Gruhalakshmi Amount-2025: ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

July 7, 2025 | Siddesh
Gruhalakshmi Amount-2025: ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!
Share Now:

ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ(Gruhalakshmi) ಯೋಜನೆಯ ಫಲಾನುಭವಿಗಳಿಗೆ ಸಿಹಿ ಸುದ್ದಿಯನ್ನು ನೀಡಲಾಗಿದ್ದು ಈ ಯೋಜನೆಯಡಿ ಪ್ರತಿ ತಿಂಗಳು ಬಿಡುಗಡೆ ಮಾಡುವ ರೂ 2,000/- ಆರ್ಥಿಕ ನೆರವಿನ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೂತನ ಮಾಹಿತಿಯನ್ನು ಮಾಧ್ಯಮ ಸುದ್ದಿ ಗೋಷ್ಠಿಯಲ್ಲಿ ಹಂಚಿಕೊಂಡಿದ್ದಾರೆ ಇದರ ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಗೃಹಲಕ್ಷ್ಮಿ ಯೋಜನೆಯಡಿ(Gruhalakshmi Yojane) ಬಿಪಿಎಲ್ ಕಾರ್ಡ(BPL) ಅನ್ನು ಹೊಂದಿರುವ ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯಡಿ ರೂ 2,000/- ಹಣವನ್ನು ಪ್ರತಿ ತಿಂಗಳು ನೇರ ನಗದು ವರ್ಗಾವಣೆಯ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಅದರೆ ಕಳೆದ 4-5 ತಿಂಗಳಿಂದ ಪ್ರತಿ ತಿಂಗಳು ಹಣವನ್ನು ಜಮಾ ಮಾಡದೇ ಎರಡು-ಮೂರು ತಿಂಗಳ ಹಣವನ್ನು ಸರ್ಕಾರ ವರ್ಗಾವಣೆ ಮಾಡುತ್ತಿತ್ತು ಇದರ ಕುರಿತು ಸಹ ಸಚಿವರು ಸ್ಪಷ್ಟಣೆಯನ್ನು ನೀಡಿರುವ ವಿವರವನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: PMMVY Yojana-ಮಾತೃವಂದನಾ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ ₹11,000 ರೂ ಸಹಾಯಧನ!

ಪ್ರಸ್ತುತ ಈ ಲೇಖನದಲ್ಲಿ ಗೃಹಲಕ್ಷ್ಮಿ ಹಣ ವಿಳಂಬಕ್ಕೆ(Gruhalakshmi Amount) ಕಾರಣಗಳೇನು? ಜೂನ್-2025 ತಿಂಗಳ ಗೃಹಲಕ್ಷ್ಮಿ ಯೋಜನೆಯ ಕಂತಿನ ಹಣ ಯಾವಾಗ ಜಮಾ ಅಗಲಿದೆ?ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ವಿವರವನ್ನು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳುವುದು ಹೇಗೆ?ಇನ್ನಿತರೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Gruhalakshmi June 2025 Amount-ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ರಾಜ್ಯ ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ ಮೇ-2025 ರ ವರೆಗೆ ಆರ್ಥಿಕ ನೆರವನ್ನು ಈಗಾಗಲೇ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲಾಗಿದ್ದು ಜೂನ್-2025 ತಿಂಗಳ ಹಣವನ್ನು(Gruhalakshmi June Amount Release date)ಇನ್ನೊಂದು ವಾರದಲ್ಲಿ ಅಂದರೆ ಜುಲೈ 15 ರ ಒಳಗಾಗಿ ನೇರವಾಗಿ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು 05 ಜುಲೈ 2025 ರಂದು ಬೀದರ್ ನಲ್ಲಿ ಆಯೋಜನೆ ಮಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀನಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಸುದ್ದಿ ಗೋಷ್ಠಿಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಗೃಹಲಕ್ಷ್ಮಿ ಹಣ ಬಿಡುಗಡೆ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಾಧ್ಯಮ ಪ್ರಕಟಣೆಯ ಕುರಿತಾದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ-Watch Now

ಇದನ್ನೂ ಓದಿ: Milk Incentive-9.07 ಲಕ್ಷ ರೈತರ ಖಾತೆಗೆ 2,854 ಕೋಟಿ ಹಾಲಿನ ಪ್ರೋತ್ಸಾಹಧನ!

Gruhalakshmi

ಇದನ್ನೂ ಓದಿ: Home Subsidy Scheme-ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ!

Gruhalakshmi Installment Dates-ಗೃಹಲಕ್ಷ್ಮಿ ಕಂತಿನವಾರು ಹಣ ಬಿಡುಗಡೆ ವಿವರ ಹೀಗಿದೆ:

ಸರ್ಕಾರದಿಂದ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ಮಹಿಳೆಯರಿಗೆ ಜನವರಿ 2025 ರಿಂದ ಮೇ 2025 ರ ವರೆಗೆ ಯಾವೆಲ್ಲ ದಿನಾಂಕದಂದು ಹಣವನ್ನು ವರ್ಗಾವಣೆ ಮಾಡಲಾಗಿದೆ ಎನ್ನುವ ವಿವರವನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

  • ಜನವರಿ 2025:- 26-02-2025
  • ಪೆಬ್ರವರಿ 2025:- 13-03-2025
  • ಮಾರ್ಚ್ 2025:- 31-03-2025
  • ಏಪ್ರಿಲ್ 2025:- 09-06-2025
  • ಮೇ 2025:- 19-06-2025
  • ಜೂನ್ 2025- ಈ ತಿಂಗಳ ರೂ 2,000/- ಆರ್ಥಿಕ ನೆರವನ್ನು ಜಮಾ ಮಾಡುವುದು ಬಾಕಿಯಿರುತ್ತದೆ.

ಇದನ್ನೂ ಓದಿ: Kotak Scholarships-2025: ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!

Gruhalakshmi-ಗೃಹಲಕ್ಷ್ಮಿ ಯೋಜನೆಯ ಹಣ ವಿಳಂಬಕ್ಕೆ ಕಾರಣವೇನು?

ಕಳೆದ ತಿಂಗಳು ಮಾಧ್ಯಮ ಸುದ್ದಿ ಗೋಷ್ಠಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು ಹಣವನ್ನು ಜಮಾ ಮಾಡಲು ವಿಳಂಬವಾಗುವುದಕ್ಕೆ ಸೂಕ್ತ ಕಾರಣವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದು ಇದರ ವಿವರ ಹೀಗಿದೆ. ಕೇಂದ್ರ ನೂತನ ಮಾರ್ಗಸೂಚಿಯನ್ವಯ ಈ ಯೋಜನೆಯ ಫಲಾನುಭವಿಗಳಿಗೆ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿಗಳ ಮೂಲಕವೇ ಹಣ ಸಂದಾಯ ಮಾಡಬೇಕು ಎನ್ನುವ ನಿಯಮವು ಜಾರಿಗೆ ಬಂದಿರುವುದರಿಂದ ಈ ಯೋಜನೆಯಡಿ ಪ್ರತಿ ತಿಂಗಳು ಬಿಡುಗಡೆ ಮಾಡುವ ಆರ್ಥಿಕ ನೆರವಿನ ವರ್ಗಾವಣೆಗೆ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಸಂಬಂಧಪಟ್ಟ ಇಲಾಖೆಯ ಮೂಲಕವೇ ಗೃಹಲಕ್ಷ್ಮಿ ಯೋಜನೆಯಡಿ ಎಲ್ಲಾ ಅರ್ಹ ಫಲಾನುಭವಿ ಮಹಿಳೆಯರಿಗೆ ಪ್ರತಿ ತಿಂಗಳು ರೂ 2,000/- ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತಿತ್ತು.

Gruhalakshmi New Applicationಹೊಸ ಅರ್ಜಿ ಸಲ್ಲಿಕೆಗೆ ಅವಕಾಶ:

ಗೃಹಲಕ್ಷ್ಮಿ ಯೋಜನೆಯಡಿ ಆರ್ಥಿಕ ನೆರವನ್ನು ಪಡೆಯಲು ಅರ್ಹರಿದ್ದು ಇಲ್ಲಿಯರವೆರೆಗೆ ಅರ್ಜಯನ್ನು ಸಲ್ಲಿಸದ ಅರ್ಹ ಫಲಾನುಭವಿಗಳಿಗೆ ಆನ್ಲೈನ್ ಮೂಲಕ ಅಗತ್ಯ ದಾಖಲಾತಿಗಳನ್ನು ಒದಗಿಸಿ ಅರ್ಜಿ ಸಲ್ಲಿಸಲು ಅವಕಾಶವಿದ್ದು ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ಗ್ರಾಮ್ ಒನ್/ಕರ್ನಾಟಕ ಒನ್ ಕೇಂದ್ರವನ್ನು ಭೇಟಿ ಮಾಡಿ.

ಇದನ್ನೂ ಓದಿ: PMFME Scheme-ಕಿರು ಆಹಾರ ಸಂಸ್ಕರಣ ಫಲಾನುಭವಿಗಳಿಗೆ 493 ಕೋಟಿ ರೂ. ಬಿಡುಗಡೆ!

Gruhalakshmi Status Check-ಗೃಹಲಕ್ಷ್ಮಿ ಹಣ ವರ್ಗಾವಣೆ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಪಡೆಯಿರಿ:

ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರು ತಮ್ಮ ಮೊಬೈಲ್ ನಲ್ಲೇ ಈ ಕೆಳಗಿನ ವಿಧಾನವನ್ನು ಅನುಸರಿಸಿ ಗೃಹಲಕ್ಷ್ಮಿ ಹಣ ವರ್ಗಾವಣೆ ವಿವರವನ್ನು ಕೇವಲ ಒಂದೆರಡು ಕ್ಲಿಕ್ ನಲ್ಲಿ ಮನೆಯಲ್ಲೇ ಕುಳಿರು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು.

Step-1: ಮೊದಲಿಗೆ ಇಲ್ಲಿ ಕ್ಲಿಕ್ Gruhalakshmi Status Check ಮಾಡಿ ಗೂಗಲ್ ಪ್ಲೈ ಸ್ಟೋರ್ ಅನ್ನು ಪ್ರವೇಶ ಮಾಡಿ DBT Karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

Gruhalakshmi status

Step-2: ನಂತರ ಅರ್ಜಿದಾರ ಮಹಿಳೆಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಮತ್ತು ಮೊಬೈಲ್ ನಂಬರ್ ಗೆ ಬರುವ ಒಟಿಪಿ ಅನ್ನು ನಮೂದಿಸಿದರೆ ಇಲ್ಲಿ ನಿಮ್ಮ ವೈಯಕ್ತಿಕ ವಿವರ ತೋರಿಸುತ್ತದೆ ಈ ವಿವರವನ್ನು ಒಮ್ಮೆ ಚೆಕ್ ಮಾಡಿ ಕೊನೆಯಲ್ಲಿ ಕಾಣುವ "ಸರಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಂಡು ಲಾಗಿನ್ ಬಟಲ್ ಮೇಲೆ ಕ್ಲಿಕ್ ಮಾಡಿ ಪಾಸ್ವರ್ಡ್ ಅನ್ನು ಹಾಕಿ ಲಾಗಿನ್ ಅಗಬೇಕು.

Step-3: ಲಾಗಿನ್ ಅದ ನಂತರ ಇಲ್ಲಿ ಮುಖಪುಟದಲ್ಲಿ "ಪಾವತಿ ಸ್ಥಿತಿ"ಬಟನ್ ಮೇಲೆ ಕ್ಲಿಕ್ ಮಾಡಿ "ಗೃಹಲಕ್ಷ್ಮಿ" ಎಂದು ಕಾಣುವ ಯೋಜನೆಯ ಬಟನ್ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಪ್ರತಿ ತಿಂಗಳು ಜಮಾ ಆಗಿರುವ ಹಣದ ಸಂಪೂರ್ಣ ವಿವರವನ್ನು ನೀವು ಇಲ್ಲಿ ಕಾಣಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: