Free Mobile Repair Training-ನಿರುದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ! ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

March 15, 2025 | Siddesh
Free Mobile Repair Training-ನಿರುದ್ಯೋಗಿಗಳಿಗೆ ಭರ್ಜರಿ ಸಿಹಿ ಸುದ್ದಿ! ಉಚಿತ ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!
Share Now:

ನಿರುದ್ಯೋಗಿ ಯುವಕರು ಹಾಗೂ ಸ್ವಂತ ಉದ್ಯೋಗವನ್ನು ಮಾಡಬೇಕೆಂಬ ಆಸಕ್ತಿಯನ್ನು ಹೊಂದಿರುವ ಗ್ರಾಮೀಣ ಮತ್ತು ನಗರ ಭಾಗದ ಅಭ್ಯರ್ಥಿಗಳು ಮೊಬೈಲ್ ರಿಪೇರಿಯನ್ನು(mobile repair business) ಮಾಡುವ ಕೆಲಸವನ್ನು ಕಲಿಯಲು ಉಚಿತವಾಗಿ ತರಬೇತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್(Canara bank) ಸಹಯೋಗದಲ್ಲಿ ರುಡ್ ಸೆಟ್(CBRSETI) ಸಂಸ್ಥೆವತಿಯಿಂದ ಉಚಿತವಾಗಿ 30 ದಿನ ಮೊಬೈಲ್ ರಿಪೇರಿ(Free Mobile Repair Training) ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಇದನ್ನೂ ಓದಿ: AgniVeer Recruitment- ಜಸ್ಟ್ 8th ಪಾಸಾದವರಿಗೂ ಕೂಡ ಅಗ್ನಿವೀರ ನೇಮಕಾತಿಯಲ್ಲಿ ಅವಕಾಶ!

ದಿನದ ಉಚಿತ ಮೊಬೈಲ್ ರಿಪೇರಿ ತರಬೇತಿ(Mobile Shop)ಎಲ್ಲಿ ನಡೆಯುತ್ತದೆ? ಈ ತರಬೇತಿಯಲ್ಲಿ ಭಾಗವಹಿಸುವುದು ಹೇಗೆ? ತರಬೇತಿಯನ್ನು ಪಡೆಯಲು ನಿಗದಿಪಡಿಸಿದ ಅರ್ಹತೆಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದೆ ತಪ್ಪದೇ ಈ ಮಾಹಿತಿಯನ್ನು ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿ ಆಸಕ್ತರಿಗೆ ಈ ಮಾಹಿತಿಯನ್ನು ತಲುಪಿಸಲು ಸಹಕರಿಸಿ.

Eligibility Criteria For Mobile Repair Training-ತರಬೇತಿಯನ್ನು ಪಡೆಯಲು ನಿಗದಿಪಡಿಸಿದ ಅರ್ಹತೆಗಳೇನು?

ಅಭ್ಯರ್ಥಿಯು ನಮ್ಮ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ಅರ್ಜಿದಾರರಿಗೆ ವಯಸ್ಸು 19 ರಿಂದ 45 ಒಳಗಿರಬೇಕು.

ಅಭ್ಯರ್ಥಿಗೆ ತರಬೇತಿಯನ್ನು ಪಡೆದ ಸ್ವ-ಉದ್ಯೋಗವನ್ನು ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

mobile shop

Mobile Repair Training Application-ತರಬೇತಿಗೆ ನೋಂದಣಿ ಮಾಡಿಕೊಳ್ಳುವುದು ಹೇಗೆ?

ಈ ತರಬೇತಿಯನ್ನು ಭಾಗವಹಿಸಲು ಆಸಕ್ತಿಯಿರುವ ಅಭ್ಯರ್ಥಿಗಳು ತರಬೇತಿಯನ್ನು ಪಡೆಯಲು ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಲು Ph No-8192-210707 Mobile: 9964111314(E-mail: cbrsetidvg@gmail.com) ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳಬೇಕು.

Mobile Repair Training Last Date-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 28 ಮಾರ್ಚ್ 2025

Mobile Repair Training Starting Date-ತರಬೇತಿ ಆರಂಭವಾಗುವ ದಿನಾಂಕ: 17 ಎಪ್ರಿಲ್ 2025

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

Mobile Repair Training Center-ತರಬೇತಿ ನಡೆಯುವ ಕೇಂದ್ರದ ವಿಳಾಸ:

ಕೆನರಾ ಬ್ಯಾಂಕ್ ರುಡ್ ಸೆಟ್ ಸಂಸ್ಥೆ, ದಾವಣಗೆರೆ/CANARA BANK - RUDSET DAVANAGERE
SERICULTURE OFFICE COMPOUND, Toluhunse Davanagere, Karnataka 577002
9964111314(E-mail: cbrsetidvg@gmail.com)
Location- https://g.co/kgs/oSNcRrv

Free Mobile Repair Training -ಸಂಪೂರ್ಣ ಉಚಿತ ತರಬೇತಿ:

ಮೊಬೈಲ್ ರಿಪೇರಿ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತರಬೇತಿಯು ನಡೆಯುವ 30 ದಿನವು ಸಹ ವಸತಿ ಮತ್ತು ಊಟದ ವ್ಯವಸ್ಥೆಯು ಸಂಪೂರ್ಣ ಉಚಿತವಾಗಿರುತ್ತದೆ.

ಇದನ್ನೂ ಓದಿ: Vasati Yojane-ವಿವಿಧ ವಸತಿ ಯೋಜನೆಯಡಿ ಈ ವರ್ಷ 2.30 ಲಕ್ಷ ಮನೆ ಮಂಜೂರು!

Mobile Repair Training Benefits-ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯಬಹುದು?

ಮೊಬೈಲ್ ರಿಪೇರಿ ಹೇಗೆ ಮಾಡುವುದು? ಆರಂಭಿಕ ಹಂತದಿಂದ ಕಳೆಯಬಹುದು.

ಮೊಬೈಲ್ ರಿಪೇರಿ ಅಂಗಡಿಯನ್ನು(Mobile Repair Shop) ಹಾಕಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಇದರ ಬಗ್ಗೆ ಮಾಹಿತಿ.

ಮೊಬೈಲ್ ಶಾಪ್ ಅನ್ನು ತೆರೆಯಲು ಬ್ಯಾಂಕ್ ಮೂಲಕ ಸಾಲವನ್ನು(Mobile Shop Business Loan)ಪಡೆಯುವುದು ಹೇಗೆ? ಈ ಉದ್ಯೋಗವನ್ನು ಪ್ರಾರಂಭಿಸಲು ಸರಕಾರದ ಸಬ್ಸಿಡಿ ಯೋಜನೆಗಳ ಮಾಹಿತಿ ಸೇರಿದಂತೆ ಇನ್ನಿತರೆ ಅಗತ್ಯ ಮಾಹಿತಿಯನ್ನು ಈ ತರಬೇತಿಯಲ್ಲಿ ತಿಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: