Free Neurology Treatment-ನರಮಂಡಲ ರೋಗಿಗಳಿಗೆ ಸರ್ಕಾರದಿಂದ 2 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ!

January 18, 2026 | Siddesh
Free Neurology Treatment-ನರಮಂಡಲ ರೋಗಿಗಳಿಗೆ ಸರ್ಕಾರದಿಂದ 2 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ!
Share Now:

ಕರ್ನಾಟಕ ಸರ್ಕಾರದ 'ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ' ಯೋಜನೆಯಡಿ ಇದೀಗಾ ಗಿಲೆನ್-ಬಾರಿ ಸಿಂಡ್ರೋಮ್ (Guillain-Barré Syndrome) ಎಂಬ ನರಮಂಡಲದ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ದುಬಾರಿ ಚಿಕಿತ್ಸೆಯನ್ನು ಕೈಗೆಟುಕುವಂತೆ ಮಾಡುವ ಮೂಲಕ ನೆರವಾಗಲು ಆರೋಗ್ಯ ಇಲಾಖೆಯ ವತಿಯಿಂದ 2 ಲಕ್ಷದ ವರೆಗೆ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.

ಈ ಕಾಯಿಲೆಯ ಚಿಕಿತ್ಸೆಯಲ್ಲಿ ಅತ್ಯಂತ ಪ್ರಮುಖವೂ ಮತ್ತು ದುಬಾರಿಯೂ(Free Neurology Treatment) ಆದ 'ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್' (Intravenous Immunoglobulin) ಚಿಕಿತ್ಸೆಯನ್ನು ಈಗ 'ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ' (AB PMJAY-CM's ArK) ಯೋಜನೆಯ ವ್ಯಾಪ್ತಿಗೆ ತರಲಾಗಿದೆ.

ಇತ್ತೀಚಿನ ದಿನಗಳಲ್ಲಿ ನರಮಂಡಲದ ಸಮಸ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ರೋಗಿಗಳ ಬದುಕಿನ ಮೇಲೆ ದೊಡ್ಡ(nerve disorders) ಪರಿಣಾಮವನ್ನು ಬೀರುತ್ತವೆ. ಇದರ ಹಿನ್ನಲೆಯಲ್ಲಿ ಬಡ ಹಾಗೂ ಆರ್ಥಿಕವಾಗಿ ದುರ್ಬಲಲಾಗಿರುವ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಸರ್ಕಾರವು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Re-Marriage Assistance-ವಿಧವಾ ಮರು ವಿವಾಹ ಪ್ರೋತ್ಸಾಹಧನ ಯೋಜನೆಯಡಿ ₹3.0 ಲಕ್ಷ ಆರ್ಥಿಕ ನೆರವು!

What is Guillain-Barré Syndrome-ಗಿಲೆನ್-ಬಾರಿ ಸಿಂಡ್ರೋಮ್ (GBS) ಎಂದರೇನು?

ಗಿಲೆನ್-ಬಾರಿ ಸಿಂಡ್ರೋಮ್ (Guillain-Barré Syndrome) ಇದು ಗಂಭೀರ ಆಟೋ ಇಮ್ಯೂನ್ ಕಾಯಿಲೆಯಾಗಿದ್ದು, ದೇಹದ ರೋಗನಿರೋಧಕ ವ್ಯವಸ್ಥೆಯೇ ತಪ್ಪಾಗಿ ನರಮಂಡಲದ ಮೇಲೆ ದಾಳಿ ಮಾಡುತ್ತದೆ. ಇದು ಸಾಮಾನ್ಯವಾಗಿ ಹೊಟ್ಟೆ ಸೋಂಕು ಅಥವಾ ಉಸಿರಾಟದ ಕಾಯಿಲೆಯ ನಂತರ ಪ್ರಾರಂಭವಾಗುತ್ತದೆ. ನರಗಳ ಮೈಲಿನ್ ಶೀತ್ ಹಾನಿಗೊಳಗಾದ ಕಾರಣದಿಂದ ಮೆದುಳಿಗೆ ಸಂಕೇತ ಸಾಗಿಸುವಲ್ಲಿ ತೊಂದರೆ ಉಂಟು ಮಾಡುತ್ತದೆ.

ಈ ಕಾಯಿಲೆ ಸಾಮಾನ್ಯವಾಗಿ ಕಾಲುಗಳಲ್ಲಿ ಮರಗಟ್ಟುವಿಕೆ ಮತ್ತು ದೌರ್ಬಲ್ಯದಿಂದ ಆರಂಭವಾಗಿ ಮೇಲ್ಭಾಗಕ್ಕೆ ಶೀಘ್ರವಾಗಿ ಹರಡುತ್ತದೆ. ತೀವ್ರಗೊಂಡರೆ ಸ್ನಾಯುಗಳ ಪಾರ್ಶ್ವವಾಯು ಮತ್ತು ಉಸಿರಾಟದ ತೊಂದರೆ ಉಂಟಾಗಿ ತುರ್ತು ವೈದ್ಯಕೀಯ ಸ್ಥಿತಿ ಉಂಟಾಗುತ್ತದೆ. ಸರಿಯಾದ ಸಮಯದಲ್ಲಿ ಪ್ಲಾಸ್ಮಾ ಎಕ್ಸ್ಚೇಂಜ್ ಅಥವಾ ಇಮ್ಯುನೊಗ್ಲಾಬ್ಯುಲಿನ್ ಚಿಕಿತ್ಸೆ ನೀಡಿದರೆ ಹೆಚ್ಚಿನ ರೋಗಿಗಳು ಸಂಪೂರ್ಣ ಗುಣಮುಖರಾಗುತ್ತಾರೆ.

ಇದನ್ನೂ ಓದಿ: JK Tyre Scholarship-ಜೆಕೆ ಟೈರ್ & ಇಂಡಸ್ಟ್ರೀಸ್ ಲಿಮಿಟೆಡ್‌ನ ವತಿಯಿಂದ 25,000 ವಿದ್ಯಾರ್ಥಿವೇತನಕ್ಕೆ ಅರ್ಜಿ!

Purpose Of This Scheme-ಈ ಯೋಜನೆಯ ಮುಖ್ಯ ಉದ್ದೇಶವೇನು?

ಅದೆಷ್ಟೋ ಬಡ ಕುಟುಂಬಗಳ ಆರ್ಥಿಕ ಸ್ಥಿತಿಯು ಕೆಳಮಟ್ಟಕ್ಕಿರುತ್ತದೆ ಅಂತಹ ಸಂಕಷ್ಟದಲ್ಲಿರುವ ರೋಗಿಗಳು ಚಿಕಿತ್ಸೆಯ ಕೊರತೆಯಿಂದ ತಮ್ಮ ಆರೋಗ್ಯವನ್ನು ಕಳೆದುಕೊಂಡಿರುವ ಸಂಗತಿಗಳನ್ನು ನೋಡಿದ್ದೇವೆ. ಇದಲ್ಲದೆ ನರ ಕಾಯಿಲೆಗಳಿಗೆ ಅಗತ್ಯವಾಗುವ MRI, CT Scan, EEG, EMG, ನ್ಯೂರೋ ಸರ್ಜರಿ, ಔಷಧಿ ಹಾಗೂ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ ಆದ್ದರಿಂದ ಸರ್ಕಾರವು ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಎಲ್ಲಾ ಕರ್ಚುಗಳನ್ನು ಸರ್ಕಾರವು ಭರಿಸಬೇಕೆಂದು ತೀರ್ಮಾನ ಮಾಡಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Vasati Yojane-ರಾಜೀವ ಗಾಂಧಿ ವಸತಿ ನಿಗಮದಿಂದ ಕೇವಲ 9.7 ಲಕ್ಷಕ್ಕೆ 1BHK ಫ್ಲಾಟ್ ಪಡೆಯಲು ಅರ್ಜಿ ಆಹ್ವಾನ!

Uses Of This Scheme-ಈ ಯೋಜನೆಯ ಅಡಿಯಲ್ಲಿ ಸಿಗುವ ಸೌಲಭ್ಯಗಳಾವುವು?

ಈ ಯೋಜನೆಯ ಅಡಿಯಲ್ಲಿ ಪ್ರತಿ ರೋಗಿಗೆ IVIG ಥೆರಪಿಗಾಗಿ ಗರಿಷ್ಠ 2 ಲಕ್ಷ ರೂಪಾಯಿಗಳವರೆಗೆ ಆರ್ಥಿಕ ಸಹಾಯವನ್ನು ನೀಡಲಾಗುತ್ತದೆ.

ಈ ಮೊದಲು ಇದ್ದ ಮೂಲ ಚಿಕಿತ್ಸೆಯ ಜೊತೆಗೆ ಈಗ IVIG ಥೆರಪಿಯನ್ನೂ 'ಹೆಚ್ಚುವರಿ ಪ್ಯಾಕೇಜ್' ಆಗಿ ನೀಡಲಾಗುವುದು.

ರೋಗಿಯ ಚಿಕಿತ್ಸೆಗೆ ಬಳಸುವ IVIG ಔಷಧಿಯ ದರವನ್ನು ಸರ್ಕಾರವು ಪ್ರತಿ ಗ್ರಾಂಗೆ 2,000 ರೂಪಾಯಿಗಳಿಗೆ ನಿಗದಿಪಡಿಸಿದೆ.

ರೋಗಿಯ ದೇಹದ ಪ್ರತಿ ಕೆಜಿ ತೂಕಕ್ಕೆ 2 ಗ್ರಾಂ ಔಷಧಿಯಂತೆ ಡೋಸೇಜ್ ಲೆಕ್ಕಹಾಕಲಾಗುತ್ತದೆ. ಹಾಗೆಯೇ ಒಂದು ಚಿಕಿತ್ಸಾ ಅವಧಿಗೆ ಗರಿಷ್ಠ 20 ಗ್ರಾಂ ವರೆಗೆ ಮಾತ್ರ ಈ ಔಷಧಿಯ ಬಳಕೆಯನ್ನು ನಿಗದಿಪಡಿಸಲಾಗಿದೆ.

ಈ ಚಿಕಿತ್ಸಾ ಸೌಲಭ್ಯವು ರಾಜ್ಯದಾದ್ಯಂತ ಇರುವ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಈ ಯೋಜನೆಯ ಅಡಿಯಲ್ಲಿ ನೋಂದಾವಣೆ ಆಗಿರುವ ಖಾಸಗಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವು ದೊರೆಯುತ್ತದೆ.

ಇದನ್ನೂ ಓದಿ: Vermicompost subsidy-ಎರೆಹುಳು ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ 20,000 ಸಹಾಯಧನ!

How to get a health card-ಆರೋಗ್ಯ ಕಾರ್ಡ ಅನ್ನು ಹೇಗೆ ಪಡೆಯಬೇಕು?

1) ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ' ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿ ಆರೋಗ್ಯ ಕಾರ್ಡ್ ವಿತರಿಸಲಾಗುತ್ತದೆ ಈ ಕಾರ್ಡ್‌ ನ್ನು "ಎಬಿಎಆರ್ಕೆ" ಕಾರ್ಡ್ ಎಂದು ಕರೆಯಲಾಗುವುದು ಮತ್ತು ವಿಶಿಷ್ಟ ಐಡಿ ಸಂಖ್ಯೆಯೊಂದಿಗೆ ನೀಡಲಾಗುವುದು.

2) ಆಧಾರ್ ಕಾರ್ಡ್ ಹಾಗೂ ಪಡಿತರ ಕಾರ್ಡ್‌ಗಳನ್ನು ಹಾಜರುಪಡಿಸಿ "ಎಬಿಎಆ‌ರ್ಕೆ ಕಾರ್ಡ್ ಪಡೆದುಕೊಳ್ಳಬಹುದು. ಆರ್.ಎಸ್.ಬಿ.ವೈ ಕಾರ್ಡು ಹೊಂದಿರುವವರು ಆ ಕಾರ್ಡ ಹಾಜರುಪಡಿಸಬಹುದು.

3) ಆಧಾರ್ ಕಾರ್ಡ್ ಹೊಂದಿಲ್ಲದ ರೋಗಿಗೆ ಪಡಿತರ ಚೀಟಿ ಆಧಾರದಲ್ಲಿ ನೋಂದಣಿ ಮಾಡಲಾಗುವುದು. ಅಂತಹ ವ್ಯಕ್ತಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಮಾತ್ರ ಚಿಕಿತ್ಸೆ ಒದಗಿಸಲಾಗುವುದು. ಆದರೆ ಖಾಸಗಿ ಆಸ್ಪತ್ರೆಯಲ್ಲಿ ರೆಫರಲ್ ಮೂಲಕ ಚಿಕಿತ್ಸೆ ಪಡೆಯಲು ಆಧಾರ್ ಅನ್ನು ನೋಂದಣಿ ಮಾಡುವುದು ಅವಶ್ಯವಿರುತ್ತದೆ.

4) ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ "ಎಬಿಎಆರ್ಕೆ ಕಾರ್ಡ್‌ ಅನ್ನು ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10/- ಶುಲ್ಕದೊಂದಿಗೆ ನೀಡಲಾಗುತ್ತದೆ.

5) ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಲ್ಲಿ ರೂ. 35 ಶುಲ್ಕದೊಂದಿಗೆ "ಎಬಿಎಆರ್‌ಕೆ" ಕಾರ್ಡ್ ನೀಡಲಾಗುತ್ತದೆ.

ಇದನ್ನೂ ಓದಿ: Housing Subsidy-ಡಾ. ಬಿ.ಆರ್ ಅಬೇಡ್ಕರ್ ನಿವಾಸ ಯೋಜನೆ ಸ್ವಂತ ಮನೆ ನಿರ್ಮಾಣಕ್ಕೆ ರೂ 2.0 ಲಕ್ಷ ಸಹಾಯಧನ!

free Neurology care

ಇದನ್ನೂ ಓದಿ: Myntra Scholarship-ಮೈಂತ್ರಾ ಕಂಪನಿಯಿಂದ ರೂ 60,000/- ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Who Can Eligible For this Scheme-ಈ ಸೌಲಭ್ಯವನ್ನು ಪಡೆಯಲು ಯಾರೆಲ್ಲ ಅರ್ಹರು?

ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು ಅಥವಾ ಆರ್ಥಿಕವಾಗಿ ದುರ್ಬಲ ಕುಟುಂಬಗಳು ಈ ಯೋಜನೆಯ ಸೌಲಭ್ಯವನ್ನು ಸಂಪೂರ್ಣವಾಗಿ ಪಡೆಯಬಹುದು.

ಎಪಿಎಲ್ ಕಾರ್ಡ್ ದಾರರು ಶೇ. 30 ರಷ್ಟು ಹಣವನ್ನು ಸರ್ಕಾರ ಭರಿಸಲಿದ್ದು, ವಾರ್ಷಿಕವಾಗಿ ಪ್ರತಿ ಕುಟುಂಬಕ್ಕೆ ಗರಿಷ್ಠ 1.5 ಲಕ್ಷ ರೂ.ದವರೆಗೆ ಸೌಲಭ್ಯ ಸಿಗಲಿದೆ.

ನರಮಂಡಲ ಕಾಯಿಲೆ ಇರುವುದೆಂದು ವೈದ್ಯರು ದೃಢಪಡಿಸಿದ ರೋಗಿಗಳು ಸೌಲಭ್ಯವನ್ನು ಪಡೆಯಬಹುದು.

ಇದನ್ನೂ ಓದಿ: Bembala Bele-ಬೆಂಬಲ ಬೆಲೆ ಯೋಜನೆಯಲ್ಲಿ ವಿವಿಧ ಬೆಳೆಗಳ ಖರೀದಿ ಅವಧಿ ವಿಸ್ತರಣೆ!

For More Information-ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಜಿಲ್ಲಾ ಆಸ್ಪತ್ರೆಯನ್ನು ಸಂಪರ್ಕಿಸಿ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: