RTE Online Application-RTE ಕಾಯ್ದೆ ಸೀಟು ಹಂಚಿಕೆಗೆ ದಿನಾಂಕ ಪ್ರಕಟ: ನಿಮ್ಮ ಮಗುವಿಗೆ ಖಾಸಗಿ ಶಾಲೆ ಪ್ರವೇಶಕ್ಕೆ ಉಚಿತ ಸೀಟ್!

March 3, 2026 | Siddesh
RTE Online Application-RTE ಕಾಯ್ದೆ ಸೀಟು ಹಂಚಿಕೆಗೆ ದಿನಾಂಕ ಪ್ರಕಟ: ನಿಮ್ಮ ಮಗುವಿಗೆ ಖಾಸಗಿ ಶಾಲೆ ಪ್ರವೇಶಕ್ಕೆ ಉಚಿತ ಸೀಟ್!
Share Now:

ಶಿಕ್ಷಣ ಎನ್ನುವುದು ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು ಆದರೆ ಬಡ ಹಾಗೂ ಮಧ್ಯಮ ವರ್ಗದ ಕುಟುಂಬದ ವಿದ್ಯಾರ್ಥಿಗಳಿಗೆ ಆರ್ಥಿಕ ಪರಿಸ್ಥಿತಿ ಅಥವಾ ಸಾಮಾಜಿಕ ಹಿನ್ನೆಲೆಯ ಕಾರಣದಿಂದಾಗಿ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು(RTE Online Application 2026-27) ಓದಿಸುವುದು ಅನೇಕ ಪೋಷಕರ ಕನಸಾಗಿಯೇ ಉಳಿದಿರುತ್ತದೆ. ಪ್ರಸ್ತುತ ಇಂದಿನ ಲೇಖನದಲ್ಲಿ RTE ಅಡಿಯಲ್ಲಿ ಖಾಸಗಿ ಶಾಲೆಯಲ್ಲಿ ಉಚಿತವಾಗಿ ಯಾವುದೇ ಶುಲ್ಕವನ್ನು ಪಾವತಿ ಮಾಡದೇ ಪ್ರವೇಶವನ್ನು ಪಡೆಯಲು ಅರ್ಜಿ ಸಲ್ಲಿಸುವುದರ ಕುರಿತು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಈ ನಿಟ್ಟಿನಲ್ಲಿ ಭಾರತ ಸರ್ಕಾರವು ಶಿಕ್ಷಣ ಹಕ್ಕು ಕಾಯ್ದೆ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು 2026- 27 ನೇ ಸಾಲಿನ ಶಾಲಾ ಪ್ರವೇಶಾತಿಗೆ(RTE Online Application) ಯಾವುದೇ ಶುಲ್ಕವಿಲ್ಲದೆ ಗುಣಮಟ್ಟ ಶಿಕ್ಷಣವನ್ನು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

ಇದನ್ನೂ ಓದಿ: Mudra Yojane-ಮುದ್ರಾ ಯೋಜನೆ ಗ್ಯಾರಂಟಿಯಿಲ್ಲದೆ ಸಾಲದ ಮಿತಿ 20 ಲಕ್ಷಕ್ಕೆ ಏರಿಕೆ!

ಪ್ರಸ್ತುತ ಈ ಲೇಖನದಲ್ಲಿ RTE ಕಾಯ್ದೆ ಎಂದರೇನು? ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳಾವುವು? ಅರ್ಜಿ ಸಲ್ಲಿಸಲು ಅರ್ಹತ ಮಾನದಂಡಗಳಾವುವು?(RTE Eligibility In Karnataka) ಇನ್ನು ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದ್ದು ಓದುಗರು ತಪ್ಪದೇ ಈ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಸಹಕರಿಸಿ.

What Is RTE Act-RTE ಕಾಯ್ದೆ ಎಂದರೇನು?

ಭಾರತ ಸರ್ಕಾರವು 'ಶಿಕ್ಷಣ ಹಕ್ಕು ಕಾಯ್ದೆ 2009' (Right to education act) ಇದರ ಅಡಿಯಲ್ಲಿ ಪ್ರತಿ ಮಗುವಿಗೂ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯುವ ಹಕ್ಕಿದೆ. ಇದರ ಅನುಸಾರ ರಾಜ್ಯದ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಎಲ್ ಕೆ ಜಿ ಅಥವಾ ಒಂದನೇ ತರಗತಿಯಲ್ಲಿ ಪ್ರವೇಶಾತಿಯ ಹಂತದಲ್ಲಿ 25% ರಷ್ಟು ಸೀಟುಗಳನ್ನು ಬಡ ಮಕ್ಕಳಿಗೆ ಮೀಸಲಿಡಲಾಗುತ್ತದೆ. ಈ ಸೀಟುಗಳನ್ನು ಪಡೆದ ವಿದ್ಯಾರ್ಥಿಗಳ ಸಂಪೂರ್ಣ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: Diesel Pumpset Subsidy-ಕೃಷಿ ಇಲಾಖೆಯಿಂದ ಡಿಸೇಲ್ ಪಂಪ್ ಪಡೆಯಲು ಅರ್ಜಿ ಆಹ್ವಾನ!

RTE Seats Eligibility-ಅರ್ಜಿ ಸಲ್ಲಿಸಲು ಅರ್ಹತಾ ಮಾನದಂಡಗಳಾವುವು?

ವಿದ್ಯಾರ್ಥಿಗಳ ಪೋಷಕರು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.

ಎಲ್ ಕೆಜಿ ಪ್ರವೇಶಕ್ಕೆ ಮಗುವಿನ ವಯಸ್ಸು ಮಾರ್ಚ್ 31 2026 ಕ್ಕೆ 3 ವರ್ಷ 5 ತಿಂಗಳಿಂದ 5 ವರ್ಷದ ಒಳಗಿರಬೇಕು.

ಒಂದನೇ ತರಗತಿ ಪ್ರವೇಶಕ್ಕೆ ಮಗುವಿನ ವಯಸ್ಸು 5 ವರ್ಷ 5 ತಿಂಗಳಿಂದ 7 ವರ್ಷದ ಒಳಗಿರಬೇಕು.

ಪೋಷಕರ ವಾರ್ಷಿಕ ಆದಾಯವು 3.5 ಲಕ್ಷಕ್ಕಿಂತ ಕಡಿಮೆ ಇರಬೇಕು. (1 ಲಕ್ಷಕ್ಕಿಂತ ಕಡಿಮೆ ಇರುವವರಿಗೆ ಆದ್ಯತೆ ನೀಡಲಾಗುತ್ತದೆ).

ಅನಾಥ ಮಕ್ಕಳು, ವಿಶೇಷ ಚೇತನ ಮಕ್ಕಳು, HIV ಪೀಡಿತ ಮಕ್ಕಳು ಹಾಗೂ ವಿಧವೆಯರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Sheep And Goat Farming-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 10+1 ಕುರಿ ಸಾಕಾಣಿಕೆ ಸಬ್ಸಿಡಿ!

Important Dates For Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು ಹೀಗಿವೆ:

  • ಅಧಿಕೃತ ಅಧಿಸೂಚನೆ ಬಿಡುಗಡೆ: ಫೆಬ್ರವರಿ 5, 2026.
  • ಪರಿಷ್ಕೃತ ಸುತ್ತೋಲೆ ಪ್ರಕಟಣೆ: ಫೆಬ್ರವರಿ 20, 2026.
  • ಮಾಕ್ ಟ್ರಯಲ್ (ಅಭ್ಯಾಸ ಹಂತ): ಮಾರ್ಚ್ 11 ರಿಂದ ಮಾರ್ಚ್ 12, 2026 ರವರೆಗೆ (ಪೋಷಕರು ಪೋರ್ಟಲ್ ಬಳಸುವುದನ್ನು ಕಲಿಯಲು).
  • ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: ಮಾರ್ಚ್ 16, 2026.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್ 15, 2026.
  • ಮೊದಲ ಸುತ್ತಿನ ಲಾಟರಿ ಮತ್ತು ಸೀಟು ಹಂಚಿಕೆ: ಏಪ್ರಿಲ್ 21, 2026.
  • ​ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ: ಏಪ್ರಿಲ್ 27, 2026 ರಿಂದ ಆರಂಭ.

ಇದನ್ನೂ ಓದಿ: FID Update-ಪಿಎಂ ಕಿಸಾನ್ ಮತ್ತು ಬೆಳೆ ಪರಿಹಾರ ಹಣ ಪಡೆಯಲು FID ಅಪ್ಡೇಟ್ ಕಡ್ಡಾಯ!

Required Documents For Application-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು?

  • ಮಗುವಿನ ಆಧಾರ್ ಕಾರ್ಡ್
  • ಪೋಷಕರ ಆಧಾರ್ ಕಾರ್ಡ್
  • ಜನನ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ರೇಷನ್ ಕಾರ್ಡ್
  • ಮಗುವಿನ ಫೋಟೋ

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ವಿದ್ಯಾರ್ಥಿಯ ಪೋಷಕರು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬಹುದು ಒಂದು ಅಗತ್ಯ ದಾಖಲೆಗಳ ಸಮೇತ ನಿಮ್ಮ ಭಾಗದ ಗ್ರಾಮ ಒನ್/ಕರ್ನಾಟಕ ಒನ್/ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು ಅಥವಾ ನೇರವಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ!

Online Apply Method-ಅರ್ಜಿ ಸಲ್ಲಿಸುವ ವಿಧಾನ?

ಅರ್ಜಿ ಸಲ್ಲಿಸಲ ಆಸಕ್ತಿ ಇರುವ ಅಭ್ಯರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Step-1: ಮೊದಲಿಗೆ ಇಲ್ಲಿ ನೀಡಿರುವ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ RTE ಪೋರ್ಟಲ್ಲಿಗೆ ಭೇಟಿ ನೀಡಬೇಕು.

RTE Online Application

Step-2: ವೆಬ್ ಸೈಟ್ ಗೆ ಭೇಟಿ ಮಾಡಿದ ನಂತರ "RTE Admission 2026-27" ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.

Step-3: ನಂತರ ಮಗುವಿನ ವಿವರ ಹಾಗೂ ಪೋಷಕರ ವಿವರ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು.

Step-4: ವಿವರಗಳನ್ನು ಭರ್ತಿ ಮಾಡಿದ ನಂತರ ನಿಮ್ಮ ವಾಸದ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಆಯ್ಕೆ ಮಾಡಿ (ಗರಿಷ್ಠ 5 ರಿಂದ 10)

Step-5: ತದನಂತರ ಎಲ್ಲಾ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಅರ್ಜಿಯ ನಮೂನೆಯನ್ನು ಪ್ರಿಂಟ್ ತೆಗೆದುಕೊಳ್ಳಿ.

ಇದನ್ನೂ ಓದಿ: Passport Verification-ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ನೂತನ ನಿಯಮ ಜಾರಿ!

Selection Method-ಸೀಟುಗಳ ಹಂಚಿಕೆ ಪ್ರಕ್ರಿಯೆ ಹೀಗಿದೆ :

ಅರ್ಜಿಗಳ ಸಂಖ್ಯೆಯು ಲಭ್ಯವಿರುವ ಸೀಟುಗಳಿಗಿಂತ ಹೆಚ್ಚಿದ್ದರೆ, 'ಗಣಕೀಕೃತ ಲಾಟರಿ' (Computerized Lottery) ಪದ್ಧತಿಯ ಮೂಲಕ ಸೀಟು ಹಂಚಿಕೆ ಮಾಡಲಾಗುತ್ತದೆ.

ಇದು ಪಾರದರ್ಶಕವಾಗಿದ್ದು, ಲಾಟರಿ ಪ್ರಕ್ರಿಯೆಯ ನಂತರ ಮಗುವಿಗೆ ಹಂಚಿಕೆಯಾದ ಶಾಲೆಯ ವಿವರವನ್ನು ಪೋಷಕರಿಗೆ SMS ಮೂಲಕ ಸಂದೇಶವನ್ನು ತಿಳಿಸಲಾಗುತ್ತದೆ.

ಒಬ್ಬ ಮಗುವಿಗೆ ಒಂದೇ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಹೆಚ್ಚು ಅರ್ಜಿ ಸಲ್ಲಿಸಿದರೆ ಅದನ್ನು ತಿರಸ್ಕರಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಗತ್ಯ ಮಾಹಿತಿ:

RTE 2026-27 Notification-ಅಧಿಕೃತ ಪ್ರಕಟಣೆ ಪ್ರತಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ-Download Now
Karnataka Education Department Website-ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ಸೈಟ್- Click Here
Helpline- ಸಹಾಯವಾಣಿ: 080-22484716

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: