Apprentice Trainee-ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ಟ್ರೈನಿಗಳ ಆಯ್ಕೆಗೆ ಅರ್ಜಿ ಆಹ್ವಾನ!

ಸಚಿವಾಲಯ ಗ್ರಂಥಾಲಯದಲ್ಲಿ ಮತ್ತು ಮಾಹಿತಿ ವಿಜ್ಞಾನ ಕೇಂದಲ್ಲಿ ಅಪ್ರೆಂಟಿಸ್ ಟೆಕ್ನಿಶಿಯನ್ ಟ್ರೈನಿಗಳ(Apprentice Trainee) ಆಯ್ಕೆಗೆ ಸರಕಾರದ ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು ಈ ಅಂಕಣದಲ್ಲಿ ನೀಡಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

Apprentice Trainee-ಸಚಿವಾಲಯ ಗ್ರಂಥಾಲಯದಲ್ಲಿ ಅಪ್ರೆಂಟಿಸ್ ಟ್ರೈನಿಗಳ ಆಯ್ಕೆಗೆ ಅರ್ಜಿ ಆಹ್ವಾನ!
Apprentice Trainee-2024

ಸಚಿವಾಲಯ ಗ್ರಂಥಾಲಯದಲ್ಲಿ ಮತ್ತು ಮಾಹಿತಿ ವಿಜ್ಞಾನ ಕೇಂದಲ್ಲಿ ಅಪ್ರೆಂಟಿಸ್ ಟೆಕ್ನಿಶಿಯನ್ ಟ್ರೈನಿಗಳ(Apprentice Trainee) ಆಯ್ಕೆಗೆ ಸರಕಾರದ ಸಂಬಂಧಪಟ್ಟ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು ಈ ಅಂಕಣದಲ್ಲಿ ನೀಡಿರುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಕೊನೆಯ ದಿನಾಂಕದ ಒಳಗಾಗಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ರಾಜ್ಯ ಸರ್ಕಾರದ ಸಚಿವಾಲಯ ಗ್ರಂಥಾಲಯದಲ್ಲಿ 2023-24 ನೇ ಸಾಲಿಗೆ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಪ್ರೆಂಟಿಸ್ ಟೆಕ್ನಿಶಿಯನ್ ಟ್ರೈನಿಗಳ ಆಯ್ಕೆಗೆ ಅರ್ಜಿಯನ್ನು ಆಹ್ವಾನಿಸಿದೆ.

ಇದನ್ನೂ ಓದಿ: Parihara grants- ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!

Who can Apply- ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಈ ಅಪ್ರೆಂಟಿಸ್ ಟೆಕ್ನಿಶಿಯನ್ ಟ್ರೈನಿಗಳ ಆಯ್ಕೆಗೆ ಅರ್ಜಿ ಸಲ್ಲಿಸಲು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಿಪ್ಲೋಮಾ ಪಡೆದಿರಬೇಕು. 
ನಿಗಧಿತ ಶಿಕ್ಷಣಾರ್ಹತೆಯನ್ನು 2021 ಮೇ ತಿಂಗಳ ನಂತರ ಪಡೆದವರು ಮಾತ್ರ ತರಬೇತಿಗೆ ಅರ್ಹರಾಗಿರುತ್ತಾರೆ. 
ಅಭ್ಯರ್ಥಿಗಳನ್ನು ಅವರು ಗಳಿಸಿದ ಅಂಕಗಳ (ಮೆರಿಟ್) ಹಾಗೂ ಮೀಸಲಾತಿ ಆಧಾರದ ಮೇಲೆ ನಿಯಮಾನುಸಾರ ಆಯ್ಕೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈಗಾಗಲೇ ಅಪ್ರೆಂಟಿಸ್ ಪಡೆದವರಾಗಿದ್ದರೆ ಅಂತಹವರು ಅರ್ಜಿಗಳನ್ನು ಸಲ್ಲಿಸುವಂತಿಲ್ಲ. 

ಗೌರವ ಧನದ ವಿವರ:

ಅಪ್ರೆಂಟಿಸ್ ಟೆಕ್ನಿಶಿಯನ್ ಟ್ರೈನಿಯಾಗಿ ಆಯ್ಕೆ ಅದವರಿಗೆ ತರಬೇತಿಯ ಅವಧಿಯಲ್ಲಿ ಪ್ರತಿ ತಿಂಗಳು ರೂ. 8.000/- ( ರೂ. 4000/- ಗಳನ್ನು ರಾಜ್ಯ ಸರ್ಕಾರದಿಂದ ಹಾಗೂ ರೂ. 4000 ಗಳನ್ನು ಅಪ್ರೆಂಟಿಸ್ ಬೋರ್ಡ್‌ ರವರಿಂದ ನೇರವಾಗಿ ಟ್ರೈನಿಗಳ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ) ಪಾವತಿಸಲಾಗುತ್ತದೆ.

ಇದನ್ನೂ ಓದಿ: Fastag kyc- ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಲು ಫೆ,29 ಕೊನೆಯ ದಿನ! ಕೆವೈಸಿ ನಿಮ್ಮ ಮೊಬೈಲ್ ನಲ್ಲೇ ಮಾಡಬಹುದು!

Application-ಅರ್ಜಿ ಸಲ್ಲಿಕೆ ವಿಧಾನ:

ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಮುಖ್ಯ ಗ್ರಂಥಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ, ಸಚಿವಾಲಯ ಗ್ರಂಥಾಲಯ, ಕೊಠಡಿ ಸಂಖ್ಯೆ 11 ನೆಲಮಹಡಿ, ವಿಧಾನಸೌಧ, ಬೆಂಗಳೂರು- 560 001. ಇವರಿಗೆ 27 ಫೆಬ್ರವರಿ 2024ರ ಒಳಗಾಗಿ ತಲುವುವಂತೆ ಸಲ್ಲಿಸತಕ್ಕದ್ದು.

Required Documents for Apprentice Trainee application-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳು:

ಅರ್ಜಿಯನ್ನು ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ಐ.ಡಿ ಮುಂತಾದ ವಿವರಗಳೊಂದಿಗೆ ಸಲ್ಲಿಸುವುದು. ಅರ್ಜಿಯೊಂದಿಗೆ ದೃಢೀಕರಿಸಲಾಗಿರುವ ಎಸ್.ಎಸ್.ಎಲ್.ಸಿ. ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳನ್ನು, ಲೈಬ್ರರಿ ಅಂಡ್ ಇನ್‌ರ್ಮೇಷನ್ ಸೈನ್ಸ್‌ನಲ್ಲಿ ಡಿಪ್ಲೋಮಾ ಹೊಂದಿರುವ ಬಗ್ಗೆ ಪ್ರಮಾಣಪತ್ರ, ಪ್ರಮಾಣ ಪತ್ರ/ ತಾತ್ಕಾಲಿಕ ಪ್ರಮಾಣ ಪತ್ರ (Provisional Certificate) ಗಳನ್ನು ಕಡ್ಡಾಯವಾಗಿ ಲಗತ್ತಿಸುವುದು. ತಡವಾಗಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Marriage registration- ವಿವಾಹ ನೋಂದಣಿ ಇನ್ನು ಭಾರೀ ಸುಲಭ!

For more details- ಹೆಚ್ಚಿನ ವಿವರಗಳಿಗೆ:

ಕಚೇರಿಯ ದೂರವಾಣಿ ಸಂಖ್ಯೆ: 080-22033462/3011 ಅಥವಾ ಇ-ಮೇಲ್ ವಿಳಾಸ ksecretariatlibrary@gmail.comಕ್ಕೆ ಸಂಪರ್ಕಿಸಬಹುದು ಎಂದು ಸಚಿವಾಲಯ ಗ್ರಂಥಾಲಯದ  ಮುಖ್ಯ ಗ್ರಂಥಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಜ್ಯೋತಿಶ್ರೀ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.