Char Dam Yatra-2025: ಚಾರ್ ದಾಮ್ ಯಾತ್ರೆ ಭೇಟಿಗೆ ನೋಂದಣಿ ಪ್ರಾರಂಭ! ಇಲ್ಲಿದೆ ವೆಬ್ಸೈಟ್ ಲಿಂಕ್!

April 27, 2025 | Siddesh
Char Dam Yatra-2025: ಚಾರ್ ದಾಮ್ ಯಾತ್ರೆ ಭೇಟಿಗೆ ನೋಂದಣಿ ಪ್ರಾರಂಭ! ಇಲ್ಲಿದೆ ವೆಬ್ಸೈಟ್ ಲಿಂಕ್!
Share Now:

ಭಾರತದಲ್ಲಿರುವ ಹಿಮಾಲಯ ಪ್ರದೇಶವು ಅನೇಕ ಧಾರ್ಮಿಕ ಪವಿತ್ರ ತೀರ್ಥಯಾತ್ರೆಗಳಿಗೆ ಹೆಸರುವಾಸಿಯಾಗಿದ್ದು, ಚಾರ್ ದಾಮ್ ಯಾತ್ರೆ(Char Dam Yatra) ಮತ್ತು ಶ್ರೀ ಹೇಮ್ ಕುಂಡ್ ಸಾಹಿಬ್ ಯಾತ್ರೆ ಭೇಟಿಗೆ ಆಸಕ್ತಿ ಹೊಂದಿರುವ ಅರ್ಹ ಯಾತ್ರಿಗಳಿಗೆ ನೋಂದಣಿಯನ್ನು ಮಾಡಿಕೊಳ್ಳಲು ಪ್ರಾರಂಭಿಸಲಾಗಿದೆ.

ಭಾರತದ ಪವಿತ್ರ ಯಾತ್ರೆಗಳಾದ ಚಾರ್ ಧಾಮ್ ಯಾತ್ರೆ(Char Dam Yatra Registration) ಮತ್ತು ಶ್ರೀ ಹೇಮ್ ಕುಂಡ್ ಸಾಹಿಬ್ ಯಾತ್ರೆ ಈ ಎರಡು ಯಾತ್ರೆಗಳು ಅತಿದೊಡ್ಡ ಧಾರ್ಮಿಕ ಪಥಗಳಾಗಿದ್ದು, ಹಿಮಾಲಯ ಪರ್ವತಮಾಲೆಯ ಉಚ್ಛಶಿಖರಗಳಲ್ಲಿ ನೆಲೆಸಿರುವ ಈ ಕ್ಷೇತ್ರಗಳು ಭಕ್ತರಲ್ಲಿ ಕೇವಲ ಧಾರ್ಮಿಕ ನಂಬಿಕೆ ಮಾತ್ರವಲ್ಲದೆ, ಆತ್ಮಾನ್ವೇಷಣೆಯ ದಾರಿಯನ್ನು ಸಹ ಸೃಷ್ಟಿಸುತ್ತವೆ.

ಇದನ್ನೂ ಓದಿ: Pouthi Khata Abhiyana-ಮೃತರ ಹೆಸರಿನಿಂದ ಜಮೀನಿನ ಮಾಲೀಕತ್ವ ವರ್ಗಾವಣೆಗೆ ಸರ್ಕಾರದಿಂದ ನೂತನ ಕ್ರಮ!

ಈ ಎರಡು ಯಾತ್ರೆಗಳೂ ಭಕ್ತಿಗೆ, ಧ್ಯಾನಕ್ಕೆ, ನಿಷ್ಠೆಗೆ ಹಾಗೂ ಧಾರ್ಮಿಕ ಅನುಭವಕ್ಕೆ ದಾರಿ ನೀಡುವ ಪವಿತ್ರ ಪಥಗಳಾಗಿದ್ದು, ಈ ಯಾತ್ರೆಗೆ ನೋಂದಣಿಯನ್ನು ಹೇಗೆ ಮಾಡಿಕೊಳ್ಳಬೇಕು? ಏನಿದು ಚಾರ್ ದಾಮ್ ಯಾತ್ರೆ? ಅಗತ್ಯ ದಾಖಲಾತಿಗಳೇನು? ಇನ್ನೂ ಹೆಚ್ಚಿನ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Char Dam Yatra Opening Dates-2025: ಏನಿದು ಚಾರ್ ಧಾಮ್ ಯಾತ್ರೆ ಮತ್ತು ಶ್ರೀ ಹೇಮ್ ಕುಂಡ್ ಸಾಹಿಬ್ ಯಾತ್ರೆ? ಪ್ರಾರಂಭದ ದಿನಾಂಕಗಳು:

ಚಾರ್ ಧಾಮ್ ಎಂದರೆ “ನಾಲ್ಕು ಪವಿತ್ರ ತೀರ್ಥ ಸ್ಥಳಗಳು” ಎಂದರ್ಥ. ಇದು ಉತ್ತರಾಖಂಡದಲ್ಲಿದ್ದು, ಈ ನಾಲ್ಕು ಸ್ಥಳಗಳು ಹಿಮಾಲಯದ ಸೊಬಗಿನಿಂದ ಆವೃತಗೊಂಡಿದ್ದು, ಗಂಗೋತ್ರಿ, ಕೆದಾರನಾಥ, ಯಮುನೋತ್ರಿ ಮತ್ತು ಬದ್ರಿನಾಥ ಧಾಮಗಳೆಂದು ಪರಿಗಣಿಸಲಾಗಿದೆ.

ಚಾರ್ ಧಾಮ್ ಯಾತ್ರೆ ಇದು ದೇವತಾ ದರ್ಶನದ ಪವಿತ್ರ ಪಥವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಇಲ್ಲಿಗೆ ಭೇಟಿ ಮಾಡುತ್ತಾರೆ. ಈ ಯಾತ್ರೆ ಭಕ್ತರಲ್ಲಿ ನಂಬಿಕೆ, ಶ್ರದ್ಧೆ ಮತ್ತು ಆತ್ಮಿಕ ಶುದ್ಧತೆಯ ಅನುಭವವನ್ನು ಉಂಟುಮಾಡುತ್ತದೆ.

  • ಗಂಗೋತ್ರಿ(Gangotri) – ಗಂಗಾ ನದಿಯ ಉಗಮ ಪ್ರದೇಶ- ಗಂಗೋತ್ರಿ – 10 ಮೇ 2025
  • ಯಮುನೋತ್ರಿ(Yamunotri) – ಯಮುನಾ ನದಿಯ ಮೂಲಸ್ಥಳ- ಯಮುನೋತ್ರಿ – 10 ಮೇ 2025
  • ಬದ್ರಿನಾಥ(Badrinath) – ಮಹಾವಿಷ್ಣುವಿನ ಬದ್ರಿನಾರಾಯಣ ಮೂರ್ತಿಯ ಧಾಮ- ಬದ್ರಿನಾಥ – 16 ಮೇ 2025
  • ಕೇದಾರನಾಥ(Kedarnath) – ಪಾಂಡವರಿಂದ ಸ್ಥಾಪಿತವಾದ ಶಿವನ ಪ್ರಸಿದ್ಧ ಧಾಮ- ಕೆದಾರನಾಥ – 14 ಮೇ 2025

ಇದನ್ನೂ ಓದಿ: Farmers Market-ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರುವತಿಯಿಂದ ರೈತ ಸಂತೆ!

ಶ್ರೀ ಹೇಮ್ ಕುಂಡ್ ಸಾಹಿಬ್ ಯಾತ್ರೆ:

ಹೇಮ್ ಕುಂಡ್ ಸಾಹಿಬ್ ಇದು ಸಿಖ್ ಧರ್ಮದ ಪವಿತ್ರ ತೀರ್ಥಯಾತ್ರೆಯಾಗಿದ್ದು, ಹೇಮ್ ಕುಂಡ್ ಸಾಹಿಬ್ ಎನ್ನುವುದು ಗುರು ಗೋಬಿಂದ್ ಸಿಂಗ್ ಜೀ ಅವರ ತಪಸ್ಸಿನ ನೆಲೆಯಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 4,633 ಮೀಟರ್ ಎತ್ತರದಲ್ಲಿರುವ ಪವಿತ್ರ ತಾಣವಾಗಿದ್ದು, ಶ್ರದ್ಧಾವಂತ ಸಿಖ್ ಭಕ್ತರ ಮುಖ್ಯ ಯಾತ್ರಾ ಕ್ಷೇತ್ರ ಎಂದು ಹೇಳಬಹುದು.

ಹೇಮ್ ಕುಂಡ್ ಸಾಹಿಬ್ ಯಾತ್ರೆ 2025 – ಆರಂಭ ದಿನಾಂಕ: 25 ಮೇ 2025

Char Dam Yatra

ಇದನ್ನೂ ಓದಿ: Free Laptop-SSLC ಅಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಲಾಪ್ ಟಾಪ್ ವಿತರಣೆ!

Char Dam Yatra Registration method-ನೋಂದಣಿ ಮಾಡಿಕೊಳ್ಳುವುದರಿಂದ ಅಗುವ ಪ್ರಯೋಜನಗಳು:

ಯಾತ್ರಿಕರು ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳುವ ಮುನ್ನ ಉತ್ತರಾಖಂಡ ಸರ್ಕಾರದಿಂದ ಬಿಡುಗಡೆಗೊಳಿಸಿರುವ ಅಧಿಕೃತ ಜಾಲತಾಣವನ್ನು ಭೇಟಿ ಮಾಡಿ ತಮ್ಮ ಹೆಸರನ್ನು ನೋಂದಣಿಯನ್ನು ಮಾಡಿಕೊಳ್ಳುವುದರಿಂದ ಯಾವೆಲ್ಲ ಪ್ರಯೋಜನವನ್ನು ಪಡೆಯಬಹುದು ಎನ್ನುವ ವಿವರ ಈ ರೀತಿ ಇದೆ.

ಯಾತ್ರಿಗಳು ಯಾತ್ರೆಯನ್ನು ಕೈಗೊಳ್ಳುವ ಮುನ್ನ ನೋಂದಣಿಯನ್ನು ಮಾಡಿಕೊಳ್ಳುವುದನ್ನು ಉತ್ತರಾಖಂಡ ಸರ್ಕಾರವು ಕಡ್ಡಾಯ ಮಾಡಲಾಗಿದ್ದು ಇದರಿಂದ ಯಾತ್ರಾರ್ಥಿಗಳ ಚಲನವನವನ್ನು ಪತ್ತೆಹಚ್ಚಲು ಮತ್ತು ಮೇಲ್ವಿಚಾರಣೆ ಮಾಡಲು ಅಲ್ಲಿನ ಸರ್ಕಾರಕ್ಕೆ ನೆರವಾಗುತ್ತದೆ ನೋಂದಣಿ ಮಾಡಿಕೊಳ್ಳುವುದು ಯಾತ್ರಾರ್ಥಿಗಳಿಗೆ ಹೆಚ್ಚು ಸುರಕ್ಷೆತೆಯ ಕ್ರಮಗಳನ್ನು ತೆಗೆದುಕೊಳ್ಳಲು ಸಹಕಾರ ನೀಡುತ್ತದೆ. ಇದರ ಜೊತೆಗೆ ಯಾತ್ರಿಕರಿಗೆ ಪ್ರಯಾಣದ ಸಮಯದಲ್ಲಿ ಲಭ್ಯವಿರುವ ಸರ್ಕಾರದ ವಿವಿಧ ಸೇವೆಗಳನ್ನು ಪಡೆಯಲು ಸಹ ನೆರವಾಗುತ್ತದೆ.

ಇದನ್ನೂ ಓದಿ: Yashaswini Yojane-ಯಶಸ್ವಿನಿ ಯೋಜನೆಯಡಿ ಮಹತ್ವ ಬದಲಾವಣೆಗೆ ಶಿಫಾರಸು!

Char Dam Yatra Registration Documents-ನೋಂದಣಿ ಮಾಡಿಕೊಳ್ಳಲು ಅಗತ್ಯ ದಾಖಲೆಗಳು;

ಯಾತ್ರಿಗಳ ಗುರುತಿನ ಪುರಾವೆ ಉದಾಹರಣೆಗೆ ಆಧಾರ್ ಕಾರ್ಡ/ಚಾಲನಾ ಪ್ರಮಾಣ ಪತ್ರ/ವೋಟರ್ ಐಡಿ/ಪಾಸ್ ಪೋರ್ಟ್ ದಾಖಲೆಗಳನ್ನು ಆನ್ಲೈನ್ ಮೂಲಕ ಸಲ್ಲಿಸಿ ನೋಂದಣಿಯನ್ನು ಮಾಡಿಕೊಳ್ಳಬಹುದು.

Online Registartion For Char Dam Yatre-ತಮ್ಮ ಮೊಬೈಲ್ ನಲ್ಲೇ ನೋಂದಣಿಯನ್ನು ಮಾಡಿಕೊಳ್ಳುವ ವಿಧಾನ:

ಯಾತ್ರಿಗಳು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಮನೆಯಲ್ಲಿ ಕುಳಿರು ತಮ್ಮ ಮೊಬೈಲ್ ಮೂಲಕ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಯಾತ್ರೆಯನ್ನು ತೆರಲು ನೋಂದಣಿಯನ್ನು ಮಾಡಿಕೊಳ್ಳಬಹುದು.

Step-1: ಮೊದಲಿಗೆ Register Now ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Horticulture Scheme-ತೋಟಗಾರಿಕೆ ಇಲಾಖೆಯಿಂದ ಈ ಬೆಳೆ ಬೆಳೆಯಲು 1,68 ಲಕ್ಷ ಸಬ್ಸಿಡಿ!

Kedarnath

Step-2: ಇಲ್ಲಿ ಅಧಿಕೃತ ಉತ್ತರಕಾಂಡ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ತಂತ್ರಾಂಶ ತೆರೆದುಕೊಳ್ಳುತ್ತದೆ ಇಲ್ಲಿ ಮುಖಪುಟದ ಬಲಬದಿಯಲ್ಲಿ ಕಾಣುವ "Register/Login" ಬಟನ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಕೇಳುವ ಅಗತ್ಯ ವಿವರವನ್ನು ಭರ್ತಿ ಮಾಡಿ ನೋಂದಣಿಯನ್ನು ಮಾಡಿಕೊಳ್ಳಬೇಕು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: