CCTV Installation Training-ಉಚಿತ ಸಿಸಿಟಿವಿ ತರಬೇತಿಗೆ ಅರ್ಜಿ ಆಹ್ವಾನ!ಇಂದೇ ಅರ್ಜಿ ಸಲ್ಲಿಸಿ!

March 27, 2026 | Siddesh
CCTV Installation Training-ಉಚಿತ ಸಿಸಿಟಿವಿ ತರಬೇತಿಗೆ ಅರ್ಜಿ ಆಹ್ವಾನ!ಇಂದೇ ಅರ್ಜಿ ಸಲ್ಲಿಸಿ!
Share Now:

ಇಂದಿನ ಆಧುನಿಕ ಯುಗದಲ್ಲಿ ಭದ್ರತಾ ವ್ಯವಸ್ಥೆಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಈ ನಿಟ್ಟಿನಲ್ಲಿ ಸ್ವಯಂ ಉದ್ಯೋಗವನ್ನು ಉತ್ತೇಜಿಸಲು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI) ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಕುಮಟಾದಲ್ಲಿ ಹದಿನೈದು ದಿನಗಳ ಕಾಲ 'ಸಿಸಿಟಿವಿ ಕ್ಯಾಮೆರಾ ಇನ್‌ಸ್ಟಾಲೇಷನ್/CCTV Installation Training, ಸೆಕ್ಯೂರಿಟಿ ಅಲಾರ್ಮ್ ಹಾಗೂ ಸ್ಮೋಕ್ ಡಿಟೆಕ್ಟರ್' ಅಳವಡಿಕೆಯ ಕುರಿತು ವಿಶೇಷ ಉಚಿತ ತರಬೇತಿಯನ್ನು ಆಯೋಜಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತಾಂತ್ರಿಕ ಕೌಶಲಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಬಯಸುವ ಗ್ರಾಮೀಣ ಭಾಗದ ಯುವಕರಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಕೇವಲ ತರಬೇತಿ ಮಾತ್ರವಲ್ಲದೆ, ತರಬೇತಿಯ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನೂ/CCTV Installation Training Application ಸಂಸ್ಥೆಯು ಒದಗಿಸುತ್ತಿದೆ. ಈ ತರಬೇತಿಯು ಏಪ್ರಿಲ್ 6 ರಿಂದ ಪ್ರಾರಂಭವಾಗಲಿದ್ದು, ಪ್ರಾಯೋಗಿಕ ಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Pension Scheme-ಪಿಂಚಣಿದಾರರ ಗಮನಕ್ಕೆ: ಇನ್ಮುಂದೆ ಪ್ರತಿ ತಿಂಗಳು ಪಿಂಚಣಿ ಪಡೆಯಲು ಈ ದಾಖಲೆ ಸಲ್ಲಿಕೆ ಕಡ್ಡಾಯ! ತಪ್ಪಿದರೆ ಹಣ ಸ್ಥಗಿತ!

ಈ ಯೋಜನೆಯಲ್ಲಿ ವಿಶೇಷವಾಗಿ ಗ್ರಾಮೀಣ ಭಾಗದ ಬಿಪಿಎಲ್ (BPL) ಕಾರ್ಡ್ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುವುದು, ಇದು ಭವಿಷ್ಯದಲ್ಲಿ ಉದ್ಯೋಗ(Free CCTV Installation Training) ಪಡೆಯಲು ಅಥವಾ ಸ್ವಂತ ವ್ಯವಹಾರ ಆರಂಭಿಸಲು ಸಹಕಾರಿಯಾಗಲಿದೆ. ಆಸಕ್ತರು ತಡಮಾಡದೆ ಈ ಅವಕಾಶವನ್ನು ಬಳಸಿಕೊಳ್ಳಲು ಕೋರಲಾಗಿದೆ.

Free CCTV Installation Training-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
ಅಭ್ಯರ್ಥಿಯ ವಯಸ್ಸು 18 ರಿಂದ 50 ವರ್ಷ ವಯೋಮಾನದೊಳಗಿನ ಆಸಕ್ತ ಅರ್ಜಿ ಸಲ್ಲಿಸಬಹುದು.
ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Government Holiday-ಸರಕಾರಿ ರಜಾ ದಿನದಲ್ಲಿ ಮಹತ್ವದ ಬದಲಾವಣೆ! ತಪ್ಪದೇ ಈ ಸುದ್ದಿ ನೋಡಿ!

CCTV Installation Training

ಇದನ್ನೂ ಓದಿ: Ramayana Exam 2026-ಶೃಂಗೇರಿ ಶಾರದಾ ಪೀಠದಿಂದ ರಾಮಾಯಣ ಪರೀಕ್ಷೆಗೆ ಅರ್ಜಿ! ವಿಜೇತ ವಿದ್ಯಾರ್ಥಿಗಳಿಗೆ ₹50,000 ಬಹುಮಾನ!

Free CCTV Installation Training Date-ತರಬೇತಿ ಪ್ರಾರಂಭ ದಿನಾಂಕ:

ಉಚಿತ ಸಿಸಿಟಿವಿ ತರಬೇತಿಗೆ 06 ಎಪ್ರಿಲ್ 2026 ರಿಂದ 18 ಎಪ್ರಿಲ್ 2026 ರವರೆಗೆ ನಡೆಯಲಿದೆ.

Free CCTV Installation Training Details-ತರಬೇತಿಯಲ್ಲಿ ಏನೆಲ್ಲಾ ತಿಳಿಸಲಾಗುತ್ತದೆ?

ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ (Installation), ಸೆಕ್ಯೂರಿಟಿ ಅಲಾರ್ಮ್ ಸಿಸ್ಟಮ್ ಮತ್ತು ಸ್ಮೋಕ್ ಡಿಟೆಕ್ಟರ್‌ಗಳ ಕಾರ್ಯನಿರ್ವಹಣೆ ಹಾಗೂ ದುರಸ್ತಿ ಕುರಿತು ಸಂಪೂರ್ಣ ಮಾಹಿತಿ ನೀಡಲಾಗುತ್ತದೆ.

ಇದನ್ನೂ ಓದಿ: Agri Helpline-ರೈತರಿಗೆ ಗುಡ್ ನ್ಯೂಸ್: ಕೃಷಿ ಇಲಾಖೆಯ ಯೋಜನೆಗಳ ಮಾಹಿತಿಗೆ ನೂತನ ಸಹಾಯವಾಣಿ ಬಿಡುಗಡೆ!

Free CCTV Installation Training Center-ತರಬೇತಿ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (RSETI), ಇಂಡಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರ ಕನ್ನಡ ಜಿಲ್ಲೆ - 581343.

Free CCTV Installation Training Registration-ನೋಂದಣಿ ಮಾಡಿಕೊಳ್ಳುವುದು ಹೇಗೆ?

ತರಬೇತಿಯಲ್ಲಿ ಭಾಗವಹಿಸಲು ಅಭ್ಯರ್ಥಿಗಲು Register Now ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಗೂಗಲ್ ಪಾರ್ಮ್ ಒಪನ್ ಮಾಡಿಕೊಂಡು ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು: 9449860007, 9538281989, 9916783825, 8880444612, 9620962004.

ಇದನ್ನೂ ಓದಿ: Pan Card New Rules-ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ: ಏಪ್ರಿಲ್ 1ರಿಂದ ಹೊಸ ರೂಲ್ಸ್ ಜಾರಿ; ಏನಿದು ಬದಲಾವಣೆ?

Documents For CCTV Installation Training-ಅವಶ್ಯಕ ದಾಖಲೆಗಳು:

ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳ ಎರಡು ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ತರಬೇಕು:

ನಾಲ್ಕು ಪಾಸ್‌ಪೋರ್ಟ್ ಸೈಜ್ ಫೋಟೋಗಳು.

ಬ್ಯಾಂಕ್ ಪಾಸ್‌ಬುಕ್ ಪ್ರತಿ.

ರೇಷನ್ ಕಾರ್ಡ್ (BPL ಕಾರ್ಡ್‌ಗೆ ಆದ್ಯತೆ).

ಆಧಾರ್ ಕಾರ್ಡ್.

ಪಾನ್ ಕಾರ್ಡ್.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: