Fodder Seed Kit-ಕೃಷಿಕರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಣೆ! ಅರ್ಜಿ ಸಲ್ಲಿಸುವುದು ಹೇಗೆ?

February 1, 2026 | Siddesh
Fodder Seed Kit-ಕೃಷಿಕರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಣೆ! ಅರ್ಜಿ ಸಲ್ಲಿಸುವುದು ಹೇಗೆ?
Share Now:

ಕರ್ನಾಟಕ ಸರ್ಕಾರವು ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಮತ್ತು ಜಾನುವಾರುಗಳಿಗೆ ಪೌಷ್ಟಿಕ ಆಹಾರದ ಕೊರತೆಯಾಗದಂತೆ ತಡೆಯಲು "ಮೇವಿನ ಕಿರು ಪೊಟ್ಟಣಗಳ ವಿತರಣೆ ಯೋಜನೆ" (Free Fodder Seed Kit Scheme) ಜಾರಿಗೆ ತಂದಿದೆ. ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೂಲಕ ಕೃಷಿಕರಿಗೆ ಈ ಕಿಟ್‌ಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಅನೇಕ ರೈತರಿಗೆ ಈ ಯೋಜನೆಯ ಬಗ್ಗೆ ಮಾಹಿತಿಯ ಕೊರತೆ ಇದ್ದು ಉಚಿತ ಮೇವಿನ ಬೀಜದ ಕಿಟ್(Fodder Seed Kit Scheme In Karnataka) ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳು ಯಾವುವು? ಅರ್ಜಿ ಸಲ್ಲಿಸಲು ಇಲಾಖೆಯಿಂದ ನಿಗದಿಪಡಿಸಿರುವ ಅರ್ಹತಾ ಮಾನದಂಡಗಳಾವುವು? ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

ಹೈನುಗಾರಿಕೆಯಲ್ಲಿ(Dairy Farming) ತೊಡಗಿಕೊಂಡಿರುವವರು ಹಸುಗಳಿಗೆ ಉತ್ತಮ ಮೇವನ್ನು ಒದಗಿಸಿದರೆ ಮಾತ್ರ ಉತ್ತಮವಾಗಿ ಹಸುವನ್ನು ಬೆಳೆಸುವುದರ ಜೊತೆಗೆ ಹಾಲಿನ ಇಳುವರಿಯನ್ನು ಪಡೆಯಲು ಗುಣಮಟ್ಟದ ಮೇವನ್ನು ಬೆಳೆಸುವುದು ಕಡ್ಡಾಯವಾಗಿದ್ದು ಈ ನಿಟ್ಟಿನಲ್ಲಿ ಉತ್ತಮ ಬೀಜನಗಳನ್ನು ಪಶುಸಂಗೋಪನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಮೂಲಕ ಪಡೆಯಲು ಅವಕಾಶವಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Free Fodder Seed Kit Application-ಉಚಿತ ಮೇವಿನ ಬೀಜದ ಕಿಟ್ ಪಡೆಯಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಯೋಜನೆಗೆ ಪ್ರಸ್ತುತ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುವುದಿಲ್ಲ. ಆಸಕ್ತ ರೈತರು ನೇರವಾಗಿ ತಮ್ಮ ಹತ್ತಿರದ ಸರ್ಕಾರಿ ಪಶು ಆಸ್ಪತ್ರೆ (Veterinary Hospital) ಅಥವಾ ತಾಲ್ಲೂಕು ಪಶುಸಂಗೋಪನಾ ಇಲಾಖೆಯ ಕಚೇರಿಗೆ ಭೇಟಿ ನೀಡಬೇಕು. ಅಲ್ಲಿ ಲಭ್ಯವಿರುವ ನಿಗದಿತ ಅರ್ಜಿ ನಮೂನೆಯನ್ನು ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.

ಇದನ್ನೂ ಓದಿ: Fellowship Application-ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ!

Fodder Seed Kit Scheme Eligibility Criteria-ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಮಾನದಂಡಗಳು:

ಈ ಯೋಜನೆಯ ಪ್ರಯೋಜನ ಪಡೆಯಲು ರೈತರು ಈ ಕೆಳಗಿನ ಪಟ್ಟಿಯಲ್ಲಿ ತಿಳಿಸಿರುವ ಅರ್ಹತಾ ಮಾನದಂಡಗಳನ್ನು ಹೊಂಡಿರುವುದು ಕಡ್ಡಾಯವಾಗಿರುತ್ತದೆ.

ಅರ್ಜಿದಾರ ರೈತರು ಕರ್ನಾಟಕ ರಾಜ್ಯದ ಕಾಯಂ ನಿವಾಸಿಯಾಗಿರಬೇಕು.

ರೈತರು ಕನಿಷ್ಠ 2 ಅಥವಾ ಅದಕ್ಕಿಂತ ಹೆಚ್ಚು ಜಾನುವಾರುಗಳನ್ನು (ಹಸು ಅಥವಾ ಎಮ್ಮೆ) ಹೊಂದಿರಬೇಕು.

ಮೇವು ಬೆಳೆಯಲು ರೈತರ ಹೆಸರಿನಲ್ಲಿ ಅಥವಾ ಅವರ ಕುಟುಂಬದ ಹೆಸರಿನಲ್ಲಿ ಕನಿಷ್ಠ ಪ್ರಮಾಣದ ಕೃಷಿ ಭೂಮಿಯನ್ನು ಹೊಂದಿರುವುದು ಕಡ್ಡಾಯ.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಾಗೂ ಹಾಲು ಉತ್ಪಾದಕ ಸಹಕಾರ ಸಂಘಗಳ ಸದಸ್ಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಮ್ಮೆ ಕಿಟ್ ಪಡೆದ ರೈತರು ಮತ್ತೆ ಅರ್ಜಿ ಸಲ್ಲಿಸಲು ಕನಿಷ್ಠ ಒಂದು ವರ್ಷ ಕಾಯಬೇಕಾಗುತ್ತದೆ.

ಇದನ್ನೂ ಓದಿ: Adarsha Vidyalaya Admission-ಆದರ್ಶ ವಿದ್ಯಾನಿಯಲಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ!

Free Fodder Seed Kit

Required Documents Fodder Seed Kit Scheme -ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಕೃಷಿಕರು ಮೇವಿನ ಬೀಜದ ಕಿಟ್ ಅನ್ನು ಇಲಾಕೆಯಿಂದ ಉಚಿತವಾಗಿ ಪಡೆಯಲು ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕಾಗುತ್ತದೆ:

  • ಆಧಾರ್ ಕಾರ್ಡ್ ಪ್ರತಿ.
  • ಜಮೀನಿನ ಪಹಣಿ (RTC/Pahani).
  • ಜಾನುವಾರು ಹೊಂದಿರುವ ಬಗ್ಗೆ ಪ್ರಮಾಣ ಪತ್ರ (ಸ್ಥಳೀಯ ಪಶುವೈದ್ಯರಿಂದ ಪಡೆಯಬಹುದು).
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ (SC/ST ರೈತರಿಗೆ ಮೀಸಲಾತಿ ಸೌಲಭ್ಯಕ್ಕಾಗಿ).
  • ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.

Fodder Seed Kit Details-ಮೇವಿನ ಬೀಜದ ಕಿಟ್‌ನಲ್ಲಿ ಯಾವೆಲ್ಲಾ ಬೀಜಗಳು ಇರುತ್ತವೆ?

ಹವಾಮಾನ ಮತ್ತು ಹಂಗಾಮಿಗೆ (ಮುಂಗಾರು ಅಥವಾ ಹಿಂಗಾರು) ಅನುಗುಣವಾಗಿ ಕಿಟ್‌ನಲ್ಲಿ ಬದಲಾವಣೆಗಳಿರಬಹುದು. ಸಾಮಾನ್ಯವಾಗಿ 1 ರಿಂದ 5 ಕೆಜಿಯ ಕಿಟ್‌ನಲ್ಲಿ ಈ ಕೆಳಗಿನ ಬೀಜಗಳು ಇರುತ್ತವೆ:

ಆಫ್ರಿಕನ್ ಟಾಲ್ ಮೆಕ್ಕೆಜೋಳ (African Tall Maize): ಇದು ಅತಿ ಹೆಚ್ಚು ಹಸಿರು ಮೇವು ನೀಡುವ ತಳಿಯಾಗಿದೆ.

ಕುದುರೆ ಮಸಾಲೆ (Lucerne/Alfalfa): ಇದು ಪ್ರೋಟೀನ್ ಅಂಶದಿಂದ ಕೂಡಿದ ಪೌಷ್ಟಿಕ ಮೇವು.

ಜೋಳದ ಸುಧಾರಿತ ತಳಿಗಳು (Fodder Sorghum): ಬರ ನಿರೋಧಕ ಮತ್ತು ವೇಗವಾಗಿ ಬೆಳೆಯುವ ತಳಿಗಳು.

ಓಟ್ಸ್ (Oats): ಹಿಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ನೀಡಲಾಗುತ್ತದೆ.

ಸಜ್ಜೆ (Bajra): ಕಡಿಮೆ ನೀರಿನಲ್ಲಿ ಬೆಳೆಯುವ ಉತ್ತಮ ಮೇವು.

ಇದನ್ನೂ ಓದಿ: Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

Fodder Seed Kit Scheme Benefits-ಯೋಜನೆಯ ಪ್ರಮುಖ ಉದ್ದೇಶ ಮತ್ತು ಲಾಭಗಳು:

ಪಶು ಆಹಾರ ವೆಚ್ಚ ಕಡಿತ: ಮಾರುಕಟ್ಟೆಯಲ್ಲಿ ಹಿಂಡಿ ಮತ್ತು ಬೂಸಾದ ಬೆಲೆ ಹೆಚ್ಚಾಗಿರುವುದರಿಂದ, ರೈತರು ಮನೆಯಲ್ಲೇ ಹಸಿರು ಮೇವು ಬೆಳೆಯುವುದರಿಂದ ಹೈನುಗಾರಿಕೆಯ ವೆಚ್ಚ ಕಡಿಮೆಯಾಗುತ್ತದೆ.

ಹಾಲಿನ ಉತ್ಪಾದನೆ ಹೆಚ್ಚಳ: ಪೌಷ್ಟಿಕಯುಕ್ತ ಹಸಿರು ಮೇವು ತಿನ್ನುವುದರಿಂದ ಜಾನುವಾರುಗಳ ಆರೋಗ್ಯ ಸುಧಾರಿಸಿ, ಹಾಲಿನ ಇಳುವರಿ ಮತ್ತು ಅದರಲ್ಲಿರುವ ಬೆಣ್ಣೆಯಂಶ (Fat) ಹೆಚ್ಚುತ್ತದೆ.

ಮಣ್ಣಿನ ಫಲವತ್ತತೆ: ಕೆಲವು ಮೇವಿನ ಬೆಳೆಗಳು (ಉದಾ: ಕುದುರೆ ಮಸಾಲೆ) ಭೂಮಿಯ ಸಾರಜನಕದ ಅಂಶವನ್ನು ಹೆಚ್ಚಿಸುತ್ತವೆ.

ಇದನ್ನೂ ಓದಿ: Pouthi Khatha-ಪೌತಿ ಖಾತೆ ಪ್ರಕ್ರಿಯೆ ಇನ್ಮುಂದೆ ಮತ್ತಷ್ಟು ಸರಳ: ಸಚಿವ ಕೃಷ್ಣ ಬೈರೇಗೌಡ!

Veterinary Department Helpline Number-ರೈತರಿಗೆ ಪ್ರಮುಖ ಸಲಹೆ:

ಮೇವಿನ ಬೀಜದ ಕಿಟ್‌ಗಳು ಸೀಮಿತ ಸಂಖ್ಯೆಯಲ್ಲಿರುವುದರಿಂದ, ಹಂಗಾಮು ಪ್ರಾರಂಭವಾಗುವ ಮೊದಲೇ (ಜೂನ್ ಅಥವಾ ಅಕ್ಟೋಬರ್) ನಿಮ್ಮ ಹತ್ತಿರದ ಪಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ 8277100200 ಕ್ಕೆ ಕರೆ ಮಾಡಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: