Starlink Internet-ಭಾರತಕ್ಕೆ ಬರಲಿದೆ ಟವರ್ ರಹಿತ ಇಂಟರ್ನೆಟ್ ಸೇವೆ! ಇಲ್ಲಿದೆ ಸಂಪೂರ್ಣ ವಿವರ!

March 15, 2025 | Siddesh
Starlink Internet-ಭಾರತಕ್ಕೆ ಬರಲಿದೆ ಟವರ್ ರಹಿತ ಇಂಟರ್ನೆಟ್ ಸೇವೆ! ಇಲ್ಲಿದೆ ಸಂಪೂರ್ಣ ವಿವರ!
Share Now:

Starlink Internet for India by Elon Musk-ಜಗತ್ತಿನಲ್ಲಿ ದಿನದಿಂದ ದಿನಕ್ಕೆ ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ಹೆಚ್ಚಾಗುತ್ತಿರುವುದರಿಂದ ಮಾನವನ ಜೀವನ ಸುಲಭ ಮತ್ತು ಸರಳವಾಗಿದೆ. ಇದು ಪ್ರತಿಯೊಂದು ಕ್ಷೇತ್ರದಲ್ಲೂ ಮಾನವನ ಕೈಚಳಕ ಮತ್ತು ಬುದ್ಧಿಶಕ್ತಿಯನ್ನು ಎತ್ತಿ ತೋರಿಸುತ್ತಿದೆ.

ಇದೀಗ ಜಗತ್ತಿನ ನಂಬರ್ 1 ಶ್ರೀಮಂತ ವ್ಯಕ್ತಿಗಳಲ್ಲಿ ಒಂದಾಗಿರುವ ಎಲಾನ್ ಮಸ್ಕ್ ಅವರು ಭಾರತ ದೇಶಕ್ಕೆ, ಏರ್ಟೆಲ್(Airtel) ಹಾಗೂ ಜಿಯೋ(Jio) ಸಂಸ್ಥೆಗಳ ಸಹಭಾಗಿತ್ವದಲ್ಲಿ ಸೆಟಲೈಟ್ ಆಧಾರಿತ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ ಆಗಿರುವ ಸ್ಟಾರ್ ಲಿಂಕ್(Starlink Internet in India) ಅನ್ನು ವಿಸ್ತರಿಸುತ್ತಿದ್ದಾರೆ. ಹಾಗಿದ್ದರೆ ಏನಿದು ಸ್ಟಾರ್ ಲಿಂಕ್? ಇದರ ಬೆಲೆ ಎಷ್ಟು? ಇನ್ನೂ ಮುಂದೆ ಇಂಟರ್ನೆಟ್ ಬಳಸುವ ಪ್ರಕ್ರಿಯೆಯಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Anganwadi Worker Salary-ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

What Is Starlink Internet-ಏನಿದು ಸ್ಟಾರ್ ಲಿಂಕ್? ಇದರ ವಿಶೇಷತೆ ಏನು?

ಸ್ಟಾರ್ ಲಿಂಕ್ ಸಂಸ್ಥೆಯು ಬ್ರಾಡ್ ಬ್ಯಾಂಡ್ ಇಂಟರ್ನೆಟ್ ಒದಗಿಸುವ ಸಂಸ್ಥೆಯಾಗಿದೆ. ಬ್ರಾಡ್ ಬ್ಯಾಂಡ್ ಅಂದರೆ ಸರಳ ಭಾಷೆಯಲ್ಲಿ ಹೇಳುವುದಾದರೆ ಹೈ ಸ್ಪೀಡ್ ಇಂಟರ್ನೆಟ್ ಒದಗಿಸುವುದಾಗಿದೆ. ಸ್ಟಾರ್ ಲಿಂಕ್ ಸಂಸ್ಥೆಯ ವಿಶೇಷತೆ ಏನೆಂದರೆ ಇದು 7,000 ಸಣ್ಣ ಉಪಗ್ರಹಗಳನ್ನು ಹೊಂದಿದ್ದು, ಭೂಮಿಯ ಸನಿಹದ ಕಕ್ಷೆಯಲ್ಲಿ (ಸುಮಾರು ಭೂಮಿಯಿಂದ 550km ದೂರದಲ್ಲಿ) ಕಾರ್ಯನಿರ್ವಹಿಸುತ್ತಿವೆ.

Starlink Internet-ನೆಟ್ವರ್ಕ್ ಕಂಬ ಅಥವಾ ಟವರ್ ಗಳಿಲ್ಲದೆ ದೂರ ಸಂಪರ್ಕ ಸೇವೆ!

ಹೌದು, ಸ್ಟಾರ್ ಲಿಂಕ ಸಂಸ್ಥೆಯ ಹೊಸ ತಂತ್ರಜ್ಞಾನದ ಸಹಾಯದಿಂದ ಯಾವುದೇ ಟವರ್ ಗಳಿಲ್ಲದೆ ನೇರವಾಗಿ ಆಕಾಶದಲ್ಲಿರುವ ಉಪಗ್ರಹಗಳ ಸಹಾಯದಿಂದ ಇಂಟರ್ನೆಟ್ ಅಥವಾ ದೂರಸಂಪರ್ಕ ಗ್ರಾಹಕರಿಗೆ ದೊರೆಯಲಿದೆ. ಅದೇ ರೀತಿ ನೀವು ಹೈಸ್ಪೀಡ್ ಇಂಟರ್ನೆಟ್ ಅಂದರೆ ಪ್ರತಿ ಸೇಕಂಡ್ ಗೆ 25 ರಿಂದ 220mb ಇಂಟರ್ನೆಟ್ ಸ್ಪೀಡ್ ಪಡೆಯುವ ಸಾಧ್ಯತೆಗಳಿವೆ.

ಇದನ್ನೂ ಓದಿ: Vasati Yojane-ವಿವಿಧ ವಸತಿ ಯೋಜನೆಯಡಿ ಈ ವರ್ಷ 2.30 ಲಕ್ಷ ಮನೆ ಮಂಜೂರು!



ಇದು ಭಾರತ ದೇಶಕ್ಕೆ ಬರುತ್ತಿರುವುದು ಅಚ್ಚರಿ ವಿಷಯವೇನಲ್ಲ. ಏಕೆಂದರೆ ಈಗಾಗಲೇ ಹಲವು ಬಾರಿ ಭಾರತ ದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸಿ ವಿಫಲಗೊಂಡಿದೆ. ಈಗಾಗಲೇ ಎಲಾನ್ ಮಸ್ಕ್ ಅವರು ತಮ್ಮ ಟೆಸ್ಟ್ಲಾ ಕಂಪನಿಯನ್ನು ಭಾರತ ದೇಶಕ್ಕೆ ಪ್ರವೇಶಿಸಿದ್ದು, ಇದೀಗ ಮತ್ತೆ ಸ್ಟಾರ್ ಲಿಂಕ್ ಕಂಪನಿಯ ಮುಕಾಂತರ ಭಾರತಕ್ಕೆ ಪ್ರವೇಶಿಸಲು ಯಶಸ್ವಿಯಾಗುತ್ತಿದ್ದಾರೆ.

internet

Starlink Internet Benefits-ಇದು ಭಾರತಕ್ಕೆ ಬಂದರೆ ಏನೆಲ್ಲಾ ಪ್ರಯೋಜನ ಸಿಗಲಿದೆ?

ಈಗಿನ ಸಮಯದಲ್ಲಿ ಪ್ರತಿಯೊಂದು ಡಿಜಿಟಲಿಕರಣವಾಗುತ್ತಿದ್ದು, ಇಂಟರ್ನೆಟ್ ಇಲ್ಲದೆ ಜೀವನವೇ ಇಲ್ಲ ಎನ್ನುವ ಪರಿಸ್ಥಿತಿ ಉಂಟಾಗಿದೆ. ಆದರೂ ಹಲವು ಗ್ರಾಮೀಣ ಪ್ರದೇಶಗಳಲ್ಲಿ ನೆಟ್ವರ್ಕ್ ಅಥವಾ ಮೊಬೈಲ್ ಸಂಪರ್ಕದ ಸಮಸ್ಯೆ ಇನ್ನೂ ಹಾಗೆ ಇದೆ. ಸ್ಟಾರ್ ಲಿಂಕ್ ನಿಂದ ಈ ಸಮಸ್ಯೆಗೆ ಪರಿಹಾರ ಸಿಗಲಿದೆ.

ಇದನ್ನೂ ಓದಿ: Property Rights Act-ತಂದೆ-ತಾಯಿಯನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ: ಸಚಿವ ಕೃಷ್ಣ ಬೈರೇಗೌಡ

Starlink Internet Price In India-ಇದರ ಅಂದಾಜು ಬೆಲೆ ಎಷ್ಟಿರಲಿದೆ?

ಈ ಒಂದು ಸೇವೆಯೂ ಈಗಾಗಲೇ ಅಮೇರಿಕಾ ಸೇರಿದಂತೆ ವಿವಿಧ 100 ದೇಶಗಳಲ್ಲಿ ಲಭ್ಯವಿದ್ದು, ಅಮೇರಿಕಾದಲ್ಲಿ ಈ ಸೇವೆಗೆ ಪ್ರತಿ ತಿಂಗಳಿಗೆ 10 ಸಾವಿರ ರೂಪಾಯಿ ಆಸುಪಾಸಿನಲ್ಲಿ ನೀಡುತ್ತಿದ್ದಾರೆ. ಭಾರತದಲ್ಲಿ ಇದರ ದರವು 3 ಸಾವಿರ ರೂಪಾಯಿ ಯಿಂದ 5 ಸಾವಿರ ರೂ. ವರೆಗೆ ಇರಲಿದೆ ಇಂದು ತಜ್ಞರು ಅಂದಾಜಿಸಿದ್ದಾರೆ.

Starlink Internet-ಇದರ ಪ್ರಯೋಜನವನ್ನು ಜನ ಸಾಮಾನ್ಯರು ಹೇಗೆ ಪಡೆಯಬಹುದು?

ಇದು ಭಾರತದಲ್ಲಿ ಅನುಷ್ಠಾನಗೊಂಡ ಮೇಲೆ, ಇಂಟರ್ನೆಟ್ ಆಕಾಶದಲ್ಲಿರುವ ಉಪಗ್ರಹಗಳಿಂದ ನೇರವಾಗಿ ಬಳಕೆದಾರರ ಮನೆ ತಲುಪುವುದರಿಂದ ಇದನ್ನು ಜನಸಾಮಾನ್ಯರು ಪಡೆಯಲು ಜಿಯೋ ಫೈಬರ್ ನ ರೀತಿ ಸ್ಟಾರ್ ಲಿಂಕ್ ಡಿಶ್ ಅಥವಾ ರೂಟರ್ ಉಪಕರಣವನ್ನು ಹೊಂದಬೇಕಾಗುತ್ತದೆ.

ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!

Share Now: