Crop loan-ರೈತರು ಬೆಳೆ ಸಾಲ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

ವ್ಯವಸಾಯ ಸೇವಾ ಸಹಕಾರಿ ಸಂಘಗಳಿಂದ(VVS) ಮತ್ತು ಇತರೆ ಬ್ಯಾಂಕ್ ಗಳಲ್ಲಿ ರೈತರು ಬೆಳೆ ಸಾಲ(Crop loan) ಪಡೆಯಲು ಪ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡಿರಬೇಕು ಮತ್ತು ನಿಮ್ಮ ಜಮೀನಿನ ಪಹಣಿ/ಊತಾರ್/RTC ಗೆ ಆಧಾರ್ ಲಿಂಕ್ ಮಾಡಿದರೆ ಮಾತ್ರ ನಿಮಗೆ ಬೆಳೆ ಸಾಲ ಸಿಗಲಿದೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Crop loan-ರೈತರು ಬೆಳೆ ಸಾಲ ಪಡೆಯಲು ತಪ್ಪದೇ ಈ ಕೆಲಸ ಮಾಡಿ!
Crop loan application-2024

ವ್ಯವಸಾಯ ಸೇವಾ ಸಹಕಾರಿ ಸಂಘಗಳಿಂದ(VVS) ಮತ್ತು ಇತರೆ ಬ್ಯಾಂಕ್ ಗಳಲ್ಲಿ ರೈತರು ಬೆಳೆ ಸಾಲ(Crop loan) ಪಡೆಯಲು ಪ್ರೂಟ್ಸ್ ತಂತ್ರಾಂಶದಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡಿರಬೇಕು ಮತ್ತು ನಿಮ್ಮ ಜಮೀನಿನ ಪಹಣಿ/ಊತಾರ್/RTC ಗೆ ಆಧಾರ್ ಲಿಂಕ್ ಮಾಡಿದರೆ ಮಾತ್ರ ನಿಮಗೆ ಬೆಳೆ ಸಾಲ ಸಿಗಲಿದೆ ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ರೈತರು ಪ್ರತಿ ವರ್ಷ ಮಾರ್ಚ್ ತಿಂಗಳ ಅಂತ್ಯದಲ್ಲಿ ಹಿಂದಿನ ವರ್ಷದ ಸಾಲವನ್ನು ಮರು ಪಾವತಿ ಮಾಡಿ ನಂತರ ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಪುನಃ ಬೆಳೆ ಸಾಲ ಪಡೆಯುತ್ತಾರ‍ೆ ಅದರೆ ಇನ್ನು ಮುಂದೆ ನಿಮ್ಮ ಜಮೀನಿನ ಮೇಲೆ ಬೆಳೆ ಸಾಲ ಪಡೆಯಲು ಪ್ರೂಟ್ಸ್(Fruits) ತಂತ್ರಾಂಶ ಅಂದರೆ FID ನಂಬರ್ ನಲ್ಲಿ ನಿಮ್ಮ ಹೆಸರಿಗೆ ಇರುವ ಎಲ್ಲಾ ಜಮೀನಿನ ಸರ್ವೆ ನಂಬರ್ ದಾಖಲಿಸಿರಬೇಕು ಅಗಿದ್ದರೆ ಮಾತ್ರ ಎಲ್ಲಾ ಜಮೀನಿನ ಮೇಲೆ ಬೆಳೆ ಸಾಲ ನೀಡಲಾಗುತ್ತದೆ.

ಪ್ರೂಟ್ಸ್(Fruits) ತಂತ್ರಾಂಶ ಅಥವಾ FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡುವುದು ಹೇಗೆ? ಪಹಣಿ/ಊತಾರ್/RTC ಗೆ ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು ಮತ್ತು ಏಕೆ? ಬೆಳೆ ಸಾಲ ಪಡೆಯಲು ಯಾವೆಲ್ಲ ದಾಖಲಾತಿಗಳನ್ನು ಸಲ್ಲಿಸಿಬೇಕು ಎನ್ನುವ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

ಇದನ್ನೂ ಓದಿ: land registration- ಜಮೀನಿನ ಮಾಲೀಕ ಮರಣ ಹೊಂದಿದ ನಂತರ ವಾರಸುದಾರ ಆಸ್ತಿಯನ್ನು ತಮ್ಮ ಹೆಸರಿಗೆ ಮಾಡಿಕೊಳ್ಳುವುದು ಹೇಗೆ?

How to Create FID number-ಪ್ರೂಟ್ಸ್(Fruits) ತಂತ್ರಾಂಶ ಅಥವಾ FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡುವುದು ಹೇಗೆ? 

ರೈತರು ನಿಮ್ಮ ಹತ್ತಿರದ/ಹೋಬಳಿಯ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಅರ್ಜಿದಾರ ರೈತರ ಅಧಾರ್ ಕಾರ್ಡ, ಬ್ಯಾಂಕ್ ಪಾಸ್ ಬುಕ್, ಎಲ್ಲಾ ಜಮೀನಿನ ಪಹಣಿ ತೆಗೆದುಕೊಂಡು ನೇರವಾಗಿ ಕಚೇರಿ ಸಮಯದಲ್ಲಿ ಭೇಟಿ ಮಾಡಿ ಪ್ರೂಟ್ಸ್(Fruits) ತಂತ್ರಾಂಶ ಅಥವಾ FID ನಂಬರ್ ಗೆ ಎಲ್ಲಾ ಸರ್ವೆ ನಂಬರ್ ಸೇರ್ಪಡೆ ಮಾಡಿಕೊಳ್ಳಬಹುದು.

FID status- ಈಗಾಗಲೇ ನಿಮ್ಮ ಹೆಸರಿಗೆ FID ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ರೈತರು ಕೃಷಿ ಇಲಾಖೆಯ ಅಧಿಕೃತ ಪ್ರೂಟ್ಸ್ ವೆಬ್ಸೈಟ್ ಅನ್ನು ಭೇಟಿ ಮಾಡಿ ಈ ಕೆಳಗಿನ ಹಂತವನ್ನು ಅನುಸರಿಸಿ ನಿಮ್ಮ ಜಮೀನಿನ ಮೇಲೆ FID ನಂಬರ್ ರಚನೆ ಅಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

ಈ ಲಿಂಕ್ ಮೇಲೆ ಕ್ಲಿಕ್ ಮಾಡಿ FID status check ಅಧಿಕೃತ ಜಾಲತಾಣ ಭೇಟಿ ಮಾಡಿ ಅರ್ಜಿದಾರ ರೈತರ ಆಧಾರ್ ಕಾರ್ಡ ನಂಬರ್ ಹಾಕಿ FID ನಂಬರ್ ಅಗಿರುವುದನ್ನು ಖಚಿತಪಡಿಸಿಕೊಳ್ಳಬಹುದು.

ಇದನ್ನೂ ಓದಿ: Bele parihara amount- ಈ ತಪ್ಪು ಮಾಡಿದರೆ ನಿಮ್ಮ ಖಾತೆಗೆ ಬರುವುದಿಲ್ಲ ಬರ ಪರಿಹಾರ! ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

ಪಹಣಿ/ಊತಾರ್/RTC ಗೆ ಆಧಾರ್ ಲಿಂಕ್ ಎಲ್ಲಿ ಮಾಡಿಸಬೇಕು ಮತ್ತು ಏಕೆ? 

ರೈತರು ತಮ್ಮ ಜಮೀನ ಪಹಣಿ/RTC ಗೆ ಆಧಾರ್ ಲಿಂಕ್ ಮಾಡಿಸಬೇಕು ನಿಮ್ಮ ಹಳ್ಳಿಯ ಕಂದಾಯ ಇಲಾಖೆ ಗ್ರಾಮ ಲೆಕ್ಕಾಧಿಕಾರಿಯನ್ನು(VA) ಭೇಟಿ ಮಾಡಿ ಆಧಾರ್ ಲಿಂಕ್ ಮಾಡಿಸಿಕೊಳ್ಳಬಹುದು.

Aadhar link- ಆಧಾರ್ ಲಿಂಕ್ ಏಕೆ? 

  • ಜಮೀನಿನ ಮಾಲೀಕರ ನಿಖರತೆಯನ್ನು ತಿಳಿದುಕೊಳ್ಳಲು ಅಧಾರ್ ಲಿಂಕ್ ಮಾಡುವುದು ಅಗತ್ಯ.
  • ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಸೌಲಭ್ಯ ಪಡೆಯಲು ಸಹಕಾರಿ.
  • ಬೆಳೆ ಸಾಲ ಪಡೆಯಲು ಆಧಾರ್ ಲಿಂಕ್ ಮಾಡುವುದು ಅಗತ್ಯ.
  • ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಬೆಳೆ ವಿಮೆ ಮತ್ತು ಬೆಳೆ ಹಾನಿ ಪರಿಹಾರ ಪಡೆಯಲು ಆಧಾರ್ ಲಿಂಕ್ ಅಗತ್ಯ.

ಇದನ್ನೂ ಓದಿ: Parihara amount-2024: ಕೇಂದ್ರದಿಂದ 3498 ಕೋಟಿ ಬರ ಪರಿಹಾರ ಬಿಡುಗಡೆ! ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ ಪರಿಹಾರದ ಹಣ!

Required documents for crop loan-ಬೆಳೆ ಸಾಲ ಪಡೆಯಲು ಬೇಕಾಗುವ ಅಗತ್ಯ ದಾಖಲೆಗಳು ಹೀಗಿವೆ:

1) ಅರ್ಜಿದಾರ ಪೋಟೋ
2) ಆಧಾರ್ ಕಾರ್ಡ ಪ್ರತಿ
3) ಎಲ್ಲಾ ಜಮೀನಿನ ಪಹಣಿ/RTC
4) ಪಾನ್ ಕಾರ್ಡ ಪ್ರತಿ
5) ರೇಷನ್ ಕಾರ್ಡ್ ಪ್ರತಿ