Marriage Assistance Scheme-ಕಾರ್ಮಿಕ ಮಂಡಳಿಯಿಂದ 60,000 ರೂ ಮದುವೆ ಸಹಾಯಧನಕ್ಕೆ ಅರ್ಜಿ ಆಹ್ವಾನ!

March 31, 2026 | Siddesh
Marriage Assistance Scheme-ಕಾರ್ಮಿಕ ಮಂಡಳಿಯಿಂದ 60,000 ರೂ ಮದುವೆ ಸಹಾಯಧನಕ್ಕೆ ಅರ್ಜಿ ಆಹ್ವಾನ!
Share Now:

ದಿನವಿಡೀ ಬೆವರು ಸುರಿಸಿ ಸುಂದರ ಕಟ್ಟಡಗಳನ್ನು ನಿರ್ಮಾಣ(Karmika Mandali) ಮಾಡಿ ತಮ್ಮ ಕುಟುಂಬವನ್ನು ಸಾಗಿಸುತ್ತಿರುವ ಕಾರ್ಮಿಕರಿಗೆ(Marriage Assistance Scheme In Karnataka) ತಮ್ಮ ಕುಟುಂಬದ ಶುಭ ಕಾರ್ಯಗಳನ್ನು ನೆರವೇರಿಸುವುದು ಅತಿ ದೊಡ್ಡ ಸವಾಲಾಗಿರುತ್ತದೆ. ಅದರಲ್ಲೂ ಇಂದಿನ ದಿನಗಳಲ್ಲಿ ಮದುವೆ ಸಮಾರಂಭಗಳನ್ನು ಮಾಡುವುದು ಅತ್ಯಂತ ಕಷ್ಟದ ಸಂಗತಿ ಎಂದರೆ ತಪ್ಪಾಗದು ಆದ್ದರಿಂದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ವಿವಾಹ ಸಹಾಯಧನ ಯೋಜನೆಯಡಿ ಕಾರ್ಮಿಕ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಸರ್ಕಾರವು ತಮ್ಮ ಮಕ್ಕಳ ಮದುವೆಗೆ ₹60,000 ಆರ್ಥಿಕ ಸಹಾಯಧನವನ್ನು ನೀಡಲು ಈ ಯೋಜನೆಯನ್ನು ಜಾರಿಗೆ ತಂದಿದೆ.

ಇಂದಿನ ಈ ಲೇಖನದಲ್ಲಿ ಮದುವೆ ಸಹಾಯಧನವನ್ನು ಪಡೆಯಲು ಯಾರೆಲ್ಲ ಅರ್ಹರಿರುತ್ತಾರೆ? ಸಹಾಯಧನವನ್ನು ಪಡೆಯಲು ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳನ್ನು ನೀಡಬೇಕು? ಈ ಯೋಜನೆ ಅಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆಯಬಹುದು? ಹಾಗೆಯೇ ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: LPG Cylinder News-ಎಲ್‌ಪಿಜಿ ಅಭಾವಕ್ಕೆ ನೂತನ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ!

Marriage Assistance Scheme Amount-ಮದುವೆ ಸಹಾಯಧನ ಯೋಜನೆಯಡಿ ಎಷ್ಟು ಸಹಾಯಧನ ನೀಡಲಾಗುತ್ತದೆ?

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿ ಆಯೋಜಿಸಲಾದ ವಿವಾಹ ಸಹಾಯಧನ ಯೋಜನೆ ಅಡಿ ಸಹಾಯಧನವನ್ನು ಪಡೆಯಲು ಅರ್ಹ ಕಾರ್ಮಿಕರಿಗೆ ಈ ಯೋಜನೆಯಡಿ ₹60,000 ಸಹಾಯಧನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: SSLC Exam 2026-10ನೇ ತರಗತಿ ಅಂತಿಮ ಪರೀಕ್ಷೆ ತೃತೀಯ ಭಾಷೆ ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿ!

Karmika Mandali Marriage Assistance Scheme-ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಅರ್ಹತಾ ಮಾನದಂಡಗಳು:

ಮದುವೆಯಾಗಿ 6 ತಿಂಗಳ ಒಳಗೆ ಅರ್ಜಿ ಸಲ್ಲಿಸಿ ಸಹಾಯಧನವನ್ನು ಪಡೆಯಲು ಅವಕಾಶವಿರುತ್ತದೆ.

ಸಾಯಧನವು ನೇರವಾಗಿ ಡಿ ಬಿ ಟಿ ಮೂಲಕ ಅರ್ಜಿದಾರರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.

ಒಬ್ಬ ಕಾರ್ಮಿಕ ಕುಟುಂಬದ ಅಭ್ಯರ್ಥಿಗೆ ಗರಿಷ್ಠ ಇಬ್ಬರು ಮಕ್ಕಳಿಗೆ ಮಾತ್ರ ಈ ಸಹಾಯಧನ ಪಡೆಯಲು ಅವಕಾಶವಿರುತ್ತದೆ.

ಇದನ್ನೂ ಓದಿ: Janaganati-2027: ಎಪ್ರಿಲ್ 1ರಿಂದ ಡಿಜಿಟಲ್ ಜನಗಣತಿ! ನಿಮ್ಮ ಮೊಬೈಲ್‌ನಲ್ಲೇ ಮಾಹಿತಿ ದಾಖಲಿಸಲು ಸುವರ್ಣಾವಕಾಶ!

Who Can Apply For Maduve Sahayadhana Yojana-ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಕಡ್ಡಾಯವಾಗಿ ನೋಂದಣಿಯನ್ನು ಮಾಡಿಕೊಂಡಿರಬೇಕು.

ಕಾರ್ಮಿಕ ಕಾರ್ಡ್ ಪಡೆದು ಕನಿಷ್ಠ 1 ವರ್ಷ ಪೂರ್ಣಗೊಂಡಿರಬೇಕು.

ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.

ಅರ್ಜಿ ಸಲ್ಲಿಸುವ ಸಮಯದಲ್ಲಿ ಲೇಬರ್ ಕಾರ್ಡ್ ಚಾಲ್ತಿಯಲ್ಲಿರಬೇಕು ಹಾಗೆಯೇ ಕಾರ್ಡನ್ನು ನವೀಕರಣ(Renewal) ಮಾಡಿಸಿರಬೇಕು.

ಮದುವೆಯಾಗಲು ಮದುವೆಗೆ ಕನಿಷ್ಠ 18 ವರ್ಷ ಹಾಗೂ ವರನಿಗೆ 21 ವರ್ಷ ಕಡ್ಡಾಯವಾಗಿರಬೇಕು.

ಇದನ್ನೂ ಓದಿ: CCTV Installation Training-ಉಚಿತ ಸಿಸಿಟಿವಿ ತರಬೇತಿಗೆ ಅರ್ಜಿ ಆಹ್ವಾನ!ಇಂದೇ ಅರ್ಜಿ ಸಲ್ಲಿಸಿ!

Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳಾವುವು?

  • ವಧು-ವರನ ಆಧಾರ್ ಕಾರ್ಡ್
  • ಲೇಬರ್ ಕಾರ್ಡ್
  • ಲಗ್ನ ಪತ್ರಿಕೆ
  • ವಿವಾಹ ಪ್ರಮಾಣ ಪತ್ರ
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಬ್ಯಾಂಕ್ ಪಾಸ್ ಪುಸ್ತಕ
  • ರೇಷನ್ ಕಾರ್ಡ್

How To Apply-ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಕಾರ್ಮಿಕ ಇಲಾಖೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯಲು ಆಸಕ್ತಿ ಇರುವ ಕಾರ್ಮಿಕರು ಈ ಕೆಳಗೆ ತಿಳಿಸಿರುವ 2 ಹಂತಗಳಲ್ಲಿ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: 1st Standard Admission Age-1ನೇ ತರಗತಿ ದಾಖಲಾತಿಗೆ ವಯೋಮಿತಿ ಸಡಿಲಿಕೆ!

Online Application For Marriage Assistance Yojana-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ :

ಕಾರ್ಮಿಕ ಇಲಾಖೆ ಅಡಿಯಲ್ಲಿ ಸಹಾಯಧನ ಪಡೆಯಲು ಫಲಾನುಭವಿಗಳು ಕಾರ್ಮಿಕ ಮಂಡಳಿಯ ಅಧಿಕೃತ ವೆಬ್ಸೈಟ್ ಅಥವಾ ಸೇವಾ ಸಿಂಧು ಪೋರ್ಟಲ್ಲಿಗೆ ಭೇಟಿ ನೀಡಿ ಈ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

Step-1: ಅರ್ಹ ಅರ್ಜಿದಾರರು ಮೊದಲಿಗೆ ಈ Marriage Assistance Online Application ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕಾರ್ಮಿಕ ಮಂಡಳಿಯ ಜಾಲತಾಣವನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Government Holiday-ಸರಕಾರಿ ರಜಾ ದಿನದಲ್ಲಿ ಮಹತ್ವದ ಬದಲಾವಣೆ! ತಪ್ಪದೇ ಈ ಸುದ್ದಿ ನೋಡಿ!

Marriage Assistance

Step-2: ಇದಾದ ಬಳಿಕ ಈ ಪೇಜ್ ನಲ್ಲಿ ಬಳಕೆದಾರ ವಿವರವನ್ನು ನೋಂದಣಿಯನ್ನು ಮಾಡಿಕೊಳ್ಳಲು ಅಗತ್ಯ ವಿವರವನ್ನು ದಾಖಲಿಸಿ OTP ಪಡೆದು ಬಳಕೆದಾರ ಐಡಿಯನ್ನು ಸಕ್ರಿಯಗೊಳಿಸಿ ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ ಲಾಗಿನ್ ಅದರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-3: ಲಾಗಿನ್ ಅದ ನಂತರ ಇಲ್ಲಿ ಕೇಳುವ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಆಫ್‌ಲೈನ್ ವಿದಾನ:

ಅರ್ಜಿದಾರರು ನಿಮ್ಮ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಛೇರಿ ಅಥವಾ ಕರ್ನಾಟಕ ಒನ್ / ಗ್ರಾಮ ಒನ್ /ಬೆಂಗಳೂರು ಒನ್ /ಕೇಂದ್ರಗಳಿಗೆ ನೇರವಾಗಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: