ಅಡಿಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಮುಖ ದಿನಾಂಕಗಳು ಯಾವುವು? ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ.

IDFC First Bank-ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಕುರಿತು ಒಂದಿಷ್ಟು ವಿವರಣೆ:

ಐಡಿಎಫ್‌ಸಿ ಬ್ಯಾಂಕ್ ಮತ್ತು ಕ್ಯಾಪಿಟಲ್ ಫಸ್ಟ್ ವಿಲೀನದ ನಂತರ ಡಿಸೆಂಬರ್ 2018 ರಲ್ಲಿ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. ಈ ಬ್ಯಾಂಕ್ ವ್ಯಕ್ತಿಗಳು, ಸಣ್ಣ ವ್ಯವಹಾರಗಳು ಮತ್ತು ನಿಗಮಗಳಿಗೆ ಹಲವಾರು ಹಣಕಾಸು ಪರಿಹಾರಗಳನ್ನು ಒದಗಿಸುತ್ತದೆ. ಇದು ರಾಷ್ಟ್ರವ್ಯಾಪಿ ಅಸ್ತಿತ್ವವನ್ನು ಹೊಂದಿದೆ ಮತ್ತು ಚಿಲ್ಲರೆ ವ್ಯಾಪಾರ, ಸಗಟು ಮತ್ತು ಇತರ ಬ್ಯಾಂಕಿಂಗ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ. ವಿದ್ಯಾರ್ಥಿವೇತನ ಕಾರ್ಯಕ್ರಮವು 2025-29 ರ ಅದರ ಸಿಎಸ್ಆರ್ ಪೌಂಡ್ ನಲ್ಲಿ ಅನುಷ್ಠಾನ ಮಾಡಲಾಗುತ್ತಿದೆ.

ಇದನ್ನೂ ಓದಿ: B.Ed Admission-2025: ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿ.ಎಡ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

IDFC First ಬ್ಯಾಂಕ್ ವಿದ್ಯಾರ್ಥಿವೇತನ ಕಾರ್ಯಕ್ರಮದ ಪ್ರಮುಖ ಅಂಶಗಳು:

ವಿದ್ಯಾರ್ಥಿವೇತನ ವಿವರ- IDFC First ಬ್ಯಾಂಕ್ ಇಂಜಿನಿಯರಿಂಗ್ ಸ್ಕಾಲರ್ಶಿಪ್
ಒದಗಿಸುವ ಕಂಪನಿ- IDFC First Bank
ವಿದ್ಯಾರ್ಥಿವೇತನ ಮೊತ್ತ- 1.0 ಲಕ್ಷ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 30 ಸೆಪ್ಟೆಂಬರ್ 2025
ಅರ್ಜಿ ಸಲ್ಲಿಸುವ ವಿಧಾನ- Online Method
ಅರ್ಜಿ ಸಲ್ಲಿಸಲು ಅರ್ಹರು- B.Tech or B.E Students
ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್- Apply Now
ಸಹಾಯವಾಣಿ- info@buddy4study.com

ಇದನ್ನೂ ಓದಿ: Bembala Bele Yojane-ಬೆಂಬಲ ಬೆಲೆಯಲ್ಲಿ ರಾಗಿಯನ್ನು ಮಾರಾಟ ಮಾಡಲು ಕೂಡಲೇ ಈ ಕೆಲಸ ಮಾಡಿ!

IDFC First Bank Scholarship Application

ಇದನ್ನೂ ಓದಿ: Grama One-ನಿಮ್ಮ ಹಳ್ಳಿಯ ಗ್ರಾಮ ಒನ್ ಕೇಂದ್ರದಲ್ಲಿ ಯಾವುದಕ್ಕೆಲ್ಲ ಅರ್ಜಿ ಸಲ್ಲಿಸಬಹುದು?

IDFC First Bank Scholarship Eligibility Criteria-ಅರ್ಜಿ ಸಲ್ಲಿಸಲು ಅರ್ಹರು:

ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಪ್ರಸ್ತುತ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದಕ್ಕಾಗಿ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳ ವಿವರ ಈ ಕೆಳಗಿನಿಂತಿದೆ:

ಅರ್ಜಿದಾರ ವಿದ್ಯಾರ್ಥಿಯು ಭಾರತೀಯ ನಾಗರಿಕರಾಗಿರಬೇಕು.
ಬಿ.ಟೆಕ್ ಅಥವಾ ಬಿಇ ವ್ಯಾಸಂಗಕ್ಕೆ ಮೊದಲ ವರ್ಷಕ್ಕೆ 2025-26 ನೇ ಸಾಲಿನಲ್ಲಿ ಪ್ರವೇಶ ಪಡೆದಿರಬೇಕು.
ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ INR 6 ಲಕ್ಷ ಮೀರಬಾರದು.
ವಿದ್ಯಾರ್ಥಿಗಳು ತಮ್ಮ ಎಂಜಿನಿಯರಿಂಗ್ ಕೋರ್ಸ್‌ಗೆ ಬೇರೆ ಯಾವುದೇ ವಿದ್ಯಾರ್ಥಿವೇತನ ಅಥವಾ ಬೋಧನಾ ಶುಲ್ಕ ವಿನಾಯಿತಿ ಪಡೆಯಬಾರದು.
IDFC FIRST ಬ್ಯಾಂಕ್ ಅಥವಾ Buddy4Study ಯ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Karnataka Guarantee Scheme-ಅನರ್ಹರಿಗಿಲ್ಲ ಗ್ಯಾರಂಟಿ ಯೋಜನೆ ಹಣ! ರಾಜ್ಯ ಸರಕಾರದಿಂದ ಮಹತ್ವದ ನಿರ್ಣಯ!

How To Apply For IDFC First Bank Scholarship-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳು ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ Buddy4Study ಜಾಲತಾಣವನ್ನು ಪ್ರವೇಶ ಮಾಡಿ ಇಲ್ಲಿ ಮುಖಪುಟದಲ್ಲಿ ಬಲಬದಿಯಲ್ಲಿ ಕಾಣುವ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: