Annabhagya november amount-2023: ಅನ್ನಭಾಗ್ಯ ಯೋಜನೆ ನವೆಂಬರ್ ತಿಂಗಳ ಹಣ ಜಮಾ! ಈ ಎರಡು ವಿಧಾನ ಅನುಸರಿಸಿ ನಿಮಗೆ ಎಷ್ಟು ಹಣ ಬಂದಿದೆ ಎಂದು ಚೆಕ್ ಮಾಡಿ.

Annabhagya november amount: ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ರಾಜ್ಯ ಸರಕಾರದಿಂದ 5 ಕೆಜಿ ಅಕ್ಕಿ ಬದಲು ಹಣವನ್ನು ಕಳೆದ 4 ತಿಂಗಳಿನಿಂದ ನೀಡುತ್ತಿದ್ದು ಈ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.

Annabhagya november amount-2023: ಅನ್ನಭಾಗ್ಯ ಯೋಜನೆ ನವೆಂಬರ್ ತಿಂಗಳ ಹಣ ಜಮಾ! ಈ ಎರಡು ವಿಧಾನ ಅನುಸರಿಸಿ ನಿಮಗೆ ಎಷ್ಟು ಹಣ ಬಂದಿದೆ ಎಂದು ಚೆಕ್ ಮಾಡಿ.
Annabhagya november amount 2023

ಪಡಿತರ ಚೀಟಿ ಹೊಂದಿರುವ ಗ್ರಾಹಕರಿಗೆ ರಾಜ್ಯ ಸರಕಾರದಿಂದ 5 ಕೆಜಿ ಅಕ್ಕಿ ಬದಲು ಹಣವನ್ನು ಕಳೆದ 4 ತಿಂಗಳಿನಿಂದ ನೀಡುತ್ತಿದ್ದು ಈ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗಿದೆ.

ರೇಷನ್ ಕಾರ್ಡ ಹೊಂದಿರುವ ಗ್ರಾಹಕರು ತಮಗೆ ಎಷ್ಟು ಹಣ ಜಮಾ ಅಗಿದೆ ಎಂದು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಬವುದು ಒಂದೊಮ್ಮೆ ಹಣ ಜಮಾ ಅಗದಿದ್ದರೆ ಯಾವ ಕಾರಣಕ್ಕೆ ಹಣ ಜಮಾ ಅಗಿಲ್ಲ ಎಂದು ಸಹ ತಿಳಿದುಕೊಳ್ಳಬವುದು. ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ನಮ್ಮನ್ನು ಬೆಂಬಲಿಸಿ.

Annabhagya navember amount-ಎಷ್ಟು ಜನರಿಗೆ ಹಣ  ವರ್ಗಾವಣೆ ಅಗಿದೆ?

ರಾಜ್ಯದಲ್ಲಿ ಪ್ರಸ್ತುತ ಒಟ್ಟು 10,87,681 ಅಂತ್ಯೋದಯ ಅನ್ನಭಾಗ್ಯ ಯೋಜನೆ(AAY) ಕಾರ್ಡದಾರರಿಗೆ ಮತ್ತು 1,16,84,451 ಬಿಪಿಎಲ್ ಕಾರ್ಡ(PHH Cards) ಕಾರ್ಡದಾರರಿಗೆ ಈ ತಿಂಗಳ ಹಣವನ್ನು 10 ನವೆಂಬರ್ 2023 ರಿಂದ ಅಕ್ಕಿ ಹಣವನ್ನು ಜಮಾ ಮಾಡಲಾಗಿದೆ.

ಇದನ್ನೂ ಓದಿ: akrama-sakrama yojana: ಅಕ್ರಮ ಸಕ್ರಮ ಯೋಜನೆಯಡಿ ಜಮೀನು ಪಡೆಯಲು ರಾಜ್ಯ ಸರಕಾರದಿಂದ ನೂತನ ಕ್ರಮ ಚಾರಿ!

Annabhagya status-ನಿಮ್ಮ ಖಾತೆ ಎಷ್ಟು ಹಣ ಜಮಾ ಅಗಿದೆ ಎಂದು ಹೇಗೆ ತಿಳಿಯುವುದು?

ಪಡಿತರ ಚೀಟಿ ಹೊಂದಿರುವ ಗ್ರಾಹಕರು ಎರಡು ವಿಧಾನ ಅನುಸರಿಸಿ ನಿಮಗೆ ಯಾವ ದಿನ, ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ವರ್ಗಾವಣೆ ಅಗಿದೆ ಎಂದು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬವುದು.

ವಿಧಾನ-1: ಆಹಾರ ಇಲಾಖೆಯ ವೆಬ್ಸೈಟ್ ಭೇಟಿ ಮಾಡಿ ಚೆಕ್ ಮಾಡುವುದು:

ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಪಡಿತರ ಚೀಟಿ ಹೊಂದಿರುವ ಗ್ರಾಹಕರು ತಮ್ಮ ರೇಷನ್ ಕಾರ್ಡ ನಂಬರ್ ಅನ್ನು ನಮೂದಿಸಿ ಅಕ್ಕಿ ಹಣದ ಜಮಾ ವಿವರವನ್ನು ಪಡೆಯಬವುದು.

Step-1: ಈ ಲಿಂಕ್ ಮೇಲೆ annabhagya DBT status ಕ್ಲಿಕ್ ಮಾಡಿ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ಮಾಡಬೇಕು. ನಂತರ ಇ-ಸೇವೆಗಳು ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: PM kisan amount: ಪಿ. ಎಮ್ ಕಿಸಾನ್ ಯೋಜನೆಯಡಿ ದೇಶದ 8 ಕೋಟಿ ರೈತರ ಖಾತೆ 18,000 ಸಾವಿರ ಕೋಟಿ ಹಣ ವರ್ಗಾವಣೆ!

Step-2: ಇದಾದ ಬಳಿಕ "ಇ-ಸ್ಥಿತಿ" ಬಟನ್ ಮೇಲೆ ಕ್ಲಿಕ್ ಮಾಡಿ "ಡಿಬಿಟಿ ಸ್ಥಿತಿ" ಎಂದು ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ಮೇಲಿನ ಹಂತಗಳನ್ನು ಮುಗಿಸಿದ ಬಳಿಕ ಈ ಪುಟದಲ್ಲಿ ನಿಮ್ಮ ಜಿಲ್ಲೆಯ ಹೆಸರು ಕಾಣುವ ಲಿಂಕ್ ಮೇಲೆ ಕ್ಲಿಕ್ ಮಾಡಿ.

 

ಇದನ್ನೂ ಓದಿ: Drought relief amount: ನವೆಂಬರ್ 30ರ ಒಳಗಾಗಿ ಈ ಕೆಲಸ ಮಾಡಿದರೆ ಮಾತ್ರ ಬರ ಪರಿಹಾರ ಹಣ ಬರುತ್ತದೆ: ಸಚಿವ ಕೃಷ್ಣ ಬೈರೇಗೌಡ

Step-4: ತದನಂತರ ಈ ಪೇಜ್ ನಲ್ಲಿ "ನೇರ ನಗದು ವರ್ಗಾವಣೆಯ ಸ್ಥಿತಿ(DBT)" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ವರ್ಷ, ತಿಂಗಳು ಮತ್ತು ನಿಮ್ಮ ರೇಷನ್ ಕಾರ್ಡ ನಂಬರ್ ಹಾಕಿ 6 ಅಂಕಿಯ ಕ್ಯಾಪ್ಚಾ ಕೋಡ್ ನಮೂದಿಸಿ "GO" ಬಟನ್ ಮೇಲೆ ಕ್ಲಿಕ್ ಮಾಡಿದರೆ "Payment Details" ಎಂದು ತೋರಿಸಿ ನಿಮ್ಮ ರೇಷನ್ ಕಾರ್ಡ ಮುಖ್ಯಸ್ಥರ ಹೆಸರು, ಹಣ ಜಮಾ ಅದ ಬ್ಯಾಂಕ್ ಹೆಸರು , ಹಣ ವರ್ಗಾವಣೆ ಮಾಡಿದ ದಿನಾಂಕ, ಒಟ್ಟು ಎಷ್ಟು ಮೊತ್ತ ಎಂದು ಸಂಪೂರ್ಣ ಮಾಹಿತಿ ತೋರಿಸುತ್ತದೆ.

ವಿಧಾನ-2: DBT karnataka ಅಪ್ಲಿಕೇಶನ್ ಮೂಲಕ ಚೆಕ್ ಮಾಡಬವುದು:

ಪಡಿತರ ಚೀಟಿ ಹೊಂದಿರುವ ಸಾರ್ವಜನಿಕರು ರಾಜ್ಯ ಸರಕಾರದ ಎಲ್ಲಾ ಬಗ್ಗೆಯ ನೇರ ನಗದು ವರ್ಗಾವಣೆ ಸ್ಥಿತಿಯನ್ನು ಚೆಕ್ ಮಾಡಲು ಸಿದ್ದಪಡಿಸಿರುವ DBT karnataka ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಖಾತೆಗೆ ಹಣ ವರ್ಗಾವಣೆಯ ಸಂಪೂರ್ಣ ಮಾಹಿತಿಯನ್ನು ಪಡೆಯಬವುದಾಗಿದೆ.

Step-1: ಮೊದಲಿಗೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ> DBT karnataka app ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ಫಲಾನುಭವಿಯ ಆಧಾರ್ ನಂಬರ್ ಅನ್ನು ಹಾಕಿ ಆಧಾರ್ ನೊಂದಾಯಿತ ಮೊಬೈಲ್ ಸಂಕ್ಯೆಗೆ ಬರುವ OTP ಅನ್ನು ನಮೂದಿಸಿ ನಿಮಗೆ ನೆನಪಿನಲ್ಲಿಡಲು ಅನುಕೂಲವಾಗುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು. 

ಇದನ್ನೂ ಓದಿ: Invalid ration card list-ಈ ಪಟ್ಟಿಯಲ್ಲಿ ಹೆಸರಿರುವವರಿಗಿಲ್ಲ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಹಣ!

Step-2: ನೀವು ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ಹಾಕಿ ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆಯಬೇಕು ಮುಖ ಪುಟದಲ್ಲಿ ಕಾಣುವ ಪಾವತಿ ಸ್ಥಿತಿ ಮೇಲೆ ಕ್ಲಿಕ್ ಮಾಡಿ ಅನ್ನಭಾಗ್ಯ ಯೋಜನೆ ಆಯ್ಕೆಯೆ ಮೇಲೆ ಕ್ಲಿಕ್ ಮಾಡಿ ನಿಮಗೆ ಹಣ ವರ್ಗಾವಣೆ ಅಗಿರುವ ಸಂಪೂರ್ಣ ವಿವರ ಇಲ್ಲಿ ತೋರಿಸುತ್ತದೆ.