Free Fast-Food Training-ಉಚಿತ ಫಾಸ್ಟ್ ಫುಡ್‌ ತಯಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!

March 18, 2026 | Siddesh
Free Fast-Food Training-ಉಚಿತ ಫಾಸ್ಟ್ ಫುಡ್‌ ತಯಾರಿಕೆ ತರಬೇತಿಗಾಗಿ ಅರ್ಜಿ ಆಹ್ವಾನ!
Share Now:

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೆಲಸಕ್ಕಾಗಿ ಬೇರೆಯವರನ್ನು ಅವಲಂಬಿಸುವ ಬದಲು, ಸ್ವಂತ ಕಾಲಿನ ಮೇಲೆ ನಿಂತು ನಾಲ್ಕು ಜನರಿಗೆ ಉದ್ಯೋಗ ನೀಡುವ ಆಸೆ ಹೊಂದಿರುವ ಯುವಕ-ಯುವತಿಯರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಸೊಣ್ಣಹಳ್ಳಿಪುರದಲ್ಲಿರುವ 'ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ' (Canara Bank RSETI) ವತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ 12 ದಿನಗಳ ಕಾಲ ವಿಶೇಷ "ಫಾಸ್ಟ್ ಫುಡ್ (ಚಾಟ್ಸ್ ಸೆಂಟರ್) ತಯಾರಿಕೆ" ತರಬೇತಿಯನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇಂದಿನ ದಿನಗಳಲ್ಲಿ ಹೋಟೆಲ್ ಮತ್ತು ಚಾಟ್ಸ್ ಉದ್ಯಮಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಎಲ್ಲರೂ ಇಷ್ಟಪಡುವ ಪಾನಿ ಪೂರಿ, ಮಸಾಲ ಪುರಿ, ಗೋಬಿ ಮಂಚೂರಿಯಂತಹ ಪದಾರ್ಥಗಳನ್ನು ರುಚಿಯಾಗಿ ತಯಾರಿಸುವುದನ್ನು ಕಲಿಸುವುದೇ ಈ ಶಿಬಿರದ ಮುಖ್ಯ ಉದ್ದೇಶವಾಗಿದೆ. ಕೇವಲ ಅಡುಗೆ ಮಾಡುವುದಷ್ಟೇ ಅಲ್ಲದೆ, ಉದ್ಯಮದಲ್ಲಿ ಹೇಗೆ ಆದಾಯ ಗಳಿಸುವುದು ಎಂಬ ಪ್ರಾಯೋಗಿಕ ಜ್ಞಾನವನ್ನೂ ಈ ಶಿಬಿರದಲ್ಲಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಶಿಬಿರಾರ್ಥಿಗಳಿಗೆ ಊಟ ಮತ್ತು ವಸತಿಯನ್ನು ಸಂಪೂರ್ಣ ಉಚಿತವಾಗಿರುತ್ತದೆ.

ಇದನ್ನೂ ಓದಿ: Podi Nakshe-ಇನ್ಮುಂದೆ ಮೊಬೈಲ್‌ನಲ್ಲೇ ಪಡೆಯಿರಿ ಪೋಡಿ ನಕ್ಷೆ! ಕಚೇರಿ ಅಲೆದಾಟಕ್ಕೆ ಬಿತ್ತು ಬ್ರೇಕ್!

ಈ ತರಬೇತಿಯು ಏಪ್ರಿಲ್ 4 ರಿಂದ ಪ್ರಾರಂಭವಾಗಲಿದ್ದು, ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಯುವಕ ಯುವತಿಯರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಶಿಬಿರವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಮಾನ್ಯತೆ ಪಡೆದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ. ಹಾಗೂ ಈ ಪ್ರಮಾಣ ಪತ್ರವು ಮುಂದಿನ ದಿನಗಳಲ್ಲಿ ಬ್ಯಾಂಕ್‌ಗಳಿಂದ ಪಡೆಯುವ ಸಾಲ ಸೌಲಭ್ಯ ಹಾಗೂ ಸ್ವಂತ ಉದ್ದಿಮೆ ಪ್ರಾರಂಭಿಸಲು ಪ್ರಮುಖ ದಾಖಲೆ ಇದಾಗಿದೆ.

ಈ ತರಬೇತಿಯು ಏನೆಲ್ಲಾ ಒಳಗೊಂಡಿರುತ್ತದೆ?

ಈ ತರಬೇತಿಯಲ್ಲಿ 12 ದಿನಗಳ ಕಾಲ ಈ ಕೆಳಗಿನ ಚಾಟ್ಸ್‌ಗಳ ತಯಾರಿಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಗುತ್ತದೆ:

ಪಾನಿ ಪೂರಿ ಮತ್ತು ಚಾಟ್ ಮಸಾಲ

ಗರಿಗರಿಯಾದ ಕಚೋರಿ ಮತ್ತು ಸಮೋಸ

ಗೋಬಿ ಮಂಚೂರಿ ಮತ್ತು ಫ್ರೈಡ್ ರೈಸ್

ಇನ್ನೂ ಅನೇಕ ಬಗೆಯ ಸ್ಥಳೀಯ ಮತ್ತು ಜನಪ್ರಿಯ ಚಾಟ್ಸ್ ಪದಾರ್ಥಗಳು.

ಇದನ್ನೂ ಓದಿ: Akka Cafe Subsidy-ಅಕ್ಕ ಕೆಫೆ ಆರಂಭಿಸಲು 15 ಲಕ್ಷ ಆರ್ಥಿಕ ನೆರವು! ಅರ್ಜಿ ಸಲ್ಲಿಸುವುದು ಹೇಗೆ?

who Can Apply-ಈ ತರಬೇತಿ ಪಡೆಯಲು ಯಾರೆಲ್ಲ ಅರ್ಹರು?

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರ ಅಭ್ಯರ್ಥಿಯ ವಯಸ್ಸು ಕನಿಷ್ಟ 18 ರಿಂದ 49 ವರ್ಷದ ಒಳಗಿರಬೇಕು.

ಯುವಕ ಹಾಗೂ ಯುವತಿಯರಿಬ್ಬರಿಗೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಅಭ್ಯರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಕಡ್ಡಾಯವಾಗಿ ಬರಬೇಕು.

ಬಿಪಿಎಲ್ (BPL) ಕಾರ್ಡ್ ಹೊಂದಿದ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Grama One Franchise-ಗ್ರಾಮ ಒನ್ ಫ್ರಾಂಚೈಸಿ ಪಡೆಯಲು ಸುವರ್ಣಾವಕಾಶ: ಇಂದೇ ಅರ್ಜಿ ಸಲ್ಲಿಸಿ!

fast food traning

ಇದನ್ನೂ ಓದಿ: Gruhalakshmi Amount-2026: ಗೃಹಲಕ್ಷ್ಮಿ ಯೋಜನೆ 27ನೇ ಕಂತಿನ ಹಣ ಫಲಾನುಭವಿ ಖಾತೆಗೆ ಬಿಡುಗಡೆ!

Where To APply-ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಆಸಕ್ತ ಅಭ್ಯರ್ಥಿಗಳು ದಿನಾಂಕ 27/03/2026 ರ ಬುಧವಾರ ಬೆಳಿಗ್ಗೆ 9.30ಕ್ಕೆ ಸಂಸ್ಥೆಯ ವಿಳಾಸಕ್ಕೆ ನೇರವಾಗಿ ಭೇಟಿ ನೀಡಿ ಎಲ್ಲಾ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನೋಂದಾವಣಿಯನ್ನು ಮಾಡಿಕೊಳ್ಳಬಹುದು ಆಧಾರ್ ಕಾರ್ಡ ಹಾಗೂ ರೇಶನ್ ಕಾರ್ಡ್ ಅನ್ನು ಕಡ್ಡಾಯವಾಗಿರುತ್ತದೆ.

Important Dates-ಅರ್ಜಿ ಪ್ರಕ್ತಿಯೆಯ ಪ್ರಮುಖ ದಿನಾಂಕಗಳು:

ನೋಂದಾವಣಿ ಮಾಡಲು ಕೊನೆಯ ದಿನಾಂಕ: 27 ಮಾರ್ಚ್ 2026.

ಸಂದರ್ಶನ ಮತ್ತು ದಾಖಲಾತಿ ಪರಿಶೀಲನೆ: 27 ಮಾರ್ಚ್ 2026 (ಬೆಳಿಗ್ಗೆ 9.30).

ತರಬೇತಿ ಪ್ರಾರಂಭವಾಗುವ ದಿನಾಂಕ: 04 ಏಪ್ರಿಲ್ 2026.

ಇದನ್ನೂ ಓದಿ: Pearl farming-ಸಿಹಿ ನೀರು ಮುತ್ತು ಕೃಷಿ ತರಬೇತಿ: ನಿರುದ್ಯೋಗಿ ಯುವಕರಿಗೆ ಸುವರ್ಣ ಅವಕಾಶ!

Training place-ತರಬೇತಿ ನೆಡೆಯುವ ಸ್ಥಳ ಹಾಗೂ ದೂರವಾಣಿ ಸಂಖ್ಯೆ:

ಕೆನರಾ ಬ್ಯಾಂಕ್‌ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (RSETI),
ಸೊಣ್ಣಹಳ್ಳಿಪುರ, ಹಸಿಗಾಳ (ಅಂಚೆ), ಹೊಸಕೋಟೆ ತಾಲ್ಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ.

ಇದನ್ನೂ ಓದಿ: Akrama Sakrama Yojane-ಅಕ್ರಮ ಪಂಪ್‌ಸೆಟ್‌ಗಳ ಸಕ್ರಮಕ್ಕೆ 3 ತಿಂಗಳ ಗಡುವು: ಇಂಧನ ಸಚಿವ ಕೆ.ಜೆ. ಜಾರ್ಜ್!

ದೂರವಾಣಿ ಸಂಖ್ಯೆಗಳು: 8970476050, 9591514154, 9686248369, 6363139123, 9505894247

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: