DBT Status App-ಅರ್ಜಿದಾರರಿಗೆ ಗ್ಯಾರಂಟಿ ಯೋಜನೆಗಳ ಹಣ ಜಮಾ ಅಗಿರುವುದನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್!

ರಾಜ್ಯ ಸರಕಾರದ ಇ-ಆಡಳಿತ ವಿಭಾಗದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ದೇಸೆಯಲ್ಲಿ ರಾಜ್ಯ ಸರಕಾರದಿಂದ ನೇರ ನಗದು ವರ್ಗಾವಣೆಯ(DBT) ಮೂಲಕ ಹಣ ವರ್ಗಾವಣೆ ಮಾಡುವ ಯೋಜನೆಗಳ ವರ್ಗಾವಣೆ ಸ್ಥಿತಿಯನ್ನು ಫಲಾಭವಿಗಳು ತಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.

DBT Status App-ಅರ್ಜಿದಾರರಿಗೆ ಗ್ಯಾರಂಟಿ ಯೋಜನೆಗಳ ಹಣ ಜಮಾ ಅಗಿರುವುದನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್!
Karnataka DBT application

ರಾಜ್ಯ ಸರಕಾರದ ಇ-ಆಡಳಿತ ವಿಭಾಗದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ದೇಸೆಯಲ್ಲಿ ರಾಜ್ಯ ಸರಕಾರದಿಂದ ನೇರ ನಗದು ವರ್ಗಾವಣೆಯ(DBT) ಮೂಲಕ ಹಣ ವರ್ಗಾವಣೆ ಮಾಡುವ ಯೋಜನೆಗಳ ವರ್ಗಾವಣೆ ಸ್ಥಿತಿಯನ್ನು ಫಲಾಭವಿಗಳು ತಮ್ಮ ಮೊಬೈಲ್ ನಲ್ಲಿ ತಿಳಿದುಕೊಳ್ಳಲು ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದೆ.

ಈ ಮೊಬೈಲ್ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಾಗರಿಕರು ನೇರ ನಗದು ವರ್ಗಾವಣೆ(DBT) ಮೂಲಕ ವರ್ಗಾವಣೆಯಾದ ಅಂದರೆ ಉದಾಹರಣೆಗೆ ಹಾಲಿ ಪ್ರೋತ್ಸಾಹ ಧನ, ಗೃಹಲಕ್ಷ್ಮಿ, ಅನ್ನಭಾಗ್ಯ, ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಿದ ಕೃಷಿ ಉತ್ಪನ್ನದ ಹಣ ಹೀಗೆ ಫಲಾನುಭವಿಗೆ ಜಮಾ ಅದ ಹಣದ ವಿವರದ ಸಂಪೂರ್ಣ ಮಾಹಿತಿಯನ್ನು ಈ ಅಪ್ಲಿಕೇಶನ್ ಅಲ್ಲಿ ನಾಗರಿಕರು ಪಡೆಯಬವುದಾಗಿದೆ.

ಈ karnataka DBT ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿದಾರರು ಯಾವುದೇ ಬ್ಯಾಂಕ್ ಅಥವಾ ಸರಕಾರಿ ಕಚೇರಿ ಭೇಟಿ ಮಾಡದ ಯಾವ ದಿನಾಂಕದಂದು ಹಣ ವರ್ಗಾವಣೆ ಅಗಿದೆ? ಎಷ್ಟು ಹಣ? ಇತರೆ ವಿವರವನ್ನು ಒಂದೆರಡು ಕ್ಲಿಕ್ ನಲ್ಲಿ ನೋಡಬವುದಾಗಿದೆ.

ಇದನ್ನೂ ಓದಿ: free fodder seeds kit: ಪಶುಸಂಗೋಪನೆ ಇಲಾಖೆಯಿಂದ ಉಚಿತ ಮೇವಿನ ಕಿಟ್ ವಿತರಣೆ!

DBT Status App: ಹಣ ಜಮಾ ಅಗಿರುವುದನ್ನು ತಿಳಿಯಲು ಮೊಬೈಲ್ ಅಪ್ಲಿಕೇಶನ್:

ನಾಗರಿಕರು ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡಿ Karnataka DBT ಎಂದು ಹುಡುಕಿ ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿದಾರರ ಆಧಾರ್ ಕಾರ್ಡ ನಂಬರ್ ಮತ್ತು ನೊಂದಾಯಿತ ಮೊಬೈಲ್ ಸಂಖ್ಯೆಗೆ ಬರುವ OTP ಅನ್ನು ನಮೂದಿಸಿ ಯಾವೆಲ್ಲ ಯೋಜನೆಯಡಿ ಹಣ ಜಮಾ ಅಗಿದೆ, ನಿಮ್ಮ ಆಧಾರ್ ಕಾರ್ಡಾ ಯಾವ ಬ್ಯಾಂಕ್ ಖಾತೆಗೆ ಲಿಂಕ್ ಅಗಿದೆ ಎನ್ನುವ ಮಾಹಿತಿಯನ್ನು ಸಹ ತಿಳಿದುಕೊಳ್ಳಬವುದು. ಈ ಕೆಳಗೆ ಪ್ರಯೋಗಿಕವಾಗಿ ಈ ಅಪ್ಲಿಕೇಶನ್ ಹೇಗೆ ಬಳಕೆ ಮಾಡಬೇಕು ಎಂದು ಹಂತ-ಹಂತವಾಗಿ ವಿವರಿಸಲಾಗಿದೆ.

ಹಂತ-1: ಫಲಾನುಭವಿಗಳು ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ> DBT karnataka application ಅನ್ನು ಗೂಗಲ್ ಪ್ಲೇ ಸ್ಟೋರ್ ಭೇಟಿ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕು. ತದನಂತರ ಫಲಾನುಭವಿಯ/ಅರ್ಜಿದಾರರ ಆಧಾರ್ ಕಾರ್ಡ ಸಂಖ್ಯೆಯನ್ನು ಹಾಕಿ ಆಧಾರ್ ಕಾರ್ಡ ನಲ್ಲಿ ನಮೂದಿಸಿರುವ ಮೊಬೈಲ್ ನಂಬರ್ ಗೆ ಬರುವ 6 ಅಂಕಿಯ OTP ಅನ್ನು ನಮೂದಿಸಬೇಕು.(ವಿಶೇಷ ಸೂಚನೆ: ಮೊದಲ ಬಾರಿಗೆ OTP ಬರದೇ ಇದ್ದ ಪಕ್ಷದಲ್ಲಿ resend otp ಬಟನ್ ಮೇಲೆ ಕ್ಲಿಕ್ ಮಾಡಿ ಪುನಃ ಪ್ರಯತ್ನಿಸಿ)

ಹಂತ-2: ಮೇಲಿನ ವಿಧಾನ ಅನುಸರಿಸಿ OTP ಪಡೆದು ಅದನ್ನು ನಮೂದಿಸಿದ ಬಳಿಕ ನಿಮಗೆ ನೆನಪಿನಲ್ಲಿ ಉಳಿಯುವ ಬೇಗ ನಮೂದಿಸಿ ಈ ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆಯಲು ಅನುಕೂಲವಾಗುವ ನಾಲ್ಕು ಸಂಖ್ಯೆಯ ಪಾಸ್ವರ್ಡ ಅನ್ನು ರಚನೆ ಮಾಡಿಕೊಳ್ಳಬೇಕು. ತದನಂತರ ಫಲಾನುಭವಿಯ ವೈಯಕ್ತಿಕ ವಿವರ ತೋರಿಸುತ್ತದೆ ಕೊನೆಯಲ್ಲಿ ಮೊಬೈಲ್ ನಂಬರ್ ಹಾಕಿ "ಸರಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಪಾವತಿ ಸ್ಥಿತಿ ತೋರಿಸುತ್ತದೆ.

ಹಂತ-3: ಈ ರೀತಿ ವಿಧಾನಗಳನ್ನು ಅನುಸರಿಸಿದ ಬಳಿಕ karnataka DBT ಮೊಬೈಲ್ ಅಪ್ಲಿಕೇಶನ್ ಮುಖಪುಟ ಭೇಟಿ ಮಾಡಿ ನೀವು ಈಗಾಗಲೇ ರಚನೆ ಮಾಡಿಕೊಂಡಿರುವ ನಾಲ್ಕು ಅಂಕಿಯ ಪಾಸ್ವರ್ಡ ಅನ್ನು ನಮೂದಿಸಿ ಮೊಬೈಲ್ ಅಪ್ಲಿಕೇಶನ್ ಅನ್ನು ತೆರೆಯಬೇಕು.

ಇದನ್ನೂ ಓದಿ: Gruhalakshmi status update: ನಿಮಗೆ ಒಂದು ಬಾರಿಯು ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದರೆ ತಪ್ಪದೇ ಈ ಕೆಲಸ ಮಾಡಿ!

ಹಂತ-4: Mobile application ಮುಖ ಪುಟದಲ್ಲಿ ಒಟ್ಟು ನಾಲ್ಕು ಆಯ್ಕೆಗಳು ಕಾಣುತ್ತವೆ ಬಲಬದಿಯ ಮೇಲೆ ಕೊನೆಯಲ್ಲಿ (1)"ಕನ್ನಡ/English" ಆಯ್ಕೆಯು ಲಭ್ಯವಿದ್ದು ನಾಗರಿಕರು ಈ ಆಯ್ಕೆಯನ್ನು ಬಳಕೆ ಮಾಡಿಕೊಳ್ಳಬವುದು, 

(2)"ಪಾವತಿ ಸ್ಥಿತಿ": ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಯಾವ ಯೋಜನೆಯಡಿ ಎಷ್ಟು ಹಣ ಜಮಾ ಅಗಿದೆ? UTR ನಂಬರ್ ? ಯಾವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಅಗಿದೆ ಎಂದು ತಿಳಿಯಬವುದು.

(3)"ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಯೋಜನೆ": ಈ ಆಯ್ಕೆಯ ಮೇಲೆ ಕ್ಲಿಕ್ ಫಲಾನುಭವಿಗಳು ನಿಮ್ಮ ಆಧಾರ್ ಯಾವ ಬ್ಯಾಂಕ್ ಗೆ ಲಿಂಖ್ ಅಗಿದೆ ಎನ್ನುವ ಮಾಹಿತಿಯನ್ನು ನೋಡಬವುದು. 

(4)ಪ್ರೊಪೈಲ್ : ಈ ಬಟನ್ ಮೇಲೆ ಕ್ಲಿಕ್ ಮಾಡಿ ಫಲಾನುಭವಿಯ ಸ್ವ-ವಿವರವನ್ನು ತಿದ್ದುಪಡಿ ಮಾಡಿ ಅಪ್ಲೋಡ್ ಮಾಡಬವುದು ಉದಾಹರಣೆಗೆ: ಮೊಬೈಲ್ ನಂಬರ್ ಇತ್ಯಾದಿ.

ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!

DBT status-ಯಾವೆಲ್ಲ ಯೋಜನೆ ನೇರ ನಗದು ವರ್ಗಾವಣೆ ಸ್ಥಿತಿ ತಿಳಿಯಬವುದು?

  • ಗೃಹಲಕ್ಷ್ಮಿ ಯೋಜನೆ.
  • ಅನ್ನಭಾಗ್ಯ ಯೋಜನೆ.
  • ಹಾಲಿನ ಪ್ರೋತ್ಸಾಹ ಧನ ಮಾಹಿತಿ.
  • ಕರ್ನಾಟಕ ಸರಕಾರದ ಕಿಸಾನ್ ಸಮ್ಮಾನ ನಿಧಿ ಯೋಜನೆಯ ಕಂತಿನ ವಿವರ.
  • ರೈತ ಶಕ್ತಿ.
  • ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟದ ಹಣ ವರ್ಗಾವಣೆ ಮಾಹಿತಿ.
  • ಮೆಕ್ಕೆಜೋಳ ಬೆಳೆಗಾರರಿಗೆ ನೆರವು.