Bele vime-71,117 ಸಾವಿರ ರೈತ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ವೆಬ್ಸೈಟ್ ಲಿಂಕ್!

December 1, 2024 | Siddesh
Bele vime-71,117 ಸಾವಿರ ರೈತ ಖಾತೆಗೆ ಬೆಳೆ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ವೆಬ್ಸೈಟ್ ಲಿಂಕ್!
Share Now:

ತೋಟಗಾರಿಕೆ ಬೆಳೆಗಳಿಗೆ ಕಳೆದ ವರ್ಷದಲ್ಲಿ ಬೆಳೆ ವಿಮೆ ಮಾಡಿಸಿದ 71,117 ಸಾವಿರ ಅರ್ಹ ರೈತರಿಗೆ ನೇರ ನಗದು ವರ್ಗಾವಣೆ(DBT) ಮೂಲಕ 156.14 ಲಕ್ಷ ಬೆಳೆ ವಿಮೆ ಪರಿಹಾರದ(Bele vime parihara)ಹಣವನ್ನು ಬಿಡುಗಡೆ ಮಾಡಲಾಗಿದೆ.

ರೈತರಿಗೆ ತಾವು ಬೆಳೆದ ಬೆಳೆಗಳು ಹವಾಮಾಣ ವೈಪರಿತ್ಯ ಸಮಯದಲ್ಲಿ ನಷ್ಟವಾದಾಗ ಇಂತಹ ಸನ್ನಿವೇಶದಲ್ಲಿ ಅರ್ಥಿಕವಾಗಿ ನೆರವು ನೀಡಲು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ(Fasl bhima yojana) ಬೆಳೆ ವಿಮೆ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Uchitha koli mari-ಉಚಿತವಾಗಿ ಕೋಳಿಮರಿ ಪಡೆಯಲು ಪಶುಸಂಗೋಪನೆ ಇಲಾಖೆಯಿಂದ ಅರ್ಜಿ ಆಹ್ವಾನ!

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ 2023-24ನೇ ಸಾಲಿನ ಬೆಳೆ ವಿಮೆ ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಾವೆಲ್ಲ ಬೆಳೆಗಳ ಬೆಳೆ ವಿಮೆ ಬಿಡುಗಡೆಯಾಗಿದೆ?

ಪ್ರಸ್ತುತ ಶಿವಮೊಗ್ಗ ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಈ ಕೆಳಗೆ ತಿಳಿಸಿರುವ ತೋಟಗಾರಿಕೆ ಬೆಳೆ ಬೆಳೆದಿರುವ ಅರ್ಹ ರೈತರಿಗೆ ಬೆಳೆ ವಿಮೆ ಪರಿಹಾರವನ್ನು ಬಿಡುಗಡೆ ಮಾಡಲಾಗಿದೆ.

1) ಅಡಿಕೆ

2) ಮಾವು

3) ಶುಂಠಿ

4) ಮೆಣಸು

ಇದನ್ನೂ ಓದಿ: Gold Price-ಮತ್ತೆ ಕೊಂಚ ಇಳಿದ ಚಿನ್ನದ ದರ!ಇಲ್ಲಿದೆ ಇಂದಿನ ಚಿನ್ನದ ದರ ವಿವರ!

ಯಾರಿಗೆಲ್ಲ ಬೆಳೆ ವಿಮೆ ಹಣ ಸಿಗಲಿದೆ?

ತೋಟಗಾರಿಕೆ ಬೆಳೆಗಳಲ್ಲಿ ಬೆಳೆ ವಿಮೆ ಪರಿಹಾರವನ್ನು ಆ ಗ್ರಾಮ ಪಂಚಾಯತಿಯಲ್ಲಿ ಬೀಳುವ ಒಟ್ಟು ಒಂದು ವರ್ಷದ ಸರಾಸರಿ ಮಳೆ ಪ್ರಮಾಣದ ಆಧಾರ ಮೇಲೆ ವಿಮೆ ಪರಿಹಾರವನ್ನು ನೀಡಬೇಕೋ ಅಥವಾ ಬೇಡವೋ ಎಂದು ವಿಮಾ ಕಂಪನಿ ಮತ್ತು ಸರಕಾರದಿಂದ ನಿರ್ಧಾರ ಕೈಗೊಳ್ಳಲಾಗುತ್ತದೆ.

ಇದರನ್ವ ಅರ್ಜಿ ಸಲ್ಲಿಸಿದ ಶಿವಮೊಗ್ಗ ಜಿಲ್ಲೆಯ 73,271 ರೈತರ ಪೈಕಿ 71,177 ರೈತರ ಖಾತೆಗೆ 156.14 ಲಕ್ಷ ಬೆಳೆ ವಿಮೆ ಪರಿಹಾರ ಹಣ ಜಮಾ ಅಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

bele vime

ಇದನ್ನೂ ಓದಿ: Solar Pumpset subsidy- ಶೇ 80 ರಷ್ಟು ಸಹಾಯಧನದಲ್ಲಿ ಪಂಪ್ ಸೆಟ್ ಪಡೆಯಲು ಅರ್ಜಿ ಆಹ್ವಾನ!

Taluk wise crop insurance details-ತಾಲ್ಲೂಕುವಾರು ಹಣ ಜಮಾ ವಿವರ ಹೀಗಿದೆ:

ಭದ್ರಾವತಿ, ಹೊಸನಗರ, ಸಾಗರ, ಶಿಕಾರಿಪುರ, ಶಿವಮೊಗ್ಗ, ಸೊರಬ, ತೀರ್ಥಹಳ್ಳಿ ಈ ತಾಲ್ಲೂಕುಗಳಲ್ಲಿನ ರೈತರ ಖಾತೆಗೆ ಹಣ ಜಮಾ ಅಗಿರುತ್ತದೆ. ಭದ್ರಾವತಿಯಲ್ಲಿ 3110 ರೈತರಿಗೆ, ಹೊಸನಗರದಲ್ಲಿ 7305 ರೈತರಿಗೆ , ಸಾಗರದಲ್ಲಿ 7662 ರೈತರಿಗೆ, ಶಿಕಾರಿಪುರದಲ್ಲಿ 15,386 ರೈತರಿಗೆ, ಶಿವಮೊಗ್ಗದಲ್ಲಿ 7398 ರೈತರಿಗೆ, ಸೊರಬದಲ್ಲಿ 18,627 ರೈತರಿಗೆ, ತೀರ್ಥಹಳ್ಳಿ ತಾಲೂಕಿನಲ್ಲಿ 11,689 ರೈತರಿಗೆ ಬೆಳೆ ವಿಮೆ ಹಣ ಜಮಾ ಬಿಡುಗಡೆ ಅಗಿದೆ.

Crop Insurance Status- ಬೆಳೆ ವಿಮೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವುದು ಹೇಗೆ:

ರೈತರು ತಮ ಬೆಳೆ ವಿಮೆ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ ಎಂದು ತಾವಿರುವಲ್ಲಿ ಕುಳಿತು ರಾಜ್ಯ ಸರಕಾರದ ವಿಮಾ ಯೋಜನೆಯ ಅಧಿಕೃತ www.samrakshane.gov.in ಪೋರ್ಟಲ್ ಅನ್ನು ಪ್ರವೇಶ ಮಾಡಿ ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ತಮ್ಮ ಮೊಬೈಲ್ ನಲ್ಲೆ ಬೆಳೆ ವಿಮೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: DBT Status- ಎಲ್ಲಾ ಯೋಜನೆಯ ಹಣ ಜಮಾ ಅಗಿರುವುದನ್ನು ಚೆಕ್ ಮಾಡಲು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ!

Step-1: ಇಲ್ಲಿ ಕ್ಲಿಕ್ ಮಾಡಿ Crop Insurance status ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಬೇಕು.

Step-2: ತದನಂತರ ಈ ಪುಟದಲ್ಲಿ "2023-24" ಎಂದು ವರ್ಷವನ್ನು ಆಯ್ಕೆ ಮಾಡಿಕೊಂಡು ಬಳಿಕ ಋತು "Kharif/ಮುಂಗಾರು" ಎಂದು ಆಯ್ಕೆ ಮಾಡಿಕೂಂಡು "ಮುಂದೆ/Go" ಬಟನ್ ಮೇಲೆ ಕ್ಲಿಕ್ ಮಾಡಿಬೇಕು.

Step-3: ಇಲ್ಲಿ "Farmers" ಕಾಲಂ ವಿಭಾಗದಲ್ಲಿ ಕೆಳಗೆ ಕಾಣುವ "Check Status"ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ www.samrakshane.karnataka.gov.in 10 ಅಂಕಿಯ ಮೊಬೈಲ್ ನಂಬರ್ ಅನ್ನು ಹಾಕಿ ಕ್ಯಾಪ್ಚಾ ಕೋಡ್ ಅನ್ನು ಹಾಕಿ Search ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-4: ಬಳಿಕ ಆ ವರ್ಷ ನೀವು ಹಾಕಿರುವ ಎಲ್ಲಾ ಬೆಳೆ ವಿಮೆ ಅರ್ಜಿಯ ಸಂಖ್ಯೆ ಸೇರಿದಂತೆ ಎಲ್ಲಾ ವಿವರ ತೋರಿಸುತ್ತದೆ. ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬೇಕು ಇದಾದ ಬಳಿಕ ಕೆಳಗೆ "Proposal Status" ಆಯ್ಕೆಯಲ್ಲಿ ಬೆಳೆ ವಿಮೆ ಅರ್ಜಿಯ ಸ್ಥಿತಿ ತೋರಿಸುತ್ತದೆ ಇದರ ಕೆಳಗೆ ಕಾಣುವ "UTR Details" ಆಯ್ಕೆಯಲ್ಲಿ ನಿಮಗೆ ಎಷ್ಟು ಮೊತ್ತದ ಬೆಳೆ ವಿಮೆ ಪರಿಹಾರ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ತೋರಿಸುತ್ತದೆ.

ಇಲ್ಲಿ "View details" ಬಟನ್ ಮೇಲೆ ಕ್ಲಿಕ್ ಮಾಡಿ ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: