PM Kisan 20th Installment-ರೈತರ ಖಾತೆಗೆ 20ನೇ ಕಂತಿನ ಪಿಎಂ ಕಿಸಾನ್ ಹಣ! ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ!

July 30, 2025 | Siddesh
PM Kisan 20th Installment-ರೈತರ ಖಾತೆಗೆ 20ನೇ ಕಂತಿನ ಪಿಎಂ ಕಿಸಾನ್ ಹಣ! ಮೊಬೈಲ್ ನಲ್ಲಿ ಸ್ಟೇಟಸ್ ಚೆಕ್ ಮಾಡಿ!
Share Now:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ(PM-Kisan)ಯೋಜನೆಯ 20ನೇ ಕಂತಿನ ಹಣ(PM Kisan 20th Installment) ಬಿಡುಗಡೆ ಕೇಂದ್ರ ಸರಕಾರವು ಅಧಿಕೃತ ದಿನಾಂಕವನ್ನು ಘೋಷಿಸಲಾಗಿದೆ. ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಕಿಸಾನ್ ಸಮ್ಮಾನ್ ಯೋಜನೆಯಡಿ ದೇಶಾದ್ಯಂತ ರೈತರಿಗೆ ವಾರ್ಷಿಕ 6,000 ರೂಪಾಯಿಗಳ ಆರ್ಥಿಕ ನೆರವನ್ನು(PM Kisan 20th Installment Date) ತಲಾ ರೂ 2,000/- ದಂತೆ ಮೂರು ಕಂತುಗಳಲ್ಲಿ ರೈತರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಈ ಆರ್ಥಿಕ ಸಹಾಯವು ರೈತರ ಕೃಷಿ ಚಟುವಟಿಕೆಗಳಿಗೆ ಅಂದರೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಬೆಂಬಲವನ್ನು ನೀಡಲು ಒದಗಿಸಲಾಗುತ್ತದೆ.

ಇದನ್ನೂ ಓದಿ: Fertilizer Shortage-ರಾಜ್ಯದಲ್ಲಿ ರಸಗೊಬ್ಬರ ಕೊರತೆ ಕೃಷಿ ಇಲಾಖೆಯಿಂದ ನೂತನ ಪ್ರಕಟಣೆ!

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಆರ್ಥಿಕ ನೆರವು ರೈತರ ಖಾತೆಗೆ ಯಾವ ದಿನ ಜಮಾ(PM Kisan 20th Installment official date) ಅಗಲಿದೆ? ರೈತರು ತಮ್ಮ ಮೊಬೈಲ್ ನಲ್ಲೇ ಪಿಎಂ ಕಿಸಾನ್ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ ಮತ್ತು ಈ ಯೋಜನೆಯಡಿ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿಯನ್ನು ಮೊಬೈಲ್ ನಲ್ಲೇ ನೋಡುವ ವಿಧಾನವನ್ನು ಈ ಕೆಳಗೆ ತಿಳಿಸಲಾಗಿದೆ.

PM Kisan 20th Installment Date-ರೈತರ ಖಾತೆಗೆ 20ನೇ ಕಂತಿನ ಪಿಎಂ ಕಿಸಾನ್ ಹಣ:

ಕೇಂದ್ರ ಸರಕಾರವತಿಯಿಂದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದಿನಾಂಕ 02 ಆಗಸ್ಟ್ 2025 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ದೇಶದ ಎಲ್ಲಾ ಫಲಾನುಭವಿ ರೈತರ ಖಾತೆ ನೇರ ನಗದು ವರ್ಗಾವಣೆ ಮೂಲಕ ಪಿಎಂ ಕಿಸಾನ್ ಹಣ ವರ್ಗಾವಣೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಎಂದು ಕಿಸಾನ್ ಸಮ್ಮಾನ್ ಎಕ್ಸ್/ಟ್ವಿಟರ್ ಖಾತೆ(PM Kisan X Account) ಕೇಂದ್ರದ ಕೃಷಿ ಮಂತ್ರಾಲಯದಿಂದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Kharif Crop Survey-ರೈತರೇ ಸ್ವಂತ ಬೆಳೆ ವಿವರ ದಾಖಲಿಸಲು ಅಪ್ಲಿಕೇಶನ್ ಬಿಡುಗಡೆ!

PM Kisan 20th Installment-ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ ದಿನಾಂಕದ ಪ್ರಕಟಣೆಯ ಅಧಿಕೃತ ಎಕ್ಸ್ ಪೋಸ್ಟ್:

ಇದನ್ನೂ ಓದಿ: Urea Usage-ಯೂರಿಯಾ ಬಳಕೆ ಮಾಡುವವರು ತಪ್ಪದೇ ಈ ಮಾಹಿತಿ ತಿಳಿಯಿರಿ!

PM Kisan Beneficiary List-2025: 20ನೇ ಕಂತಿನ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ಬಿಡುಗಡೆ:

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 20ನೇ ಕಂತಿನ ಹಣವನ್ನು ಪಡೆಯಲು ಅರ್ಹರಿರುವ ಪಟ್ಟಿಯನ್ನು ಕೇಂದ್ರ ಸರ್ಕಾರದ ಅಧಿಕೃತ www.pmkisan.gov.in ತಂತ್ರಾಂಶದಲ್ಲಿ ಈಗಾಗಲೇ ಬಿಡುಗಡೆ ಮಾಡಲಾಗಿದ್ದು ರೈತರು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಮನೆಯಲ್ಲೇ ಕುಳಿತು ಮೊಬೈಲ್ ನಲ್ಲಿ ನಿಮ್ಮ ಹಳ್ಳಿಯಲ್ಲಿ 20ನೇ ಕಂತಿನ ಹಣ ಪಡೆಯಲು ಅರ್ಹರಿರುವ ಪಟ್ಟಿ ನೋಡಬಹುದು.

Step-1: ರೈತರು ಮೊದಲಿಗೆ ಇಲ್ಲಿ ಕ್ಲಿಕ್ PM Kisan Beneficiary List ಮಾಡಿ ಅಧಿಕೃತ ಕೇಂದ್ರ ಸರಕಾರದ ಕೃಷಿ ಮಂತ್ರಾಲಯದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: PUC Admission-ಪ್ರಥಮ ಪಿಯುಸಿ ಪ್ರವೇಶಕ್ಕೆ ಜುಲೈ 31ರ ವರೆಗೆ ಅವಕಾಶ!

pm kisan

ಇದನ್ನೂ ಓದಿ: Nurse Assistant Training-10th ಪಾಸಾದವರಿಗೆ ಉದ್ಯೋಗ ಪಡೆಯಲು 6 ತಿಂಗಳ ಉಚಿತ ತರಬೇತಿಗೆ ಅರ್ಜಿ!

Step-2: ಅಧಿಕೃತ ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಅರ್ಹರಿರುವ ರೈತರ ಪಟ್ಟಿ ತೋರಿಸುವ ವಿಭಾಗವನ್ನು ಭೇಟಿ ಮಾಡಿದ ಬಳಿಕ ಈ ಪೇಜ್ ನಲ್ಲಿ ನಿಮ್ಮ ರಾಜ್ಯ/State , ಜಿಲ್ಲೆ/District , ತಾಲ್ಲೂಕು/Sub-District , Block , ಹಳ್ಳಿ/Village ಹೆಸರನ್ನು ಸೆಲೆಕ್ಟ್ ಮಾಡಿ "Get Report" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ 20ನೇ ಕಂತಿನ ಹಣ ಪಡೆಯಲು ಅರ್ಹರಿರುವ ಪಟ್ಟಿ ತೆರೆದುಕೊಳ್ಳುತ್ತದೆ ಒಮ್ಮೆ ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಿ.

PM Kisan Status Check-ಹಣ ಜಮಾ ವಿವರವನ್ನು ನಿಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿ:

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮಾ ಅಗಿದೆ ಮತ್ತು 20ನೇ ಕಂತಿನ ಹಣ ಜಮಾ ವಿವರವನ್ನು ಈ ಕೆಳಗಿನ ವಿಧಾನವನ್ನು ಅನುಸರಿಸಿ ರೈತರು ತಮ್ಮ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಲು ಅವಕಾಶವಿರುತ್ತದೆ.

Step-1: ಪ್ರಥಮ ಹಂತದಲ್ಲಿ ರೈತರು PM Kisan Status Check ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಕೃಷಿ ಮಂತ್ರಾಲಯದ ಪಿಎಂ ಕಿಸಾನ್ ವೆಬ್ಸೈಟ್ ಅನ್ನು ಭೇಟಿ ಮಾಡಿ.

Step-2: ತದನಂತರ ಈ ವೆಬ್ ಪೇಜ್ ನಲ್ಲಿ ನಿಮ್ಮ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಅನ್ನು ಹಾಕಿ ಪಕ್ಕದಲ್ಲಿ ತೋರಿಸುವ ಕ್ಯಾಪ್ಚ್ ಕೋಡ್ ಅನ್ನು ಹಾಕಿ "Get OTP" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ನಂತರ ನಿಮ್ಮ ಮೊಬೈಲ್ ನಂಬರ್ ಗೆ ಕಳುಹಿಸುವOTP ಅನ್ನು "Enter OTP" ವಿಭಾಗದಲ್ಲಿ ನಮೂದಿಸಿ "Get Data" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಇಲ್ಲಿಯವರೆಗೆ ಈ ಯೋಜನೆಯಡಿ ಕಂತಿನವಾರು ಬಿಡುಗಡೆ ಅಗಿರುವ ಪಿಎಂ ಕಿಸಾನ್ ಯೋಜನೆಯ ಹಣದ ಜಮಾ ವಿವರ ಕಾಣಿಸುತ್ತದೆ. ಇಲ್ಲಿ ಹಣ ಜಮಾ ದಿನಾಂಕ,UTR Details,ಇನ್ನಿತರೆ ಬ್ಯಾಂಕ್ ವಿವರವನ್ನು ಇಲ್ಲಿ ಕಾಣಬಹುದು.

ಇದನ್ನೂ ಓದಿ: Mobile Repair Training-ಉಚಿತ ಸೇಲ್ ಪೋನ್ ರಿಪೇರಿ ತರಬೇತಿ! ಈಗಲೇ ಅರ್ಜಿ ಸಲ್ಲಿಸಿ!

pm kisan 20th Installment

ಇದನ್ನೂ ಓದಿ: Ration Card-ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!ಯಾರೆಲ್ಲ ಅರ್ಜಿ ಸಲ್ಲಿಸಬಹುದು?

PM Kisan Application Number-ರಿಜಿಸ್ಟ್ರೇಷನ್ ನಂಬರ್ ಪಡೆಯುವುದು ಹೇಗೆ?

ರೈತರು ಈ ಮೇಲೆ ವಿವರಿಸುವ ಹಂತವನ್ನು ಅನುಸರಿಸಿ ಪಿಎಂ ಕಿಸಾನ್ ಹಣ ಜಮಾ ವಿವರವನ್ನು ಪಡೆಯಲು ರಿಜಿಸ್ಟ್ರೇಷನ್ ನಂಬರ್ ಅನ್ನು ಹೊಂದಿರಬೇಕಾಗುತ್ತದೆ ಇದಕ್ಕಾಗಿ ರಿಜಿಸ್ಟ್ರೇಷನ್ ನಂಬರ್ ಅನ್ನು ಪಡೆಯಲು ಈ ಕೆಳಗಿನ ವಿಧಾನವನ್ನು ಅನುಸರಿಸಿ.

Step-1: "PM Kisan Registration Number" ಈ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿ ಎಂ ಕಿಸಾನ್ "Know Your Registration Number" ವೆಬ್ ಪೇಜ್ ತೆರೆದುಕೊಳುತ್ತದೆ.

Step-2: ನಂತರ ಈ ಪೇಜ್ ನಲ್ಲಿ ಅರ್ಜಿದಾರರ ಮೊಬೈಲ್ ನಂಬರ್ ಮತ್ತು ಪಕ್ಕದಲ್ಲಿ ತೋರಿಸುವ ಕ್ಯಾಪ್ಚ್ ಕೋಡ್ ನಮೂದಿಸಿ "Get Mobile OTP" ಬಟನ್ ಮೇಲೆ ಕ್ಲಿಕ್ ಮಾಡಿ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ Get Data ಬಟನ್ ಮೇಲ್ ಕ್ಲಿಕ್ ಮಾಡಿದರೆ ನಿಮ್ಮ ಪಿಎಂ ಕಿಸಾನ್ ಅರ್ಜಿಯ ರಿಜಿಸ್ಟ್ರೇಷನ್ ನಂಬರ್ ಕಾಣಿಸುತ್ತದೆ. ಈ ನಂಬರ್ ಅನ್ನು ಒಂದು ಕಡೆ ನಮೂದಿಸಿಕೊಂಡು ಪಿಎಂ ಕಿಸಾನ್ ಹಣದ ಜಮಾ ವಿವರವನ್ನು ಚೆಕ್ ಮಾಡಿಕೊಳ್ಳಬಹುದು.

PM Kisan Website-ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ವೆಬ್ಸೈಟ್-Click Here
PM Kisan X Account-ಕಿಸಾನ್ ಸಮ್ಮಾನ್ ಎಕ್ಸ್/ಟ್ವಿಟರ್ ಖಾತೆ-Follow Now
PM Kisan Helpline-ಟೋಲ್-ಫ್ರೀ ಸಹಾಯವಾಣಿ ನಂಬರ್ 155261 ಮತ್ತು 1800-115-526

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: