Gruha jyothi: ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ.

June 22, 2023 | Siddesh

ರಾಜ್ಯ ಸರಕಾರದ ನೂತನ 5 ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಈ ಯೋಜನೆಯಡಿ ರಾಜ್ಯದ ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ಒದಗಿಸಲಾಗುತ್ತಿದ್ದು ನೀವು ಈ ಯೋಜನೆಯಡಿ ಉಚಿತ ವಿದ್ಯುತ್ ಪಡೆಯಲು ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇಲ್ಲಿಯವರೆಗೆ 8 ಲಕ್ಷಕ್ಕೂ ಹೆಚ್ಚಿನ ಜನ ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು,  ಅದರೆ ಈ ಯೋಜನೆಯಡಿ ಹೆಚ್ಚು ಜನ ಅರ್ಜಿ ಸಲ್ಲಿಸಬೇಕಾಗಿರುವುದರಿಂದ ಪ್ರತಿ ದಿನ ಸರ್ವರ್ ಡೌನ್ ಆಗುತ್ತಿದೆ ಇದರಿಂದ ಗ್ರಾಹಕರು ಸೇವಾ ಕೇಂದ್ರಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾದ ಸಮಸ್ಯೆ ಎದುರಿಸುತ್ತಿದ್ದಾರೆ ಈ ಎಲ್ಲಾ ಅಡಚಣೆಗಳಿಂದ ತಪ್ಪಿಸಿಕೊಂಡು ಅರ್ಜಿ ಸಲ್ಲಿಸುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿ ವಿವರ:

1. ಆಧಾರ್ ನಂಬರ್.
2. ವಿದ್ಯುತ್ ಬಿಲ್ ಗ್ರಾಹಕರ ಐಡಿ.
3. ಮೊಬೈಲ್ ನಂಬರ್ (ಮೊಬೈಲ್ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಏಕೆಂದರೆ ಒ.ಟಿ.ಪಿ ಬರುತ್ತದೆ)

ಸರ್ವರ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಈ ಸಮಯದಲ್ಲಿ ಅರ್ಜಿ ಸಲ್ಲಿಸಿ:

ಗ್ರಾಹಕರು ಸರ್ವರ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಬೆಳ್ಳಗೆ 8-00 ಗಂಟೆಯ ಒಳಗೆ ರಾತ್ರಿ 11-00 ಗಂಟೆಯ ನಂತರ ನಿಮ್ಮ ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಬೇಕು. 

ಇದನ್ನೂ ಓದಿ: ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ ಯಾವೆಲ್ಲ ಸ್ವ-ಉದ್ಯೋಗ ಮಾಡಬವುದು? ಸಹಾಯಧನ ಎಷ್ಟು? ಒದಗಿಸಬೇಕಾಗದ ಅಗತ್ಯ ದಾಖಲಾತಿಗಳು

ಅರ್ಜಿ ಸಲ್ಲಿಸುವ ವಿಧಾನ:

ಹಂತ-1: https://sevasindhugs.karnataka.gov.in/index.html ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಿ ಗೃಹ ಜ್ಯೋತಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ-2: ನಂತರ "ಘೋಷಣೆ/Declaration" ಕ್ಲಿಕ್ ಮಾಡಿ, "Captcha" ಕೋಡ ನಮೂದಿಸಿ  "Agree" ಮೇಲೆ ಕ್ಲಿಕ್ ಮಾಡಬೇಕು.

ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ

ಹಂತ-3: ಇಲ್ಲಿ ಅರ್ಜಿದಾರರ 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ "Get Details" ಮೇಲೆ ಕ್ಲಿಕ್ ಮಾಡಿ. 

ಹಂತ-4: ನಂತರ ನಿಮ್ಮ ಎಸ್ಕಾಂ ಆಯ್ಕೆಯನ್ನು ಆಯ್ಕೆ ಮಾಡಿಕೊಂಡು ಖಾತೆ ಸಂಖ್ಯೆ/ಸಂಪರ್ಕ ಸಂಖ್ಯೆ ನಮೂದಿಸಬೇಕು. 

ಹಂತ-5: ನಿವಾಸಿ ವಿಧ ಕಾಲಂನಲ್ಲಿ ಮಾಲೀಕರು/ಬಾಡಿಗೆದಾರ/ಕುಟುಂಬದ ಸದಸ್ಯ ಆಯ್ಕೆಯಲ್ಲಿ ಒಂದನ್ನು ಅಯ್ಕೆ ಮಾಡಬೇಕು. 

ಹಂತ-4:

ಕೊನೆಯಲ್ಲಿ ಅರ್ಜಿದಾರನ್ನು ಮೊಬೈಲ್ ನಂಬರ್ ನಮೂದಿಸಿ ಆ ಮೊಬೈಲ್ ಸಂಖ್ಯೆಗೆ ಒ.ಟಿ.ಪಿ ಬರುತ್ತದೆ ಅದನ್ನು ನಮೂದಿಸಿ "Validate" ಬಟನ್ ಮೇಲೆ ಒತ್ತಿ.

ಹಂತ-5: Declaration/ ಘೋಷಣೆಯಲ್ಲಿ "I Agree" ಆಯ್ಕೆಯ ಮೇಲೆ ಒತ್ತಿ ಅಲ್ಲೇ ಕೆಳಗೆ ಕಾಣುವ ವೇರಿಪಿಕೇಶನ್ ಸಂಖ್ಯೆಯನ್ನು ನಮೂದಿಸಿ "Submit" ಬಟನ್ ಒತ್ತಿ.

ಹಂತ-6:

ಕೊನೆಯ ಹಂತ ನೀವು ಸಲ್ಲಿಸಿದ ಎಲ್ಲಾ ವಿವರ ಸರಿಯಾಗಿದಿಯೋ/ಇಲ್ಲವೋ ಈ ಎಂದು ಒಮ್ಮೆ ಪರೀಶಿಲಿಸಿಕೊಂಡು ಕೊನೆಯಲ್ಲಿ "Submit" ಮೇಲೆ ಒತ್ತಿ, ತದ ನಂತರ ಅರ್ಜಿ ಸ್ವಿಕೃತಿ ಪುಟ ದೊರೆಯುತ್ತದೆ ಅದನ್ನು ಡೌನ್ಲೋಡ ಮಾಡಿಕೊಳ್ಳಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: