Free hostel admission-2024: ಉಚಿತ ವಿದ್ಯಾರ್ಥಿ ನಿಲಯ ಮತ್ತು ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ನಮೂನೆ.

ಸುತ್ತೂರು ಶ್ರೀಕ್ಷೇತ್ರದ ಜೆ ಎಸ್ ಎಸ್ ವಸತಿ ಶಾಲೆಯಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ(free hostel admission) ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲ ಅರ್ಜಿ ಸಲ್ಲಿಸಿ ಈ ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸುವ ವಿಧಾನ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Free hostel admission-2024: ಉಚಿತ ವಿದ್ಯಾರ್ಥಿ ನಿಲಯ ಮತ್ತು ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಅರ್ಜಿ ನಮೂನೆ.
jss school admission-2024

ಸುತ್ತೂರು ಶ್ರೀಕ್ಷೇತ್ರದ ಜೆ ಎಸ್ ಎಸ್ ವಸತಿ ಶಾಲೆಯಲ್ಲಿ ಉಚಿತ ವಿದ್ಯಾಭ್ಯಾಸಕ್ಕೆ(free hostel admission) ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯಾರೆಲ್ಲ ಅರ್ಜಿ ಸಲ್ಲಿಸಿ ಈ ಪ್ರಯೋಜನ ಪಡೆದುಕೊಳ್ಳಬಹುದು? ಅರ್ಜಿ ಸಲ್ಲಿಸುವ ವಿಧಾನ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಸುತ್ತೂರು ಶ್ರೀಕ್ಷೇತ್ರದಿಂದ ಆರ್ಥಿಕ ಸಂಕಷ್ಟದಿಂದ ಅಥವಾ ಕೌಟುಂಬಿಕ ಸಮಸ್ಯೆಗಳಿಂದಾಗಿ ಪ್ರಾಥಮಿಕ/ಪ್ರೌಡ ಶಿಕ್ಷಣದಿಂದ ವಂಚಿತರಾದ ಮಕ್ಕಳಿಗಾಗಿ ಶಿಕ್ಷಣ(free education), ಊಟ, ವಸತಿಗಳ ಸೌಲಭ್ಯಗಳನ್ನು ಒದಗಿಸಲು ಜೆ ಎಸ್ ಎಸ್(jss public school mysore) ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಈ ಮಾಹಿತಿಯನ್ನು ಓದಿದವರು ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ ಈ ಸೌಲಭ್ಯ ಪಡೆಯಲು ಅವಶ್ಯವಿರುವವರಿಗೆ ಮಾಹಿತಿ ತಲುಪಿಸಲು ನಮ್ಮೊಂದಿಗೆ ಕೈಜೋಡಿಸಿ.

ಇದನ್ನೂ ಓದಿ: Fast food business- ಉಚಿತ ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿಗೆ ಅರ್ಜಿ ಆಹ್ವಾನ!

How can apply for jss public school admission- ಯಾವೆಲ್ಲ ತರಗತಿಯಲ್ಲಿ ವ್ಯಾಸಂಗ ಮಾಡಲು ಅರ್ಜಿ ಆಹ್ವಾನಿಸಲಾಗಿದೆ:

1 ರಿಂದ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡಲು ಉಚಿತ ವಿದ್ಯಾರ್ಥಿ ನಿಲಯ ಮತ್ತು ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

Last date for Application- ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

 • ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು 15 ಮೇ 2024 ಕೊನೆಯ ದಿನವಾಗಿರುತ್ತದೆ.
 • 3 ರಿಂದ 8 ನೇ ತರಗತಿ ಪ್ರವೇಶಕ್ಕೆ ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 17-05-2024 , ಸಂದರ್ಶನ: 18-05-2024, ಫಲಿತಾಂಶ ಪ್ರಕಟ: 22-05-2024 ದಾಖಲಾತಿ ಪ್ರಾರಂಭ-: 29-05-2024
 • 1 ಮತ್ತು 2 ನೇ ತರಗತಿ ಪ್ರವೇಶಕ್ಕೆ ಲಿಖಿತ ಪರೀಕ್ಷೆ ನಡೆಯುವ ದಿನಾಂಕ: 17-05-2024 ರಂದು ಸಂದರ್ಶನ ಮಾಡಿ ಆಯ್ಕೆಯಾದವರನ್ನು ದಾಖಲಾತಿ ಮಾಡಿಕೊಳ್ಳಲಾಗುತ್ತದೆ.

Required Documents for free hostel application- ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು:

1. ಜನ್ಮದಿನಾಂಕ ದೃಢೀಕರಣ ಪತ್ರ (1ನೆಯ ತರಗತಿಗೆ ಮಾತ್ರ)

2. ಹಿಂದಿನ ತರಗತಿಯ ಅಂಕಪಟ್ಟಿ

3. ಜಾತಿ ದೃಢೀಕರಣ ಪತ್ರ

4. ವಾರ್ಷಿಕ ವರಮಾನ ಪತ್ರ

5. ವೈದ್ಯಕೀಯ ಪ್ರಮಾಣಪತ್ರ

6. ವಿದ್ಯಾರ್ಥಿ, ತಂದೆ ಮತ್ತು ತಾಯಿಯ/ಪೋಷಕರ ಆಧಾರ್ ಕಾರ್ಡ್‌ ಜೆರಾಕ್ಸ್‌ ಪ್ರತಿ

7. ವಿದ್ಯಾರ್ಥಿಗೆ ಸಂಬಂಧಿಸಿದ ರಾಷ್ಟ್ರೀಕೃತ ಬ್ಯಾಂಕ್ ಖಾತೆ ಪುಸ್ತಕದ ಮೊದಲ ಪುಟದ ಜೆರಾಕ್ಸ್ ಪ್ರತಿ

8. ಪಡಿತರ ಚೀಟಿ (ರೇಷನ್ ಕಾರ್ಡ್)

ಸೂಚನೆ: ಅರ್ಜಿ ಸಲ್ಲಿಸುವಾಗ ಮೇಲೆ ನಮೂದಿಸಿರುವ ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಸಂದರ್ಶನಕ್ಕೆ ಬರುವಾಗ ಮೂಲ ದಾಖಲೆಗಳನ್ನು ತೆಗೆದುಕೊಂಡು ಹೊಗಬೇಕು.

ಇದನ್ನೂ ಓದಿ: SSC Jobs Notification-2024: SSC 933 ಖಾಲಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಣೆ

ಇದನ್ನೂ ಓದಿ: KPSC WR Dept. Jobs Notification- ಜಲಸಂಪನ್ಮೂಲ ಇಲಾಖೆ ನೇಮಕಾತಿ 313 ಹುದ್ದೆಗಳಿಗೆ ಅರ್ಜಿ ಆಹ್ವಾನ!

Application Download link- ಅರ್ಜಿ ನಮೂನೆಯನ್ನುಡೌನ್ಲೋಡ್ ಮಾಡಲು ಲಿಂಕ್: Download Now

 • ವಿದ್ಯಾರ್ಥಿನಿಲಯ ಮತ್ತು ಶೈಕ್ಷಣಿಕ ಸೌಲಭ್ಯಗಳ ವಿವರ:
 • ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಯಲು ಅವಕಾಶ.
 • ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಕೇಂದ್ರ ಹಾಗೂ ಇಂಟರ್‌ನೆಟ್ ವ್ಯವಸ್ಥೆ.
 • ವಿಶಾಲವಾದ ಕ್ರೀಡಾಂಗಣ ಮತ್ತು ಮಲ್ಟಿಜಿಮ್‌ಗಳು.
 • ಆರೋಗ್ಯ ತಪಾಸಣೆಗಾಗಿ ಜೆಎಸ್‌ಎಸ್ ಆಸ್ಪತ್ರೆ, ಜೆಎಸ್‌ಎಸ್ ದಂತ ಚಿಕಿತ್ಸಾಲಯ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಗಳಿವೆ. ಜೆಎಸ್‌ಎಸ್ ಆಸ್ಪತ್ರೆಗಳ ತಜ್ಞ ವೈದ್ಯರು ಮತ್ತು ಶುಶೂಷಕರ ನಿರಂತರ ಸೇವೆ ಲಭ್ಯವಿದೆ. ಸಣ್ಣಪುಟ್ಟ ಅನಾರೋಗ್ಯಗಳಿಗೆ ಅಗತ್ಯವಾದ ಔಷಧೋಪಚಾರವನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಪೋಷಕರು ಭರಿಸಬೇಕು.

 • ಶಾಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಯಲು ಸಭಾಂಗಣವಿದೆ.
 • ಬೌದ್ಧಿಕ ವಿಕಾಸಕ್ಕಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗಣ್ಯರೊಡನೆ ಆಗಿಂದಾಗ್ಗೆ ಸಂವಾದ ಕಾರ್ಯಕ್ರಮಗಳಿರುತ್ತವೆ.40 ವಿದ್ಯಾರ್ಥಿಗಳು ಇರಬಹುದಾದ ವಿಶಾಲ ಡಾರ್ಮಿಟರಿಗಳು.
 • ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ. ಅಗತ್ಯವಾದ ಪೌಷ್ಟಿಕ ಆಹಾರವನ್ನು ನೀಡಲಾಗುವುದು. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ವಿಶೇಷ ಪ್ರಸಾದದ ವ್ಯವಸ್ಥೆ ಶುದ್ದೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆ ಒದಗಿಸಲಾಗಿದೆ.
 • ಪುಸ್ತಕ, ಬಟ್ಟೆ ಇನ್ನಿತರ ಖಾಸಗಿ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ಕಪಾಟುಗಳ ವ್ಯವಸ್ಥೆ.
 • ಶುಚಿತ್ವಕ್ಕೆ ಹೆಚ್ಚು ಪ್ರಾಶಸ್ತ್ರ, ಶೌಚಾಲಯ ಸ್ನಾನಗೃಹಗಳಿವೆ. ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ ಇದೆ. ಹಾಗೂ ಸುಸಜ್ಜಿತ ಪ್ರತಿ ಡಾರ್ಮಿಟರಿಯಲ್ಲಿಯೂ ಪ್ರತ್ಯೇಕ ಕ್ಷೇಮಪಾಲಕರು ಇರುತ್ತಾರೆ

ಇದನ್ನೂ ಓದಿ: Loan interest- ರೈತರು ಸಾಲದ ಮೇಲಿನ ಬಡ್ಡಿ ಮನ್ನಾದ ಪ್ರಯೋಜನ ಪಡೆಯಲು 31 ಮಾರ್ಚ ಒಳಗಾಗಿ ತಪ್ಪದೇ ಈ ಕೆಲಸ ಮಾಡಿ!

ಇನ್ನು ಹೆಚ್ಚಿನ ಮಾಹಿತಿಗಾಗಿ:

1) ಜೆಎಸ್‌ಎಸ್ ವಿದ್ಯಾರ್ಥಿನಿಲಯ ಹುಲ್ಲಹಳ್ಳಿ, ನಂಜನಗೂಡು ತಾಲ್ಲೂಕು ಶ್ರೀ ಮುತ್ತುರಾಜ್, ನಿಲಯಪಾಲಕರು- 9980612001
2) ಜೆಎಸ್‌ಎಸ್ ವಿದ್ಯಾರ್ಥಿನಿಲಯ ತೆರಕಣಾಂಬಿ, ಗುಂಡ್ಲುಪೇಟೆ ತಾಲ್ಲೂಕು ಶ್ರೀ ಶಿವಕುಮಾ‌ರ್, ನಿಲಯಪಾಲಕರು- 9481437813
3) ಜೆಎಸ್‌ಎಸ್ ವಿದ್ಯಾರ್ಥಿನಿಲಯ ಚಾಮರಾಜನಗರ ಶ್ರೀ ಸೋಮೇಶ್, ನಿಲಯಪಾಲಕರು- 9535252881
4) ಶ್ರೀ ಬಸವೇಶ್ವರ ವಿದ್ಯಾರ್ಥಿನಿಲಯ ಬಾಚಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು- 8971067938
5 ಶ್ರೀ ಬಸವೇಶ್ವರ ವಿದ್ಯಾರ್ಥಿನಿಲಯ- 9742636465
6) ಶ್ರೀ ಬಸವೇಶ್ವರ ವಿದ್ಯಾರ್ಥಿನಿಲಯ ವಡ್ಡಗೆರೆ, ಗುಂಡ್ಲುಪೇಟೆ ತಾಲ್ಲೂಕು ಶ್ರೀ ಮಹಂತದೇವರು, ನಿಲಯಪಾಲಕರು- 6360256679
7) ಜೆಎಸ್‌ಎಸ್ ವಿದ್ಯಾರ್ಥಿನಿಲಯ ಕೆ.ಆರ್. ನಗರ, ನಿಲಯಪಾಲಕರು ಶ್ರೀ ಮಹೇಶ್ ಜಿ. ಬಳಿಗಾರ್, ನಿಲಯಪಾಲಕರು- 9731674358
8) ಜೆಎಸ್‌ಎಸ್ ವಿದ್ಯಾರ್ಥಿನಿಲಯ ರಾಮಾಪುರ, ಕೊಳ್ಳೇಗಾಲ ತಾಲ್ಲೂಕು ಶ್ರೀ ಕೆ. ರಾಜಶೇಖರ್, ನಿಲಯಪಾಲಕರು- 08225-274518, 9449994081
9) ಜೆಎಸ್‌ಎಸ್‌ ವಿದ್ಯಾರ್ಥಿನಿಲಯ ದೊಡ್ಡಕಾಡನೂರು,ಹೊಳೆನರಸೀಪುರ ತಾಲ್ಲೂಕು ಶ್ರೀ ನಂದೀಶ್, ನಿಲಯಪಾಲಕರು- 9740289817

ಇದನ್ನೂ ಓದಿ: Free computer training- 45 ದಿನದ ಉಚಿತ ಕಂಪ್ಯೂಟರ್ ಡಿ.ಟಿ.ಪಿ ಕಲಿಕೆ ತರಬೇತಿಗೆ ಅರ್ಜಿ ಆಹ್ವಾನ!

Application form- ಅರ್ಜಿ ನಮೂನೆ ಡೌನ್ಲೋಡ್ ಮಾಡಲು ಲಿಂಕ್- Download Now

Booklet- ಉಚಿತ ವಿದ್ಯಾರ್ಥಿ ನಿಲಯದ ಪ್ರವೇಶದ ಸಂಪೂರ್ಣ ಮಾಹಿತಿಯ ಪಡೆಯಲು ಕೈಪಿಡಿ: Download Now

website link- ಸುತ್ತೂರು ಶ್ರೀಕ್ಷೇತ್ರದ ಅಧಿಕೃತ ವೆಬ್ಸೈಟ್: Click here