RTC Crop Details-ಬೆಳೆ ವಿಮೆ,ಬೆಂಬಲ ಬೆಲೆ ಪ್ರಯೋಜನ ಪಡೆಯಲು ಬೆಳೆ ಮಾಹಿತಿ ಪಟ್ಟಿ ಬಿಡುಗಡೆ! ಆಕ್ಷೇಪಣೆ ಸಲ್ಲಿಸಲು ಅವಕಾಶ!

November 21, 2024 | Siddesh
RTC Crop Details-ಬೆಳೆ ವಿಮೆ,ಬೆಂಬಲ ಬೆಲೆ ಪ್ರಯೋಜನ ಪಡೆಯಲು ಬೆಳೆ ಮಾಹಿತಿ ಪಟ್ಟಿ ಬಿಡುಗಡೆ! ಆಕ್ಷೇಪಣೆ ಸಲ್ಲಿಸಲು ಅವಕಾಶ!
Share Now:

ಬೆಳೆ ಸಮೀಕ್ಷೆ ಮೂಲಕ ಸಂಗ್ರಹಣೆ ಮಾಡಿದ ಈ ವರ್ಷದ ಮುಂಗಾರು ಹಂಗಾಮಿನ ರಾಜ್ಯದ ಎಲ್ಲಾ ಜಮೀನಿನ ಸರ್ವೆ ನಂಬರ್ ವಾರು ಬೆಳೆ ಮಾಹಿತಿಯ(RTC Crop Details) ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ತಪ್ಪಾಗಿ ದಾಖಲಾದ ಬೆಳೆ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಲು ರೈತರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಬೆಳೆ ಸಮೀಕ್ಷೆ ಮಾಹಿತಿ ಸರಿಯಾಗಿದ್ದಲ್ಲಿ ಮಾತ್ರ ರೈತರಿಗೆ ಬೆಳೆ ವಿಮೆ ಪರಿಹಾರ ಪಡೆಯಲು ಸಾದ್ಯವಾಗುತ್ತದೆ ಅಲ್ಲದೇ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ತಾವು ಬೆಳೆದ ಬೆಳೆ ಮಾಹಿತಿ ಈ ಸಮೀಕ್ಷೆಯ ಮೂಲಕ ಸಂಗ್ರಹಣೆ ಮಾಡಿದ ಮಾಹಿತಿ ತಾಳೆಯಾಗುವುದು ಅತೀ ಮುಖ್ಯವಾಗಿದೆ.

ಇದನ್ನೂ ಓದಿ: Bele vime amount- 17.61 ಲಕ್ಷ ರೈತರಿಗೆ 2,021 ಕೋಟಿ ಬೆಳೆ ವಿಮೆ ಕೃಷಿ ಸಚಿವ ಚಲುವರಾಯಸ್ವಾಮಿ!

ಅದ್ದರಿಂದ ಬೆಳೆ ಸಮೀಕ್ಷೆ(Crop survey) ಮಾಹಿತಿ ನಿಮ್ಮ ಜಮೀನಿನಲ್ಲಿ ಬೆಳೆದ ಮಾಹಿತಿ ತಪ್ಪಾಗಿದ್ದರೆ ಕೂಡಲೇ ಬೆಳೆ ದರ್ಶಕ ಮೊಬೈಲ್ ಅಪ್ಲಿಕ್ಲೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಆಕ್ಷೇಪಣೆಯನ್ನು ಸಲ್ಲಿಸಿ ಬೆಳೆ ಮಾಹಿತಿಯನ್ನು ಹೇಗೆ ಸರಿಪಡಿಸಿಕೊಳ್ಳುವುದು ಹೇಗೆ ಎಂದು ಈ ಅಂಕಣದಲ್ಲಿ ವಿವರಿಸಲಾಗಿದೆ.

Crop survey crop details-ಏನಿದು ಬೆಳೆ ಸಮೀಕ್ಷೆ?

ಕೃಷಿ ಇಲಾಖೆಯಿಂದ ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆಯ ಪ್ರಯೋಜನವನ್ನು ಮತ್ತು ಬೆಳೆ ಮಾಹಿತಿಯನ್ನು ಪಹಣಿಯಲ್ಲಿ ನಮೂದಿಸಿ ಇತರೆ ಯೋಜನೆಯ ಸೌಲಭ್ಯವನ್ನು ರೈತರಿಗೆ ಒದಗಿಸಲು ಪ್ರತಿ ವರ್ಷ ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಮೂಲಕ ರೈತರ ಜಮೀನನ್ನು ಖುದ್ದು ಭೇಟಿ ಮಾಡಿ GPS ಆಧಾರಿತ ಪೋಟೋ ತೆಗೆದು ಬೆಳೆ ಮಾಹಿತಿಯನ್ನು ಈ ತಂತ್ರಾಂಶದ ಮೂಲಕ ದಾಖಲಿಸಲಾಗುತ್ತದೆ.

ಇದನ್ನೂ ಓದಿ: BPL Card news-ಬಿಪಿಎಲ್ ಕಾರ್ಡ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಳೆ ಸಮೀಕ್ಷೆ ಬೆಳೆ ಮಾಹಿತಿ ಸರಿಯಾಗಿ ದಾಖಲಾಗಿರುವುದು ಅತೀ ಮುಖ್ಯವಾಗಿದೆ:

ಬೆಳೆ ಸಮೀಕ್ಷೆ ಮೊಬೈಲ್ ಅಪ್ಲಿಕೇಶನ್ ಮೂಲಕ ದಾಖಲಿಸುವ ಮಾಹಿತಿ ಸರಿಯಾಗಿದ್ದರೆ ಮಾತ್ರ ಬೆಳೆ ವಿಮೆ, ಬೆಂಬಲ ಬೆಲೆ ಯೋಜನೆ ಸೇರಿದಂತೆ ಪ್ರಮುಖ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಇಲ್ಲಿ ನಮೂದಿಸಿರುವ ಮಾಹಿತಿ ತಪ್ಪಾಗಿದ್ದರೆ ಸರಕಾರದ ಪ್ರಮುಖ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ.

Dishank mobile app-ಬೆಳೆ ವಿಮೆ,ಬೆಂಬಲ ಬೆಲೆ ಪ್ರಯೋಜನ ಪಡೆಯಲು ಬೆಳೆ ಮಾಹಿತಿ ಪಟ್ಟಿ ಬಿಡುಗಡೆ:

ರೈತರು ಬೆಳೆ ದರ್ಶಕ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಸರ್ವೆ ನಂಬರ್ ನಲ್ಲಿ ಯಾವ ಬೆಳೆ ಹೆಸರನ್ನು ದಾಖಲಿಸಲಾಗಿದೆ ಎಂದು ತಿಳಿದು ಬೆಳೆ ಮಾಹಿತಿ ತಪ್ಪಾಗಿ ದಾಖಲಾಗಿದ್ದರೆ ಬೆಳೆ ಮಾಹಿತಿಯನ್ನು ತಿದ್ದುಪಡಿ ಮಾಡಿಕೊಳ್ಳಲು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: WHO Arecanut news- ರೈತರಲ್ಲಿ ಅತಂಕ ಮೂಡಿಸಿದ WHOದ ಅಡಿಕೆ ಕ್ಯಾನ್ಸರ್‌ಕಾರಕ ವರದಿ!

Step-1: ಮೊದಲಿಗೆ ಈ RTC Bele mahiti check ಲಿಂಕ್ ಮೇಲೆ ಕ್ಲಿಕ್ ಮಾಡಿ ಗೂಗಲ್ ಪ್ಲೇ ಸ್ಟೋರ್ ಪ್ರವೇಶ ಮಾಡಿ ಅಧಿಕೃತ "Bele darshak 2024-25" ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Step-2: ಇಲ್ಲಿ ಎರಡು ಆಯ್ಕೆಗಳು ತೋರಿಸುತ್ತವೆ ಇದರಲ್ಲಿ "ರೈತ" ಎಂದು ಆಯ್ಕೆ ಮಾಡಿಕೊಂಡು ವರ್ಷ : "2024-25" ಋತು: ಮುಂಗಾರು ಎಂದು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ, ಸೆಲೆಕ್ಟ್ ಮಾಡಿ ನಿಮ್ಮ ಜಮೀನಿನ ಸರ್ವೆ ನಂಬರ್ ಅನ್ನು ಹಾಕಿ ವಿವರ ಪಡೆಯಿರಿ ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: e-Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ- ಖಾತಾ ಕಡ್ಡಾಯ!

bele mahiti

Step-3: ತದನಂತರ ನಿಮ್ಮ ಜಮೀನಿನ ಸರ್ವೆ ನಂಬರಿನ ಹಿಸ್ಸಾ ಆಯ್ಕೆ ಮಾಡಿಕೊಂಡು ಮಾಲೀಕರ ವಿವರ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ಸೆಲೆಕ್ಟ್ ಮಾಡಿ ಕೆಳಗೆ ಕಾಣುವ "ಸಮೀಕ್ಷೆಯ ವಿವರಗಳನ್ನು ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಮೀನಿನ ಬೆಳೆ ಮಾಹಿತಿ ದಾಖಲಿಸಿದ ಸಮೀಕ್ಷೆಗಾರರನ ಹೆಸರು, ಮೊಬೈಲ್ ಸಂಖ್ಯೆ, ಸಮೀಕ್ಷೆ ಮಾಡಿದ ದಿನಾಂಕ ತೋರಿಸುತ್ತದೆ ಇದರ ಮೇಲೆ ಕ್ಲಿಕ್ ಮಾಡಿ ಬೆಳೆ ವಿವರ ವೀಕ್ಷಿಸಿ ಮೇಲೆ ಕ್ಲಿಕ್ ಮಾಡಬೇಕು.

Step-4: ಇಲ್ಲಿ ನಿಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ದಾಖಲಿಸಿದ ಬೆಳೆ ಹೆಸರು ವಿಸ್ತೀರ್ಣ ಕೊನೆಯಲ್ಲಿ ಬೆಳೆ ಪೋಟೋ ತೋರಿಸುತ್ತದೆ ಇಲ್ಲಿ ದಾಖಲಿಸಿರುವ ಮಾಹಿತಿ ಮತ್ತು ನೀವು ಬೆಳೆ ವಿಮೆ ಅರ್ಜಿ ಸಲ್ಲಿಸುವಾಗ ಕೊಟ್ಟಿರುವ ಬೆಳೆ ಮಾಹಿತಿಗೆ ತಾಳೆ ಆಗದಿದ್ದರೆ "ಆಕ್ಷೇಪಣೆ ಇದೆ" ಎಂದು ತೋರಿಸುವ ಬಟನ್ ಮೇಲೆ ಕ್ಲಿಕ್ ಮಾಡಿ ಆಕ್ಷೇಪಣೆ ಅರ್ಜಿ ಸಲ್ಲಿಸಿ ಬೆಳೆ ಮಾಹಿತಿಯನ್ನು ಸರಿಪಡಿಸಿಕೊಳ್ಳಬಹುದು.

ಇದನ್ನೂ ಓದಿ: New ration card- ನವ ದಂಪತಿಗಳಿಗೆ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ!

dishank

Bele mahiti- ವಿಧಾನ-2: ಬೆಳೆ ಸಮೀಕ್ಷೆ ವೆಬ್ಸೈಟ್ ಭೇಟಿ ಮಾಡಿ ಬೆಳೆ ಮಾಹಿತಿ ಪಟ್ಟಿ ಪಡೆಯಬಹುದು:

ಇಲ್ಲಿ ಕ್ಲಿಕ್ Crop Details Check ಮಾಡಿ ಅಧಿಕೃತ ಬೆಳೆ ಸಮೀಕ್ಷೆಯ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಮೊದಲಿಗೆ Year ಆಯ್ಕೆಯಲ್ಲಿ "2024-25" ಎಂದು ಆಯ್ಕೆ ಮಾಡಿಕೊಂಡು ನಂತರ "Season" ಆಯ್ಕೆಯಲ್ಲಿ ಮುಂಗಾರು ಆಯ್ಕೆ ಮಾಡಿಕೊಂಡು "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.

ಇದಾದ ನಂತರ "View PR Uploaded crop Info" ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಹಳ್ಳಿ ಮತ್ತು ಸರ್ವೆ ನಂಬರ್ ಹಾಕಿ Get Crop Survey Details ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹೆಸರು ತೋರಿಸುತ್ತದೆ ಇಲ್ಲಿ ಕ್ಲಿಕ್ ಮಾಡಿ Crop Information ಎಂದು ತೋರಿಸಿ ನಿಮ್ಮ ಜಮೀನಿನ ಸರ್ವೆ ನಂಬರ್ ನಲ್ಲಿ ನಮೂದಿಸಿದ ಬೆಳೆ ಹೆಸರು ತೋರಿಸುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: