Free Media Kit-ಹಿಂದುಳಿದ ವರ್ಗಗಳ ಕಾರ್ಯನಿರತ ಪತ್ರಕರ್ತರಿಗೆ ಉಚಿತ ಮೀಡಿಯಾ ಕಿಟ್: ಅರ್ಜಿ ಅಹ್ವಾನ!

August 23, 2026 | Siddesh
Free Media Kit-ಹಿಂದುಳಿದ ವರ್ಗಗಳ ಕಾರ್ಯನಿರತ ಪತ್ರಕರ್ತರಿಗೆ ಉಚಿತ ಮೀಡಿಯಾ ಕಿಟ್: ಅರ್ಜಿ ಅಹ್ವಾನ!
Share Now:

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಸೇರಿದ ಕಾರ್ಯನಿರತ ಪತ್ರಕರ್ತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಹತ್ವದ ಯೋಜನೆಯೊಂದನ್ನು ಘೋಷಿಸಿದೆ. 2026-27ನೇ ಸಾಲಿಗೆ ಮಾಧ್ಯಮ ಮಾನ್ಯತೆ ಕಾರ್ಡ್ (Accreditation Card) ಹೊಂದಿರುವ ಅರ್ಹ ಹಿಂದುಳಿದ ವರ್ಗಗಳ ಪತ್ರಕರ್ತರಿಗೆ "ಮೀಡಿಯಾ ಕಿಟ್" ವಿತರಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಇಲಾಖೆಯ ಆಯುಕ್ತರಾದ ಎಂ.ಎನ್. ಅನುಚೇತ್, ಐ.ಪಿ.ಎಸ್ ಅವರು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಭಾಗವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದ್ದು, ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಹಿಂದುಳಿದ ವರ್ಗಗಳ ಪತ್ರಕರ್ತರಿಗೆ ತಮ್ಮ ವೃತ್ತಿಪರ ಕಾರ್ಯನಿರ್ವಹಣೆಗೆ ಅಗತ್ಯ ಉಪಕರಣಗಳು ಹಾಗೂ ಸೌಲಭ್ಯಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಅರ್ಹ ಪತ್ರಕರ್ತರು ಇಲಾಖೆಯ ನಿಯಮಾವಳಿಗಳ ಪ್ರಕಾರ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸಲ್ಲಿಸಲು ಕೋರಲಾಗಿದೆ.

ಇದನ್ನೂ ಓದಿ: Sheep Farming Training-ಬೆಂಗಳೂರು ಕೃಷಿ ವಿವಿಯಿಂದ ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಗೆ ಅರ್ಜಿ ಆಹ್ವಾನ!

ಅರ್ಜಿಗಳನ್ನು ಬೆಂಗಳೂರಿನ ಕೇಂದ್ರ ಕಚೇರಿಯ ಸುದ್ದಿ ಮತ್ತು ಪತ್ರಿಕಾ ವಿಭಾಗದಲ್ಲಿ ಅಥವಾ ಆಯಾ ಜಿಲ್ಲೆಗಳ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಧಿಕಾರಿಗಳಿಂದ ನೇರವಾಗಿ ಪಡೆದುಕೊಳ್ಳಬಹುದು. ಜೊತೆಗೆ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕವೂ ಅರ್ಜಿ ಫಾರ್ಮ್ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 10, 2026 ರ ಸಂಜೆ 5:00 ಗಂಟೆ ಕೊನೆಯ ದಿನಾಂಕವಾಗಿದೆ.

Free Media Kit Scheme Eligibility-ಅರ್ಹತೆಯ ಪ್ರಮುಖ ಷರತ್ತುಗಳು:

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ 2026-27ನೇ ಸಾಲಿನ ಮಾಧ್ಯಮ ಮಾನ್ಯತಾ ಕಾರ್ಡ್ ಹೊಂದಿರುವ ಹಿಂದುಳಿದ ವರ್ಗಗಳ ಪತ್ರಕರ್ತರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು.

ಈ ಹಿಂದೆ ಇಲಾಖೆಯಿಂದ, ನಿಗಮ, ಮಂಡಳಿ, ಅಕಾಡೆಮಿ ಅಥವಾ ಯಾವುದೇ ಸರ್ಕಾರಿ ಸಂಸ್ಥೆಗಳಿಂದ ಮೀಡಿಯಾ ಕಿಟ್ ಪಡೆದಿದ್ದಲ್ಲಿ ಮತ್ತೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ (ಹವ್ಯಾಸಿ ಮಾನ್ಯತೆ ಕಾರ್ಡ್‌ದಾರರಿಗೂ ಅವಕಾಶವಿಲ್ಲ).

ಮೀಡಿಯಾ ಕಿಟ್ ಹಂಚಿಕೆಗೆ ಪತ್ರಕರ್ತರ ಸೇವಾ ಹಿರಿತನ, ವಯೋಮಿತಿ ಹಾಗೂ ಕನಿಷ್ಠ ಸೇವಾನುಭವವನ್ನು ಪ್ರಮುಖ ಅಳತೆಗೋಲಾಗಿ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: Parivartan Programme-ಪರಿವರ್ತನ್ ECSS ಕಾರ್ಯಕ್ರಮ ವತಿಯಿಂದ ₹18,000 ವಿದ್ಯಾರ್ಥಿವೇತನ!ಇಲ್ಲಿದೆ ಅರ್ಜಿ ಸಲ್ಲಿಸಲು ಲಿಂಕ್!

Required Documents-ಅಗತ್ಯವಿರುವ ಪೂರಕ ದಾಖಲೆಗಳು:

2026-27ನೇ ಸಾಲಿನ ಇಲಾಖೆಯ ಮಾಧ್ಯಮ ಮಾನ್ಯತಾ ಕಾರ್ಡ್‌ನ ದೃಢೀಕೃತ (Attested) ಜೆರಾಕ್ಸ್ ಪ್ರತಿ.

ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರ (Caste Certificate) ದೃಢೀಕೃತ ಪ್ರತಿ.

ವಯಸ್ಸು, ವಿದ್ಯಾರ್ಹತೆ, ಖಾಯಂ ವಿಳಾಸ ಹಾಗೂ ಪತ್ರಿಕಾಲಯದಲ್ಲಿನ ಸೇವಾನುಭವ ದೃಢೀಕರಣ ಪತ್ರ.

ಸಂಸ್ಥೆಯ ಪ್ರಸಾರ ಸಂಖ್ಯೆ, ವೇತನ ವಿವರ ಹಾಗೂ ಮಾಧ್ಯಮ ಪಟ್ಟಿಯ ವಿವರಗಳ ದಾಖಲೆ.

ಈ ಹಿಂದೆ ಯಾವುದೇ ಸರ್ಕಾರಿ ಸಂಸ್ಥೆಯಿಂದ ಮೀಡಿಯಾ ಕಿಟ್ ಪಡೆದಿಲ್ಲ ಎಂದು ಪ್ರಮಾಣೀಕರಿಸುವ ₹100 ಅಥವಾ ₹200 ಮೌಲ್ಯದ ಬಾಂಡ್ ಅಫಿಡವಿಟ್ (ಮುಚ್ಚಳಿಕೆ ಪತ್ರ).

ಇದನ್ನೂ ಓದಿ: Reliance Foundation Scholarship-ಪದವಿ ವಿದ್ಯಾರ್ಥಿಗಳಿಗೆ ₹2 ಲಕ್ಷದವರೆಗೆ ವಿದ್ಯಾರ್ಥಿವೇತನ ಪಡೆಯಲು ಅವಕಾಶ!

Application Download Link-ಆನ್ಲೈನ್ ಮೂಲಕ ಅರ್ಜಿ ನಮೂನೆ ಡೌನ್ಲೋಡ್ ಮಾಡುವ ವಿಧಾನ:

ಇಲಾಖೆಯ ವೆಬ್‌ಸೈಟ್ dipr.karnataka.gov.in ನಿಂದ ಅರ್ಜಿ ಡೌನ್‌ಲೋಡ್ ಮಾಡಬಹುದು ಅಥವಾ ಜಿಲ್ಲಾ ವಾರ್ತಾ ಕಚೇರಿಯಲ್ಲಿ ಪಡೆಯಬಹುದು.

Office Address-ಅರ್ಜಿ ಸಲ್ಲಿಕೆ ವಿಳಾಸ:

ಬೆಂಗಳೂರು ನಗರದ ಮಾಧ್ಯಮ ಪ್ರತಿನಿಧಿಗಳು ಕೇಂದ್ರ ಕಚೇರಿಗೆ ಹಾಗೂ ಜಿಲ್ಲಾ ಮಟ್ಟದ ಪತ್ರಕರ್ತರು ತಮ್ಮ ಜಿಲ್ಲಾ ವಾರ್ತಾಧಿಕಾರಿಗಳಿಗೆ ಸಲ್ಲಿಸಬೇಕು.

ಇದನ್ನೂ ಓದಿ: Farmer Award Application-ಮುಂಗಾರು ಬೆಳೆ ಸ್ಪರ್ಧೆಗೆ ರೈತರಿಂದ ಅರ್ಜಿ ಆಹ್ವಾನ!ರೂ 50,000/- ದ ವರೆಗೆ ಬಹುಮಾನ ನಿಗದಿ!

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

10-09-2026, ಸಂಜೆ 5:00 ಗಂಟೆಯೊಳಗೆ ಅರ್ಜಿ ತಲುಪಿಸತಕ್ಕದ್ದು. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: