ರಾಜ್ಯ ಸರಕಾರದಿಂದ ಆರೋಗ್ಯ ಇಲಾಖೆಯಿಂದ(Karnataka Health Department) ಸಾರ್ವಜನಿಕರಿಗೆ ಅರೋಗ್ಯ ಸೇವೆಯನ್ನು ಪಡೆಯಲು ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ಯಾವುದು ಈ ಯೋಜನೆ? ಯಾರೆಲ್ಲರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು? ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ.
ಪ್ರಸ್ತುತ ದಿನಮಾನಗಳಲ್ಲಿ ಪ್ರತಿಯೊಂದು ಕುಟುಂಬದಲ್ಲಿಯು ಮನೆಯಲ್ಲಿ ಯಾರಿಗಾದರೂ ಒಬ್ಬರಿಗೆ ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆ ಈ ಸಮಸ್ಯೆಗಳಿಗೆ ಸೂಕ್ತ ವೈದ್ಯರನ್ನು ಹುಡುಕಿ ಸೂಕ್ತ ಚಿಕಿತ್ಸೆಯನ್ನು ಹೇಗೆ ಪಡೆದುಕೊಳ್ಳುವುದು ಎನ್ನುವ ಕುರಿತು ಅನೇಕ ಜನರಿಗೆ ತಿಳಿದಿರುವುದಿಲ್ಲ ಇದಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ಹಾಗೂ ಸುಲಭವಾಗಿ ಈ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಲು ರಾಜ್ಯ ಸರಕಾರದಿಂದ ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ: RTC Crop Details-ಬೆಳೆ ವಿಮೆ,ಬೆಂಬಲ ಬೆಲೆ ಪ್ರಯೋಜನ ಪಡೆಯಲು ಬೆಳೆ ಮಾಹಿತಿ ಪಟ್ಟಿ ಬಿಡುಗಡೆ! ಆಕ್ಷೇಪಣೆ ಸಲ್ಲಿಸಲು ಅವಕಾಶ!
ಕ್ಲಿಷ್ಟಕರ ಶಸ್ತಚಿಕಿತ್ಸೆಯನ್ನು(Health related free helpline) ಮಾಡಿಸಿಕೊಳ್ಳುವ ಸನ್ನಿವೇಶ ಬಂದಾಗ ಅಂತಹ ಸಮಯದಲ್ಲಿ ಒಂದೇ ವೈದ್ಯರ ಸಲಹೆಯನ್ನು ಪಡೆದು ನೇರವಾಗಿ ಶಸ್ತಚಿಕಿತ್ಸೆ ಮಾಡಿಸಿಕೊಳ್ಳುವ ಬದಲಿಗೆ ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಪಡೆಯುವುದು ಅತೀ ಮುಖ್ಯವಾಗಿದೆ ಇದಕ್ಕಾಗಿ ಆರೋಗ್ಯ ಇಲಾಖೆಯಿಂದ ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಉಚಿತವಾಗಿ ಪಡೆಯಲು ಹೊಸ ಯೋಜನೆಯನ್ನು ಜಾರಿಗೆ ತರಲಾಗಿದೆ.
Health Department- ಆರೋಗ್ಯ ಇಲಾಖೆಯಿಂದ ಮತ್ತೊಂದು ಜನಸ್ನೇಹಿ ಯೋಜನೆ ಜಾರಿ:
ಕ್ಲಿಷ್ಟಕರ ಶಸ್ತಚಿಕಿತ್ಸೆಯನ್ನು ಮಾಡಿಸಿಕೊಳ್ಳುವ ಸನ್ನಿವೇಶವು ನಿಮ್ಮ ಕುಟುಂಬದ ಸದಸ್ಯರಿಗೆ ಬಂದಾಗ ಆ ಸಮಯದಲ್ಲಿ ವೈದ್ಯರ ಬಳಿ ನೀವೂ ತೆರಳಿ ಅರೋಗ್ಯ ತಪಾಸಣೆ ಮಾಡಿಸಿದಾಗ ವೈದ್ಯರು ಶಸ್ತಚಿಕಿತ್ಸೆಯನ್ನು ಮಾಡಿಸಬೇಕು ಎಂದು ಸಲಹೆ ನೀಡಿದರೆ ಇದನ್ನು ಮತ್ತೊಬ್ಬ ವೈದ್ಯರ ಬಳಿ ತೆರಲಿ ಮರು ಪರೀಶಿಲನೆ ಮಾಡಿಸಿಕೊಳ್ಳುಲು ಹಣ, ಸಮಯ ವೆಚ್ಚಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರದಿಂದ ಉಚಿತವಾಗಿ ಎರಡನೇ ವೈದ್ಯಕೀಯ ಅಭಿಪ್ರಾಯ ಪಡೆಯಲು ಸಹಾಯವಾಣಿಯನ್ನು ಆರಂಭಿಸಲಾಗಿದೆ.
ಇದನ್ನೂ ಓದಿ: Bele vime amount- 17.61 ಲಕ್ಷ ರೈತರಿಗೆ 2,021 ಕೋಟಿ ಬೆಳೆ ವಿಮೆ ಕೃಷಿ ಸಚಿವ ಚಲುವರಾಯಸ್ವಾಮಿ!
karnataka health department helpline- ಏನಿದು ಎರಡನೇ ವೈದ್ಯಕೀಯ ಅಭಿಪ್ರಾಯ ಸಹಾಯವಾಣಿ:
ಎರಡನೇ ವೈದ್ಯಕೀಯ ಅಭಿಪ್ರಾಯ ಸಹಾಯವಾಣಿ ಕಾರ್ಯಕ್ರಮ? ಇದು ಹೇಗೆ ಕಾರ್ಯನಿರ್ವಹಿಸುತ್ತದೆ? ಈ ಯೋಜನೆಯ ಪ್ರಯೋಜನ ಪಡೆಯುವುದು ಹೇಗೆ? ಈ ಕೆಳಗೆ ವಿವರಿಸಲಾಗಿದೆ.
ಒಬ್ಬ ವೈದ್ಯರ ಬಳಿ ನಿಮ್ಮ ಆರೋಗ್ಯ ತಪಾಸಣೆಯನ್ನು ಮಾಡಿಸಿದ ಬಳಿಕ ಆ ವೈದ್ಯರು ಶಿಪಾರಸ್ಸು ಮಾಡಿದ ಸಲಹೆಗಳನ್ನು ಮತ್ತೊಬ್ಬ ವೈದ್ಯರ ಬಳಿ ಮರು ಪರೀಶಿಲನೆ ಮಾಡುವುದನ್ನು “ಎರಡನೇ ವೈದ್ಯಕೀಯ ಅಭಿಪ್ರಾಯ” ಎನ್ನುತ್ತಾರೆ.
ಸಾರ್ವಜನಿಕರು ಈ “1800 4258 330” ಸಹಾಯವಾಣಿಗೆ ಕರೆ ಮಾಡಿ ಉಚಿತವಾಗಿ ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಮನೆಯಲ್ಲೇ ಕುಳಿತು ಪಡೆಯಬಹುದಾಗಿದೆ.
ಇದನ್ನೂ ಓದಿ: BPL Card news-ಬಿಪಿಎಲ್ ಕಾರ್ಡ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ
Health Department Helpline Number-ಈ ಯೋಜನೆಯ ಪ್ರಮುಖಾಂಶಗಳ ವಿವರ ಹೀಗಿದೆ:
ಕ್ಲಿಷ್ಟಕರ ಶಸ್ತಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ತಜ್ಞ ವೈದ್ಯರು ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಆರೋಗ್ಯ ಇಲಾಖೆವತಿಯಿಂದ ಒದಗಿಸಲಾಗುತ್ತದೆ.
ಅರೋಗ್ಯ ಇಲಾಖೆಯ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ವತಿಯಿಂದ ದಿನದ 24/7 ಗಂಟೆ ಈ ಸಹಾಯವಾಣಿ ಕಾರ್ಯನಿರ್ವಹಿಸುತ್ತದೆ.
ಸಾರ್ವಜನಿಕರು ಆರೋಗ್ಯ ಇಲಾಖೆಯ ಈ “1800 4258 330” ಸಹಾಯವಾಣಿ ಸಮ್ಖ್ಯೆಗೆ ಕರೆ ಮಾಡಿ ಉಚಿತವಾಗಿ ಎರಡನೇ ವೈದ್ಯಕೀಯ ಅಭಿಪ್ರಾಯವನ್ನು ಮನೆಯಲ್ಲೇ ಕುಳಿತು ತಿಳಿದುಕೊಳ್ಳಬಹುದು.
ಇದನ್ನೂ ಓದಿ: e-Khata: ರಾಜ್ಯದ ಎಲ್ಲಾ ಆಸ್ತಿಗಳಿಗೆ ಇ- ಖಾತಾ ಕಡ್ಡಾಯ!
ತಜ್ಞ ವೈದ್ಯರಿಗೆ ವೈದ್ಯಕೀಯ ದಾಖಲೆಗಳನ್ನು ವಾಟ್ಸಾಪ್ ಮೂಲಕ ರವಾನಿಸಿ ರೋಗ ನಿರ್ಣಯ ಮತ್ತು ಶಸ್ತಚಿಕಿತ್ಸೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಶಸ್ತಚಿಕಿತ್ಸೆ ಒಳಪಡುವ ಅವಶ್ಯಕತೆ ಅಥವಾ ಇತರೆ ಯಾವುದೇ ಗೊಂದಲ,ಸಂದೇಶಗಳನ್ನು ನಿವಾರಿಸಿಕೊಳ್ಳಬಹುದು.
ಇಲಾಖೆಯ ತಜ್ಞ ವೈದ್ಯರು ಮೊಣಕಾಲು ಕೀಲು ಬದಲಿ, ಸೊಂಟದ ಕೀಲು ಬದಲಿ ಶಸ್ತಚಿಕಿತ್ಸೆಗಳು ಹಾಗೂ ಇನ್ನಿತರೇ ಕ್ಲಿಷ್ಟಕರ ಶಸ್ತಚಿಕಿತ್ಸೆಗಳಿಗೆ/ಸಮಸ್ಯೆಗಳಿಗೆ ಎರಡನೇ ಅಭಿಪ್ರಾಯ/ಸಲಹೆಯನ್ನು ಪಡೆಯಬಹುದು.