SBI Platinum Scholarship-ಪದವಿಪೂರ್ವ ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ವತಿಯಿಂದ 75,000 ವಿದ್ಯಾರ್ಥಿವೇತನ!

September 11, 2026 | Siddesh
SBI Platinum Scholarship-ಪದವಿಪೂರ್ವ ವಿದ್ಯಾರ್ಥಿಗಳಿಗೆ SBI ಪ್ಲಾಟಿನಂ ಜುಬಿಲಿ ವತಿಯಿಂದ 75,000 ವಿದ್ಯಾರ್ಥಿವೇತನ!
Share Now:

ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನ 2026-2027 ನೇ ಸಾಲಿನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಪದವಿಪೂರ್ವ ವಿದ್ಯಾರ್ಥಿಗಳಿಗೆ 75,000 ವಿದ್ಯಾರ್ಥಿವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವುದು ಮತ್ತು ಆರ್ಥಿಕ ನಿರ್ಬಂಧಗಳಿಲ್ಲದೆ ಅವರ ಶಿಕ್ಷಣವನ್ನು ಮುಂದುವರಿಸಲು ಸಹಾಯವನ್ನು ಮಾಡಲು ಈ ವಿದ್ಯಾರ್ಥಿವೇತನವನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Mahindra EmpowerHer Scholarship-ಮಹೀಂದ್ರಾ ಎಂಪವರ್‌ಹರ್ ಸ್ಕಾಲರ್‌ಶಿಪ್ ಯೋಜನೆಯಡಿ ವಿದ್ಯಾರ್ಥಿವೇತನ!

ವಿದ್ಯಾರ್ಥಿವೇತನವನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ? ಅರ್ಜಿ ಸಲ್ಲಿಸಲು ದಾಖಲಾತಿಗಳಾವುವು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ಹಂತಗಳನ್ನು ಅನುಸರಿಸಬೇಕು? ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಈ ಕಾರ್ಯಕ್ರಮದ ಅಡಿಯಲ್ಲಿ ಎಷ್ಟು ವಿದ್ಯಾರ್ಥಿವೇತನವನ್ನು ಪಡೆಯಬಹುದು?

ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನದ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ವಿದ್ಯಾರ್ಥಿಗಳು 75,000 ವಿದ್ಯಾರ್ಥಿವೇತನವನ್ನು ಪಡೆಯಬಹುದು.

Last date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಸೆಪ್ಟೆಂಬರ್ 2026

ಇದನ್ನೂ ಓದಿ: JK Tyre Scholarship-JK ಟೈರ್ ಶಿಕ್ಷಾ ಸಾರಥಿ ಯೋಜನೆಯಡಿ 25,000 ವಿದ್ಯಾರ್ಥಿವೇತನ! ಇನ್ನೂ 5 ದಿನ ಬಾಕಿ!

Who Can Apply-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಅರ್ಜಿದಾರ ವಿದ್ಯಾರ್ಥಿಯು ಭಾರತದ ಖಾಯಂ ನಿವಾಸಿಯಾಗಿರಬೇಕು.

ವಿದ್ಯಾರ್ಥಿಯು NIRF 2025-26 ಶ್ರೇಯಾಂಕದ ಒಟ್ಟಾರೆ ವಿಭಾಗದಲ್ಲಿ ಅಗ್ರ 300 ಸಂಸ್ಥೆಗಳಲ್ಲಿ ಸ್ಥಾನ ಪಡೆಯಿರಿ.

ವಿದ್ಯಾರ್ಥಿಯು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 75% ಅಂಕಗಳನ್ನು ಪಡೆಸಿರಬೇಕು.

ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ವರ್ಗಗಳಿಗೆ ಸೇರಿದ ಅರ್ಜಿದಾರರಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯಲ್ಲಿ ಶೇ. 10 ರಷ್ಟು ಸಡಿಲಿಕೆ ನೀಡಲಾಗುತ್ತದೆ.

ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 6,00,000 ಮೀರಬಾರದು.

ಡಿಪ್ಲೊಮಾ ಕಾರ್ಯಕ್ರಮಗಳಿಗೆ ದಾಖಲಾದ ವಿದ್ಯಾರ್ಥಿಗಳು ಈ ವರ್ಗದ ಅಡಿಯಲ್ಲಿ ಅರ್ಹರಲ್ಲ.

ಇದನ್ನೂ ಓದಿ: Tata Capital Scholorship-ಟಾಟಾ ಕ್ಯಾಪಿಟಲ್ ವತಿಯಿಂದ ಡಿಪ್ಲೊಮಾ, ಐಟಿಐ 18,000 ವಿದ್ಯಾರ್ಥಿವೇತನ! ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ಆಧಾರ್ ಕಾರ್ಡ
  • 10ನೇ ತರಗತಿಯ ಅಂಕಪಟ್ಟಿ
  • 12ನೇ ತರಗತಿಯ ಅಂಕಪಟ್ಟಿ
  • ಹಿಂದಿನ ಸೆಮಿಸ್ಟರ್ ಅಂಕಪಟ್ಟಿ
  • ಪ್ರಸ್ತುತ ಪದವಿಪೂರ್ವ ಪ್ರವೇಶ ಪತ್ರ
  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಶೈಕ್ಷಣಿಕ ಶುಲ್ಕ ರಶೀದಿ
  • ಬ್ಯಾಂಕ್ ಶಾಖೆಯ ವಿವರ
  • ಮೊಬೈಲ್ ನಂಬರ್

ಇದನ್ನೂ ಓದಿ: Women SHG Subsidy-ಮಹಿಳಾ ಸ್ವ-ಸಹಾಯ ಯೋಜನೆಯಡಿ 2.00 ಲಕ್ಷ ಸಹಾಯಧನ!

SBI Platinum Scholarship

ಇದನ್ನೂ ಓದಿ: Subsidy Schemes 2026: ಕರ್ನಾಟಕ ಆರ್ಯ ವೈಶ್ಯ ನಿಗಮದಿಂದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ!

Online Application Process-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?

ಎಸ್‌ಬಿಐ ಪ್ಲಾಟಿನಂ ಜುಬಿಲಿ ಆಶಾ ವಿದ್ಯಾರ್ಥಿವೇತನದ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ವಿದ್ಯಾರ್ಥಿವೇತನವನ್ನು ಪಡೆಯಲು ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಬಹುದು.

Step-1: ಆಸಕ್ತ ಅರ್ಹ ವಿದ್ಯಾರ್ಥಿಗಳು ಮೊದಲು ಇಲ್ಲಿ ನೀಡಿರುವ ಈ ಲಿಂಕ್ "SBI Platinum Jubilee Asha Scholarship" ಮೇಲೆ ಕ್ಲಿಕ್ ಮಾಡಿ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಬೇಕು. ವಿದ್ಯಾರ್ಥಿಗಳು ಈ ವೆಬ್ಸೈಟ್ ಅನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ “Create an Account” ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚನೆ ಮಾಡಿಕೊಳ್ಳಬೇಕು.

Step-3: ತದನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯ ವಿವರಗಳನ್ನು ನಮೂದಿಸಿ Log In ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.

Step-4: ನಂತರ ಅಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ “Submit” ಬಟನ್ ಕ್ಲಿಕ್ ಮಾಡಿ್ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Ganga Kalyana Scheme-ಗಂಗಾ ಕಲ್ಯಾಣ ಯೋಜನೆಯಡಿ ಬೋರ್ವೆಲ್ ಕೊರೆಯಲು ಅರ್ಜಿ ಆಹ್ವಾನ!

More Information-ವಿದ್ಯಾರ್ಥಿವೇತನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: