Annabhagya August amount: ಅನ್ನಭಾಗ್ಯ ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.

Annabhagya August amount: ಅನ್ನಭಾಗ್ಯ ಯೋಜನಯಡಿ ಆಗಸ್ಟ್ ತಿಂಗಳ 5 ಕೆಜಿ ಅಕ್ಕಿಯ ಬದಲು ಹಣವನ್ನು ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಆಹಾರ ಇಲಾಖೆಯಿಂದ ಪ್ರಾರಂಭಿಸಲಾಗಿದೆ. ಈ ಕೆಳಗೆ ನೀಡಿರುವ ಆಹಾರ ಇಲಾಖೆಯ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ಗ್ರಾಹಕರು ನಿಮಗೆ ಎಷ್ಟು ಹಣ ಜಮಾ ಅಗಲಿದೆ ಮತ್ತು ವರ್ಗಾವಣೆ ಪ್ರಕ್ರಿಯೆ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ಪಡೆಯಬವುದು.

Annabhagya August amount: ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಪ್ರಾರಂಭ! ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡಿ.
Annabhagya august amount status check

ಅನ್ನಭಾಗ್ಯ  ಯೋಜನಯಡಿ ಆಗಸ್ಟ್ ತಿಂಗಳ 5 ಕೆಜಿ ಅಕ್ಕಿಯ ಬದಲು ಹಣವನ್ನು(Annabhagya August amount) ಪಡಿತರ ಚೀಟಿಯ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಆಹಾರ ಇಲಾಖೆಯಿಂದ ಪ್ರಾರಂಭಿಸಲಾಗಿದೆ. ಈ ಕೆಳಗೆ ನೀಡಿರುವ ಆಹಾರ ಇಲಾಖೆಯ ಜಾಲತಾಣದ ಲಿಂಕ್ ಮೇಲೆ ಕ್ಲಿಕ್ ಮಾಡಿ ಗ್ರಾಹಕರು ನಿಮಗೆ ಎಷ್ಟು ಹಣ ಜಮಾ ಅಗಲಿದೆ ಮತ್ತು ವರ್ಗಾವಣೆ ಪ್ರಕ್ರಿಯೆ ಯಾವ ಹಂತದಲ್ಲಿದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬವುದಾಗಿದೆ.

ರಾಜ್ಯ ಸರಕಾರದಿಂದ ಅನ್ನಭಾಗ್ಯ ಯೋಜನೆಯಡಿ ಈ ಹಿಂದಿನ ತಿಂಗಳಿಂದ 5 ಕೆಜಿ ಹೆಚ್ಚುವರಿ ಅಕ್ಕಿ ವಿತರಣೆ ಬದಲು ಪ್ರತಿ ಸದಸ್ಯರಿಗೆ 170 ರೂ ರಂತೆ ಅರ್ಥಿಕ ಸಹಾಯಧನವನ್ನು ರೇಷನ್ ಕಾರ್ಡ ಮುಖ್ಯಸ್ಥರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡಲಾಗಿತ್ತು, ಇದೇ ಮಾದರಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಡಿಬಿಟಿ ಮೂಲಕ ಹಣ ವರ್ಗಾವಣೆ ಮಾಡುವ ಕಾರ್ಯವನ್ನು ಪ್ರಾರಂಭಿಸಲಾಗಿದೆ.

ಈಗಾಗಲೇ ನ್ಯಾಯಬೆಲೆ ಅಂಗಡಿಗಳಲ್ಲಿ ಈ ತಿಂಗಳಿನ ಅಕ್ಕಿ ಮತ್ತು ಇತರೆ ಧಾನ್ಯಗಳ ವಿತರಣೆ ಮಾಡಲಾಗುತ್ತಿದ್ದು ಉಳಿದಂತೆ ಈ ಯೋಜನೆಯಡಿ ಅರ್ಥಿಕ ನೆರವಿನ ಹಣವನ್ನು ಜಿಲ್ಲಾವಾರು ಹಂತ ಹಂತವಾಗಿ ಫಲಾನುಭವಿಗಳ ಖಾತೆಗೆ ಆಹಾರ ಇಲಾಖೆಯಿಂದ ವರ್ಗಾವಣೆ ಮಾಡಲಾಗುತ್ತದೆ.

ಇದನ್ನೂ ಓದಿ: Ration card adhar link: ರೇಷನ್ ಕಾರ್ಡಗೆ ಆಧಾರ್ ಕಾರ್ಡ ಲಿಂಕ್ ಮಾಡಲು ವೆಬ್ಸೈಟ್ ಲಿಂಕ್.

Annabhagya amount status check- ಅನ್ನಭಾಗ್ಯ  ಆಗಸ್ಟ್ ತಿಂಗಳ ಹಣ ವರ್ಗಾವಣೆ ಕುರಿತು ಚೆಕ್ ಮಾಡುವುದು ಹೇಗೆ: 

Step-1: ಮೊದಲಿಗೆ ಈ ಲಿಂಕ್ https://ahara.kar.nic.in/lpg/ ಮೇಲೆ ಕ್ಲಿಕ್ ಮಾಡಿ ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಬೇಕು. ತದನಂತರ ನಿಮ್ಮ ಜಿಲ್ಲೆಯ ಹೆಸರಿರುವ ವಿಭಾಗದ ಲಿಂಕ್ ಮೇಲೆ ಕ್ಲಿಕ್ ಮಾಡಿರಿ.

Step-2: ಈ ಪುಟದಲ್ಲಿ "ನೇರ ನಗದು ವರ್ಗಾವಣೆಯ ಸ್ಥಿತಿ(DBT)" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು, ನಂತರ "select month" ಕಾಲಂ ನಲ್ಲಿ "August" ಎಂದು ಆಯ್ಕೆ ಮಾಡಿಕೊಂಡು ಕೆಳಗಿನ ಕಾಲಂ ನಲ್ಲಿ ನಿಮ್ಮ ರೇಷನ್ ಕಾರ್ಡನ ನಂಬರ್ ಅನ್ನು ಹಾಕಿ ಕೆಳಗೆ ಗೋಚರಿಸುವ ಕ್ಯಾಪ್ಚಾ ನಮೂದಿಸಿ "GO" ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: "Go" ಬಟನ್ ಮೇಲೆ ಕ್ಲಿಕ್ ಮಾಡಿದ ನಂತರ ಈ ಪೇಜ್ ನಲ್ಲಿ ನಿಮ್ಮ ರೇಷನ್ ಕಾರ್ಡನಲ್ಲಿ ಎಷ್ಟು ಜನ ಸದಸ್ಯರಿದ್ದಾರೆ ನಿಮಗೆ ಎಷ್ಟು ಹಣ ಜಮಾ ಅಗುತ್ತದೆ ಎಂದು ತೋರಿಸುತ್ತದೆ. ಮತ್ತು ಈಗಾಗಲೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಅಗಿದ್ದರೆ "Payment Details" ಎಂದು ಕೆಳಗಡೆ ಗೋಚರಿಸುತ್ತದೆ, ಇಲ್ಲಿ ಯಾವ ದಿನ ಹಣ ವರ್ಗಾವಣೆ ಅಗಿದೆ, ಖಾತೆದಾರರ ಹೆಸರು ಮತ್ತು ಬ್ಯಾಂಕ್ ವಿವರ ತೋರಿಸುತ್ತದೆ.

ಹಣ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಜಮಾ ಅಗದಿದ್ದಲ್ಲಿ "ಪಾವತಿ ಪ್ರಗತಿಯಲ್ಲಿದೆ(Payment in Progress)" ಎಂದು ತೋರಿಸುತ್ತದೆ. ಸ್ವಲ್ಪ ದಿನದ ನಂತರ ನಿಮ್ಮ ಖಾತೆಗೆ ಅರ್ಥಿಕ ನೆರವು ಜಮಾ ಅಗುತ್ತದೆ ಎಂದು.

ಗಮನಿಸಿ: ಈ ವೆಬ್ಸೈಟ್ ಬೆಳಗ್ಗೆ 8-00 ಗಂಟೆಯಿಂದ ರಾತ್ರಿ 8-00 ಗಂಟೆಯವರೆಗೆ ಮಾತ್ರ ಒಪನ್ ಆಗುತ್ತದೆ. ಈ ಸಮಯದಲ್ಲಿ ಮಾತ್ರ ನೀವು ಹಣ ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬವುದು.

ಎಷ್ಟು ಜನ ಸದಸ್ಯರಿಗೆ ಎಷ್ಟು ಹಣ ಜಮಾ ಅಗುತ್ತದೆ?

ನಿಮ್ಮ ರೇಷನ್ ಕಾರ್ಡನಲ್ಲಿ(PHH Ration card)  ಉದಾಹರಣೆಗೆ 4 ಜನ ಸದಸ್ಯರಿದಲ್ಲಿ ಪ್ರತಿ ಒಬ್ಬರಿಗೆ 5 ಕೆಜಿ ಅಕ್ಕಿ ಬದಲು 170 ರೂ, ರಂತೆ 680 ರೂ ವರ್ಗಾವಣೆ ಅಗುತ್ತದೆ.

bank account adhar link: ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲವಾದಲ್ಲಿ ಹಣ ವರ್ಗಾವಣೆಯಾಗುದಿಲ್ಲ!

ಒಂದು ವೇಳ ರೇಷನ್ ಕಾರ್ಡನ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿಸದೇ ಇದಲ್ಲಿ ಅಂತವರಿಗೆ ಈ ಹಣ ವರ್ಗಾವಣೆ ಆಗುವುದಿಲ್ಲಿ. ನಿಮ್ಮ ರೇಷನ್ ಕಾರ್ಡ ಹಾಕಿ ಈ ವೆಬ್ಸೈಟ್ ನಲ್ಲಿ ಚೆಕ್ ಮಾಡಿದಾಗ "ರೇಷನ್ ಕಾರ್ಡ್ ಡೇಟಾವನ್ನು ಆಧಾರ್ ದೃಢೀಕರಣ ಪರಿಶೀಲನೆ ಮತ್ತು NPCI ದೃಢೀಕರಣ ಪರಿಶೀಲನೆಗೆ ಕಳುಹಿಸಲಾಗಿತ್ತು, ಆದರೆ NPCI ಚೆಕ್ ವಿಫಲವಾಗಿದೆ" ಈ ರೀತಿ ಸಂದೇಶ ತೋರಿಸುತ್ತದೆ.

ಇದನ್ನೂ ಓದಿ: How to check Gruhalakshmi application status: ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸ್ಥಿತಿ ಚೆಕ್ ಮಾಡುವುದು ಹೇಗೆ?