PMFME Scheme-ಕಿರು ಆಹಾರ ಸಂಸ್ಕರಣ ಫಲಾನುಭವಿಗಳಿಗೆ 493 ಕೋಟಿ ರೂ. ಬಿಡುಗಡೆ!

July 6, 2025 | Siddesh
PMFME Scheme-ಕಿರು ಆಹಾರ ಸಂಸ್ಕರಣ ಫಲಾನುಭವಿಗಳಿಗೆ 493 ಕೋಟಿ ರೂ. ಬಿಡುಗಡೆ!
Share Now:

ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ(PMFME Scheme) ನಿಯಮಬದ್ದಗೊಳಿಸುವಿಕೆ ಯೋಜನೆಯಡಿ ರಾಜ್ಯದಲ್ಲಿ 11,910 ಕಿರು ಆಹಾರ ಸಂಸ್ಕರಣಾ ಉದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದು, 5 ವರ್ಷಗಳವರೆಗೆ ಇದಕ್ಕೆ ಒಟ್ಟು 493 ಕೋಟಿರೂ. ಬಿಡುಗಡೆಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಇಂದು ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ(PMFME) ನಿಯಮಬದ್ದಗೊಳಿಸುವಿಕೆ ಯೋಜನೆಯ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಕೆಪೆಕ್ ಕೃಷಿ ಇಲಾಖೆ ಅಧೀನದಲ್ಲಿರುವ ಒಂದು ಪ್ರತಿಷ್ಠಿತ ಅಂಗ ಸಂಸ್ಥೆಯಾಗಿದ್ದು, ಕೃಷಿಕರು, ಕೃಷಿಕರ ಮಕ್ಕಳನ್ನು, ಜನ ಸಾಮಾನ್ಯರನ್ನು ಕೃಷಿ ಉದ್ಯಮಿಗಳನ್ನಾಗಿ ಪರಿವರ್ತಿಸುವುದು ಇದರ ಗುರಿಯಾಗಿದೆ ಎಂದರು.

Scholarship-ಅಲ್ಪಸಂಖ್ಯಾತರ ಇಲಾಖೆಯಿಂದ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

ಪಿ.ಎಂ.ಎಫ್.ಎಂ.ಇ. ಯೋಜನೆಯು ಕೇಂದ್ರ ಪುರಸ್ಕøತ ಯೋಜನೆಯಾಗಿದ್ದು(PMFME Subsidy) ಅಸಂಘಟಿತ ವಲಯದಲ್ಲಿರುವ ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯು ವೈಯಕ್ತಿಕ ಆಹಾರ ಸಂಸ್ಕರಣಾ ಉದ್ಯಮಿಗಳು ಮತ್ತು ರೈತರ ಗುಂಪುಗಳು /ಎಫ್.ಪಿ.ಒ ಗಳಿಗೆ ಶೇ. 35 ರಷ್ಟು (60:40, ಅನುಪಾತ) ಸಬ್ಸಿಡಿಯನ್ನು ಒದಗಿಸುತ್ತದೆ. ಈ ಯೋಜನೆಯನ್ನು ರಾಜ್ಯದ ಫಲಾನುಭವಿಗಳಿಗೆ ಹೆಚ್ಚು ಆಕರ್ಷಕವಾಗಿಸಲು ಕರ್ನಾಟಕ ಸರ್ಕಾರವು ಶೇ.15 ರಷ್ಟು ಹೆಚ್ಚುವರಿ ಟಾಪ್ ಅಪ್ ಸಬ್ಸಿಡಿಯನ್ನು ಒದಗಿಸಿದೆ ಎಂದು ತಿಳಿಸಿದರು.

PMFME ಯೋಜನೆಯಡಿ 221 ಕೋಟಿ ಸಹಾಯಧನ ಬಿಡುಗಡೆ:

ಈ ಯೋಜನೆಯಡಿ ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ 20,051 ಅರ್ಜಿಗಳು ಸಲ್ಲಿಕೆಯಾಗಿದ್ದು, 6,698 ಅರ್ಜಿಗಳಿಗೆ ಸಾಲ ಮಂಜೂರಾಗಿರುತ್ತದೆ. ಇದಕ್ಕೆ ಒಟ್ಟು ರೂ. 785.48 ಕೋಟಿಯಷ್ಟು ಬಂಡವಾಳ ಕಿರು ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೂಡಿಕೆಯಾಗಿರುತ್ತದೆ. 162.50 ಕೋಟಿ ರೂಪಾಯಿಗಳ ಸಹಾಯಧನವನ್ನು (60:40 ಅನುಪಾತದೊಂದಿಗೆ ಶೇ.35 ರಷ್ಟು) 4,489 ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ. ಮತ್ತು ಹೆಚ್ಚುವರಿ ಶೇ.15 ರಷ್ಟು ಟಾಪ್ ಅಪ್ ಸಬ್ಸಿಡಿಯನ್ನು 59.48 ಕೋಟಿ ರೂಪಾಯಿಗಳನ್ನು 3770 ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದರು.

ಈ ಯೋಜನೆಯಡಿಯಲ್ಲಿ ಪ್ರಮುಖವಾಗಿ ಸಿರಿಧಾನ್ಯ ಸಂಸ್ಕರಣೆ, ಬೆಲ್ಲ, ನಿಂಬೆ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಲ್ಡ್ ಪ್ರೇಸ್ಡ್ ಆಯಿಲ್, ಮೆಣಸಿನಪುಡಿ, ಶುಂಠಿ ಸಂಸ್ಕರಣಾ ಘಟಕಗಳು, ಅನಾನಸ್ ಘಟಕಗಳು, ಮಸಾಲಾ ಉತ್ಪನ್ನಗಳ ಘಟಕಗಳು, ತೆಂಗಿನ ಉತ್ಪನ್ನಗಳು, ಕೋಳಿ ಮತ್ತು ಸಮುದ್ರ ಉತ್ಪನ್ನಗಳ ಸಂಸ್ಕರಣಾ ಘಟಕಗಳ ಸ್ಥಾಪನೆ, ರೊಟ್ಟಿ, ಉಪ್ಪಿನಕಾಯಿ, ಹಪ್ಪಳ ಘಟಕಗಳ ಸ್ಥಾಪನೆಗಾಗಿ ಸಾಲವನ್ನು ಮಂಜೂರು ಮಾಡಲಾಗಿದೆ.

ಆಹಾರ ಸಂಸ್ಕರಣೆಯಲ್ಲಿ ತೊಡಗಿರುವ ಸ್ವ-ಸಹಾಯ ಸಂಘದ 11825 ಸದಸ್ಯರಿಗೆ 46.58 ಕೋಟಿಯಷ್ಟು ಬೀಜ ಬಂಡವಾಳದ ಬೆಂಬಲವನ್ನು ಸಣ್ಣ ಉಪಕರಣಗಳನ್ನು ಖರೀದಿಸಲು ಮತ್ತು ಕಾರ್ಯನಿರತ ಬಂಡವಾಳಕ್ಕಾಗಿ ಬಿಡುಗಡೆ ಮಾಡಲಾಗಿದೆ.

Karnataka PMFME Scheme Brands-ರಾಜ್ಯದಲ್ಲಿ 5 ಬ್ರ್ಯಾಂಡ್ ಗಳನ್ನು ಮುನ್ನೆಲೆಗೆ ತರಲಾಗಿದೆ:

5 ಬ್ರ್ಯಾಂಡಿಂಗ್ ಮಾರ್ಕೆಟಿಂಗ್ ಪ್ರಸ್ತಾವನೆಗಳಾದ ಕರ್ನಾಟಕ ರಾಜ್ಯ ದ್ವಿದಳಧಾನ್ಯಗಳ ಅಭಿವೃದ್ಧಿ ಮಂಡಳಿಯಿಂದ ಸಲ್ಲಿಸಲಾದ (ಬ್ರ್ಯಾಂಡ್-1) ‘BHIMA’ ಪಲ್ಸಸ್ ಬ್ರ್ಯಾಂಡ್, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಸಾವಯವ ಕೃಷಿಕರ ಸಹಕಾರ ಒಕ್ಕೂಟದಿಂದ (ಬ್ರಾಂಡ್-2) ‘SEEMI’ ಬ್ರಾಂಡ್, ಕಾಫಿ ಬೋರ್ಡನ (ಬ್ರಾಂಡ್-3) ಇಂಡಿಯಾಕಾಫಿ ಬ್ರಾಂಡ್, (ಬ್ರಾಂಡ್-4) K.O.F.C "ಸಫಲ್" ಬ್ರಾಂಡ್, ನೆಲಸಿರಿ ಫಾರ್ಮ ಪ್ರೋಡ್ಯೂಸರ್ ಕಂಪನಿ ಸಲ್ಲಿಸಿದ (ಬ್ರಾಂಡ್-5) ನೆಲಸಿರಿ ಬ್ರ್ಯಾಂಡ್ ಗಳನ್ನು ಕರ್ನಾಟಕಕ್ಕೆ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ ಅನುಮೋದಿಸಿದೆ.

Incubation Centre In Karnataka- 14 ಇನ್ಕ್ಯುಬೇಶನ್ ಕೇಂದ್ರ ಮಂಜೂರು:

ಪಿ.ಎಂ.ಎಫ್.ಎಂ.ಇ. ಯೋಜನೆಯಡಿಯಲ್ಲಿ ರೂ. 12.79 ಕೋಟಿ ಯೋಜನಾ ವೆಚ್ಚದೊಂದಿಗೆ ಮಂಡ್ಯ, ದಾವಣಗೆರೆ, ಬೆಳಗಾವಿ, ಉತ್ತರ ಕನ್ನಡದಲ್ಲಿ 4 ಸಾಮಾನ್ಯ ಮೂಲಭೂತ ಸೌಕರ್ಯಗಳ ಘಟಕಗಳನ್ನು ಸ್ಥಾಪಿಸಲಾಗಿದೆ. 14 ಇನ್ಕ್ಯುಬೇಶನ್ ಕೇಂದ್ರಗಳನ್ನು ಕೃಷಿ / ತೋಟಗಾರಿಕೆ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಮಂಜೂರು ಮಾಡಲಾಗಿದೆ. ದೇಶದಲ್ಲೇ ಅತಿ ಹೆಚ್ಚು ಇನ್ಕ್ಯುಬೇಶನ್ ಕೇಂದ್ರಗಳನ್ನು ಆಹಾರ ಸಂಸ್ಕರಣಾ ಮಂತ್ರಾಲಯವು ಕರ್ನಾಟಕ ರಾಜ್ಯಕ್ಕೆ ಮಂಜೂರು ಮಾಡಿದೆ ಎಂದರು.

ರಾಜ್ಯದ ವಿಜಯಪುರ ಮತ್ತು ಕುಷ್ಟಗಿಯಲ್ಲಿ ಹಾಗೂ ಬೀದರ್‍ನ ಹುಮನಾಬಾದ್ ನಲ್ಲಿ ದ್ರಾಕ್ಷಿ, ದಾಳಿಂಬೆ, ನಿಂಬೆ ತೋಟಗಾರಿಕೆ ಸಂಸ್ಕರಣೆ ಹಾಗೂ ರಫ್ತಿನ ಅನುಕೂಲಕ್ಕೋಸ್ಕರ ಸಮಗ್ರ ಶೀತಲ ಸರಪಳಿ ಘಟಕಗಳು ಕಾರ್ಯಾಚರಣೆಯಲ್ಲಿವೆ. ವಿಜಯಪುರದಲ್ಲಿ ರೈತರು ಸಂಸ್ಕರಿಸಿದ ಒಣ ದ್ರಾಕ್ಷಿ ಹಾಗೂ ಇತರೇ ಕೃಷಿ / ತೋಟಗಾರಿಕೆ ಉತ್ಪನ್ನಗಳ ಶೇಖರಣೆಗೆ ಸುಮಾರು 4000 ಮೆಟ್ರಿಕ್ ಟನ್ ಸಾರ್ಮಥ್ಯದ ಶೀತಲಗೃಹ ಕಾರ್ಯಾಚರಣೆಯಲ್ಲಿದ್ದು, ಹುಬ್ಬಳ್ಳಿಯ ಎ.ಪಿ.ಎಂ.ಸಿ ಆವರಣದಲ್ಲಿ ಸುಮಾರು 6,000 ಮೆಟ್ರಿಕ್ ಟನ್ ಸಾರ್ಮಥ್ಯದ ಗೋದಾಮು ಕಾರ್ಯಚರಣೆಗೆ ಸಿದ್ಧವಾಗಿದೆ ಎಂದು ತಿಳಿಸಿದರು.

PMFME ಯೋಜನೆಯಡಿ ಪ್ರಯೋಜನ ಪಡೆಯುವುದು ಹೇಗೆ?

ಸಹಾಯಧನದಲ್ಲಿ ಆಹಾರ ಸಂಸ್ಕರಣ ಘಟಕವನ್ನು ಆರಂಭಿಸಲು ಯೋಜನೆಯನ್ನು ಹೊಂದಿರುವ ರೈತರು ಈ ಯೋಜನೆಯಡಿ ಶೇ 50% ಹಾಗೂ ಗರಿಷ್ಠ 15 ಲಕ್ಷದವರೆಗೆ ಆರ್ಥಿಕ ನೆರವನ್ನು ಪಡೆಯಲು ಅವಕಾಶವಿದ್ದು ಈ ಯೋಜನೆಯ ಪ್ರಯೋಜನವನ್ನು ಪಡೆಯಲು ನಿಮ್ಮ ಜಿಲ್ಲೆಯ ಕೃಷಿ ಇಲಾಖೆಯನ್ನು ಭೇಟಿ ಮಾಡಿ ಈ ಯೋಜನೆಗೆ ಸಂಬಂಧಪಟ್ಟ ಆಹಾರ ಸಂಸ್ಕರಣ DRP ಅವರ ನೆರವನ್ನು ಪಡೆದು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದು.

For More Information-ಹೆಚ್ಚಿನ ಮಾಹಿತಿಗಾಗಿ:

ಯೋಜನೆಯ ಕೇಂದ್ರದ ಅಧಿಕೃತ ವೆಬ್ಸೈಟ್ ಲಿಂಕ್-Click Here
ರಾಜ್ಯದ ವೆಬ್ಸೈಟ್ ಲಿಂಕ್-Click Here

WhatsApp Group Join Now
Telegram Group Join Now
Share Now: