Dairy Equipment Subsidy-ಹಸು ಸಾಕಾಣಿಕೆಗೆ ಪೂರಕ ಯಂತ್ರ ಮತ್ತು ಕೊಟ್ಟಿ ನಿರ್ಮಾಣಕ್ಕೆ ಸಬ್ಸಿಡಿ ಪಡೆಯುವುದು ಹೇಗೆ?

December 21, 2025 | Siddesh
Dairy Equipment Subsidy-ಹಸು ಸಾಕಾಣಿಕೆಗೆ ಪೂರಕ ಯಂತ್ರ ಮತ್ತು ಕೊಟ್ಟಿ ನಿರ್ಮಾಣಕ್ಕೆ ಸಬ್ಸಿಡಿ ಪಡೆಯುವುದು ಹೇಗೆ?
Share Now:

ಗ್ರಾಮೀಣ ಮತ್ತು ನಗರ ಪ್ರದೇಶದ ವ್ಯಾಪ್ತಿಯಲ್ಲಿ ಹೈನುಗಾರಿಕೆಯನ್ನು ಮಾಡುತ್ತಿರುವ ರೈತರು ಹಸು ಸಾಕಾಣಿಕೆ(Dairy Farming Subsidy Schemes) ಬಹು ಮುಖ್ಯವಾಗಿ ಬೇಕಾಗುವ ಪ್ರಮುಖ ಉಪಕರಣಗಳನ್ನು ಸಬ್ಸಿಡಿಯಲ್ಲಿ ಹೇಗೆ ಪಡೆಯಬಹುದು ಎನ್ನುವ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಹಂಚಿಕೊಳ್ಳಲಾಗಿದ್ದು, ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿ.

ಹಾಲು ಕರೆಯುವ(Milking Machine) ಮತ್ತು ಮೇವು ಕತ್ತರಿಸುವ ಯಂತ್ರ(Chap Cutter), ಕೊಟ್ಟಿಗೆ ನೆಲ ಹಾಸಿನ ಮೇಲೆ ಹಾಕಲು ಕೌ ಮ್ಯಾಟ್(Cow Mat) ಹಾಗೂ ಕೊಟ್ಟಿಗೆ ನಿರ್ಮಾಣಕ್ಕೆ, ಹಾಲುಗೆ ಸಂಬಂಧಿಸಿದ ಉಪ ಉತ್ಪನ್ನವನ್ನು ತಯಾರಿಸಲು ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬಹುದು ಎನ್ನುವ ಮಾಹಿತಿಯನ್ನು ಸಹ ಇಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Digital e-Stamp -ಛಾಪಾ ಕಾಗದ ವಹಿವಾಟಿಗೆ ಸ್ಟ್ಯಾಂಪ್ ಪೇಪರ್ ಬದಲಿಗೆ ಇ-ಸ್ಟ್ಯಾಂಪ್: ಸಚಿವ ಕೃಷ್ಣಬೈರೇಗೌಡ!

ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಅನೇಕ ರೈತರಿಗೆ ವಿವಿಧ ಯಂತ್ರ ಮತ್ತು ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ಯಾವೆಲ್ಲ ಯೋಜನೆ ಅಡಿಯಲ್ಲಿ ಆರ್ಥಿಕ ನೆರವನ್ನು ಪಡೆಯಬಹುದು ಎನ್ನುವ ಮಾಹಿತಿ ಸಮರ್ಪಕವಾಗಿ ಇರುವುದಿಲ್ಲ ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ಒಂದಿಷ್ಟು ಅಗತ್ಯ ಮಾಹಿತಿಯನ್ನು ವಿವರಿಸಲಾಗಿದೆ.

Dairy Equipment Subsidy In Karnataka-ಯಾವುದಕ್ಕೆಲ್ಲ ಸಹಾಯಧನ ಪಡೆಯಬಹುದು:

ರೈತರು ಹೈನುಗಾರಿಕೆಯನ್ನು ಪ್ರಾರಂಭಿಸಲು ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ಘಟಕಗಳಿಗೆ ಶೇ 50% ರಿಂದ ಶೇ 90% ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ.

1) ಕೌ ಮ್ಯಾಟ್
2) ಮೇವು ಕತ್ತರಿಸುವ ಯಂತ್ರ
3) ಹಾಲು ಕರೆಯುವ ಯಂತ್ರ
4) ಹೈನುಗಾರಿಕೆಗೆ ಕೊಟ್ಟಿಗೆ ನಿರ್ಮಾಣ ಮಾಡಿಕೊಳ್ಳಲು ನರೇಗಾ ಮತ್ತು PMEGP ಯೋಜನೆಯಡಿ ಸೌಲಭ್ಯ ಪಡೆಯಬಹುದು.
5) ಹಾಲಿನಿಂದ ಉಪ ಉತ್ಪನ್ನ ತಯಾರಿಸಲು PMFME ಯೋಜನೆಯಡಿ ಸಹಾಯಧನ ಪಡೆದು ಘಟಕ ಸ್ಥಾಪನೆ ಮಾಡಿಕೊಳ್ಳಬಹುದು.

ಇದನ್ನೂ ಓದಿ: Ganga Kalyana Yojana-ಬೋರ್ವೆಲ್ ಕೊರೆಸಲು ₹4.0 ಲಕ್ಷ ಸಹಾಯಧನ! ಇಲ್ಲಿದೆ ಸಂಪೂರ್ಣ ವಿವರ!

Dairy Farming Subsidy Yojana-ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

KMF ಮತ್ತು ಪಶು ಪಾಲನಾ ಇಲಾಕೆಯಿಂದ ಕೌ ಮ್ಯಾಟ್,ಮೇವು ಕತ್ತರಿಸುವ ಯಂತ್ರ,ಹಾಲು ಕರೆಯುವ ಯಂತ್ರಕ್ಕೆ ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ ಇದಕ್ಕಾಗಿ ನಿಮ್ಮ ತಾಲ್ಲೂಕಿನ ಪಶು ಆಸ್ಪರ್ತೆಯನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಬಹುದು.

ಹಸು ಸಾಕಾಣಿಕೆಗೆ ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಳ್ಳಲು ಗ್ರಾಮ ಪಂಚಾಯತಿವತಿಯಿಂದ ನರೇಗಾ ಯೋಜನೆಯಡಿ ರೂ 57,000/- ಆರ್ಥಿಕ ನೆರವನ್ನು ಪಡೆಯಲು ಅವಕಾಶವಿದ್ದು ಇದಕ್ಕಾಗಿ ನಿಮ್ಮ ಹೆಸರನ್ನು ಕ್ರಿಯಾ ಯೋಜನೆಯಲ್ಲಿ ಸೇರಿಸಿ ಒಂದು ವರ್ಷ ಮುಂಚಿತವಾಗಿ ಅನುಮೋದನೆಯನ್ನು ಪಡೆದುಕೊಂಡು ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಳ್ಳಲು ಕೂಡಲೇ ನಿಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ.

ಇದನ್ನೂ ಓದಿ: Online E-Khata-ಇನ್ಮುಂದೆ ಮನೆಯಲ್ಲೇ ಕುಳಿತು ಇ-ಖಾತಾ ಪಡೆದುಕೊಳ್ಳಬಹುದು!

PMFME Scheme-ಹಾಲಿನಿಂದ ಉಪ ಉತ್ಪನ್ನ ತಯಾರಿಕೆಗೆ 50% ಸಬ್ಸಿಡಿ ಲಭ್ಯ:

ಈಗಾಗಲೇ ಹೈನುಗಾರಿಕೆಯನ್ನು ಮಾಡುತ್ತಿರುವ ರೈತರು ಹಾಲಿನಿಂದ ತುಪ್ಪ,ಮೊಸರು, ಹಾಲಿನ ಪ್ಯಾಕೇಟ್ ಮಾಡಿ ನೇರವಾಗಿ ಸ್ವಂತ ಬ್ರಾಂಡ್ ನಲ್ಲಿ ಮಾರಾಟ ಮಾಡಲು ಅವಶ್ಯವಿರುವ ಯಂತ್ರಗಳನ್ನು ಮತ್ತು ಯಂತ್ರಗಳನ್ನು ಒಂದು ಸ್ಥಳದಲ್ಲಿ ಇಡಲು ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳುಲು PMFME ಯೋಜನೆಯಡಿ ಶೇ 50% ಗರಿಷ್ಠ 15 ಲಕ್ಷ ಸಬ್ಸಿಡಿಯನ್ನು ಪಡೆಯಲು ಅವಕಾಶವಿರುತ್ತದೆ ಇದಕ್ಕಾಗಿ ನಿಮ್ಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಭೇಟಿ ಮಾಡಿ ಅಥವಾ ಈ ಕೆಳಗೆ ನೀಡಿರುವ ಅಧಿಕೃತ PMFME ಯೋಜನೆಯ ವೆಬ್ಸೈಟ್ ಅನ್ನು ಭೇಟಿ ಮಾಡಿ ನಿಮ್ಮ ಜಿಲ್ಲೆಯ DRP ಅವರನ್ನು ಸಂಪರ್ಕಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.

ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು PMFME ಅಧಿಕೃತ ವೆಬ್ಸೈಟ್- Click Here

ಇದನ್ನೂ ಓದಿ: Tata Capital Scholarship-ಟಾಟಾ ಕ್ಯಾಪಿಟಲ್ ವತಿಯಿಂದ 18,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ವಿವರ!

Dairy Farming Subsidy in karnataka

ಇದನ್ನೂ ಓದಿ: BPL Card News-ಬಿ.ಪಿ.ಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ : ಸಚಿವ ಕೆ.ಎಚ್.ಮುನಿಯಪ್ಪ

Selco Fundation ನಿಂದ ಸಬ್ಸಿಡಿಯಲ್ಲಿ ಸೋಲಾರ್ ಹಾಲು ಕರೆಯುವ ಯಂತ್ರ ಲಭ್ಯ:

ಸೆಲ್ಕೋ ಪೌಂಡೇಶನ್ ವತಿಯಿಂದ ಸೋಲಾರ್ ಚಾಲಿತ ಹಾಲು ಕರೆಯುವ ಯಂತ್ರವನ್ನು ಪಡೆಯಲು ಅವಕಾಶವಿದ್ದು ಇದಕ್ಕಾಗಿ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ನಿಮ್ಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅಥವಾ ಈ ಕೆಳಗೆ ನೀಡಿರುವ ಅಧಿಕೃತ ಸೆಲ್ಕೋ ಪೌಂಡೇಶನ್ ವೆಬ್ಸೈಟ್ ಅನ್ನು ಭೇಟಿ ಮಾಡಿ Selco Fundation ಸಿಬ್ಬಂದಿಯ ಮಾಹಿತಿಯನ್ನು ಪಡೆದು ಅರ್ಜಿ ಸಲ್ಲಿಸಿ ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

Selco Fundation ಅಧಿಕೃತ ವೆಬ್ಸೈಟ್- Click Here

ಇದನ್ನೂ ಓದಿ: Free Drone Training-ಕ್ರಿಶ್ಚಿಯನ್ ನಿಗಮದಿಂದ ಉಚಿತ 15 ದಿನಗಳ ಡ್ರೋನ್ ತರಬೇತಿ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

PMEGP ಯೋಜನೆಯಡಿ ಶೇ 35% ಸಹಾಯಧನದಲ್ಲಿ ಹೈನುಗಾರಿಕೆ ಆರಂಭಿಸಬಹುದು:

ಹೈನುಗಾರಿಕೆಯನ್ನು ಆರಂಭಿಸು ಅಲೋಚನೆಯನ್ನು ಹೊಂದಿರುವ ಯುವಕರು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯನ್ನು ನೇರವಾಗಿ ಭೇಟಿ ಮಾಡಿ PMEGP ಯೋಜನೆಯಡಿ ಸೌಲಭ್ಯ ಪಡೆಯುವುದರ ಬಗ್ಗೆ ಮಾಹಿತಿಯನ್ನು ಪಡೆದು ನಿಮ್ಮ ಜಿಲ್ಲೆಯ ಜಿಲ್ಲಾ ಕೈಗಾರಿಕ ಕೇಂದ್ರ(DIC Office) ಕಚೇರಿಯನ್ನು ಭೇಟಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ನಿಮ್ಮ ಉಳಿತಾಯ ಖಾತೆಯಿರುವ ಬ್ಯಾಂಕ್ ನಲ್ಲಿ ಸಾಲವನ್ನು ಪಡೆದು ಶೇ 35% ಸಬ್ಸಿಡಿಯಲ್ಲಿ ಕೊಟ್ಟಿಗೆ ನಿರ್ಮಾಣ ಮತ್ತು ಹಸುಗಳ ಖರೀದಿ, ಹೈನುಗಾರಿಕೆಗೆ ಅವಶ್ಯಕ ಯಂತ್ರಗಳನ್ನು ಖರೀದಿಸಲು ಅವಕಾಶವಿರುತ್ತದೆ.

PMEGP ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: