Diploma In Organic Farming-ಬೆಂಗಳೂರು ಕೃಷಿ ವಿವಿಯಿಂದ 2 ವರ್ಷದ ದೂರ ಶಿಕ್ಷಣ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಆಹ್ವಾನ!

August 15, 2026 | Siddesh
Diploma In Organic Farming-ಬೆಂಗಳೂರು ಕೃಷಿ ವಿವಿಯಿಂದ 2 ವರ್ಷದ ದೂರ ಶಿಕ್ಷಣ ಡಿಪ್ಲೊಮಾ ಕೋರ್ಸ್ ಗೆ ಅರ್ಜಿ ಆಹ್ವಾನ!
Share Now:

ಬೆಂಗಳೂರು: ಆಧುನಿಕ ಜಗತ್ತಿನಲ್ಲಿ ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಗೆ ಅಪಾರ ಬೇಡಿಕೆ ವ್ಯಕ್ತವಾಗುತ್ತಿದ್ದು, ವೈಜ್ಞಾನಿಕ ಕೃಷಿ ಜ್ಞಾನವನ್ನು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ (GKVK) ಮಹತ್ವದ ಹೆಜ್ಜೆಯನ್ನಿಟ್ಟಿದೆ. ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದ ದೂರ ಶಿಕ್ಷಣ ಘಟಕದ ವತಿಯಿಂದ ‘ಎರಡು ವರ್ಷದ ದೂರ ಶಿಕ್ಷಣ ಡಿಪ್ಲೊಮಾ ಕೋರ್ಸ್‌ - ಸಾವಯವ ಮತ್ತು ನೈಸರ್ಗಿಕ ಕೃಷಿ’ ಕೋರ್ಸ್‌ಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

NAAC A+ ಮಾನ್ಯತೆ ಪಡೆದಿರುವ ಈ ಸಂಸ್ಥೆಯು ಕನ್ನಡ ಮಾಧ್ಯಮದಲ್ಲೇ ಈ ಶಿಕ್ಷಣವನ್ನು ನೀಡುತ್ತಿರುವುದು ಗ್ರಾಮೀಣ ಹಾಗೂ ಕೃಷಿ ಆಸಕ್ತರಿಗೆ ಅತ್ಯಂತ ಅನುಕೂಲಕರವಾಗಿದೆ. ಈ ಕೋರ್ಸ್‌ಗೆ ಸೇರಲು ಯಾವುದೇ ಕಠಿಣ ಶೈಕ್ಷಣಿಕ ಅರ್ಹತೆಯ ಅಭಾವವಿಲ್ಲದಿರುವುದು ಇದರ ಪ್ರಮುಖ ವೈಶಿಷ್ಟ್ಯವಾಗಿದೆ. 10ನೇ ತರಗತಿ ತೇರ್ಗಡೆಯಾದ ಅಥವಾ ಅನುತ್ತೇರ್ಗಡೆಯಾದ ಅಭ್ಯರ್ಥಿಗಳಿಬ್ಬರೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. 24 ತಿಂಗಳುಗಳ (2 ವರ್ಷ) ಅವಧಿಯ ಈ ಡಿಪ್ಲೊಮಾ ಕೋರ್ಸ್‌ಗೆ ಒಟ್ಟು ರೂ. 24,000/- ಶುಲ್ಕ ನಿಗದಿಪಡಿಸಲಾಗಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತಿ ಸೆಮಿಸ್ಟರ್‌ಗೆ ರೂ. 6,000/- ದಂತೆ ನಾಲ್ಕು ಕಂತುಗಳಲ್ಲಿ (ಅಥವಾ ವರ್ಷಕ್ಕೆ ರೂ. 12,000/- ದಂತೆ) ಶುಲ್ಕ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Free CCTV Training-ಉಚಿತ ಸಿಸಿಟಿವಿ ಅಳವಡಿಕೆ ತರಬೇತಿ: ನಿರುದ್ಯೋಗಿ ಯುವಕರಿಗೆ ಬಂಪರ್ ಅವಕಾಶ!

ಆಸಕ್ತರು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣದಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬಹುದಾಗಿದೆ. 06 ಜುಲೈ 2026 ರಿಂದಲೇ ಅರ್ಜಿ ವಿತರಣೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮತ್ತು ಭರ್ತಿ ಮಾಡಿದ ಅರ್ಜಿಯನ್ನು ತಲುಪಿಸಲು 07 ಸೆಪ್ಟೆಂಬರ್ 2026 ಕೊನೆಯ ದಿನಾಂಕವಾಗಿದೆ. ಪ್ರಕೃತಿಯೊಂದಿಗೆ ಒಂದಾಗಿ ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆ ಹಾಗೂ ಆಧುನಿಕ ತಂತ್ರಜ್ಞಾನ ಕಲಿಯಬಯಸುವ ಕೃಷಿಕರು ಮತ್ತು ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.

Diploma In Organic Farming Course-ಕೋರ್ಸ್‌ ಮತ್ತು ಬೋಧನಾ ಮಾಧ್ಯಮ:

‘ಸಾವಯವ ಮತ್ತು ನೈಸರ್ಗಿಕ ಕೃಷಿ’ ವಿಷಯದಲ್ಲಿ 2 ವರ್ಷಗಳ (24 ತಿಂಗಳು) ದೂರ ಶಿಕ್ಷಣ ಡಿಪ್ಲೊಮಾ ಕೋರ್ಸ್ ಇದಾಗಿದೆ. ಸಂಪೂರ್ಣ ಬೋಧನೆಯು ಕನ್ನಡ ಮಾಧ್ಯಮದಲ್ಲಿಯೇ ಇರಲಿದೆ.

Course eligibility-ಶೈಕ್ಷಣಿಕ ಅರ್ಹತೆ:

ಈ ಕೋರ್ಸ್‌ಗೆ ಕನಿಷ್ಠ 10ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸಂಪೂರ್ಣ ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Azim Premji Scholarship-ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ಗೆ ಅರ್ಜಿ ಆಹ್ವಾನ! ವಿದ್ಯಾರ್ಥಿನಿಯರಿಗೆ ₹30,000 ವಿದ್ಯಾರ್ಥಿವೇತನ!

Application Download Method-ಅರ್ಜಿ ಪಡೆಯುವ ವಿಧಾನ:

ಕೋರ್ಸ್ ಸೇರಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಕೃಷಿ ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣವಾದ www.uasbangalore.edu.in ನಿಂದ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ವಿವರ ಮತ್ತು ದಾಖಲೆಗಳ ಸಮೇತ ಭರ್ತಿ ಮಾಡಿ ಅರ್ಜಿ ಸಲ್ಲಿಸಬೇಕು.

Diploma In Organic Farming

How To Apply-ಅರ್ಜಿ ಸಲ್ಲಿಸುವುದು ಹೇಗೆ?

ಭರ್ತಿ ಮಾಡಿದ ಅರ್ಜಿಯನ್ನು ದಾಖಲೆಗಳೊಂದಿಗೆ ಖುದ್ದು ಹಾಜರಾಗಿ ಸಲ್ಲಿಸಬಹುದು ಅಥವಾ ವಿಸ್ತರಣಾ ನಿರ್ದೇಶನಾಲಯ,ದೂರು ಶಿಕ್ಷಣ ಘಟಕ, ಜಿಕೆವಿಕೆ, ಬೆಂಗಳೂರು-560065 ಇವರಿಗೆ ಸಲ್ಲಿಸಬೇಕು.

ಇದನ್ನೂ ಓದಿ: Free Sewing Machine Scheme-ಈ ಜಿಲ್ಲೆಯ ಕುಶಲಕರ್ಮಿಗಳಿಗೆ ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!

Important Dates For Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು::

  • ಅರ್ಜಿ ವಿತರಣೆ ಆರಂಭ ದಿನಾಂಕ: 06-07-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-09-2026

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ವಿಶ್ವವಿದ್ಯಾನಿಲಯದ ದೂರ ಶಿಕ್ಷಣ ಘಟಕದ ಕೇಂದ್ರ ಕಚೇರಿ ಮತ್ತು ಸಾವಯವ ಕೃಷಿ ಸಂಶೋಧನಾ ಸಂಸ್ಥೆಯನ್ನು ಸಂಪರ್ಕಿಸಬಹುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: SSP Scholarship-2026: ವಿದ್ಯಾರ್ಥಿವೇತನ ಪಡೆಯಲು ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ!

Course Fee-ಶುಲ್ಕ ಹಾಗೂ ಪಾವತಿ ವಿಧಾನ:

ಅರ್ಜಿ ಶುಲ್ಕ ರೂ. 100/- ಆಗಿದೆ. ಕೋರ್ಸ್‌ನ ಒಟ್ಟು ಶುಲ್ಕ ರೂ. 24,000/- ಆಗಿದ್ದು, ವಿದ್ಯಾರ್ಥಿಗಳು ಪ್ರತಿ ಸೆಮಿಸ್ಟರ್ ಆರಂಭದಲ್ಲಿ ರೂ. 6,000/- ರಂತೆ ನಾಲ್ಕು ಕಂತುಗಳಲ್ಲಿ (ಅಥವಾ ವರ್ಷಕ್ಕೆ ರೂ. 12,000/-) ಪಾವತಿಸಬಹುದು. ಶುಲ್ಕವನ್ನು Comptroller, UAS, GKVK, Bengaluru - 560065 ಇವರ ಹೆಸರಿಗೆ ಡಿ.ಡಿ (Demand Draft) ಮೂಲಕ ಸಲ್ಲಿಸಬೇಕು.

GKVK Website-ಹೆಚ್ಚಿನ ಮಾಹಿತಿಗಾಗಿ ಕೃಷಿ ವಿವಿಯ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: