Deepika Scholarship Scheme-ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ.30,000/-ಸ್ಕಾಲರ್‌ಶಿಪ್‌!

September 19, 2025 | Siddesh
Deepika Scholarship Scheme-ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ ರೂ.30,000/-ಸ್ಕಾಲರ್‌ಶಿಪ್‌!
Share Now:

ರಾಜ್ಯದ ವಿದ್ಯಾರ್ಥಿನಿಯರ ಶೈಕ್ಷಣಿಕ ಪಥ ಬೆಳಗಲಿರುವ "ದೀಪಿಕಾ" ಉನ್ನತ ಶಿಕ್ಷಣ ವಿದ್ಯಾರ್ಥಿವೇತನ ಮೂರು ವರ್ಷಗಳ ಅವಧಿಗೆ ಅಜೀಂ ಪ್ರೇಂಜಿ ಫೌಂಡೇಶನ್ ಜೊತೆಗೆ ಸರ್ಕಾರ ಒಡಂಬಡಿಕೆ.

ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಅಜೀಂ ಪ್ರೇಂಜಿ ಫೌಂಡೇಶನ್‍ನ ಸಹಭಾಗಿತ್ವದಲ್ಲಿ “ದೀಪಿಕಾ” ವಿದ್ಯಾರ್ಥಿವೇತನವನ್ನು ಸ್ಥಾಪಿಸುವ ಮೂಲಕ ರಾಜ್ಯದ ಉನ್ನತ ಶಿಕ್ಷಣದ ವಿದ್ಯಾರ್ಥಿನಿಯರಿಗಾಗಿ ಹೊಸ ದಿಗಂತವನ್ನು ತೆರೆದಿದೆ. 2025-26ನೇ ಸಾಲಿನಿಂದ ಈ ಆರ್ಥಿಕ ನೆರವು ರಾಜ್ಯದ ವಿದ್ಯಾರ್ಥಿನಿಯರ ಶೈಕ್ಷಣಿಕ ಪಥವನ್ನು ಬೆಳಗಲಿದೆ.

Samaja Kalyana Ilake-ಡಾ.ಬಾಬು ಜಗಜೀವನ ಚರ್ಮ ನಿಗಮದಿಂದ ವಸತಿ ಯೋಜನೆಯಡಿ ಅರ್ಜಿ ಆಹ್ವಾನ!

ಅಜೀಂ ಪ್ರೇಂಜಿ ಫೌಂಡೇಶನ್ ರಾಷ್ಟ್ರಾದ್ಯಂತ 18 ರಾಜ್ಯಗಳು ಮತ್ತು 01 ಕೇಂದ್ರಾಡಳಿತ ಪ್ರದೇಶದಲ್ಲಿ ವಿದ್ಯಾರ್ಥಿನಿಯರಿಗಾಗಿ ಉನ್ನತ ಶಿಕ್ಷಣ ವಿದ್ಯಾರ್ಥಿವೇತನವನ್ನು ನೀಡುತ್ತಿದ್ದು, 2025-26ನೇ ಸಾಲಿನಲ್ಲಿ ಒಟ್ಟು 2,50,000 ವಿದ್ಯಾರ್ಥಿವೇತನಗಳನ್ನು ನೀಡಲಿದೆ. ಕರ್ನಾಟಕ ಸರ್ಕಾರ ತನ್ನ ಕೊಡುಗೆಯನ್ನೂ ನೀಡುವ ಮೂಲಕ, 03 ವರ್ಷಗಳ ಅವಧಿಗೆ ಅಜೀಂ ಪ್ರೇಂಜಿ ಫೌಂಡೇಶನ್ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ದೀಪಿಕಾ ವಿದ್ಯಾರ್ಥಿವೇತನ'ವನ್ನು ಪ್ರಾರಂಭಿಸಿದೆ.

ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿನಿಯರು ಅರ್ಹ:

ಸರಳ ಮಾನದಂಡ, ವಿಪುಲ ವ್ಯಾಪ್ತಿ ಮತ್ತು ಗಣನೀಯ ಮೊತ್ತ ದೀಪಿಕಾ ವಿದ್ಯಾರ್ಥಿವೇತನದ ಪ್ರಮುಖ ಲಕ್ಷಣಗಳು ಎನ್ನಬಹುದು. ಈ ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿನಿಯರು 10ನೇ ಮತ್ತು 12ನೇ ತರಗತಿ (ಪಿಯುಸಿ) ಯನ್ನು ರಾಜ್ಯ ICSE/CBSE/ISC ಮೊದಲಾದ ಯಾವುದೇ ಪಠ್ಯಕ್ರಮವನ್ನು ಅನುಸರಿಸಿ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಪೂರ್ಣಗೊಳಿಸಿ, 2025-26ನೇ ಸಾಲಿನಲ್ಲಿ ಸಾಮಾನ್ಯ ಪದವಿ ಅಥವಾ ವೃತ್ತಿಶಿಕ್ಷಣ ಪದವಿ ಅಥವಾ ಇತರ ಪದವಿ ಅಥವಾ ಡಿಪ್ಲೋಮಾ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ಯಾವುದಾದರೂ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶಾತಿ ಪಡೆದಿರಬೇಕು.

ಈ ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರಿ, ಖಾಸಗಿ ಅನುದಾನಿತ ಅಥವಾ ಖಾಸಗಿ ಸಂಸ್ಥೆಗಳಾಗಿರಬಹುದು. ಈ ಕನಿಷ್ಠ ಅರ್ಹತೆಯನ್ನು ಪೂರೈಸುವ ಯಾವುದೇ ವಿದ್ಯಾರ್ಥಿನಿ ದೀಪಿಕಾ ವಿದ್ಯಾರ್ಥಿವೇತನವನ್ನು ಪಡೆದುಕೊಳ್ಳಲು ಅರ್ಹಳಾಗುತ್ತಾಳೆ.

ಇದನ್ನೂ ಓದಿ: Self Help Groups Subsidy-ಅಲ್ಪಸಂಖ್ಯಾತ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ₹ 2.00 ಲಕ್ಷ ಸಹಾಯಧನ!

2025-26ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನ:

ದೀಪಿಕಾ ವಿದ್ಯಾರ್ಥಿವೇತನದಲ್ಲಿ 02 ಭಾಗಗಳಿವೆ. ಮೊದಲನೆಯದಾಗಿ, ಪ್ರತಿ ವರ್ಷ ಅಜೀಂ ಪ್ರೇಂಜಿ ಫೌಂಡೇಶನ್ ನೀಡುವ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿವೇತನ, ಎರಡನೆಯದಾಗಿ, ಈ ಸಂಖ್ಯೆಯನ್ನು ಮೀರಿ, ಅರ್ಹ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಿದಲ್ಲಿ, ಕರ್ನಾಟಕ ಸರ್ಕಾರ ಇವರಿಗೆ ನೀಡುವ ಅದೇ ಮೊತ್ತದ ವಿದ್ಯಾರ್ಥಿವೇತನ 2025-26ನೇ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ 37,000 ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿವೇತನಗಳನ್ನು ನೀಡಲು ಅಜೀಂ ಪ್ರೇಂಜಿ ಫೌಂಡೇಶನ್ ಉದ್ದೇಶಿಸಿದೆ. ಈ ಸಂಖ್ಯೆಯು 2025-26ನೇ ಶೈಕ್ಷಣಿಕ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಮುಂದಿನ ಶೈಕ್ಷಣಿಕೆ ವರ್ಷಗಳಿಗೆ ಪರಿಶೀಲಿಸಿ ಮತ್ತು ಪರಿಷ್ಕರಿಸಲಾಗುತ್ತದೆ.

ಈ ವಿದ್ಯಾರ್ಥಿವೇತನದಡಿ ವಿದ್ಯಾರ್ಥಿನಿಯರಿಗೆ ದೊರೆಯಲಿರುವ ಆರ್ಥಿಕ ನೆರವೂ ಗಣನೀಯವಾಗಿದೆ. ಫಲಾನುಭವಿಗಳು ಕೋರ್ಸ್ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷ ರೂ.30,000/-ವನ್ನು ವಿದ್ಯಾರ್ಥಿವೇತನವಾಗಿ ನೀಡಲಾಗುತ್ತದೆ. ಫಲಾನುಭವಿಗಳು ಈ ವಿದ್ಯಾರ್ಥಿವೇತನವನ್ನು ಕಾಲೇಜಿನ ಅಥವಾ ವಿದ್ಯಾಭ್ಯಾಸಕ್ಕೆ ಪೂರಕವಾದ ಇನ್ನಾವುದೇ ಉದ್ದೇಶಗಳಿಗಾಗಿ ಶುಲ್ಕ ಉಪಯೋಗಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Azim Premji Foundation-ಅಜೀಂ ಪ್ರೇಮ್‌ಜಿ ಫೌಂಡೇಶನ್ ನಿಂದ ವಿದ್ಯಾರ್ಥಿನಿಯರಿಗೆ ₹30,000 ಸ್ಕಾಲರ್‌ಶಿಪ್!

Azim Premji Scholarship

ಇದನ್ನೂ ಓದಿ: Bele Vime Amount: ಮುಂಗಾರು ಹಂಗಾಮಿನ 291.92 ಕೋಟಿ ಬೆಳೆ ವಿಮೆ ರೈತರ ಖಾತೆಗೆ: ಸಚಿವ ಪ್ರಿಯಾಂಕ್ ಖರ್ಗೆ

ದೀಪಿಕಾ ವಿದ್ಯಾರ್ಥಿವೇತನ ಸಾಕಷ್ಟು ಬಡ ವಿದ್ಯಾರ್ಥಿನಿಯರಿಗೆ ಸಹಕಾರಿ:

ದೀಪಿಕಾ ವಿದ್ಯಾರ್ಥಿವೇತನ ವಿದ್ಯಾರ್ಥಿನಿಯರಿಗಾಗಿಯೇ ಮುಡಿಪಾಗಿರುವುದು ಇದರ ಮೊದಲ ವೈಶಿಷ್ಟ್ಯ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸುವ ಬಹುತೇಕ ವಿದ್ಯಾರ್ಥಿನಿಯರು ಗ್ರಾಮೀಣ ಪ್ರದೇಶಗಳ ಹಿನ್ನೆಲೆ ಉಳ್ಳವರಾಗಿದ್ದು, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಕೌಟುಂಬಿಕ ಪರಿಸರಕ್ಕೆ ಸೇರಿದವರಾಗಿರುತ್ತಾರೆ. ಸಾಮಾಜಿಕವಾದ ನಿಬರ್ಂಧಗಳು ಮತ್ತು ತಾರತಮ್ಯದ ಶೃಂಖಲೆಗಳಿಂದ ಅದಾಗಲೇ ಸೀಮಿತ ಅವಕಾಶಗಳಿರುವ ಈ ಹುಡುಗಿಯರಿಗೆ ಬಹುಮಟ್ಟಿಗೆ ಉನ್ನತ ಶಿಕ್ಷಣ ಗಗನ ಕುಸುಮವೇ ಸರಿ.

ಒಂದು ವೇಳೆ ಇಂತಹ ಯುವತಿಯರಲ್ಲಿ ಎಲ್ಲ ಅಡೆತಡೆಗಳನ್ನು ಮೀರಿ ಮುನ್ನಡೆಯುವ ಪ್ರಬಲ ಇಚ್ಛೆ ಮತ್ತು ಪ್ರತಿಭೆ ಇದ್ದರೂ, ಉನ್ನತ ವ್ಯಾಸಂಗಕ್ಕಾಗಿ ಶುಲ್ಕ ತೆರಲು ಮತ್ತು ಸಂಬಂಧಿತ ವೆಚ್ಚವನ್ನು ಭರಿಸಲು ಅವರಲ್ಲಿ ಆರ್ಥಿಕ ಸಾಮಥ್ರ್ಯ ಇರುವುದಿಲ್ಲ. ಸಂಪನ್ಮೂಲದ ಅಭಾವದಿಂದ ವಿದ್ಯಾರ್ಥಿನಿಯರು ಅವಕಾಶ ವಂಚಿತರಾಗುವ ಸಾಧ್ಯತೆಗಳೇ ಹೆಚ್ಚು. ಇಂತಹ ವಿದ್ಯಾರ್ಥಿನಿಯರಿಗೆ 'ದೀಪಿಕಾ ವಿದ್ಯಾರ್ಥಿವೇತನ' ಅವಕಾಶಗಳ ಬಾಗಿಲನ್ನು ತೆರೆಯುವ ಬೆಳಕಿನ ಕೀಲಿಕೈ ಆಗಲಿದೆ.

ಇದನ್ನೂ ಓದಿ: Free Bike Repair Training-ಉಚಿತ ಬೈಕ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

ವಿದ್ಯಾರ್ಥಿನಿಯರ ಉನ್ನತ ವ್ಯಾಸಂಗಕ್ಕೆ ದೀಪಿಕಾ ವಿದ್ಯಾರ್ಥಿವೇತನ ಬೆಂಬಲ:

ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ವ್ಯಾಸಂಗವನ್ನು ಆರ್ಥಿಕ ಮುಗ್ಗಟ್ಟಿನಿಂದ ಅರ್ಧಕ್ಕೇ ಮೊಟಕುಗೊಳಿಸುವ ವಿದ್ಯಾರ್ಥಿನಿಯರ ಸಂಖ್ಯೆಯೂ ಕಡಿಮೆಯೇನಲ್ಲ, ಹೀಗೆ ಉನ್ನತ ವ್ಯಾಸಂಗವನ್ನು ಮಧ್ಯದಲ್ಲೇ ತೊರೆದುಹೋದ ವಿದ್ಯಾರ್ಥಿನಿಯರು ಸಾಮಾನ್ಯವಾಗಿ ಎದುರಿಸುವ ನಿರಾಶಾದಾಯಕ ಸನ್ನಿವೇಶಗಳಲ್ಲಿ ಅಲ್ಪವಯಸ್ಸಿನಲ್ಲಿ ವಿವಾಹ, ತಾಯ್ತನದ ಹೊಣೆ, ನನಸಾಗದ ಕನಸುಗಳ ಹತಾಶೆ, ಆರ್ಥಿಕವಾಗಿ ಉತ್ತಮ ಮಟ್ಟಕ್ಕೆ ಬರಲಾರದ ಅಸಹಾಯಕತೆ, ದೈನಂದಿನ ಜೀವನದಲ್ಲಿ ದೌರ್ಜನ್ಯ, ಕ್ರೌರ್ಯ, ಪಾರತಂತ್ರ್ಯ, ದಾಸ್ಯಗಳ ವ್ಯಕ್ತಿಗತ ಅನುಭವ ಇವು ಕೆಲವೇ ಕೆಲವು ಎನ್ನಬೇಕು.

ಇನ್ನು ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಎಡೆ ಮಾಡಿಕೊಡುವ ಆರ್ಥಿಕ ಸ್ವಾತಂತ್ರ್ಯ ಮರೀಚಿಕೆಯೇ ಸರಿ. ಇಂಥ ಕತ್ತಲಾಳಕ್ಕೆ ಕುಸಿಯದಂತೆ ಕೈಹಿಡಿದು ಮೇಲೆತ್ತುವ ಬೆಂಬಲ ದೀಪಿಕಾ ವಿದ್ಯಾರ್ಥಿವೇತನ' ಎನ್ನಬಹುದು.

ಈ ವಿದ್ಯಾರ್ಥಿವೇತನದ ಇನ್ನೊಂದು ವೈಶಿಷ್ಟ್ಯ ಇದಕ್ಕಾಗಿ ನಿಗದಿಪಡಿಸಿರುವ ಮಾನದಂಡದ ಸುಲಭತೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಯಾವುದೇ ಜ್ಞಾನಶಾಖೆಯಲ್ಲಿ ಉನ್ನತ ಶಿಕ್ಷಣ ವ್ಯಾಸಂಗಕ್ಕಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನವನ್ನು ಪಡೆಯಬಹುದು. ಎಂದಾಗ, ಆರ್ಥಿಕ ನೆರವಿನ ಅಗತ್ಯವಿರುವ ಬಹುತೇಕ ವಿದ್ಯಾರ್ಥಿನಿಯರು ಈ ವಿದ್ಯಾರ್ಥಿವೇತನದ ಪರಿಧಿಯೊಳಗೆ ಸೇರಿಕೊಳ್ಳುತ್ತಾರೆ. ಅಗತ್ಯವಿರುವ 'ದೀಪಿಕಾ'ದ ದೀಪ್ತಿ ಹಲವು ಯುವತಿಯರ ಬಾಳುಗಳಿಗೆ ಬೆಳಕಾಗಲಿದೆ.

ಇದನ್ನೂ ಓದಿ: NMMS Scholarship-ಎನ್‍ಎಂಎಂಎಸ್ ಯೋಜನೆಯಡಿ ಪ್ರತಿ ತಿಂಗಳು 1,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಅಸಂಖ್ಯ ವಿದ್ಯಾರ್ಥಿನಿಯರ ಬದುಕನ್ನು ಉನ್ನತೀಕರಿಸುವ ವಿದ್ಯಾರ್ಥಿವೇತನ:

ಆರ್ಥಿಕ ಸಂಕಷ್ಟಗಳಿಂದ ತಮ್ಮ ಬುದ್ಧಿವಂತಿಕೆ ಮತ್ತು ಸಾಮಥ್ರ್ಯಗಳನ್ನು ಪೂರ್ಣರೂಪದಲ್ಲಿ ಉಪಯೋಗಿಸಿಕೊಳ್ಳಲಾಗದ ಯುವತಿಯರು ದೀಪಿಕಾ ವಿದ್ಯಾರ್ಥಿವೇತನದ ನೆರವಿನಿಂದ ತಮ್ಮ ಕೋರ್ಸ್‍ಗಳನ್ನು ಪೂರೈಸಿ, ಉದ್ಯೋಗಗಳನ್ನು ಪಡೆದು, ನಿಶ್ಚಿಂತೆಯಿಂದ ತಮ್ಮ ಗುರಿಗಳನ್ನು ಸಾಧಿಸಿಕೊಳ್ಳುವತ್ತ ಗಮನ ಹರಿಸಬಹುದು.

ಆರ್ಥಿಕವಾಗಿ ಸ್ವಾವಲಂಬಿಗಳಾಗುವುದರ ಜೊತೆಗೆ ಸಮಾಜದ ವಿವಿಧ ಕ್ಷೇತ್ರಗಳಿಗೆ ತಮ್ಮ ಯೋಗದಾನ ನೀಡಿ ಮನ್ನಣೆ ಗಳಿಸಬಹುದು. ಮುಂದೆ, ತಮ್ಮ ಕುಟುಂಬವನ್ನು ಉನ್ನತ ಶಿಕ್ಷಣದ ವಲಯದೊಳಗೆ ಕರೆತಂದು ಉದ್ಧರಿಸಬಹುದು, ಹೀಗೆ ಯಶಸ್ವಿಗಳಾದ ಸುಶಿಕ್ಷಿತ ಮಹಿಳೆಯರ ಸ್ವ-ನಿರ್ಭರ ಜೀವನದ ಉತ್ತಮಿಕೆ ಸಮಾಜಕ್ಕೆ ಮೇಲ್ಪಂಕ್ತಿಯಾಗುವುದರಿಂದ ದೀಪಿಕಾ ವಿದ್ಯಾರ್ಥಿವೇತನದ ದ್ಯುತಿ ನೂರಾರು ದೀಪಿಕೆಗಳನ್ನು ಹೊತ್ತಿಸಿ, ಅಸಂಖ್ಯ ವಿದ್ಯಾರ್ಥಿನಿಯರ ಬದುಕನ್ನು ಉನ್ನತೀಕರಿಸಬಲ್ಲದು.

ಒಟ್ಟಿನಲ್ಲಿ, ದೀಪಿಕಾ ವಿದ್ಯಾರ್ಥಿವೇತನವನ್ನು ಸಂಸ್ಥಾಪಿಸಿರುವ ಕರ್ನಾಟಕ ಸರ್ಕಾರ ಹಾಗೂ ಅಜೀಂ ಪ್ರೇಂಜಿ ಫೌಂಡೇಶನ್‍ಗಳಿಗೆ ಸ್ತ್ರೀಪರ ದನಿಗಳ, ಮಾತ್ರವಲ್ಲ, ಮಾನವೀಯ ಚಿಂತನೆಯುಳ್ಳ ಇಡೀ ರಾಜ್ಯದ ಜನತೆಯ ಪ್ರಶಂಸೆಗಳು ಸಲ್ಲಬೇಕು. ಖಾಸಗಿ ಸಂಸ್ಥೆಗಳು ಸಾಮಾಜಿಕ ಕಳಕಳಿಯನ್ನು ಹೀಗೆ ಕಾರ್ಯರೂಪಕ್ಕೆ ತರಬೇಕು. ಇವುಗಳಿಗೆ ಆಡಳಿತ ಯಂತ್ರ ಕರ್ನಾಟಕ ಸರ್ಕಾರದಂತೆ ಹೆಗಲು ಕೊಡಬೇಕು. ಆಗ ಜನಹಿತ ಸಾಧನೆ ವಾಸ್ತವವಾಗುತ್ತದೆ. ಇಂಥ ಸಹಭಾಗಿತ್ವಗಳ ಫಲಶ್ರುತಿ ಕೇವಲ ಆರ್ಥಿಕವಾಗಿ ಅಲ್ಲ,

Ajith Premji scholarship-ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ-Apply Now

Ajith Premji scholarship Website-ಹೆಚ್ಚಿನ ಮಾಹಿತಿ ತಿಳಿಯಲು ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: