Census-2026: ಇಂದಿನಿಂದ ಮೊಬೈಲ್ ಮೂಲಕ ಸ್ವಯಂ-ಜನಗಣತಿ ಆರಂಭ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

April 1, 2026 | Siddesh
Census-2026: ಇಂದಿನಿಂದ ಮೊಬೈಲ್ ಮೂಲಕ ಸ್ವಯಂ-ಜನಗಣತಿ ಆರಂಭ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!
Share Now:

ಬೆಂಗಳೂರು: ದೇಶದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ನಿರ್ಣಾಯಕವಾಗಿರುವ 'ಜನಗಣತಿ 2027'ರ(Janaganati) ಪ್ರಕ್ರಿಯೆಗೆ ಈಗ ಅಧಿಕೃತವಾಗಿ ಚಾಲನೆ ದೊರೆತಿದೆ. ಈ ಬಾರಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿಯೇ ಕುಳಿತು ಮೊಬೈಲ್ ಮೂಲಕ ಮಾಹಿತಿ ನೀಡಲು 'ಸ್ವಯಂ-ಗಣತಿ' (Self-Enumeration) ಎಂಬ ವಿಶೇಷ ಸೌಲಭ್ಯವನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಕರ್ನಾಟಕವೂ ಸೇರಿದಂತೆ ಆಯ್ದ ರಾಜ್ಯಗಳಲ್ಲಿ ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಈ ಡಿಜಿಟಲ್ ನೋಂದಣಿ ಪ್ರಕ್ರಿಯೆ ಲಭ್ಯವಿರಲಿದೆ.

ಜನಗಣತಿಯ ಮೊದಲ ಹಂತವಾಗಿ ಮನೆಪಟ್ಟಿ ಮತ್ತು ಮನೆ ಗಣತಿ(Digital Census India) ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಇದು ಕೇವಲ ಅಂಕಿಅಂಶಗಳ ಸಂಗ್ರಹವಲ್ಲ, ಬದಲಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಯೋಜನೆಗಳು ಸಾರ್ವಜನಿಕರಿಗೆ ತಲುಪಲು ಆಧಾರವಾಗುವ ಪ್ರಮುಖ ಪ್ರಕ್ರಿಯೆಯಾಗಿದೆ. ಡಿಜಿಟಲ್ ಮಾಧ್ಯಮದ ಮೂಲಕ ಮಾಹಿತಿ ನೀಡುವುದರಿಂದ ಸಮಯ ಉಳಿತಾಯವಾಗುವುದಲ್ಲದೆ, ನಿಖರವಾದ ದತ್ತಾಂಶ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: Marriage Assistance Scheme-ಕಾರ್ಮಿಕ ಮಂಡಳಿಯಿಂದ 60,000 ರೂ ಮದುವೆ ಸಹಾಯಧನಕ್ಕೆ ಅರ್ಜಿ ಆಹ್ವಾನ!

ಒಂದು ವೇಳೆ ನೀವು ನಿಗದಿತ ಅವಧಿಯೊಳಗೆ ಆನ್‌ಲೈನ್(Census Online Application Link) ಮೂಲಕ ಮಾಹಿತಿ ನೀಡಲು ಸಾಧ್ಯವಾಗದಿದ್ದರೆ ಆತಂಕಪಡುವ ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ನಿಗದಿತ ಅವಧಿಯಲ್ಲಿ ಗಣತಿದಾರರು (Enumerators) ಖುದ್ದಾಗಿ ನಿಮ್ಮ ಮನೆಗೆ ಭೇಟಿ ನೀಡಿ ಮಾಹಿತಿ ದಾಖಲಿಸಲಿದ್ದಾರೆ. ನಿಮ್ಮ ಎಲ್ಲಾ ವೈಯಕ್ತಿಕ ಮಾಹಿತಿಯು ಸಂಪೂರ್ಣ ಗೌಪ್ಯವಾಗಿ ಮತ್ತು ಸುರಕ್ಷಿತವಾಗಿರಲಿದೆ ಎಂದು ಸರ್ಕಾರ ಭರವಸೆ ನೀಡಿದೆ. ಬನ್ನಿ, ಈ ಮಹತ್ವದ ದೇಶದ ಜವಾಬ್ದಾರಿಯಲ್ಲಿ ನಾವೆಲ್ಲರೂ ಪಾಲ್ಗೊಳ್ಳೋಣ.

Census Online Application-ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಜನಗಣತಿ ಮಾಡುವುದು ಹೇಗೆ?

ದೇಶದ ಎಲ್ಲಾ ನಾಗರಿಕರು ಜನಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರದಿಂದ ಅಧಿಕೃತ ಜಾಲತಾಣವನ್ನು(se.census.gov.in) ಬಿಡುಗಡೆ ಮಾಡಲಾಗಿದ್ದು ನಾಗರಿಕರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಅಗತ್ಯ ವಿವರವನ್ನು ಭರ್ತಿ ಮಾಡಿ ಜನಗಣತಿಯಲ್ಲಿ ಭಾಗವಹಿಸಬಹುದಾಗಿದೆ.

Step-1: ನಾಗರಿಕರು ಮೊದಲಿಗೆ ಈ Census Online Application ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ (OTP) ಅನ್ನು ಹಾಕಿ ಲಾಗಿನ್ ಅಗಬೇಕು.

ಇದನ್ನೂ ಓದಿ: LPG Cylinder News-ಎಲ್‌ಪಿಜಿ ಅಭಾವಕ್ಕೆ ನೂತನ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ!

Step-2: ಇದಾದ ನಂತರ ರಾಜ್ಯ, ಜಿಲ್ಲೆ ಮತ್ತು ಸ್ಥಳೀಯ ವಿವರಗಳನ್ನು (ಗ್ರಾಮ/ವಾರ್ಡ್) ಆಯ್ಕೆ ಮಾಡಿ ಮುಂದಿನ ಪೇಜ್ ಪ್ರವೇಶ ಮಾಡಿ.

Step-3: ನಂತರ ಈ ಪೇಜ್ ನಲ್ಲಿ ಡಿಜಿಟಲ್ ಮ್ಯಾಪ್‌ನಲ್ಲಿ ನಿಮ್ಮ ಮನೆಯ ನಿಖರವಾದ ವಿಳಾಸವನ್ನು ಗುರುತಿಸಿ ವಿವರ ಭರ್ತಿ ಮಾಡಿ.

Step-4: ಬಳಿಕ ನಿಮ್ಮ ಮನೆ ಮತ್ತು ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ಅಗತ್ಯ ವಿವರಗಳನ್ನು ಭರ್ತಿ ಮಾಡಿ Submit ಬಟನ್ ಮೇಲೆ ಕ್ಲಿಕ್ ಮಾಡಿ ವಿವರವನ್ನು ಸಲ್ಲಿಸಿ.

Step-5: ಕೊನೆಯಲ್ಲಿ ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಒಂದು 'ಸ್ವಯಂ-ಗಣತಿ ಗುರುತಿನ ಸಂಖ್ಯೆ' (SE ID) ದೊರೆಯುತ್ತದೆ. ಈ ಸಂಖ್ಯೆಯನ್ನು ಜಾಗರೂಕತೆಯಿಂದ ಇಟ್ಟುಕೊಳ್ಳಿ. ಗಣತಿದಾರರು ನಿಮ್ಮ ಮನೆಗೆ ಭೇಟಿ ನೀಡಿದಾಗ ಈ SE ID ಯನ್ನು ಅವರಿಗೆ ತೋರಿಸಿ ನಿಮ್ಮ ಮಾಹಿತಿಯನ್ನು ದೃಢೀಕರಿಸಿದರೆ ಜನಗಣತಿಯ ವಿವರ ಯಶಸ್ವಿಯಾಗಿ ದಾಖಲಿಸಲಾಗುತ್ತದೆ.

ಇದನ್ನೂ ಓದಿ: SSLC Exam 2026-10ನೇ ತರಗತಿ ಅಂತಿಮ ಪರೀಕ್ಷೆ ತೃತೀಯ ಭಾಷೆ ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆ ಜಾರಿ!

Census Webiste

Census Duration-ಏಪ್ರಿಲ್ 1 ರಿಂದ ಏಪ್ರಿಲ್ 15, 2026 ರವರೆಗೆ ಅವಕಾಶ:

ಕರ್ನಾಟಕದಲ್ಲಿ ಈ ಸೌಲಭ್ಯವು ಏಪ್ರಿಲ್ 1 ರಿಂದ ಏಪ್ರಿಲ್ 15, 2026 ರವರೆಗೆ ಮಾತ್ರ ಲಭ್ಯವಿರುತ್ತದೆ.

Required Documents-ಅವಶ್ಯವಿರುವ ದಾಖಲೆಗಳು/ಮಾಹಿತಿಗಳು:

  • ಆಕ್ಟಿವ್ ಆಗಿರುವ ಮೊಬೈಲ್ ಸಂಖ್ಯೆ (OTP ಗಾಗಿ).
  • ಕುಟುಂಬದ ಸದಸ್ಯರ ಪೂರ್ಣ ವಿವರಗಳು (ಹೆಸರು, ವಯಸ್ಸು ಇತ್ಯಾದಿ).
  • ನಿಮ್ಮ ಮನೆಯ ವಿಳಾಸದ ಮಾಹಿತಿ.
  • ಮನೆಯ ಮೂಲಭೂತ ಸೌಕರ್ಯಗಳಿಗೆ ಸಂಬಂಧಿಸಿದ ಸಾಮಾನ್ಯ ಮಾಹಿತಿ.

ಇದನ್ನೂ ಓದಿ: Janaganati-2027: ಎಪ್ರಿಲ್ 1ರಿಂದ ಡಿಜಿಟಲ್ ಜನಗಣತಿ! ನಿಮ್ಮ ಮೊಬೈಲ್‌ನಲ್ಲೇ ಮಾಹಿತಿ ದಾಖಲಿಸಲು ಸುವರ್ಣಾವಕಾಶ!

Census Benefits-ಸ್ವಯಂ-ಗಣತಿಯ ಪ್ರಯೋಜನಗಳು:

ಸಮಯದ ಉಳಿತಾಯ: ಗಣತಿದಾರರಿಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ.

ನಿಖರ ಮಾಹಿತಿ: ನಿಮ್ಮ ಮಾಹಿತಿಯನ್ನು ನೀವೇ ನೇರವಾಗಿ ದಾಖಲಿಸಬಹುದು.

ವೇಗದ ಸಂಸ್ಕರಣೆ: ಡಿಜಿಟಲ್ ರೂಪದಲ್ಲಿರುವುದರಿಂದ ಡೇಟಾ ವೇಗವಾಗಿ ಅಪ್‌ಡೇಟ್ ಆಗುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: