HomeGovt SchemesBPL Card guidelines- ರಾಜ್ಯ ಸರಕಾರದಿಂದ ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಸೂಚನೆ!

BPL Card guidelines- ರಾಜ್ಯ ಸರಕಾರದಿಂದ ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಸೂಚನೆ!

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ(Karnatak food department) ಇಲಾಖೆಯಿಂದ ಮಾರ್ಗಸೂಚಿ ಪ್ರಕಾರ ಅನರ್ಹವಾಗಿರುವ ಬಿಪಿಎಲ್ ಕಾರ್ಡಗಳನ್ನು(BPL Card) ರದ್ದು ಮಾಡುತ್ತಿರುವುದು ಪರ-ವಿರೋದಕ್ಕೆ ಕಾರಣವಾಗಿರುವುದರಿಂದ ಈ ಕುರಿತು ರಾಜ್ಯ ಸರಕಾರದಿಂದ ಆಹಾರ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಸಾರ್ವಜನಿಕ ವಲಯದಲ್ಲಿ ಬಡವರಿಗೆ ನೀಡುತ್ತಿರುವ ಬಿಪಿಎಲ್ ಕಾರ್ಡ ರದ್ದು ಮಾಡಲಾಗುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದು ಈ ಕುರಿತು ರಾಜ್ಯ ಸರಕಾರದಿಂದ ಅಧಿಕೃತ ಸ್ಪಷ್ಟಿಕರಣದ ಪ್ರಕಟಣೆ ಹೊರಡಿಸಲಾಗಿದೆ.

ಇದನ್ನೂ ಓದಿ: Health Department- ಆರೋಗ್ಯ ಇಲಾಖೆಯಿಂದ ಮತ್ತೊಂದು ಜನಸ್ನೇಹಿ ಯೋಜನೆ ಜಾರಿ!

ಬಿಪಿಎಲ್ ಕಾರ್ಡ ರದ್ದುಗೊಳಿಸುವುದರ ಕುರಿತು ರಾಜ್ಯ ಸರಕಾರವು ಆಹಾರ ಇಲಾಖೆಯ ಅಧಿಕಾರಿಗಳಿಗೆ ನೀಡಿರುವ ಸೂಚನೆಯ ವಿವರವನ್ನು ವಾರ್ತಾ ಇಲಾಖೆಯ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಲಾಗಿದ್ದು ಇದರ ಸಂಪೂರ್ಣ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

BPL Card- ರಾಜ್ಯ ಸರಕಾರದಿಂದ ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಮಾತ್ರ ಸೂಚನೆ ನೀಡಲಾಗಿದೆ:

ಆಹಾರ ಇಲಾಖೆಯಿಂದ ಮಾರ್ಗಸೂಚಿಯನ್ವ ನಿಯಮ ಮೀರಿರುವ ಬಿಪಿಎಲ್ ಕಾರ್ಡಗಳನ್ನು ರದ್ದು ಮಾಡಿ ಎಪಿಎಲ್ ಕಾರ್ಡಗಳಾಗಿ ಬದಲಾವಣೆ ಮಾಡಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸಭೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಉಳಿದ ಯಾವುದೇ ಕುಟುಂಬದವರ ಪಡಿತರ ಚೀಟಿ ರದ್ದಾಗಿದ್ದರೆ ತಕ್ಷಣವೇ ವಾಪಸ್‌ ನೀಡಬೇಕು.

ಬಡ ಕುಟುಂಬಗಳ ಪಡಿತರ ಚೀಟಿಗಳನ್ನು ವಿನಾಕಾರಣ ರದ್ದು ಮಾಡಿದರೆ ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಖಡಕ್ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: RTC Crop Details-ಬೆಳೆ ವಿಮೆ,ಬೆಂಬಲ ಬೆಲೆ ಪ್ರಯೋಜನ ಪಡೆಯಲು ಬೆಳೆ ಮಾಹಿತಿ ಪಟ್ಟಿ ಬಿಡುಗಡೆ! ಆಕ್ಷೇಪಣೆ ಸಲ್ಲಿಸಲು ಅವಕಾಶ!

BPL Card

BPL Card new guideline-ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಮಾತ್ರ ಸೂಚಿಸಲಾಗಿದೆ:

ರಾಜ್ಯ ಮತ್ತು ಕೇಂದ್ರ ಸರಕಾರದ ವಿವಿಧ ಇಲಾಖೆಯಲ್ಲಿರುವ ಸರಕಾರಿ ನೌಕರ ಕುಟುಂಬಕ್ಕೆ ಸೇರಿದವರ ಬಿಪಿಎಲ್ ಕಾರ್ಡ ಅನ್ನು ಮಾತ್ರ ರದ್ದುಗೊಳಿಸಬೇಕು.

ಆದಾಯ ತೆರಿಗೆಯನ್ನು ಪಾವತಿ ಮಾಡುವ ಕುಟುಂಬದ ಬಿಪಿಎಲ್ ಕಾರ್ಡ ಅನ್ನು ರದ್ದು ಮಾಡಬೇಕು ಉಳಿದಂತೆ ವಿನಃ ಕಾರಣ ಅನಗತ್ಯವಾಗಿ ಇತರೆ ಕಾರ್ಡಗಳನ್ನು ರದ್ದು ಮಾಡದಿರಲು ಸೂಚನೆ ನೀಡಲಾಗಿದೆ.

Ration card cancellation guidelines-ಸಂಪೂರ್ಣ ರೇಷನ್ ಕಾರ್ಡ ರದ್ದಾಗುವುದಿಲ್ಲ:

ಮಾರ್ಗಸೂಚಿಯ ಪ್ರಕಾರ ಬಿಪಿಎಲ್ ಕಾರ್ಡ ಪಡೆಯಲು ಅನರ್ಹರಿದ್ದರೆ ಆ ಕಾರ್ಡ ರದ್ದಾಗಿ ಅಂತಹ ಗ್ರಾಹಕರಿಗೆ ಎಪಿಎಲ್ ಕಾರ್ಡ ನೀಡಲಾಗುತ್ತದೆ ವಿನಃ ಸಂಪೂರ್ಣ ರೇಷನ್ ಕಾರ್ಡ ಅನ್ನು ರದ್ದ ಮಾಡಲಾಗುವುದಿಲ್ಲ ಎಂದು ಆಹಾರ ಇಲಾಖೆಯಿಂದ ಮಾಹಿತಿ ತಿಳಿಸಲಾಗಿದೆ.

ಇದನ್ನೂ ಓದಿ: Bele vime amount- 17.61 ಲಕ್ಷ ರೈತರಿಗೆ 2,021 ಕೋಟಿ ಬೆಳೆ ವಿಮೆ ಕೃಷಿ ಸಚಿವ ಚಲುವರಾಯಸ್ವಾಮಿ!

Ahara Ilake-ಆಹಾರ ಇಲಾಖೆಯ ವೆಬ್ಸೈಟ್ ನಲ್ಲಿ ಎಲ್ಲಾ ಮಾಹಿತಿ ಲಭ್ಯ:

ಇಲ್ಲಿ ಕ್ಲಿಕ್ Ahara Ilake webiste ಮಾಡಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಗ್ರಾಹಕರು ತಮ್ಮ ರೇಷನ್ ಕಾರ್ಡ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.

Karnatak food department website-ಯಾವೆಲ್ಲ ಮಾಹಿತಿಯನ್ನು ಪಡೆಯಬಹುದು:

ಅನ್ನಭಾಗ್ಯ ಯೋಜನೆಯ DBT ಹಣ ಪಾವತಿ ಸ್ಥಿತಿ.

ರೇಷನ್ ಕಾರ್ಡನ ನೈಜ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬಹುದು.

ಆನ್ಲೈನ್ ಮೂಲಕ ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಿದರೆ ಅದು ಯಾವ ಹಂತದಲ್ಲಿದೆ ಎಂದು ಸಹ ಈ ಜಾಲತಾಣ ಭೇಟಿ ಮಾಡಿ ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: BPL Card news-ಬಿಪಿಎಲ್ ಕಾರ್ಡ ಅನರ್ಹರಿಗೆ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ರೇಷನ್ ಕಾರ್ಡ ಇ-ಕೆವೈಸಿ ಸ್ಥಿತಿಯನ್ನು ಸಹ ಚೆಕ್ ಮಾಡಿಕೊಳ್ಳಬಹುದು.

ರೇಷನ್ ಕಾರ್ಡ ಆಧಾರ್ ಕಾರ್ಡ ಲಿಂಕ್ ಸ್ಥಿತಿಯನ್ನು ಸಹ ಚೆಕ್ ಮಾಡಿಕೊಳ್ಳಬಹುದು.

ಹೊಸ ರೇಷನ್ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಿ ಅನರ್ಹವಾಗಿರುವ ಹಳ್ಳಿವಾರು ರದ್ದು ಮಾಡಲಾದ ರೇಷನ್ ಕಾರ್ಡ ಪಟ್ಟಿಯನ್ನು ನೋಡಬಹುದು.

ಆಹಾರ ಇಲಾಖೆಯ ವೆಬ್ಸೈಟ್: Click here

Most Popular

Latest Articles

- Advertisment -

Related Articles