GKVK Distance Education-ಕೃಷಿ ವಿಶ್ವವಿದ್ಯಾಲಯದಿಂದ ವಿವಿಧ ಸರ್ಟಿಫಿಕೇಟ್ ಕೋರ್ಸಗಳಿಗೆ ಅರ್ಜಿ ಆಹ್ವಾನ!

March 16, 2026 | Siddesh
GKVK Distance Education-ಕೃಷಿ ವಿಶ್ವವಿದ್ಯಾಲಯದಿಂದ ವಿವಿಧ ಸರ್ಟಿಫಿಕೇಟ್ ಕೋರ್ಸಗಳಿಗೆ ಅರ್ಜಿ ಆಹ್ವಾನ!
Share Now:

ಬೆಂಗಳೂರು: ಸ್ವಂತ ಉದ್ಯೋಗ ಮಾಡಬಯಸುವವರು ಅಥವಾ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ತಾಂತ್ರಿಕ ಜ್ಞಾನ ಪಡೆಯಲು ಇಚ್ಛಿಸುವವರಿಗಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು (UASB) ಸುವರ್ಣಾವಕಾಶವೊಂದನ್ನು ನೀಡಿದೆ. ಜಿಕೆವಿಕೆಯ ದೂರ ಶಿಕ್ಷಣ ಘಟಕದ ವತಿಯಿಂದ 2026ನೇ ಸಾಲಿನ ಒಂದು ವರ್ಷದ ಡಿಪ್ಲೊಮಾ (ಕೃಷಿ) ಮತ್ತು ವಿವಿಧ ಸರ್ಟಿಫಿಕೇಟ್(GKVK Distance Education Courses Application) ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸ್ತುತ ಕೃಷಿ ಕ್ಷೇತ್ರವು ಆಧುನೀಕರಣಗೊಳ್ಳುತ್ತಿದ್ದು, ಕೇವಲ ಸಾಂಪ್ರದಾಯಿಕ ಪದ್ಧತಿಯಿಂದ ಲಾಭ ಗಳಿಸುವುದು ಕಷ್ಟಕರವಾಗಿದೆ. ಈ ಹಿನ್ನೆಲೆಯಲ್ಲಿ ಜೇನು ಸಾಕಾಣಿಕೆ, ಸಮಗ್ರ ಕೃಷಿ ಮತ್ತು ಯಂತ್ರೋಪಕರಣಗಳ(GKVK Distance Education Courses) ನಿರ್ವಹಣೆಯಂತಹ ತಾಂತ್ರಿಕ ಕೌಶಲ್ಯಗಳನ್ನು ಕಲಿಸಲು ಈ ಕೋರ್ಸ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಜ್ಞಾನವನ್ನು ವೃದ್ಧಿಸಿಕೊಳ್ಳಲು ದೂರ ಶಿಕ್ಷಣದ ಈ ವ್ಯವಸ್ಥೆಯು ಅತ್ಯುತ್ತಮ ವೇದಿಕೆಯಾಗಿದ್ದು, ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಇದನ್ನೂ ಓದಿ: Free Mushroom Training-ಉಚಿತ ಅಣಬೆ ಸಾಕಾಣಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

ಅರ್ಜಿ ಸಲ್ಲಿಸಲು ಇಚ್ಛಿಸುವವರು ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ನಮೂನೆಯನ್ನು(Bengalore Agriculture University) ಡೌನ್‌ಲೋಡ್ ಮಾಡಿಕೊಳ್ಳಬಹುದು. ನಿಗದಿತ ಅರ್ಜಿ ಶುಲ್ಕದೊಂದಿಗೆ ಅಗತ್ಯ ದಾಖಲೆಗಳನ್ನು ಒದಗಿಸಿ ಪ್ರವೇಶ ಪಡೆಯಲು ಅವಕಾಶವಿದೆ. ಕೃಷಿ ಚಟುವಟಿಕೆಗಳಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಲು ಮತ್ತು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯಲು ಇಂತಹ ಪ್ರಮಾಣಪತ್ರಗಳು ಭವಿಷ್ಯದಲ್ಲಿ ಸಹಕಾರಿಯಾಗಲಿದ್ದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

Agriculture Distance Education Courses-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಕೋರ್ಸ್‌ಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದ್ದು ಇದರ ವಿವರ ಈ ಕೆಳಗಿನಂತಿದೆ:

ಒಂದು ವರ್ಷದ ಡಿಪ್ಲೊಮಾ (ಕೃಷಿ): 10ನೇ ತರಗತಿ ಉತ್ತೀರ್ಣರಾಗಿರಬೇಕು.

ಕೃಷಿಯಲ್ಲಿ ಬೀಜೋತ್ಪಾದನೆ ತಾಂತ್ರಿಕತೆಗಳು: 10ನೇ ತರಗತಿ ಉತ್ತೀರ್ಣರಾಗಿರಬೇಕು.

ಕೃಷಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆ: 10ನೇ ತರಗತಿ ಉತ್ತೀರ್ಣರಾಗಿರಬೇಕು.

ಜೇನು ಸಾಕಾಣಿಕೆ: ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು.

ಸಮಗ್ರ ಕೃಷಿ: ಕನಿಷ್ಠ 7ನೇ ತರಗತಿ ಉತ್ತೀರ್ಣರಾಗಿರಬೇಕು.

ಇದನ್ನೂ ಓದಿ: Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!

How to apply for GKVK course-ಅರ್ಜಿ ಸಲ್ಲಿಸುವುದು ಹೇಗೆ?

Step-1: ಅರ್ಜಿ ಡೌನ್‌ಲೋಡ್: ಅಭ್ಯರ್ಥಿಗಳು ಕೃಷಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ www.uasbangalore.edu.in ನಿಂದ ಅರ್ಜಿ ನಮೂನೆಯನ್ನು ಪಡೆಯಬಹುದು.

Step-2: ಅರ್ಜಿ ಶುಲ್ಕ: ಪ್ರತಿಯೊಂದು ಕೋರ್ಸ್‌ಗೆ 100 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು ಶುಲ್ಕವನ್ನು ಡಿ.ಡಿ ಮೂಲಕ ಪಾವತಿ ಮಾಡಬೇಕಾಗುತ್ತದೆ.

Step-3: ಡಿ.ಡಿ (D.D) ವಿವರ: ಶುಲ್ಕವನ್ನು "Comptroller, UAS, GKVK, Bengaluru - 560 065" ಇವರ ಹೆಸರಿಗೆ ಬೆಂಗಳೂರಿನಲ್ಲಿ ಸಂದಾಯವಾಗುವಂತೆ ಡಿ.ಡಿ ತೆಗೆಯಬೇಕು.

Step-4: ಅರ್ಜಿ ಸಲ್ಲಿಕೆ ವಿಳಾಸ: ದೂರ ಶಿಕ್ಷಣ ಘಟಕ, ವಿಸ್ತರಣಾ ನಿರ್ದೇಶನಾಲಯ,ಕೃಷಿ ವಿಶ್ವವಿದ್ಯಾನಿಲಯ, ಜಿಕೆವಿಕೆ,ಬೆಂಗಳೂರು-560065

Application Download Link-ಅರ್ಜಿ ನಮೂನೆ ಮತ್ತು ಕೈಪಿಡಿಯನ್ನು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ-Download Now

ಇದನ್ನೂ ಓದಿ: Pearl farming-ಸಿಹಿ ನೀರು ಮುತ್ತು ಕೃಷಿ ತರಬೇತಿ: ನಿರುದ್ಯೋಗಿ ಯುವಕರಿಗೆ ಸುವರ್ಣ ಅವಕಾಶ!

GKVK Distance Education

ಇದನ್ನೂ ಓದಿ: Akrama Sakrama Yojane-ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ 3 ತಿಂಗಳ ಗಡುವು: ಇಂಧನ ಸಚಿವ ಕೆ.ಜೆ. ಜಾರ್ಜ್!

Last Date For Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅರ್ಜಿ ವಿತರಣೆ ಆರಂಭ: 09-03-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11-04-2026

ಇದನ್ನೂ ಓದಿ: Milk incentive-ಬಮೂಲ್ ನಿಂದ ಹಾಲು ಉತ್ಪಾದಕರಿಗೆ 59 ಕೋಟಿ ಹೆಚ್ಚುವರಿ ಸಹಾಯಧನ ಬಿಡುಗಡೆ!

ಕೋರ್ಸ್‌ವಾರು ನಿಗದಿಪಡಿಸಿದ ಶುಲ್ಕದ ವಿವರ:

ಕ್ರ.ಸಂಕೋರ್ಸ್ ವಿವರಅವಧಿಒಟ್ಟು ಶುಲ್ಕ (ರೂ.)
1ಒಂದು ವರ್ಷದ ಡಿಪ್ಲೊಮಾ (ಕೃಷಿ)12 ತಿಂಗಳು10,000/- (ಎರಡು ಕಂತುಗಳಲ್ಲಿ ಪಾವತಿಸಬಹುದು)
2ಕೃಷಿಯಲ್ಲಿ ಬೀಜೋತ್ಪಾದನೆ ತಾಂತ್ರಿಕತೆಗಳು12 ತಿಂಗಳು3,000/-
3ಕೃಷಿಯಲ್ಲಿ ಯಂತ್ರೋಪಕರಣಗಳ ನಿರ್ವಹಣೆ12 ತಿಂಗಳು3,000/-
4ಜೇನು ಸಾಕಾಣಿಕೆ12 ತಿಂಗಳು3,000/-
5ಸಮಗ್ರ ಕೃಷಿ12 ತಿಂಗಳು1,500/-

ಇದನ್ನೂ ಓದಿ: Horticulture Training-10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ: ರೈತ ಮಕ್ಕಳಿಗೆ ಸುವರ್ಣಾವಕಾಶ!

ಕೃಷಿ ವಿವಿ ಸರ್ಟಿಫಿಕೇಟ್ ಕೋರ್ಸ್ ಪ್ರಯೋಜನಗಳು:

ಬ್ಯಾಂಕ್ ಸಾಲ ಸೌಲಭ್ಯ: ಪ್ರಮಾಣಪತ್ರ ಹೊಂದಿದವರಿಗೆ ಕೃಷಿ ಆಧಾರಿತ ಉದ್ಯಮಗಳಿಗೆ ಬ್ಯಾಂಕ್ ಸಾಲ ಮತ್ತು ಸಬ್ಸಿಡಿ ಪಡೆಯುವಾಗ ಆದ್ಯತೆ ದೊರೆಯುವ ಸಾಧ್ಯತೆ ಇರುತ್ತದೆ.

ವೈಜ್ಞಾನಿಕ ತರಬೇತಿ: ಕೃಷಿ ತಜ್ಞರಿಂದ ನೇರ ಮಾರ್ಗದರ್ಶನ ಮತ್ತು ಆಧುನಿಕ ಕೃಷಿ ಪದ್ಧತಿಗಳ ಬಗ್ಗೆ ಅರಿವು ಮೂಡುತ್ತದೆ.

ಸ್ವಯಂ ಉದ್ಯೋಗ: ಜೇನು ಸಾಕಾಣಿಕೆ ಮತ್ತು ಬೀಜೋತ್ಪಾದನೆಯಂತಹ ಕೋರ್ಸ್‌ಗಳು ಸ್ವಂತ ಉದ್ಯಮ ಆರಂಭಿಸಲು ಪೂರಕವಾಗಿವೆ.

ಉದ್ಯೋಗಾವಕಾಶ: ಕೃಷಿ ಸಂಬಂಧಿತ ಕೈಗಾರಿಕೆಗಳು ಮತ್ತು ಕಂಪನಿಗಳಲ್ಲಿ ಕೆಲಸ ಪಡೆಯಲು ಈ ಪ್ರಮಾಣಪತ್ರಗಳು ಸಹಾಯ ಮಾಡುತ್ತವೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: