JK Tyre Scholarship-JK ಟೈರ್ ಶಿಕ್ಷಾ ಸಾರಥಿ ಯೋಜನೆಯಡಿ 25,000 ವಿದ್ಯಾರ್ಥಿವೇತನ! ಇನ್ನೂ 5 ದಿನ ಬಾಕಿ!

September 5, 2026 | Siddesh
JK Tyre Scholarship-JK ಟೈರ್ ಶಿಕ್ಷಾ ಸಾರಥಿ ಯೋಜನೆಯಡಿ 25,000 ವಿದ್ಯಾರ್ಥಿವೇತನ! ಇನ್ನೂ 5 ದಿನ ಬಾಕಿ!
Share Now:

2026-2027 ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳು ಅಥವಾ ಡಿಪ್ಲೊಮಾ ಕೋರ್ಸ್‌ಗಳಲ್ಲಿ ದಾಖಲಾಗಿರುವ ಮಹಿಳಾ ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿದ್ದು, ಜೆಕೆ ಟೈರ್ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನದ ಅಡಿಯಲ್ಲಿ 25,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕಾರ್ಯಕ್ರಮವು ಭಾರೀ ವಾಹನ ಚಾಲಕರ ಅರ್ಹ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣದ ಪ್ರವೇಶದ ಮೂಲಕ ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚಗಳನ್ನು ಬೆಂಬಲಿಸಲು ಮತ್ತು ಅನುಸರಿಸುತ್ತಿರುವ ಕೋರ್ಸ್ ಅನ್ನು ಅವಲಂಬಿಸಿ ಅವರ ಶೈಕ್ಷಣಿಕ ಮತ್ತು ವೃತ್ತಿ ಆಕಾಂಕ್ಷೆಗಳನ್ನು ಸಾಧಿಸಲು ಸಹಾಯ ಮಾಡಲು ಜಾರಿಗೆ ತರಲಾಗಿದೆ.

ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ಯಾವುದು? ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Tata Capital Scholorship-ಟಾಟಾ ಕ್ಯಾಪಿಟಲ್ ವತಿಯಿಂದ ಡಿಪ್ಲೊಮಾ, ಐಟಿಐ 18,000 ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

Scholorship AMount-ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ಜೆಕೆ ಟೈರ್ ಶಿಕ್ಷಾ ಸಾರಥಿ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯದ ಅರ್ಹ ಮಹಿಳಾ ವಿದ್ಯಾರ್ಥಿಗಳು ಈ ಕೆಳಕಂಡ ವಿದ್ಯಾರ್ಥಿವೇತನವನ್ನು ಪಡೆಯುತ್ತಾರೆ:

ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳು: 25,000
ಸಾಮಾನ್ಯ ಪದವಿಪೂರ್ವ ಕೋರ್ಸ್‌ಗಳು: 15,000
ಡಿಪ್ಲೊಮಾ ಕೋರ್ಸ್‌ಗಳು: 15,000

Last date to APply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಕೊನೆಯ ದಿನಾಂಕ: 10 ಸೆಪ್ಟೆಂಬರ್ 2026

ಇದನ್ನೂ ಓದಿ: Women SHG Subsidy-ಮಹಿಳಾ ಸ್ವ-ಸಹಾಯ ಯೋಜನೆಯಡಿ 2.00 ಲಕ್ಷ ಸಹಾಯಧನ!

What are the Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ವಿದ್ಯಾರ್ಥಿನಿಯ ಆಧಾರ್ ಕಾರ್ಡ
  • ಪ್ರಸ್ತುತ ಪ್ರವೇಶ ಪತ್ರ
  • ಹಿಂದಿನ ವರ್ಷದ ಅಂಕಪಟ್ಟಿ
  • 10 ಹಾಗೂ 12 ತರಗತಿ ಅಂಕಪಟ್ಟಿ
  • ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಪುಸ್ತಕ
  • ಪೋಷಕರ ವಾಣಿಜ್ಯ ಚಾಲನಾ ಪತ್ರ
  • ಮೊಬೈಲ್ ನಂಬರ್

ಇದನ್ನೂ ಓದಿ: Subsidy Schemes 2026: ಕರ್ನಾಟಕ ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!

Who Can Apply-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಮಹಿಳಾ ವಿದ್ಯಾರ್ಥಿನಿಯು ರಾಜಸ್ಥಾನ, ಮಧ್ಯಪ್ರದೇಶ, ಉತ್ತರಾಖಂಡ, ಕರ್ನಾಟಕ ಅಥವಾ ತಮಿಳುನಾಡು ನಿವಾಸಿಗಳಾಗಿರಬೇಕು.

ಭಾರೀ ಮಾಹನ ಚಾಲಕರ ಹೆಣ್ಣು ಮಕ್ಕಳಾಗಿರಬೇಕು.

ವೃತ್ತಿಪರ ಪದವಿಪೂರ್ವ ಕೋರ್ಸ್‌ಗಳು ಅಥವಾ ಡಿಪ್ಲೊಮಾ ಕೋರ್ಸ್‌ಗಳಲ್ಲಿ ದಾಖಲಾಗಿರುವ ಮಹಿಳಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿನಿಯು ಹಿಂದಿನ ವರ್ಷದಲ್ಲಿ ಕನಿಷ್ಟ 55% ಅಂಕಗಳನ್ನು ಗಳಿಸಿರಬೇಕು.

ಪೋಷಕರ ವಾರ್ಷಿಕ ಆದಾಯದ ಮಿತಿ 5 ಲಕ್ಷ ಮೀರಿರಬಾರದು.

ಜೆಕೆ ಟೈರ್ & ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲು ಅರ್ಜಿ ಆಹ್ವಾನ!

women scholorship

ಇದನ್ನೂ ಓದಿ: MBA Scholorship-ಎಂಬಿಎ, ಪಿಜಿಡಿಎಂ,ಪಿಜಿಪಿ ವಿದ್ಯಾರ್ಥಿಗಳಿಗೆ 8 ಲಕ್ಷದವರೆಗೆ ವಿದ್ಯಾರ್ಥಿವೇತನ!

How To Apply-ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

Step-1: ಅರ್ಹ ವಿದ್ಯಾರ್ಥಿನಿಯರು ಮೊದಲು ಇಲ್ಲಿ ನೀಡಿರುವ ಈ ಲಿಂಕ್ "JK Tyre Shiksha Sarthi Scholarship " ಮೇಲೆ ಕ್ಲಿಕ್ ಮಾಡಿ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಬೇಕು. ವಿದ್ಯಾರ್ಥಿಗಳು ಈ ವೆಬ್ಸೈಟ್ ಅನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚನೆ ಮಾಡಿಕೊಳ್ಳಬೇಕು.

Step-3: ತದನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರಗಳನ್ನು ನಮೂದಿಸಿ Log In ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-4: ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ್ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Fish Farming subsidy-ಮೀನುಗಾರಿಕೆ ಇಲಾಖೆಯಡಿ ಮೀನುಗಾರಿಕೆ ಸಲಕರಣೆ ಕಿಟ್ ಪಡೆಯಲು ಅರ್ಜಿ!

More Explanation-ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Read Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: