Koli Mari Vitarane-ಪಶುಪಾಲನಾ ಇಲಾಖೆಯಿಂದ ಉಚಿತ ಕೋಳಿ ಮರಿ ಪಡೆಯಲು ಅರ್ಜಿ ಆಹ್ವಾನ!

November 15, 2026 | Siddesh
Koli Mari Vitarane-ಪಶುಪಾಲನಾ ಇಲಾಖೆಯಿಂದ ಉಚಿತ ಕೋಳಿ ಮರಿ ಪಡೆಯಲು ಅರ್ಜಿ ಆಹ್ವಾನ!
Share Now:

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅನುದಾನ ಲಭ್ಯತೆಯ ಆಧಾರದ ಮೇಲೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ(Karnataka Veterinary department) ರೈತ ಮಹಿಳೆಯರಿಗೆ ಕೋಳಿ ಸಾಕಾಣಿಕೆಯನ್ನು ಮಾಡಿ ಉಪ ಆದಾಯವನ್ನು ಗಳಿಸಲು ಉಚಿತವಾಗಿ 20 ಕೋಳಿ ಮರಿಗಳನ್ನು ವಿತರಣೆ ಮಾಡಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಕೋಳಿ ಸಾಕಾಣಿಕೆಯಲ್ಲಿ ಆಸಕ್ತಿಯನ್ನು ಹೊಂದಿರುವ ರೈತ ಮಹಿಳೆಯರು ತಮ್ಮ ಮನೆ ಹತ್ತಿರ ಸಣ್ಣ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆಯನ್ನು ಆರಂಭಿಸಲು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಕೋಳಿ ಸಾಕಾಣಿಕೆಯನ್ನು ಪ್ರೋತ್ಸಾಹಿಸಲು ಮತ್ತು ಗ್ರಾಮೀಣ ಮಹಿಳೆಯರಿಗೆ ಉಪ ಆದಾಯದ ಮೂಲವನ್ನು ಸೃಷ್ಟಿಸಿಕೊಳ್ಳಲು ನೆರವಾಗಲು ನಮ್ಮ ರಾಜ್ಯದಲ್ಲಿ ಪ್ರತಿ ವರ್ಷ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಉಚಿತ ಕೋಳಿ ಮರಿಗಳನ್ನು ನೀಡಲಾಗುತ್ತದೆ.

ಇದನ್ನೂ ಓದಿ: Sujnananidhi Scholarship-ಸುಜ್ಞಾನನಿಧಿ ಶಿಷ್ಯವೇತನ ಯೋಜನೆಯಡಿ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿವೇತನ!

ಪ್ರಸ್ತುತ ರಾಜ್ಯದಲ್ಲಿ ತೀರ್ವ ಮಳೆ ಕೊರತೆಯನ್ನು ಬಹುತೇಕ ಎಲ್ಲಾ ಜಿಲ್ಲೆಯಲ್ಲಿ ಇದ್ದು ಕಠಿಣ ಬರಗಾಲದ ಸನ್ನಿವೇಶವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಈ ನಿಟ್ಟಿನಲ್ಲಿ ಸಣ್ಣ ಮಟ್ಟದಲ್ಲಿ ಕೋಳಿ ಸಾಕಾಣಿಕೆಯನ್ನು ಮಾಡಲು ಪ್ರತಿ ವರ್ಷದಂತೆ ಈ ವರ್ಷವು ಸಹ ಉಚಿತ ಕೋಳಿ ಮರಿ ವಿತರಣೆ ಯೋಜನೆಯಡಿ ನಾಲ್ಕು ವಾರದ ಕೋಳಿ ಮರಿಗಳನ್ನು ನೀಡಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಮುಂದಾಗಿದ್ದು ಆಸಕ್ತರು ಈ ಲೇಖನದಲ್ಲಿ ತಿಳಿಸಿರುವ ಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.

Uchita Koli Mari Vitarane-ನಾಲ್ಕು ವಾರದ ಕೋಳಿ ಮರಿ ವಿತರಣೆ:

ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳ ನಿಯಮಿತ ಮತ್ತು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಈ ಯೋಜನೆಯನ್ನು ಅನುಷ್ಥಾಣ ಮಾಡಲಾಗುತ್ತಿದೆ, ಮಹಿಳೆಯರಿಗೆ ಕೋಳಿ ಸಾಕಾಣಿಕೆಯ ಮೂಲಕ ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಲು ನಾಲ್ಕು ವಾರದ ವಯಸ್ಸಿನ ಕೋಳಿ ಮರಿಗಳನ್ನು ಇಲಾಖೆಯ ಮೂಲಕ ಪಡೆಯಲು ಪ್ರಸ್ತುತ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ: Parihara DBT Payment-ರೈತರ ಖಾತೆಗೆ ನೇರವಾಗಿ ₹5,000 ಬರ ಪರಿಹಾರ! ಮೊದಲ ಕಂತಿನ ಹಣ ಬಿಡುಗಡೆ! 

Who Can Apply-ಯೋಜನೆಯ ಲಾಭ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ಉಚಿತ ಕೋಳಿ ಮರಿ ವಿತರಣೆ ಯೋಜನೆಯಡಿ ನಾಟಿ ಕೋಳಿ ಮರಿಗಳನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹು ಎನ್ನುವ ವಿವರ ಹೀಗಿದೆ:

ನಾಟಿ ಕೋಳಿ ಮರಿಗಳನ್ನು ಪಡೆಯಲು ಎಲ್ಲಾ ವರ್ಗದ ರೈತ ಮಹಿಳೆಯರು ಅರ್ಜಿ ಸಲ್ಲಿಸಬಹುದು.

ಕೃಷಿ ಚಟುವಟಿಯಲ್ಲಿ ತೊಡಗಿಕೊಂಡಿರುವವರು ರೈತ ಮಹಿಳೆಯರಿಗೆ ಮೊದಲ ಆದ್ಯತೆ ಇರುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಹಿಂದಿನ ವರ್ಷದಲ್ಲಿ ಇಲಾಖೆಯಿಂದ ಕೋಳಿ ಮರಿ ಪಡೆದಿರುವವರು ಮತ್ತೊಮ್ಮೆ ಈ ವರ್ಷ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ಇದನ್ನೂ ಓದಿ: Swavalambi Sarathi Scheme-ಸರಕು ಸಾಗಣೆ ವಾಹನ ಖರೀದಿಗೆ 4 ಲಕ್ಷ ಸಹಾಯಧನ! ಇಂದೇ ಅರ್ಜಿ ಸಲ್ಲಿಸಿ!

Poultry Subsidy Application-ಅರ್ಜಿ ಸಲ್ಲಿಸುವ ವಿಧಾನ:

ಉಚಿತ ಕೋಳಿ ಮರಿಗಳನ್ನು ಪಡೆಯಲು ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ತಾಲ್ಲೂಕಿನ ಪಶು ಆಸ್ಪತ್ರೆಯನ್ನು ನೇರವಾಗಿ ಕಚೇರಿ ಸಮಯದಲ್ಲಿ(10-00 ರಿಂದ 5-30) ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

Required Documents For Application-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ನಾಟಿ ಕೋಳಿ ಮರಿಗಳನ್ನು ಪಡೆಯಲು ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು:

  • ಆಧಾರ್ ಕಾರ್ಡ/Adhar Card
  • ಪೋಟೋ/Applicant Photo
  • ಬ್ಯಾಂಕ್ ಪಾಸ್ ಬುಕ್/Bank Pass Book
  • ಜಮೀನಿನ ಪಹಣಿ/RTC
  • ಮೊಬೈಲ್ ನಂಬರ್/Mobile Number

ಇದನ್ನೂ ಓದಿ: Land Purchase Scheme-ಸ್ವಂತ ಕೃಷಿ ಜಮೀನು ಖರೀದಿಸಲು ಸರ್ಕಾರದಿಂದ ₹12.50 ಲಕ್ಷ ಸಹಾಯಧನ!ಇಂದೇ ಅರ್ಜಿ ಸಲ್ಲಿಸಿ!

ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ ತಿಳಿಯಲು ನಿಮ್ಮ ಹತ್ತಿರ ಪಶು ಆಸ್ಪತ್ರೆ ಅಥವಾ ತಾಲ್ಲೂಕು ಮಟ್ಟದ ಪಶು ಆಸ್ಪತ್ರೆಯನ್ನು ನೇರವಾಗಿ ಭೇಟಿ ಮಾಡಿ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.

ಇಲಾಖೆಯ ಸಹಾಯವಾಣಿ ಸಂಖ್ಯೆ- 8277100200

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: