ವೃದ್ದಾಪ್ಯ , ಸಂಧ್ಯಾ ಸುರಕ್ಷಾ ಇತರೆ ಮಾಸಿಕ ಪಿಂಚಣಿದಾರರು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಲು 15 ಜೂನ್ 2023 ಕಡೆಯ ದಿನ.

June 7, 2023 | Siddesh

ನೀವು ಸರ್ಕಾರದಿಂದ  ವೃದ್ದಾಪ್ಯ ಅಂಗವಿಕಲ ವಿಧವಾ - ಸಂಧ್ಯಾ ಸುರಕ್ಷಾ -ಮನಸ್ವಿನಿ – ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿ ಪಡೆಯುತ್ತಿದ್ದೀರಾ ? ಹಾಗಾದರೆ ಈ ಮಾಹಿತಿಯನ್ನು ತಪ್ಪದೇ ತಿಳಿಯಿರಿ ಆಥವಾ ನಿಮಗೆ ಗೊತ್ತಿರುವವರು ಈ ಮಾಸಿಕ ಪಿಂಚಣೆ ಯೋಜನೆಯಡಿ ಅರ್ಥಿಕ ಸಹಾಯಧನ ಪಡೆಯುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ.

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೇ ಇರುವವರಿಗೆ(NPCI Not Mapped, NPCI inactive), ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರ ತಾಳೆ ಆಗದಿದ್ದಲ್ಲಿ, ಆಧಾರ್ ಕಾರ್ಡ್ ನಿಷ್ಕ್ರಿಯವಾಗಿದರಿಂದ(invalid Aadhar, inactive aadhar) ಈ ಎಲ್ಲಾ ತಾಂತ್ರಿಕ ಕಾರಣಗಳಿಂದ ರಾಜ್ಯದಲ್ಲಿ ಅನೇಕ ಜನರಿಗೆ ಪ್ರತಿ ತಿಂಗಳು ನೇರವಾಗಿ ಫಲಾನುಭವಿ ಖಾತೆಗೆ ಜಮಾ ಅಗುತ್ತಿದ್ದ  ವೃದ್ದಾಪ್ಯ ವೇತನ ಅಂಗವಿಕಲ ವಿಧವಾ, ಸಂಧ್ಯಾ ಸುರಕ್ಷಾ ,ಮನಸ್ವಿನಿ , ಮೈತ್ರಿ ಮತ್ತು ಇತರೆ ಮಾಸಿಕ ಪಿಂಚಣಿಯನ್ನು ಸಂಬಂಧಪಟ್ಟ ಇಲಾಖೆಯಿಂದ ಫಲಾನುಭವಿ ಖಾತೆಗೆ ವರ್ಗಾಹಿಸಲು ಸಾಧ್ಯವಾಗಿರುವುದಿಲ್ಲ. 

ಈ ತಾಂತ್ರಿಕ ಸಮಸ್ಯೆಯನ್ನು ಪರಿಹಾರಿಸಲು ಮಾಸಿಕ ಪಿಂಚಣಿ ಜಮಾ ಅಗದಿರುವ  ಸಾರ್ವಜನಿಕರಿಗೆ ತಮ್ಮ ಖಾತೆಯಿರುವ ಬ್ಯಾಂಕ್ ಶಾಖೆಗೆ ಭೇಟಿ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್(NPCI Mapping) ಮಾಡಿಸಬೇಕೆಂದು ಕಂದಾಯ ಇಲಾಖೆಯಿಂದ  ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: ಗೃಹಲಕ್ಷ್ಮಿ :  ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ. 2000/- ಪಡೆಯಲು ಮಾರ್ಗಸೂಚಿ ಬಿಡುಗಡೆ.

ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಒಮ್ಮೆ ನಿಮ್ಮ ಭಾಗದ ಗ್ರಾಮ ಚಾವಡಿ ಭೇಟಿ ಮಾಡಿ ಅಲ್ಲಿ ಒಟ್ಟು ಮೂರು ರೀತಿಯ ಪಟ್ಟಿ ಲಬ್ಯವಿದ್ದು ಬ್ಯಾಂಕ್‌ ಖಾತೆಗೆ ಆಧಾರ ನಂಬರ ಲಿಂಕ್ ಆಗಿಲ್ಲ, ಮತ್ತು N P C I ಗೆ ಆಧಾರ ನಂಬರ ಲಿಂಕ್ ಆಗಿಲ್ಲ,ಆಧಾರ ನಂಬರ ಚಾಲ್ತಿ ಇಲ್ಲ . ಅನ್ನುವ 3 ರೀತಿಯ ಪಟ್ಟಿ ಇರುತ್ತದೆ ಇಲ್ಲಿ ನಿಮಗೆ ನಿಮ್ಮ ಅರ್ಜಿ ಸ್ಥಿತಿ ಕುರಿತು ಸಂಫೂರ್ಣ ಮಾಹಿತಿ ಸಿಗುತ್ತದೆ.

ನೀವು ಕಡ್ಡಾಯವಾಗಿ ದಿನಾಂಕ : 15-06-2023 ರ ಒಳಗೆ ನಿಮ್ಮ ಪಿಂಚಣಿ ಜಮಾ ಆಗುವ ಬ್ಯಾಂಕಿಗೆ / ಪೋಸ್ಟ್ ಆಫೀಸಿಗೆ ಹೋಗಿ ಆಧಾರ್ ಲಿಂಕ್ ಮಾಡಿಸಲೇಬೇಕು,  ತಪ್ಪಿದಲ್ಲಿ ಸರ್ಕಾರದಿಂದ ಬರುವ ಪಿಂಚಣಿ ತಾವು ಪಡೆದುಕೊಳ್ಳಲು ತೊಂದರೆ ಆಗುತ್ತದೆ.

ಈ ವಿಧಾನ ಅನುಸರಿಸಿ ಮಾಸಿಕ  ಪಿಂಚಣಿ ಅರ್ಜಿ ಸ್ಥಿತಿಯನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಬವುದು:

https://mahitikanaja.karnataka.gov.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಮಾಹಿತಿ ಕಣಜ ಜಾಲಾತಾಣ ಭೇಟಿ ಮಾಡಬೇಕು. ನಂತರ ಇಲ್ಲಿ ಗ್ರಾಮೀಣ/ನಗರ ಎರಡು ಆಯ್ಕೆಯಲ್ಲಿ ನಿಮ್ಮ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ, ತದನಂತರದಲ್ಲಿ ನಿಮ್ಮ ಜಿಲ್ಲೆ,ತಾಲ್ಲೂಕು, ಹೋಬಳಿ, ಗ್ರಾಮವನ್ನು ಆಯ್ಕೆ ಮಾಡಿಕೊಂಡು ಸಲ್ಲಿಸಿ ಮೇಲೆ ಒತ್ತಿ.

ಆಗ ನಿಮ್ಮ ಗ್ರಾಮದ ಮಾಸಿಕ ಪಿಂಚಣಿದಾರರ ಅರ್ಜಿದಾರರ ಸ್ಥಿತಿ ಗೋಚರಿಸುತ್ತದೆ ಇಲ್ಲಿ ಪಿಂಚಣಿ ಅನುಮತಿ ದಿನಾಂಕ, ಪಿಂಚಣಿ ಮೊತ್ತ, ಇತ್ಯಾದಿ ವಿವರವನ್ನು ನೋಡಬವುದು,ಅರ್ಜಿ ಸ್ಥಿತಿ ತಿಳಿಯಲು "ಪಿಂಚಣಿ ವಿವರಗಳು" ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: