Nurse Assistant Training-10th ಪಾಸಾದವರಿಗೆ ಉದ್ಯೋಗ ಪಡೆಯಲು 6 ತಿಂಗಳ ಉಚಿತ ತರಬೇತಿಗೆ ಅರ್ಜಿ!

July 27, 2025 | Siddesh
Nurse Assistant Training-10th ಪಾಸಾದವರಿಗೆ ಉದ್ಯೋಗ ಪಡೆಯಲು 6 ತಿಂಗಳ ಉಚಿತ ತರಬೇತಿಗೆ ಅರ್ಜಿ!
Share Now:

ಪ್ರಸ್ತುತ ದಿನಗಳಲ್ಲಿ ಉದ್ಯೋಗವನ್ನು ಪಡೆಯಲು ಶಿಕ್ಷಣದ ಜೊತೆಗೆ ಕೌಶಲ್ಯವನ್ನು ಕಲಿತುಕೊಂಡರೆ ಮಾತ್ರ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಕ್ಷೇತ್ರದಲ್ಲಿ 10 ನೇ ತರಗತಿ ಪಾಸಾದ ಅಭ್ಯರ್ಥಿಗಳು ಉದ್ಯೋಗವನ್ನು ಪಡೆಯಲು ಉಚಿತವಾಗಿ ಜನರಲ್ ಡ್ಯೂಟಿ ಅಸಿಸ್ಟೆಂಟ್ (GDA) ತರಬೇತಿಗೆ ಪ್ರವೇಶ ಪಡೆಯಲು ಬೆಂಗಳೂರು ಅಪೋಲೊ ಮೆಡ್ ಸ್ಕಿಲ್ಸ್(Apollo Medskills)ವತಿಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಏನಿದು ಜನರಲ್ ಡ್ಯೂಟಿ ಅಸಿಸ್ಟೆಂಟ್(Nursing Assistant Training) ತರಬೇತಿ? ಈ ತರಬೇತಿಯನ್ನು ಪಡೆಯುವುದರಿಂದ ಅಭ್ಯರ್ಥಿಗಳಿಗೆ ಯಾವೆಲ್ಲ ಪ್ರಯೋಜನಗಳು ಸಿಗಲಿವೆ? ಉಚಿತ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಮಾಹಿತಿಯನ್ನು ತಿಳಿಸಲಾಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Mobile Repair Training-ಉಚಿತ ಸೇಲ್ ಪೋನ್ ರಿಪೇರಿ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

ಅಪೋಲೊ ಮೆಡ್ ಸ್ಕಿಲ್ಸ್ ವತಿಯಿಂದ ಈ ತರಬೇತಿಯನ್ನು(Nurse Assistant Training Application) ಆಯೋಜನೆ ಮಾಡಲಾಗುತ್ತಿದ್ದು ಬೆಂಗಳೂರು ನಗರವು ತಂತ್ರಜ್ಞಾನ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಭಾರತದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿ ಉದಯಿಸಿದೆ. ಈ ಸಂದರ್ಭದಲ್ಲಿ, ಯುವಕರು ಮತ್ತು ಯುವತಿಯರಿಗೆ ತಮ್ಮ ಭವಿಷ್ಯವನ್ನು ಆರೋಗ್ಯ ಕ್ಷೇತ್ರದಲ್ಲಿ ಕಟ್ಟಿಕೊಳ್ಳಲು ಒಂದು ಉತ್ತಮ ಅವಕಾಶ ಇದಾಗಿದ್ದು. ಅಪೋಲೊ ಮೆಡ್ಸ್ಕಿಲ್ಲ್ಸ್, ಜಿಗಣಿ, ಬೆಂಗಳೂರಿನಲ್ಲಿ 100% ಉಚಿತ ಜನರಲ್ ಡ್ಯೂಟಿ ಅಸಿಸ್ಟೆಂಟ್ (GDA) ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.

ಇದನ್ನೂ ಓದಿ: Bele Vime Amount-1449 ಕೋಟಿ ಬೆಳೆ ವಿಮೆ ರೈತರ ಖಾತೆಗೆ!ನಿಮಗೆ ಬಂತಾ ಚೆಕ್ ಮಾಡಿ!

Nurse Assistant Job Training-ತರಬೇತಿ ಕಾರ್ಯಕ್ರಮದ ವಿವರ:

ಜನರಲ್ ಡ್ಯೂಟಿ ಅಸಿಸ್ಟೆಂಟ್(GDA) ತರಬೇತಿ ಕಾರ್ಯಕ್ರಮವು ಒಟ್ಟು 6 ತಿಂಗಳ ಅವಧಿಯನ್ನು ಒಳಗೊಂಡಿದೆ, ಇದರಲ್ಲಿ ಮೊದಲ 3 ತಿಂಗಳು ಸಾಂಪ್ರದಾಯಿಕ ತರಬೇತಿ ಮತ್ತು ಉಳಿದ 3 ತಿಂಗಳು ಅನುಭವಾಧಾರಿತ ತರಬೇತಿ (On-the-Job Training - OJT) ಇರುತ್ತದೆ. ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ರೋಗಿಗಳ ಆರೈಕೆ, ಮೂಲಭೂತ ಔಷಧ ಸೇವೆ, ಸ್ವಚ್ಛತೆ ಕಾಪಾಡುವುದು ಮತ್ತು ಆಸ್ಪತ್ರೆಯ ಸಹಾಯಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ತರಬೇತಿ ನೀಡಲಾಗುತ್ತದೆ.

ಇದು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ.ತರಬೇತಿ ಸಮಯದಲ್ಲಿ ಉಚಿತ ವಸತಿ ಮತ್ತು ಉಚಿತ ಆಹಾರವನ್ನು ಒದಗಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಈ ತರಬೆತಿಯ ಪ್ರಯೋಜನವನ್ನು ಪಡೆಯಬಹುದು.

ಇದನ್ನೂ ಓದಿ: Ration Card-ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!ಯಾರೆಲ್ಲ ಅರ್ಜಿ ಸಲ್ಲಿಸಬಹುದು?

Nursing Assistant Training-ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಮಾಹಿತಿಯನ್ನು ತಿಳಿಸಲಾಗುತ್ತದೆ?

  • ರೋಗಿಗಳ ಪಾಲನೆ ಮತ್ತು ಸ್ವಚ್ಚತೆ.
  • ಸೋಂಕ್ ನಿಯಂತ್ರಣ ಮತ್ತು ವೈದ್ಯಕೀಯ ತ್ಯಾಜ್ಯ ನಿರ್ವಹಣೆ.
  • ವೈದ್ಯರು ಮತ್ತು ನರ್ಸ್ ಗಳಿಗೆ ಸಹಾಯ.
  • ಅಸ್ಪತ್ರೆ ಸುರಕ್ಷತೆ ಮತ್ತು ದಾಖಲೆ ನಿರ್ವಹಣೆ.

Who Can Apply-ತರಬೇತಿ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

  • ಅರ್ಜಿದಾರರ ವಯಸ್ಸು 18 ರಿಂದ 30 ವರ್ಷದ ಒಳಗಿರಬೇಕು.
  • ಗಂಡು ಮತ್ತು ಹೆಣ್ಣು ಮಕ್ಕಳು ಇಬ್ಬರಿಗೂ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  • ಅರ್ಜಿದಾರರ ಅಭ್ಯರ್ಥಿಯು ಕನಿಷ್ಟ 10ನೇ ತರಗತಿ ಉತ್ತೀರ್ಣರಾಗಿರಬೇಕು.
  • SC/ST ವರ್ಗದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Sainik Welfare Scholarship-ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ!

Nurse Assistant Training

ಇದನ್ನೂ ಓದಿ: Ginger Crop-ಶುಂಠಿಗೆ ಎಲೆಚುಕ್ಕೆ ಕಾಟ ರೈತರ ನೆರವಿಗೆ ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯ!

Nursing Assistant Training Duration-ತರಬೇತಿ ಅವಧಿ:

3 ತಿಂಗಳು ವಿಷಯ ಆಧಾರಿತ ತರಬೇತಿ ಮತ್ತು 3 ತಿಂಗಳು ಪ್ರಯೋಗಿಕ ತರಬೇತಿ ಇರುತ್ತದೆ ಒಟ್ಟು 6 ತಿಂಗಳ ತರಬೇತಿ ಇದಾಗಿರುತ್ತದೆ.

Free Training-ಸಂಪೂರ್ಣ ಉಚಿತ ತರಬೇತಿ:

ತರಬೇತಿಯನ್ನು ಪಡೆಯಲು ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತವಾಗಿ ವಸತಿ ಮತ್ತು ಊಟದ ವ್ಯವಸ್ಥೆಯನ್ನು ತರಬೇತಿ ಸಂಸ್ಥೆಯಿಂದಲೇ ಒದಗಿಸಲಾಗುತ್ತದೆ.

ಇದನ್ನೂ ಓದಿ: Karnataka Cabinet Decisions-ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಣಯ: ಸವದತ್ತಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ!

ಅಧಿಕೃತ ಪ್ರಮಾಣ ಪತ್ರ ವಿತರಣೆ:

ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಎಲ್ಲಾ ಅಭ್ಯರ್ಥಿಗಳಿಗೆ ತರಬೇತಿ ಕೇಂದ್ರದಿಂದ ಕರ್ನಾಟಕ ಸರ್ಕಾರ ನೀಡದ ರಾಷ್ಟ್ರೀಯ ಪ್ರಮಾಣ ಪತ್ರವನ್ನು(HSSC) ನೀಡಲಾಗುತ್ತದೆ.

How To Apply For Nursing Assistant Training-ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ತರಬೇತಿಯಲ್ಲಿ ಭಾಗವಹಿಸಲು ಈ ಲಿಂಕ್ "Apply Now" ಮೇಲೆ ಕ್ಲಿಕ್ ಮಾಡಿ ಗೂಗಲ್ ಪಾರ್ಮ್ ಅನ್ನು ಪ್ರವೇಶ ಮಾಡಿ ಅಗತ್ಯ ವಿವರವನ್ನು ಭರ್ತಿ ಮಾಡಿ ಮುಚಿತವಾಗಿ ತರಬೇತಿಯನ್ನು ಪಡೆಯಲು ನೋಂದಣಿಯನ್ನು ಮಾಡಿಕೊಳ್ಳಬೇಕು.

Nursing Assistant Training Benefits-ಉದ್ಯೋಗಾವಕಾಶಗಳು ಮತ್ತು ತರಬೇತಿ ಪ್ರಯೋಜನಗಳು:

ಈ ತರಬೇತಿ ಕಾರ್ಯಕ್ರಮದ ಮೂಲ ಉದ್ದೇಶವೆಂದರೆ ಯುವ ಜನರಿಗೆ ಉದ್ಯೋಗ ಭದ್ರತೆಯನ್ನು ಒದಗಿಸುವುದು. ತರಬೇತಿ ಪೂರ್ಣಗೊಂಡ ಮೇಲೆ, ಅಭ್ಯರ್ಥಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ನೇರ ಉದ್ಯೋಗಾವಕಾಶಗಳು ಲಭ್ಯವಾಗುತ್ತವೆ. ಇದಲ್ಲದೆ, ಕರ್ನಾಟಕ ಸರ್ಕಾರದ ರೆಫರೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ: Agriscience Scholarship-ಕೊರ್ಟೆವಾ ಅಗ್ರಿಸೈನ್ಸಸ್ ಸ್ಕಾಲರ್‌ಶಿಪ್ ಅರ್ಜಿ ಆಹ್ವಾನ! ₹35,000 ವಿದ್ಯಾರ್ಥಿವೇತನ!

ಈವರೆಗೆ ಹಲವು GDA ವಿದ್ಯಾರ್ಥಿಗಳು ಈ ತರಬೇತಿಯ ನಂತರ ಉದ್ಯೋಗ ಪಡೆದಿದ್ದಾರೆ, ಇದು ಈ ಕಾರ್ಯಕ್ರಮದ ಯಶಸ್ಸನ್ನು ಸಾಬೀತುಪಡಿಸುತ್ತದೆ. ತರಬೇತಿಯನ್ನು ಪೂರ್ಣಗೊಳಿಸಿದ ಬಳಿಕ ಅಭ್ಯರ್ಥಿಗಳಿಗೆ HSSC (Healthcare Sector Skill Council) ಪ್ರಮಾಣಪತ್ರ ಮತ್ತು ಕರ್ನಾಟಕ ಸರ್ಕಾರದ ಮಾನ್ಯತೆಯ ಪ್ರಮಾಣಪತ್ರ ನೀಡಲಾಗುತ್ತದೆ. ಈ ಪ್ರಮಾಣಪತ್ರಗಳು ಭವಿಷ್ಯದಲ್ಲಿ ಉದ್ಯೋಗ ಮತ್ತು ವಿದ್ಯಾಭ್ಯಾಸದಲ್ಲಿ ಮುಂದುವರಿಯಲು ಸಹಾಯ ಮಾಡುತ್ತವೆ.

For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಮೊಬೈಲ್ ಸಂಖ್ಯೆಗೆ 9480065416/ 9821819723 ಸಂಪರ್ಕಿಸಿ.

ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್-Apply Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: