Parihara Farmers List-ಬೆಳೆ ಹಾನಿ ಪರಿಹಾರ ಪಡೆದ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!

June 19, 2025 | Siddesh
Parihara Farmers List-ಬೆಳೆ ಹಾನಿ ಪರಿಹಾರ ಪಡೆದ ಹಳ್ಳಿವಾರು ರೈತರ ಪಟ್ಟಿ ಬಿಡುಗಡೆ!
Share Now:

ಸರ್ಕಾರದಿಂದ ಬೆಳೆ ಹಾನಿ ಪರಿಹಾರವನ್ನು ಪಡೆಯಲು ಅರ್ಜಿ ಸಲ್ಲಿಸಿದ ರೈತರಿಗೆ ಕಳೆದ ಹಿಂದಿನ ವರ್ಷದಲ್ಲಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು ಇದರನ್ವಯ ಹಳ್ಳಿವಾರು ಬೆಳೆ ಪರಿಹಾರ ಪಡೆದ ರೈತರ ಪಟ್ಟಿಯನ್ನು ಕಂದಾಯ ಇಲಾಖೆಯ ಅಧಿಕೃತ Parihara ತಂತ್ರಾಂಶದಲ್ಲಿ ಬಿಡುಗಡೆ ಮಾಡಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಪ್ರತಿ ವರ್ಷ ಅತೀಯಾದ ಮಳೆಯಿಂದ ಬೆಳೆ ಹಾನಿಯಾದ(Crop Loss Amount) ರೈತರಿಗೆ NDRF ಮಾರ್ಗಸೂಚಿಯ ಪ್ರಕಾರ ಬೆಳೆ ಹಾನಿ ಪರಿಹಾರವನ್ನು ಒದಗಿಸಲಾಗುತ್ತದೆ ಇದರನ್ವಯ ಬೆಳೆ ಹಾನಿ ಪರಿಹಾರ ಪಡೆದಿರುವ ಹಳ್ಳಿವಾರು ರೈತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು ಇದರ ಮಾಹಿತಿಯನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Grama Panchayat-ಗ್ರ‍ಾಮ ಪಂಚಾಯತಿಯ ಸೌಲಭ್ಯಕ್ಕೆ ಪಂಚಮಿತ್ರ ಸಹಾಯವಾಣಿ ಆರಂಭ!

ಪ್ರಸ್ತುತ ಈ ಲೇಖನದಲ್ಲಿ ಬೆಳೆ ಹಾನಿ(Bele hani parihara) ಪರಿಹಾರವನ್ನು ಪಡೆದಿರುವ ರೈತರ ಹಳ್ಳಿವಾರು ಪಟ್ಟಿಯನ್ನು ತಮ್ಮ ಮೊಬೈಲ್ ನಲ್ಲಿ ಹೇಗೆ ಪಡೆಯುವುದು? ಎನ್ನುವ ಮಾಹಿತಿಯನ್ನು ಹಾಗೂ ಪ್ರಸ್ತುತ ವರ್ಷದಲ್ಲಿ ಬೆಳೆ ಹಾನಿಯಾಗಿದ್ದರೆ ಅರ್ಜಿ ಸಲ್ಲಿಸುವುದು ಹೇಗೆ? ಪರಿಹಾರ ಪಡೆಯಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಎನ್ನುವ ವಿವರವಾದ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

Last Years Bele Hani Parihara Farmer List-ಹಿಂದಿನ 3 ವರ್ಷದ ಪರಿಹಾರದ ಹಣ ಬಿಡುಗಡೆ ಮಾಹಿತಿ ಇಲ್ಲಿ ಲಭ್ಯ:

ಕಂದಾಯ ಇಲಾಖೆಯ ಪರಿಹಾರ ತಂತ್ರಾಂಶದಲ್ಲಿ 2023 ರಿಂದ 2024 ರವರೆಗೆ ಹಳ್ಳಿವಾರು ಯಾರಿಗೆಲ್ಲ ಎಷ್ಟು ಮೊತ್ತದ ಪರಿಹಾರ ಬಿಡುಗಡೆಯಾಗಿದೆ ಎನ್ನುವ ಮಾಹಿತಿಯನ್ನು ಈ ವೆಬ್ಸೈಟ್ ನಲ್ಲಿ ನೋಡಲು ಅವಕಾಶವಿರುತ್ತದೆ. ಇದಕ್ಕಾಗಿ ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ.

Step-1: ಮೊದಲಿಗೆ Parihara Farmer List ಇಲ್ಲಿ ಕ್ಲಿಕ್ ಮಾಡಿ ಅಧಿಕೃತ ಪರಿಹಾರ ತಂತ್ರಾಂಶವನ್ನು ಭೇಟಿ ಮಾಡಬೇಕು.

ಇದನ್ನೂ ಓದಿ: Parihara-ಸರ್ಕಾರದಿಂದ ಪರಿಹಾರದ ಹಣ ಬಿಡುಗಡೆಗೆ ಅಧಿಕೃತ ಆದೇಶ ಪ್ರಕಟ!

parihara farmers list

Step-2: ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಎಡಬದಿಯಲ್ಲಿ ಕೆಳಗೆ ಕಾಣುವ "Village Wise List" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ನಲ್ಲಿ ವರ್ಷ,ಋತು,ವಿಪತ್ತಿನ ವಿಧ,ಜಿಲ್ಲೆ,ತಾಲ್ಲೂಕು,ಹೋಬಳಿ,ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಂಡು "Get Report/ವರದಿ ಪಡೆಯಿರಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ವರ್ಷ ನಿಮ್ಮ ಹಳ್ಳಿಯಲ್ಲಿ ಯಾರೆಗೆಲ್ಲ ಬೆಳೆ ಹಾನಿ ಪರಿಹಾರ ಜಮಾ ಅಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೋಡಬಹುದು.

Bele Hani Parihara Apply Method-ಪ್ರಸ್ತುತ ಬೆಳೆ ಹಾನಿಗೆ ಅರ್ಜಿ ಸಲ್ಲಿಸುವ ವಿಧಾನ:

ಈ ವರ್ಷ ಅತೀಯಾದ ಮಳೆಯಿಂದ ನಿಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಯು ಹಾನಿಯಾಗಿದ್ದರೆ ಕೃಷಿ ಬೆಳೆಯಾಗಿದ್ದರೆ ನಿಮ್ಮ ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ಅಥವಾ ತೋಟಗಾರಿಕೆ ಬೆಳೆಯಾಗಿದ್ದರೆ ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Google Pay-ಗೂಗಲ್ ಪೇ ಮತ್ತು ಪೋನ್ ಪೇ ಹಣ ಪಾವತಿಯಲ್ಲಿ ಮಹತ್ವದ ಬದಲಾವಣೆ!

Required Documents-ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು:

ಬೆಳೆ ಹಾನಿ ಪರಿಹಾರವನ್ನು ಪಡೆಯಲು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ರೈತರ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.

1) ಅರ್ಜಿದಾರ ರೈತರ ಆಧಾರ್ ಕಾರ್ಡ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಬೆಳೆ ಹಾನಿಯಾದ ರೈತರ ಜಮೀನಿನ ಪಹಣಿ/ಊತಾರ್/RTC
4) ರೈತರ ಮೊಬೈಲ್ ನಂಬರ್

Parihara Amount-ಎಷ್ಟು ಬೆಳೆ ಪರಿಹಾರವನ್ನು ನೀಡಲಾಗುತ್ತದೆ?

NDRF ಮಾರ್ಗಸೂಚಿಯ ಪ್ರಕಾರ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅತೀಯಾದ ಮಳೆಯಿಂದ ರೈತರ ಬೆಳೆಯು ಹಾನಿಯಾದ ಸಮಯದಲ್ಲಿ ಕೃಷಿ ಬೆಳೆಗಳಿಗೆ ಪ್ರತಿ ಎಕರೆ ರೂ ರಿಂದ ರೂ ರವರೆಗೆ ಅತೀ ಮಾದರಿಯಲ್ಲಿ ತೋಟಗಾರಿಕೆ ಬೆಳೆ ರೂ ಬೆಳೆ ಹಾನಿ ಪರಿಹಾರವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Railway ticket booking-ರೈಲ್ವೆ ತತ್ಕಾಲ್ ನಲ್ಲಿ ಟಿಕೆಟ್ ಬುಕ್ ಮಾಡಲು ನೂತನ ನಿಯಮ ಜಾರಿ!

Parihara DBT Payment Method-ನೇರ ನಗದು ವರ್ಗಾವಣೆ ಮೂಲಕ ರೈತರ ಖಾತೆಗೆ ಹಣ ವರ್ಗಾವಣೆ:

ಬೆಳೆ ಹಾನಿ ಪರಿಹಾರವನ್ನು ಪಡೆಯಲು ಅರ್ಜಿ ಸಲ್ಲಿಸಿದ ಅರ್ಹ ರೈತರಿಗೆ ಪರಿಹಾರದ ಹಣವನ್ನು ಸರ್ಕಾರದಿಂದ ನೇರ ನಗದು ವರ್ಗಾವಣೆ(DBT) ವ್ಯವಸ್ಥೆಯನ್ನು ಅನುಸರಿಸಿ ನೇರವಾಗಿ ರೈತರು ನೀಡಿರುವ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಇದರಿಂದ ಪರಿಹಾರ ವಿತರಣೆಯಲ್ಲಿ ಪಾರದರ್ಶಕತೆಯನ್ನು ತರಲಾಗಿದೆ.

Bele Parihara arji-ಬೆಳೆ ಪರಿಹಾರ ಅರ್ಜಿ ವಿಲೇವಾರಿಗೆ ಡಿಜಿಟಲ್ ತಂತ್ರಾಂಶ:

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಕಂದಾಯ ಇಲಾಖೆಯಿಂದ ಬೆಳೆ ಹಾನಿ ಪರಿಹಾರದ ಅರ್ಜಿಯ ವಿಲೇವಾರಿಯನ್ನು ಮಾಡಲಾಗುತ್ತದೆ ಇದಕ್ಕಾಗಿ ಇಲಾಖೆಯಿಂದ "Parihara" ತಂತ್ರಾಂಸವನ್ನು ಅಭಿವೃದ್ದಿಪಡಿಸಲಾಗಿದ್ದು ಈ ಜಾಲತಾಣದ ಮೂಲಕ ಬೆಳೆ ಪರಿಹಾರದ ರೈತರ ಅರ್ಜಿಯನ್ನು ವಿಲೇವಾರಿ ಮಾಡಲಾಗುತ್ತದೆ.

Parihara Website- ಅರ್ಜಿ ವಿಲೇವಾರಿ ಪ್ರಕ್ರಿಯೆ:

ಬೆಳೆ ಹಾನಿ ಪರಿಹಾರದ ಅರ್ಜಿ ವಿಲೇವಾರಿ ಪ್ರಕ್ರಿಯೆ ಹೀಗಿರುತ್ತದೆ ಒಮ್ಮೆ ಬೆಳೆ ಹಾನಿಯಾಗಿರುವುದರ ಕುರಿತು ರೈತರು ಅರ್ಜಿಯನ್ನು ಸಲ್ಲಿಸಿದ ಬಳಿಕ ಸಂಬಂಧಪಟ್ಟ ಅಧಿಕಾರಿಗಳು ರೈತರ ಅರ್ಜಿಯನ್ನು ಮೊದಲ ಹಂತದಲ್ಲಿ ಪರಿಹಾರ/Parihara ತಂತ್ರಾಂಶದಲ್ಲಿ ಅಪ್ಲೋಡ್ ಮಾಡಿ ಅಗತ್ಯ ಪರಿಶೀಲನೆಯನ್ನು ಮಾಡಲಾಗುತ್ತದೆ ಬಳಿಕ ಸರ್ಕಾರದಿಂದ ಬೆಳೆ ಹಾನಿಗೆ ಅನುದಾನ ಬಿಡುಗಡೆ ಅದ ಸಮಯದಲ್ಲಿ ಏಕೆ ಕಾಲಕ್ಕೆ ಎಲ್ಲಾ ಅರ್ಹ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಬೆಳೆ ಪರಿಹಾರದ ಹಣವನ್ನು DBT ಮೂಲಕ ಜಮಾ ಮಾಡಲಾಗುತ್ತದೆ.

WhatsApp Group Join Now
Telegram Group Join Now
Share Now: