Akrama Sakrama Yojane-ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ 3 ತಿಂಗಳ ಗಡುವು: ಇಂಧನ ಸಚಿವ ಕೆ.ಜೆ. ಜಾರ್ಜ್!

March 14, 2026 | Siddesh
Akrama Sakrama Yojane-ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ 3 ತಿಂಗಳ ಗಡುವು: ಇಂಧನ ಸಚಿವ ಕೆ.ಜೆ. ಜಾರ್ಜ್!
Share Now:

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಕೃಷಿ ಪಂಪ್‌ಸೆಟ್‌ಗಳನ್ನು(Krishi Pump Set) ಸಕ್ರಮಗೊಳಿಸಲು ರಾಜ್ಯ ಸರ್ಕಾರ ಈಗ ಅಂತಿಮ ಅವಕಾಶವನ್ನು ನೀಡಿದೆ. ಅಕ್ರಮ ಪಂಪ್‌ಸೆಟ್‌ಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ಅಧಿಕೃತವಾಗಿ ನೋಂದಣಿ ಮಾಡಿಸಿ, ಸಕ್ರಮಗೊಳಿಸಿಕೊಳ್ಳಬೇಕು ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ವಿಧಾನ ಪರಿಷತ್ತಿನಲ್ಲಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಈ ನಿಗದಿತ ಗಡುವಿನೊಳಗೆ ಸಕ್ರಮ ಪ್ರಕ್ರಿಯೆ ಪೂರ್ಣಗೊಳ್ಳದಿದ್ದರೆ, ಅಂತಹ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಯಾವುದೇ ಮುಲಾಜಿಲ್ಲದೆ ಕಡಿತಗೊಳಿಸಲಾಗುವುದು ಎಂದು ಅವರು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಈ ಮಹತ್ವದ ನಿರ್ಧಾರಕ್ಕೆ ಮುಖ್ಯ ಕಾರಣವೆಂದರೆ ಟ್ರಾನ್ಸ್‌ಫಾರ್ಮರ್‌ಗಳ(TC) ಮೇಲಾಗುತ್ತಿರುವ ವಿಪರೀತ ಒತ್ತಡ. ಸಚಿವರು ನೀಡಿದ ಮಾಹಿತಿಯಂತೆ, ಸಾಮಾನ್ಯವಾಗಿ ಒಂದು ಟ್ರಾನ್ಸ್‌ಫಾರ್ಮರ್ 2 ರಿಂದ 3 ಪಂಪ್‌ಸೆಟ್‌ಗಳ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಹತ್ತಾರು ಅಕ್ರಮ ಪಂಪ್‌ಸೆಟ್‌ಗಳು(Akrama Sakrama) ಒಂದೇ ಟ್ರಾನ್ಸ್‌ಫಾರ್ಮರ್‌ಗೆ ಕನೆಕ್ಟ್ ಆಗುತ್ತಿರುವುದರಿಂದ ಲೋಡ್ ಜಾಸ್ತಿಯಾಗಿ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗುತ್ತಿವೆ. ಇದರಿಂದಾಗಿ ಪ್ರಾಮಾಣಿಕವಾಗಿ ಬಿಲ್ ಪಾವತಿಸುವ ರೈತರಿಗೂ ವಿದ್ಯುತ್ ವ್ಯತ್ಯಯದ ಬಿಸಿ ತಟ್ಟುತ್ತಿದ್ದು, ದುರಸ್ತಿ ಮತ್ತು ಬದಲಾವಣೆ ಕಾರ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇದನ್ನೂ ಓದಿ: Milk incentive-ಬಮೂಲ್ ನಿಂದ ಹಾಲು ಉತ್ಪಾದಕರಿಗೆ 59 ಕೋಟಿ ಹೆಚ್ಚುವರಿ ಸಹಾಯಧನ ಬಿಡುಗಡೆ!

ರಾಜ್ಯದಲ್ಲಿ ಒಟ್ಟು 4.5 ಲಕ್ಷ ಕೃಷಿ ಪಂಪ್‌ಸೆಟ್‌ಗಳಿದ್ದು, ಈ ಪೈಕಿ ಈಗಾಗಲೇ 2.75 ಲಕ್ಷ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲಾಗಿದೆ(Krishi Pump Set Akrama Sakrama Yojana). ಉಳಿದಿರುವ ಅಕ್ರಮ ಸಂಪರ್ಕದಾರರು ನಿಗದಿತ ಶುಲ್ಕವನ್ನು ಪಾವತಿಸಿ ತಕ್ಷಣವೇ ಈ ಯೋಜನೆಯ ಲಾಭ ಪಡೆಯಬೇಕು ಎಂದು ಸರ್ಕಾರ ಸೂಚಿಸಿದೆ. ಸೋಮವಾರ ನಡೆದ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ ಹಿತದೃಷ್ಟಿಯಿಂದ ಮತ್ತು ಸುಗಮ ವಿದ್ಯುತ್ ಸರಬರಾಜು(KEB) ವ್ಯವಸ್ಥೆಗಾಗಿ ಈ ಕ್ರಮ ಅನಿವಾರ್ಯವಾಗಿದೆ ಎಂದು ಪ್ರತಿಪಾದಿಸಿದರು.

Akrama Sakrama Scheme Highlights-ಅಂಕಣದ ಮುಖ್ಯಾಂಶಗಳು:

ಗಡುವು: ಅಕ್ರಮ ಪಂಪ್‌ಸೆಟ್ ಸಕ್ರಮಕ್ಕೆ ಕೇವಲ 3 ತಿಂಗಳ ಕಾಲಾವಕಾಶ.

ಪರಿಣಾಮ: ಗಡುವು ಮೀರಿದರೆ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತ.

ಸಮಸ್ಯೆ: ಅಕ್ರಮ ಸಂಪರ್ಕಗಳಿಂದ ಟ್ರಾನ್ಸ್‌ಫಾರ್ಮರ್‌ಗಳು ಸುಟ್ಟು ಹೋಗುತ್ತಿವೆ.

ಪ್ರಗತಿ: 4.5 ಲಕ್ಷ ಪಂಪ್‌ಸೆಟ್‌ಗಳ ಪೈಕಿ ಈಗಾಗಲೇ 2.75 ಲಕ್ಷ ಸಕ್ರಮ.

ಸೂಚನೆ: ಅಗತ್ಯ ಶುಲ್ಕ ಪಾವತಿಸಿ ಇಂದೇ ಸಕ್ರಮ ಮಾಡಿಕೊಳ್ಳಲು ಇಂಧನ ಇಲಾಖೆ ಮನವಿ.

ಇದನ್ನೂ ಓದಿ: PM-Kisan 22th Installment-ಇಂದು ರಾಜ್ಯದ 41.40 ಲಕ್ಷ ರೈತರಿಗೆ 828.02 ಕೋಟಿ ಪಿಎಂ ಕಿಸಾನ್ ಹಣ ಬಿಡುಗಡೆ!

Akrama Sakrama Application

ಇದನ್ನೂ ಓದಿ: Horticulture Training-10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ: ರೈತ ಮಕ್ಕಳಿಗೆ ಸುವರ್ಣಾವಕಾಶ!

What Is Akrama Sakrama Yojane-ಅಕ್ರಮ-ಸಕ್ರಮ ಎಂದರೇನು?

ಕೃಷಿ ಚಟುವಟಿಕೆಗಳಿಗಾಗಿ ಸರ್ಕಾರ ಅಥವಾ ವಿದ್ಯುತ್ ಸರಬರಾಜು ಕಂಪನಿಗಳ (BESCOM, HESCOM, GESCOM ಇತ್ಯಾದಿ) ಪೂರ್ವ ಅನುಮತಿ ಪಡೆಯದೆ, ಅನಧಿಕೃತವಾಗಿ ಟ್ರಾನ್ಸ್‌ಫಾರ್ಮರ್‌ಗಳಿಂದ ನೇರವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಪಂಪ್‌ಸೆಟ್‌ಗಳನ್ನು 'ಅಕ್ರಮ ಪಂಪ್‌ಸೆಟ್‌ಗಳು' ಎನ್ನಲಾಗುತ್ತದೆ.

ಇಂತಹ ಅನಧಿಕೃತ ಸಂಪರ್ಕಗಳನ್ನು ಸರ್ಕಾರಕ್ಕೆ ನಿಗದಿತ ಶುಲ್ಕ ಪಾವತಿಸಿ, ಅಗತ್ಯ ದಾಖಲೆಗಳನ್ನು ಸಲ್ಲಿಸಿ, ವಿದ್ಯುತ್ ಇಲಾಖೆಯ ದಾಖಲೆಗಳಲ್ಲಿ ಅಧಿಕೃತವಾಗಿ ನೋಂದಾಯಿಸಿಕೊಳ್ಳುವ ಪ್ರಕ್ರಿಯೆಯೇ 'ಸಕ್ರಮ'. ಹೀಗೆ ಮಾಡುವುದರಿಂದ ರೈತರಿಗೆ ಅಧಿಕೃತ ವಿದ್ಯುತ್ ಸಂಪರ್ಕ ಸಿಗುತ್ತದೆ ಮತ್ತು ಇಲಾಖೆಗೆ ಲೋಡ್ ನಿರ್ವಹಣೆ ಸುಲಭವಾಗುತ್ತದೆ.

ಇದನ್ನೂ ಓದಿ: PM Kisan 22th Installment-ಪಿಎಂ ಕಿಸಾನ್ 22ನೇ ಕಂತಿನ ಹಣ ರೈತರ ಖಾತೆಗೆ!

Akrama Sakrama Application-ಅಕ್ರಮ ಪಂಪ್ ಸೆಟ್ ಸಕ್ರಮಗೊಳಿಸಲು ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು?

ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಲು ರೈತರು ನಿಮ್ಮ ಭಾಗದ ಲೈನ್‌ಮನ್ ಅವರನ್ನು ಭೇಟಿ ಮಾಡಿ ಅಗತ್ಯ ಮಾಹಿತಿಯನ್ನು ಪಡೆದು ಹತ್ತಿರದ ವಿದ್ಯುತ್ ಕಚೇರಿಯನ್ನು(Section Office) ಅಗತ್ಯ ದಾಖಲೆಗಳ ಸಮೇತ ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: LPG Gas Booking-LPG ಸಿಲಿಂಡರ್ ಬುಕ್ಕಿಂಗ್ ನಿಯಮದಲ್ಲಿ ಮಹತ್ವದ ಬದಲಾವಣೆ!

Required Documents For Akrama Sakrama Yojane-ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು:

ಸಾಮಾನ್ಯವಾಗಿ ಅಕ್ರಮ ಪಂಪ್‌ಸೆಟ್ ಸಕ್ರಮಕ್ಕೆ ಈ ಕೆಳಗಿನ ಪಟ್ಟಿಯಲ್ಲಿರುವ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿದೆ:

  • ಆಧಾರ್ ಕಾರ್ಡ್
  • ಪಹಣಿ/RTC/ಊತಾರ್
  • ಜಮೀನಿನ ನಕ್ಷೆ: ಪಂಪ್‌ಸೆಟ್ ಇರುವ ಸ್ಥಳದ ಸ್ಕೆಚ್ ಅಥವಾ ನಕ್ಷೆ.
  • ಸ್ವಯಂ ಘೋಷಣಾ ಪತ್ರ: ಪಂಪ್‌ಸೆಟ್ ಬಳಸುತ್ತಿರುವ ಬಗ್ಗೆ ಮತ್ತು ಸಕ್ರಮಗೊಳಿಸಲು ಒಪ್ಪಿಗೆ ನೀಡುವ ಬಗ್ಗೆ ಪ್ರಮಾಣ ಪತ್ರ.
  • ಆರ್‌ಆರ್ ಸಂಖ್ಯೆ (RR Number): ನಿಮ್ಮ ಹತ್ತಿರದ ವಿದ್ಯುತ್ ಕಂಬ ಅಥವಾ ಟ್ರಾನ್ಸ್‌ಫಾರ್ಮರ್ ಮಾಹಿತಿ (ಇಲಾಖೆಯು ಕೇಳಿದಲ್ಲಿ).
  • ಬ್ಯಾಂಕ್ ಪಾಸ್‌ಬುಕ್ ಪ್ರತಿ: ಗುರುತಿಗಾಗಿ ಮತ್ತು ಶುಲ್ಕ ಪಾವತಿಯ ದಾಖಲೆಗಾಗಿ.
  • ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.

ಪ್ರತಿ ಜಿಲ್ಲೆ ಅಥವಾ ವಿದ್ಯುತ್ ಕಂಪನಿಗಳ ವ್ಯಾಪ್ತಿಯಲ್ಲಿ ಶುಲ್ಕದ ಮೊತ್ತದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. ಆದ್ದರಿಂದ ನೀವು ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಹತ್ತಿರದ ವಿದ್ಯುತ್ ಕಚೇರಿಯ (Section Office) ಲೈನ್‌ಮನ್ ಅಥವಾ ಅಧಿಕಾರಿಯನ್ನು ಭೇಟಿ ಮಾಡಿ ಇತ್ತೀಚಿನ ಶುಲ್ಕದ ವಿವರ ಪಡೆಯುವುದು ಉತ್ತಮ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: