Ration card news-ತುರ್ತು ರೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಒಂದು ದಿನ ಅವಕಾಶ!

January 19, 2024 | Siddesh

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ರ‍ೇಷನ್ ಕಾರ್ಡ(Ration card) ಹೊಂದಿರುವ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದು ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಒಂದು ದಿನ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಗ್ರಾಹಕರು ಎಲ್ಲಿ ಅರ್ಜಿ ಸಲ್ಲಿಸಬೇಕು? ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಈ ಮಾಹಿತಿಯನ್ನು ತುರ್ತು ವೈದ್ಯಕೀಯ ಕಾರಣಗಳಿಗೆ ರೇಷನ್ ಕಾರ್ಡ ತಿದ್ದುಪಡಿ ಮಾಡಿಕೊಳ್ಳುಲು ಅವಶ್ಯವಿರುವ ಗ್ರಾಹಕರಿಗೆ ತಲುಪುವವರೆಗೆ ಶೇರ್ ಮಾಡಿ.

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ರ‍ೇಷನ್ ಕಾರ್ಡ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಕೇವಲ ಇಂದು ಒಂದು ದಿನ ಮಾತ್ರ ಗ್ರಾಮ ಒನ್(Grana one) ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಇದನ್ನೂ ಓದಿ: PM-kisan: ಪಿ ಎಂ ಕಿಸಾನ್ ಯೋಜನೆಯಡಿ ಎಷ್ಟು ಹಣ ಬಂದಿದೆ ಎಂದು ತಿಳಿಯಲು ಇಲ್ಲಿದೆ ಡೈರೆಕ್ಟ್ ಲಿಂಕ್!

Ration card application-ತುರ್ತು ವೈದ್ಯಕೀಯ ಕಾರಣಗಳಿಗೆ ರೇಷನ್ ಕಾರ್ಡ ತಿದ್ದುಪಡಿ ಮಾಡಿಸಿಕೊಳ್ಳಲು ಈ ಒಂದು ದಿನ ಅವಕಾಶ:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯಿಂದ ಅನೇಕ ಜನರು ವೈದ್ಯಕೀಯ ಕಾರಣಗಳಿಗೆ ರೇಷನ್ ಕಾರ್ಡ ತಿದ್ದುಪಡಿ ಮಾಡಿಕೊಳ್ಳುವುದು ಇರುತ್ತದೆ ಎಂದು ಮನವಿ ಸಲ್ಲಿಸಿದ ಕಾರಣದಿಂದಾಗಿ ಇಂದು(17-07-2024) ಒಂದು ದಿನ ಮಾತ್ರ ಗ್ರಾಮ ಒನ್ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Ration card-ಇಂದು ಒಂದು ದಿನ ಅರ್ಜಿ ಸಲ್ಲಿಸಲು ಅವಕಾಶ:

ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಇಂದು ಅಂದರೆ 17-01-2024 ಒಂದು ದಿನ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಅದ್ದರಿಂದ ತುರ್ತು ಕಾರಣಗಳಿಗೆ ರೇಷನ್ ಕಾರ್ಡ ತಿದ್ದುಪಡಿ ಮಾಡಿಕೊಳ್ಳಲು ಅವಶ್ಯವಿರುವವರು ಕೂಡಲೇ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರವನ್ನು ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬವುದು.

ಇದನ್ನೂ ಓದಿ: DBT system information : ಸರ್ಕಾರದಿಂದ ಇಲ್ಲಿವರೆಗೂ ನಿಮಗೆ ಬಂದಿರುವ ಹಣ ಎಷ್ಟು ? ನೀವೇ ಪರೀಕ್ಷಿಸಿಕೊಳ್ಳಿ!

Documents required for ration card in karnataka-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

(1) ಬಿಪಿಎಲ್‌ ಕಾರ್ಡ ಗೆ ಸೇರುವವರು - ಅವರ ಆಧಾರ್‌ ಕಾರ್ಡ್‌ ಮತ್ತು 1,20,000/- ರೂ ಒಳಗಿನ ಆದಾಯ ಪ್ರಮಾಣ ಪತ್ರ ಮತ್ತು ಕಾರ್ಡ್‌ ನಲ್ಲಿರುವ ಒಬ್ಬ ಸದಸ್ಯರೊಂದಿಗೆ ಬರಬೇಕು.

(2) ಎಪಿಲ್‌ ಕಾರ್ಡ್ ಗೆ ಹೆಸರು ಸೇರಿಸಲು ಸೇರುವವರ ಆಧಾರ್‌ ಕಾರ್ಡ್‌ ಮತ್ತು ಲಿಂಕಿಂಗ್‌ ಇರುವ ಮೊಬೈಲ್‌ ಫೋನ್‌ ಬೇಕಾಗುತ್ತದೆ.

(3) ಕಾರ್ಡ್‌ ನಿಂದ ಹೆಸರು ತೆಗೆದುಹಾಕಲೂ ಕಾರ್ಡ್‌ನಲ್ಲಿರುವ ಸದಸ್ಯರೊಬ್ಬರು ಬರಬೇಕಾಗುತ್ತದೆ.

ಇದನ್ನೂ ಓದಿ: Ujjwala yojana 2.0 application-ಉಜ್ವಲ 2.0 ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ಪಡೆಯಲು ಅರ್ಜಿ ಆಹ್ವಾನ!

ಪ್ರಮುಖ ಉಪಯುಕ್ತ ಲಿಂಕ್ ಗಳು:

ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಅಧಿಕೃತ ವೆಬ್ಸೈಟ್: Click here

ರೇಷನ್ ಕಾರ್ಡ ಕುರಿತು ನಮ್ಮ ಪುಟದ ಇತರೆ ಉಪಯುಕ್ತ ಅಂಕಣಗಳು: Click here

Tags:
WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: