Free Beautician Training-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

July 2, 2025 | Siddesh
Free Beautician Training-ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!
Share Now:

ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಉಚಿತವಾಗಿ(Free Beautician Training) 35 ದಿನದ ಬ್ಯೂಟಿ ಪಾರ್ಲರ್ ಮ್ಯಾನೇಜ್ ಮೆಂಟ್ ತರಬೇತಿಯನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳನ್ನು ಗುರುತಿಸಿ ಉದ್ದಿಮೆಯನ್ನು ಆರಂಭಿಸಲು ಪ್ರಾರಂಭಿಕ ಹಂತದಲ್ಲಿ ಅವಶ್ಯವಿರುವ ಕೌಶಲ್ಯ ತರಬೇತಿಯನ್ನು ಆರ್ ಸೆಟ್ ತರಬೇತಿ ಸಂಸ್ಥೆಗಳಿಂದ(Rseti training program) ಪ್ರತಿ ಜಿಲ್ಲೆಯಲ್ಲಿಯು ಸಹ ತರಬೇತಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Maize Fall Armyworm-ಮೆಕ್ಕೆಜೋಳಕ್ಕೆ ಸೈನಿಕ ಹುಳು ಬಾಧೆ! ನಿಯಂತ್ರಿಸಲು ಈ ಕ್ರಮ ಅನುಸರಿಸಿ!

ಪ್ರಸ್ತುತ ಕುಮಟಾ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ(Canara Bank Rseti) ಕೇಂದ್ರದಿಂದ ಉಚಿತವಾಗಿ 35 ದಿನದ ಬ್ಯೂಟಿ ಪಾರ್ಲರ್ ಮ್ಯಾನೇಜ್ ಮೆಂಟ್ ತರಬೇತಿಯನ್ನು ಏರ್ಪಡಿಸಲಾಗಿದ್ದು ಈ ತರಬೇತಿಯನ್ನು ಪಡೆಯಲು ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಅರ್ಜಿಯನ್ನು ಸಲ್ಲಿಸಿ ತರಬೇತಿಯಲ್ಲಿ ಭಾಗವಹಿಸಬಹುದು.

Beauty Parlour Business Scope-ಬ್ಯೂಟಿ ಪಾರ್ಲರ್ ಮ್ಯಾನೇಜ್ ಮೆಂಟ್ ಉದ್ದಿಮೆ ಅವಕಾಶಗಳು:

ಬ್ಯೂಟಿ ಪಾರ್ಲರ್ ತೆರೆಯುವುದುಅವಕಾಶ: ಭಾರತದಲ್ಲಿ ಸೌಂದರ್ಯ ಉದ್ಯಮವು ಕಳೆದ ಕೆಲವು ವರ್ಷಗಳಲ್ಲಿ 35% ರಷ್ಟು ಬೆಳವಣಿಗೆಯನ್ನು ಕಂಡಿದೆ, ಮತ್ತು ಇದು ಮುಂದಿನ ವರ್ಷಗಳಲ್ಲಿ ಇನ್ನಷ್ಟು ವೇಗವಾಗಿ ಬೆಳೆಯುವ ನಿರೀಕ್ಷೆಯಿದೆ.

ವಿಧಾನ: ತರಬೇತಿ: ಬ್ಯೂಟಿಷಿಯನ್ ಕೋರ್ಸ್‌ನಲ್ಲಿ ತರಬೇತಿ ಪಡೆಯಿರಿ (ಉದಾಹರಣೆಗೆ: ಮೇಕಪ್, ಹೇರ್ ಸ್ಟೈಲಿಂಗ್, ಸ್ಕಿನ್ ಕೇರ್, ಇತ್ಯಾದಿ). ತರಬೇತಿಯಿಲ್ಲದೆ ವೃತ್ತಿಪರ ಸೇವೆಗಳನ್ನು ಒಡ್ಡಲು ಕಷ್ಟವಾಗಬಹುದು.

ವ್ಯಾಪಾರ ಯೋಜನೆ: ಗುರಿಯ ಕಸ್ಟಮರ್‌ಗಳು, ಸೇವೆಗಳು, ಬೆಲೆ, ಮತ್ತು ಮಾರ್ಕೆಟಿಂಗ್ ತಂತ್ರವನ್ನು ಒಳಗೊಂಡ ವ್ಯಾಪಾರ ಯೋಜನೆಯನ್ನು ರಚಿಸಿ.
ಸ್ಥಳ: ಸಮುದಾಯ ಕೇಂದ್ರಗಳು, ಮಾರುಕಟ್ಟೆ ಪ್ರದೇಶಗಳು ಅಥವಾ ಸಾರಿಗೆಗೆ ಸುಲಭವಾಗಿ ಲಭ್ಯವಿರುವ ಸ್ಥಳವನ್ನು ಆಯ್ಕೆ ಮಾಡಿ.

ಉತ್ಪನ್ನಗಳು: ಗುಣಮಟ್ಟದ ಸೌಂದರ್ಯ ಉತ್ಪನ್ನಗಳನ್ನು (ಫೌಂಡೇಶನ್, ಶಾಂಪೂ, ಲೋಷನ್, ಇತ್ಯಾದಿ) ಖರೀದಿಸಿ. ಸಾವಯವ (organic) ಉತ್ಪನ್ನಗಳಿಗೆ ಈಗ ಬೇಡಿಕೆ ಹೆಚ್ಚಿದೆ.

ಇದನ್ನೂ ಓದಿ: Agri Diploma Admission-ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಗ್ರಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

Who Can Apply For Free Beautician Training- ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸಲು ಅರ್ಹರು:

ತರಬೇತಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅರ್ಜಿದಾರರು ಬಿಪಿಎಲ್ ಕಾರ್ಡ ಅನ್ನು ಹೊಂದಿರಬೇಕು.

ಅರ್ಜಿದಾರ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕನ್ನಡ ಓದಲು ಹಾಗೂ ಬರೆಯಲು ಬರಬೇಕು.

ಅರ್ಜಿದಾರ ಅಭ್ಯರ್ಥಿಯ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. 

ಅರ್ಜಿದಾರ ಅಭ್ಯರ್ಥಿಯು ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಬಿ.ಪಿ.ಎಲ್ ಕಾರ್ಡ ಹೊಂದಿರುವ ಅರ್ಜಿದಾರರಿಗೆ ತರಬೇತಿಯಲ್ಲಿ ಪಾಲ್ಗೊಳಲು ಪ್ರಥಮ ಅದ್ಯತೆಯನ್ನು ನೀಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತರಬೇತಿಯನ್ನು ಪಡೆದ ನಂತರ ಅಭ್ಯರ್ಥಿಗಳು ಸ್ವಂತ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

ಇದನ್ನೂ ಓದಿ: Best Saving Schemes-ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಎಷ್ಟು ಬಡ್ಡಿ ಸಿಗುತ್ತದೆ?

Free Beautician Training

Free Beautician Training Duration-ತರಬೇತಿ ಆರಂಭ ದಿನಾಂಕ:

ಉಚಿತ ಬ್ಯೂಟಿ ಪಾರ್ಲರ್ ಮ್ಯಾನೇಜ್ ಮೆಂಟ್ ತರಬೇತಿಯು ದಿನಾಂಕ 14 ಜುಲೈ 2025 ರಿಂದ ಪ್ರಾರಂಭವಾಗಿ 17 ಆಗಸ್ಟ್ 2025ಕ್ಕೆ ಮುಗಿಯಲಿದ್ದು ಈ ತರಬೇತಿಯು ಒಟ್ಟು 35 ದಿನಗಳು ನಡೆಯಲಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

Beautician Training- ಈ ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ:

35 ದಿನದ ಬ್ಯೂಟಿ ಪಾರ್ಲರ್ ಮ್ಯಾನೇಜ್ ಮೆಂಟ್ ತರಬೇತಿಯ ಸಂಪೂರ್ಣ ಉಚಿತವಾಗಿ ಅಭ್ಯರ್ಥಿಗಳಿಗೆ ನೀಡುವ ತರಬೇತಿಯಾಗಿದ್ದು ಇದಕ್ಕಾಗಿ ಯಾವುದೇ ಬಗ್ಗೆಯ ಶುಲ್ಕವನ್ನು ಪಾವತಿಸುವ ಅವಶ್ಯಕತೆಯಿರುವುದಿಲ್ಲ.

ಇದನ್ನೂ ಓದಿ: PM Kisan-7 ಲಕ್ಷ ರೈತರಿಗೆ ಪಿಎಂ ಕಿಸಾನ್ ಹಣ ಸ್ಥಗಿತ! ಇಲ್ಲಿದೆ ಅರ್ಹ ರೈತರ ಪಟ್ಟಿ!

ಉಚಿತ ವಸತಿ ಮತ್ತು ಊಟ ಸೌಲಭ್ಯ:

35 ದಿನದ ಬ್ಯೂಟಿ ಪಾರ್ಲರ್ ಮ್ಯಾನೇಜ್ ಮೆಂಟ್ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ತರಬೇತಿ ಕೇಂದ್ರದಲ್ಲೇ ಉಚಿತವಾಗಿ ವಸತಿ ಮತ್ತು ಊಟ ವ್ಯವಸ್ಥೆಯನ್ನು ತರಬೇತಿ ಕೇಂದ್ರದಿದ್ದಲೇ ಒದಗಿಸಲಾಗುತ್ತದೆ.

Free Beautician Training Application-ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅರ್ಜಿದಾರರು ತರಬೇತಿಯ ಪಡೆಯಲು ಅರ್ಜಿ ಸಲ್ಲಿಸಲು ಎರಡು ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ ಒಂದು ಆನ್ಲೈನ್ ಮೂಲಕ ಈ ಲೇಖನದ ಕೊನೆಯಲ್ಲಿ ಹಾಕಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ವಿವರ ಭರ್ತಿ ಮಾಡಿ ನಿಮ್ಮ ಮೊಬೈಲ್ ನಲ್ಲೇ ಅರ್ಜಿಯನ್ನು ಸಲ್ಲಿಸಬಹುದು ಇನ್ನು ಎರಡನೇ ವಿಧಾನ ಅರ್ಜಿದಾರರು ಮುಂಚಿತವಾಗಿ ನಿಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ನೇರವಾಗಿ ಈ ಮೊಬೈಲ್ 08386-220530, 9449860007, 9538281989, 9916783825, 888044612 ನಂಬರ್ ಗಳಿಗೆ ಕರೆ ಮಾಡಿ ಹೆಸರನ್ನು ನೋಂದಣಿ ಮಾಡಿಕೊಂಡು ತರಬೇತಿಯಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ: Scholarship Application-2025: ಎಸ್ ಎಸ್ ಟ್ರಸ್ಟ್ ನಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

Required documents for Training - ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಉಚಿತ ತರಬೇತಿಯಲ್ಲಿ ಭಾಗವಹಿಸಲು ಅರ್ಜಿದಾರರು ಈ ಕೆಳಗೆ ತಿಳಿಸಿರುವ ದಾಖಲೆಗಳನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ.

ಅರ್ಜಿದಾರರ ಅಧಾರ್ ಕಾರ್ಡ/Aadhar.
ಪಾಸ್ ಪೋಟ್ ಸೈಜ್ ಪೋಟೋ/Photo.
ಬ್ಯಾಂಕ್ ಪಾಸ್ ಬುಕ್ ಪ್ರತಿ/Bank Pass Book.
ರೇಶನ್ ಕಾರ್ಡ ಪ್ರತಿ/Ration Card.
ಮೊಬೈಲ್ ಸಂಖ್ಯೆ/Mobile Number.

ಇದನ್ನೂ ಓದಿ: Diploma agriculture admission-2025: ರಾಯಚೂರು ಕೃಷಿ ವಿವಿಯಿಂದ ಕೃಷಿ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ!

Training Center Address-ಉಚಿತ ತರಬೇತಿ ನಡೆಯುವ ಕೇಂದ್ರದ ವಿಳಾಸ:

ಇಂಡಿಸ್ಟ್ರೀಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343, ಹೆಚ್ಚಿನ ಮಾಹಿತಿಗಾಗಿ: 9449860007, 9538281989, 9916783825, 888044612

Online Application Link For Computer Training-ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸಲು ಅವಕಾಶ:

ಆಸಕ್ತ ಅಭ್ಯರ್ಥಿಗಳು ಈ ಗೂಗಲ್ ಪಾರ್ಮ್ Apply Now ಲಿಂಕ್ ಮೇಲೆ ಕ್ಲಿಕ್ ಮಾಡಿ ತಮ್ಮ ಮೊಬೈಲ್ ನಲ್ಲೇ ಅಗತ್ಯ ವಿವರವನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: