Scholarship-SSLC ಮತ್ತು PUC ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ!

June 2, 2025 | Siddesh
Scholarship-SSLC ಮತ್ತು PUC ಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ!
Share Now:

2025 ನೇ ಸಾಲಿನ ಮಾರ್ಚ- ಎಪ್ರಿಲ್ ತಿಂಗಳದಲ್ಲಿ ನಡೆದ ಎಸ್.ಎಸ್. ಎಲ್.ಸಿ. ಮತ್ತು ದ್ವಿತೀಯ ಪಿಯು.ಸಿ. ಪರೀಕ್ಷೆಯಲ್ಲಿ(Scholarship Application) ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

2025 ನೇ ಇಸ್ವಿಯ ಮಾರ್ಚ-ಎಪ್ರಿಲ್‌ನಲ್ಲಿ ನಡೆದ ಎಸ್.ಎಸ್.ಎಲ್.ಸಿ(SSLC) ಪರೀಕ್ಷೆಯಲ್ಲಿ ಹಾಗೂ ದ್ವಿತೀಯ ಪಿ.ಯು.ಸಿ.(SSLC and PUC Scholarship)ಪರೀಕ್ಷೆಯಲ್ಲಿ ಶೇಕಡಾ 95% ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಶ್ರೀ ಮಾರಿಕಾಂಬಾ ದೇವಸ್ಥಾನ ಶಿರಸಿ (ಉ.ಕ.) ವತಿಯಿಂದ ಈ ಹಿಂದಿನಿಂದಲೂ ಬಂದ ಪದ್ದತಿಯಂತೆ ಪ್ರತಿಭಾ ಪುರಸ್ಕಾರ ನೀಡಲು ಮಂಡಳಿಯು ನಿರ್ಧರಿಸಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Karnataka New Rules-ಇನ್ಮುಂದೆ 21 ವಯಸ್ಸಿಗಿಂತ ಚಿಕ್ಕವರು ತಂಬಾಕು ಉತ್ಪನ್ನ ಖರೀದಿಸಿದರೆ ₹1000 ದಂಡ!

ಪ್ರತಿಭಾ ಪುರಸ್ಕಾರವನ್ನು ಪಡೆಯಲು ಯಾರೆಲ್ಲ ಅರ್ಜಿ(SSLC Scholarship)ಸಲ್ಲಿಸಬಹುದು? ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೇರಿದಂತೆ ಇನ್ನಿತರೆ ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Scholarship Application (15)

Who Can Apply For Scholarship-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರರು ಉತ್ತರಕನ್ನಡ ಜಿಲ್ಲೆಯವರಾಗಿರಬೇಕು.

ವಿದ್ಯಾರ್ಥಿಯು ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ 95% ಕ್ಕಿಂತ ಹೆಚ್ಚಿನ ಅಂಕವನ್ನು ಪಡೆದು ಉತ್ತೀರ್ಣರಾಗಿರಬೇಕು.

Online Application Link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು ಈ ಕೆಳಗಿನ ವಿಧಾನವನ್ನು ಅನುಸರಿಸಿ ಅಧಿಕೃತ ಶ್ರೀ ಮಾರಿಕಾಂಬಾ ದೇವಸ್ಥಾನದ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Apply Now ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Free Vehicle Training-ಉಚಿತ ಲಘು ವಾಹನ ಚಾಲನಾ ತರಬೇತಿಗೆ ಅರ್ಜಿ ಆಹ್ವಾನ!

Scholarship Application (16)

ಇದನ್ನೂ ಓದಿ: Scholarship Application-SSP ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅವಕಾಶ!

Step-2: ಇದಾದ ನಂತರ ಇಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ವಿದ್ಯಾರ್ಥಿಯ ಎಲ್ಲಾ ಅಗತ್ಯ ವಿವರ ಮತ್ತು ದಾಖಲಾತಿಗಳನ್ನು ಅಪ್ಲೋಡ್ ಮಾಡಿ "Send Now" ಬಟನ್ ಮೇಲೆ ಕ್ಲಿಕ್ ಮಾಡಿದರೆ ಅರ್ಜಿ ಸಲ್ಲಿಕೆಯಾಗುತ್ತದೆ.

Documents-ಒದಗಿಸಬೇಕಾದ ದಾಖಲೆಗಳು:

ಪ್ರತಿಭಾ ಪುರಸ್ಕಾರ ಪಡೆಯಲು ವಿದ್ಯಾರ್ಥಿಗಳು ಅನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಶ್ಯವಾಗಿ ಒದಗಿಸಬೇಕಾದ ದಾಖಲೆಗಳ ವಿವರ ಈ ಕೆಳಗಿನಂತಿದೆ.

1) ವಿದ್ಯಾರ್ಥಿಯ ಪೋಟೋ/Photo
2) ಆಧಾರ್ ಕಾರ್ಡ್/Aadhar
3) ಅಂಕಪಟ್ಟಿ/Marks Card
4) ವ್ಯಾಸಂಗ ಪ್ರಮಾಣ ಪತ್ರ/Study Certificate
5) ಬ್ಯಾಂಕ್ ಪಾಸ್ ಬುಕ್/Bank Pass Book

ಇದನ್ನೂ ಓದಿ: Free Mobile Repair-ಮೊಬೈಲ್ ರಿಪೇರಿ ತರಬೇತಿ ಪಡೆಯಲು ಇಲ್ಲಿದೆ ಸುವರ್ಣಾವಕಾಶ!

Last Date For Application-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ- 01 ಜೂನ್ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 15 ಜೂನ್ 2025

For More Information-ಹೆಚ್ಚಿನ ಮಾಹಿತಿಗಾಗಿ :

ಅಧಿಕೃತ ವೆಬ್ಸೈಟ್- Click Here
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್- Apply Now

WhatsApp Group Join Now
Telegram Group Join Now
Share Now: