Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!

March 15, 2026 | Siddesh
Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!
Share Now:

ಕರ್ನಾಟಕ ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ 'ಗೃಹಲಕ್ಷ್ಮಿ ಯೋಜನೆ'ಯು(Gruhalakshmi Amount-2026) ರಾಜ್ಯದ ಲಕ್ಷಾಂತರ ಮಹಿಳೆಯರ ಬಾಳಿಗೆ ಆಸರೆಯಾಗಿದೆ. ಪ್ರತಿ ತಿಂಗಳು ಮನೆಯ ಯಜಮಾನಿಗೆ 2,000 ರೂಪಾಯಿಗಳ ಆರ್ಥಿಕ ನೆರವು ನೀಡುವ ಈ ಯೋಜನೆಯು ಈಗ ಯಶಸ್ವಿಯಾಗಿ 27ನೇ ಕಂತಿನ ಹಂತಕ್ಕೆ ತಲುಪಿದೆ. ಇತ್ತೀಚಿನ ಮಾಹಿತಿಯಂತೆ, ರಾಜ್ಯ ಸರ್ಕಾರವು ಅರ್ಹ ಫಲಾನುಭವಿಗಳ ಖಾತೆಗೆ ನೇರ ನಗದು ವರ್ಗಾವಣೆ (DBT) ಮೂಲಕ 27ನೇ ಕಂತಿನ ಹಣವನ್ನು ಬಿಡುಗಡೆ ಮಾಡಲು ಚಾಲನೆ ನೀಡಿದ್ದು, ಈಗಾಗಲೇ ಅನೇಕ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆಯಾಗುತ್ತಿದೆ.

ಈ ಯೋಜನೆಯು ಕೇವಲ ಒಂದು ಆರ್ಥಿಕ(Gruhalakshmi 27th Installment) ಸಹಾಯವಾಗಿ ಉಳಿಯದೆ, ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರ ಸಬಲೀಕರಣಕ್ಕೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯ ಈ ಕಾಲದಲ್ಲಿ, ಪ್ರತಿ ತಿಂಗಳು ನಿಗದಿತವಾಗಿ ಬರುವ ಈ ಮೊತ್ತವು(Gruhalakshmi Yojana) ಮಧ್ಯಮ ಮತ್ತು ಬಡ ಕುಟುಂಬಗಳ ನಿರ್ವಹಣೆಗೆ ತುಂಬಾ ಸಹಕಾರಿಯಾಗಿದೆ. ಸರ್ಕಾರದ ಈ ಕ್ರಮದಿಂದಾಗಿ ಮಹಿಳೆಯರು ತಮ್ಮ ಸಣ್ಣಪುಟ್ಟ ಆರ್ಥಿಕ ಅಗತ್ಯಗಳಿಗಾಗಿ ಇತರರ ಮೇಲೆ ಅವಲಂಬಿತವಾಗುವುದು ತಪ್ಪಿದೆ.

ಇದನ್ನೂ ಓದಿ: Pearl farming-ಸಿಹಿ ನೀರು ಮುತ್ತು ಕೃಷಿ ತರಬೇತಿ: ನಿರುದ್ಯೋಗಿ ಯುವಕರಿಗೆ ಸುವರ್ಣ ಅವಕಾಶ!

ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ(Gruhalakshmi) ಅಥವಾ ದಾಖಲೆಗಳ ಕೊರತೆಯಿಂದಾಗಿ ಕೆಲವರಿಗೆ ಇನ್ನು ಕೂಡ ಹಣ ತಲುಪಿಲ್ಲದಿರಬಹುದು. ಅಂತಹವರು ಗಾಬರಿಯಾಗುವ ಅಗತ್ಯವಿಲ್ಲ. ಈ ಲೇಖನದಲ್ಲಿ ನಾವು 27ನೇ ಕಂತಿನ ಹಣದ ಸ್ಥಿತಿಯನ್ನು (Status) ಮೊಬೈಲ್‌ನಲ್ಲಿ ಹೇಗೆ ಪರಿಶೀಲಿಸುವುದು, ಮರಣ ಹೊಂದಿದ ಫಲಾನುಭವಿಗಳ ಕುಟುಂಬದವರು ಏನು ಮಾಡಬೇಕು ಮತ್ತು ಹಣ ಬರದಿದ್ದರೆ ಅದನ್ನು ಸರಿಪಡಿಸಿಕೊಳ್ಳುವ ಮಾರ್ಗಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.

Gruhalakshmi Status Check-ಗೃಹಲಕ್ಷ್ಮಿ ಹಣ ಜಮಾ ವಿವರವನ್ನು ಮೊಬೈಲ್‌ನಲ್ಲೇ ಚೆಕ್ ಮಾಡಿ:

ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಈಗ ಬ್ಯಾಂಕ್‌ಗಳಿಗೆ ಅಲೆಯುವ ಅವಶ್ಯಕತೆಯಿಲ್ಲ. ನಿಮ್ಮ ಸ್ಮಾರ್ಟ್‌ಫೋನ್ ಮೂಲಕವೇ ಸುಲಭವಾಗಿ ಮಾಹಿತಿ ಪಡೆಯಬಹುದು ಇದಕ್ಕಾಗಿ ಈ ಕೆಳಗೆ ವಿವರಿಸಿರುವ ವಿಧಾನಗಳನ್ನು ಅನುಸರಿಸಿ.

ಇದನ್ನೂ ಓದಿ: Akrama Sakrama Yojane-ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ 3 ತಿಂಗಳ ಗಡುವು: ಇಂಧನ ಸಚಿವ ಕೆ.ಜೆ. ಜಾರ್ಜ್!

ವಿದಾನ-1: DBT Karnataka App ಬಳಸಿ ಚೆಕ್ ಮಾಡಿ:

ಮೊದಲು ಪ್ಲೇ ಸ್ಟೋರ್‌ನಿಂದ 'DBT Karnataka' ಅಧಿಕೃತ ಆಪ್ ಡೌನ್‌ಲೋಡ್ ಮಾಡಿ. ನಿಮ್ಮ ಆಧಾರ್ ಸಂಖ್ಯೆ ಬಳಸಿ ಲಾಗಿನ್ ಆಗಿ. ಅಲ್ಲಿ 'Payment Status' ವಿಭಾಗದಲ್ಲಿ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಎಷ್ಟು ಕಂತುಗಳು ಜಮೆಯಾಗಿವೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು.

Step-1: ಫಲಾನುಭವಿಗಳು ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಇದಾದ ಬಳಿಕ ಅಪ್ಲಿಕೇಶನ್ ಅನ್ನು ಒಪನ್ ಮಾಡಿಕೊಂಡು ಗೃಹಲಕ್ಷ್ಮಿ ಫಲಾನುಭವಿಯ ಆಧಾರ್ ಕಾರ್ಡ ನಂಬರ್ ನಮೂದಿಸಿ ಬಳಕೆದಾರ ಐಡಿ ಅನ್ನು ರಚನೆ ಮಾಡಿಕೊಂಡು ಲಾಗಿನ್ ಅಗಬೇಕು.

Step-3: ಲಾಗಿನ್ ಅದ ಬಳಿಕ ಇಲ್ಲಿ 'Payment Status' ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮಾ ಅಗಿದೆ? ಜಮಾ ದಿನಾಂಕ ಯಾವುದು? ಬ್ಯಾಂಕ್ ಖಾತೆಯ ಸಂಪೂರ್ಣ ವಿವರವನ್ನು ಇಲ್ಲಿ ನೀವು ತಿಳಿಯಬಹುದು.

ಇದನ್ನೂ ಓದಿ: Milk incentive-ಬಮೂಲ್ ನಿಂದ ಹಾಲು ಉತ್ಪಾದಕರಿಗೆ 59 ಕೋಟಿ ಹೆಚ್ಚುವರಿ ಸಹಾಯಧನ ಬಿಡುಗಡೆ!

ವಿಧಾನ-2 ಬ್ಯಾಂಕ್ SMS:

ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ, ಹಣ ಜಮೆಯಾದ ತಕ್ಷಣ ಬರುವ 'Credit SMS' ಅನ್ನು ಗಮನಿಸಿ.

Gruhalakshmi Amount

Gruhalakshmi Yojane-ಮರಣ ಹೊಂದಿರುವವರ ಖಾತೆಗೂ ಗೃಹಲಕ್ಷ್ಮಿ ಹಣ: ನಿಯಮಗಳೇನು?

ಯೋಜನೆಯ ಆರಂಭದಲ್ಲಿ ನೋಂದಾಯಿಸಿಕೊಂಡಿದ್ದ ಫಲಾನುಭವಿ ಮಹಿಳೆ ಒಂದು ವೇಳೆ ಮರಣ ಹೊಂದಿದ್ದರೆ, ಅಂತಹ ಕುಟುಂಬಗಳಿಗೆ ಹಣ ಸಿಗುತ್ತದೆಯೇ ಎಂಬ ಗೊಂದಲ ಅನೇಕರಲ್ಲಿದೆ. ಈ ಬಗ್ಗೆ ಸರ್ಕಾರವು ಸ್ಪಷ್ಟನೆ ನೀಡಿದ್ದು, ಮೂಲ ಫಲಾನುಭವಿ ಮರಣ ಹೊಂದಿದಲ್ಲಿ ಆ ಹಣವು ಸ್ಥಗಿತಗೊಳ್ಳುತ್ತದೆ. ಆದರೆ, ಆ ಕುಟುಂಬದ ಅರ್ಹ ಪರ್ಯಾಯ ಮಹಿಳೆಯನ್ನು (ಉದಾಹರಣೆಗೆ ಸೊಸೆ ಅಥವಾ ಮಗಳು) 'ಮನೆಯ ಯಜಮಾನಿ' ಎಂದು ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಿಕೊಂಡರೆ, ತದನಂತರ ಅವರಿಗೆ ಯೋಜನೆಯ ಲಾಭವನ್ನು ವರ್ಗಾಯಿಸಲು ಅವಕಾಶವಿದೆ. ಇದಕ್ಕಾಗಿ ಹತ್ತಿರದ ಗ್ರ‍ಾಮ ಒನ್/ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: Horticulture Training-10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ: ರೈತ ಮಕ್ಕಳಿಗೆ ಸುವರ್ಣಾವಕಾಶ!

Gruhalakshmi Scheme In Kanataka-ಗೃಹಲಕ್ಷ್ಮಿ ಹಣ ಸ್ಥಗಿತವಾಗಿದ್ದರೆ ಸರಿಪಡಿಸಿಕೊಳ್ಳುವುದು ಹೇಗೆ?

ಕೆಲವು ತಾಂತ್ರಿಕ ಕಾರಣಗಳಿಂದ ನಿಮಗೆ ಗೃಹಲಕ್ಷ್ಮಿ ಯೋಜನೆಯ ಅರ್ಥಿಕ ನೆರವು ಜಮಾ ಅಗುವುದು ಸ್ಥಗಿತವಾಗಿದ್ದರೆ ಕೂಡಲೇ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ನಿಮ್ಮ ಅರ್ಜಿಯನ್ನು ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ.

e-KYC ಅಪ್‌ಡೇಟ್: ನಿಮ್ಮ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್‌ಗೆ ಇ-ಕೆವೈಸಿ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಇದು ಹಣ ಸ್ಥಗಿತಗೊಳ್ಳಲು ಮುಖ್ಯ ಕಾರಣವಾಗಿರುತ್ತದೆ.

ಇದನ್ನೂ ಓದಿ: PM-Kisan 22th Installment-ಇಂದು ರಾಜ್ಯದ 41.40 ಲಕ್ಷ ರೈತರಿಗೆ 828.02 ಕೋಟಿ ಪಿಎಂ ಕಿಸಾನ್ ಹಣ ಬಿಡುಗಡೆ!

NPCI ಮ್ಯಾಪಿಂಗ್: ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು ಮತ್ತು ಅದು NPCI (National Payments Corporation of India) ನಲ್ಲಿ ಸಕ್ರಿಯವಾಗಿರಬೇಕು. ಬ್ಯಾಂಕ್‌ಗೆ ಭೇಟಿ ನೀಡಿ ಇದನ್ನು ಸರಿಪಡಿಸಿಕೊಳ್ಳಬಹುದು.

ಪಡಿತರ ಚೀಟಿಯಲ್ಲಿನ ಬದಲಾವಣೆ: ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಯಾರು ಎಂಬುದು ಸ್ಪಷ್ಟವಾಗಿ ನಮೂದಾಗಿರಬೇಕು. ಒಂದು ವೇಳೆ ತಿದ್ದುಪಡಿಗಳಿದ್ದರೆ ತಕ್ಷಣ ಮಾಡಿಸಿಕೊಳ್ಳಿ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಪರ್ಕ: ಎಲ್ಲಾ ದಾಖಲೆಗಳು ಸರಿಯಿದ್ದರೂ ಹಣ ಬರುತ್ತಿಲ್ಲವೆಂದರೆ, ನಿಮ್ಮ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ (CDPO) ಕಚೇರಿಗೆ ಭೇಟಿ ನೀಡಿ ಲಿಖಿತ ದೂರು ನೀಡಬಹುದು.

ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ನಾಂದಿ ಹಾಡಿದೆ. 27ನೇ ಕಂತಿನ ಹಣ ಬಿಡುಗಡೆಯಾಗಿರುವುದು ಫಲಾನುಭವಿಗಳಲ್ಲಿ ಸಂತಸ ತಂದಿದೆ. ತಾಂತ್ರಿಕ ಸಮಸ್ಯೆ ಇರುವವರು ಮೇಲೆ ತಿಳಿಸಿದ ವಿಧಾನಗಳ ಮೂಲಕ ಸರಿಪಡಿಸಿಕೊಂಡು ಯೋಜನೆಯ ಲಾಭವನ್ನು ಮುಂದುವರಿಸಬಹುದು. ಸರ್ಕಾರವು ಹಂತಹಂತವಾಗಿ ಹಣವನ್ನು ವರ್ಗಾವಣೆ ಮಾಡುತ್ತಿರುವುದರಿಂದ, ನಿಮ್ಮ ಖಾತೆಗೆ ಹಣ ಬರುವುದು ಸ್ವಲ್ಪ ವಿಳಂಬವಾದರೂ ಖಂಡಿತವಾಗಿ ತಲುಪಲಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: