Agniveer SSR Recruitment- ಭಾರತೀಯ ನೇವಿಯಲ್ಲಿ ಅಗ್ನಿ ವೀರರ ನೇಮಕಾತಿ! PUC ಪಾಸಾದವರಿಗೆ ಅವಕಾಶ.

ಭಾರತೀಯ ರಕ್ಷಣಾ ಪಡೆಗಳಲ್ಲಿ ಒಂದಾದ ನೌಕಾಪಡೆಯಲ್ಲಿ (Indian Navy) ಖಾಲಿ ಇರುವ ಅಗ್ನಿ ವೀರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಕುರಿತು ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು ಎಲ್ಲಾ ಅರ್ಹ ಅಭ್ಯರ್ಥಿಗಳು ಸದುಪಯೋಗಪಡೆಸಿಕೊಳ್ಳಿ.

Agniveer SSR Recruitment- ಭಾರತೀಯ ನೇವಿಯಲ್ಲಿ ಅಗ್ನಿ ವೀರರ ನೇಮಕಾತಿ! PUC ಪಾಸಾದವರಿಗೆ ಅವಕಾಶ.
Agniveer SSR Recruitment-2024

ಭಾರತೀಯ ರಕ್ಷಣಾ ಪಡೆಗಳಲ್ಲಿ ಒಂದಾದ ನೌಕಾಪಡೆಯಲ್ಲಿ (Indian Navy) ಖಾಲಿ ಇರುವ ಅಗ್ನಿ ವೀರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಕುರಿತು ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದ್ದು ಎಲ್ಲಾ ಅರ್ಹ ಅಭ್ಯರ್ಥಿಗಳು ಸದುಪಯೋಗಪಡೆಸಿಕೊಳ್ಳಿ.

Indian Navy Agniveer SSR Recruitment 2024 - ರಕ್ಷಣಾ ಪಡೆಯ ಹೊಸ ನೇಮಕಾತಿ ನಿಯಮಗಳ ಪ್ರಕಾರ ಪಿಯುಸಿ ಮುಗಿಸದವರನ್ನು ನಾಲ್ಕು ವರ್ಷದ ಅವಧಿಗೆ ಅಗ್ನಿವೀರರ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದವರಿಗೆ ಪದವಿಯ ಜೊತೆಗೆ ದೇಶ ರಕ್ಷಣಾ ಸೇವೆಯನ್ನು ಸಲ್ಲಿಸಲು ಅವಕಾಶವಿದೆ. 

ಈ ನೇಮಕಾತಿಗೆ 13ನೇ ಮೇ, 2024 ರಿಂದ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಆರಂಭವಾಗಲಿದೆ. ಅರ್ಜಿ ಸಲ್ಲಿಸಲೇಬೇಕಾದ ಶೈಕ್ಷಣಿಕ ಅರ್ಹತೆಗಳ ವಿವರ, ವಯೋಮಿತಿ ಮಾನದಂಡ ವಿವರ, ನೇಮಕಾತಿ ವಿವರವನ್ನು ಇಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ. ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ.

ಇದನ್ನೂ ಓದಿ: KRCL Recruitment 2024 - ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ!

ನೇಮಕಾತಿ ವಿವರ : Recruitment details 

• ನೇಮಕಾತಿ ಹುದ್ದೆಗಳ ಸಂಖ್ಯೆ - 300
• ಹುದ್ದೆಗಳ ಹೆಸರು - ಅಗ್ನಿವೀರ (ನೌಕಾಪಡೆ)
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ - 27 ಮೇ 2024

 ಅರ್ಜಿ ಸಲ್ಲಿಸಲು ಪ್ರಮುಖ ದಿನಗಳು - Important Dates

• ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗುವ ದಿನಾಂಕ - 13 ಮೇ 2024
• ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯಗೊಳ್ಳುವ ದಿನಾಂಕ - 27 ಮೇ 2024

ಶೈಕ್ಷಣಿಕ ಅರ್ಹತೆ - ಭಾರತೀಯ ನೌಕಾಪಡೆಯಲ್ಲಿ ನೇಮಕಾತಿ ನಡೆಯುತ್ತಿರುವ ಅಗ್ನಿವೀರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ವಿಜ್ಞಾನ (PUC Science), ಗಣಿತ(Mathematics) ಹಾಗೂ ಭೌತಶಾಸ್ತ್ರ (Physics) ವಿಷಯಗಳಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದು ಪಾಸ್ ಆಗಿರಬೇಕು. 

ಇದನ್ನೂ ಓದಿ: District Court Jobs 2024- SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗವಕಾಶ!

ಅಥವಾ 

ಅಧಿಸೂಚನೆಯಲ್ಲಿ ತಿಳಿಸಿರುವಂತೆ ಸಂಬಂಧಪಟ್ಟ ವಿಭಾಗಗಳಲ್ಲಿ 3 ವರ್ಷಗಳ ಡಿಪ್ಲೋಮಾ ಇನ್ ಇಂಜಿನಿಯರಿಂಗ್ ಪದವಿ ಮುಗಿಸಿದವರು ಕೂಡ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ವಯೋಮಿತಿ ಮಾನದಂಡ / Age limit to Apply:

Indian Navy Agniveer SSR Recruitment 2024 - ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 1 ನವೆಂಬರ್ 2003 ರಿಂದ 30 ಏಪ್ರಿಲ್ 2007ರ ಅವಧಿಯ ಒಳಗೆ ಜನಿಸಿರುವಂತಹ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

Monthly salary / ಮಾಸಿಕ ವೇತನ ಶ್ರೇಣಿ - 

ಅಗ್ನಿವೀರರಾಗಿ ಆಯ್ಕೆಯಾದ ಅಭ್ಯರ್ಥಿಗಳು ನಾಲ್ಕು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವಾಗ, ಮೊದಲ ವರ್ಷದಲ್ಲಿ ಮಾಸಿಕ 30,000ರೂ. ಸಂಬಳವನ್ನು ನೀಡಲಾಗುತ್ತದೆ. ಎರಡನೇ ವರ್ಷದ ಅವಧಿಯಲ್ಲಿ ಮಾಸಿಕ 33,000/- ರೂ. ನೀಡಲಾಗುತ್ತದೆ. ತದನಂತರ 3ನೇ ವರ್ಷದ ಅವಧಿಯಲ್ಲಿ 36,500/- ರೂ. ಹಾಗೂ 4ನೇ ವರ್ಷದ ಅವಧಿಯಲ್ಲಿ ಮಾಸಿಕ 40,000/- ರೂ. ಮಾಸಿಕ ವೇತನವನ್ನು ನೀಡಲಾಗುತ್ತದೆ.

ಇದನ್ನೂ ಓದಿ: Adhar bara parihara status-ನಿಮ್ಮ ಆಧಾರ್ ನಂಬರ್ ಹಾಕಿ ಬರ ಪರಿಹಾರದ ಸಂಪೂರ್ಣ ವಿವರ ಪಡೆಯಿರಿ!

Application fee-ಅರ್ಜಿ ಶುಲ್ಕ: 

ಈ ನೇಮಕಾತಿಗೆ ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ₹550/- ಯನ್ನು ಆನ್ಲೈನ್ ಮುಖಾಂತರ ಪಾವತಿಸಬೇಕು.

ಅವಶ್ಯಕ ಲಿಂಕ್ ಗಳು - Indian Navy Agniveer SSR Recruitment 2024 

• ಅರ್ಜಿ ಸಲ್ಲಿಸುವ ಲಿಂಕ್ - Click here

• ಅಧಿಕೃತ ಪೋರ್ಟಲ್ ಲಿಂಕ್ - Click here

• ಅಧಿಸೂಚನೆ - Download 

ಇದನ್ನೂ ಓದಿ: Parihara bank details-ಬರ ಪರಿಹಾರ ಯಾವ ಬ್ಯಾಂಕ್ ಖಾತೆಗೆ ಜಮಾ ಅಗಿದೆ? ಎಂದು ತಿಳಿಯಲು ಇಲ್ಲಿದೆ ವೆಬ್ಸೈಟ್ ಲಿಂಕ್!