HSRP number plate-2024: HSRP ನಂಬರ್ ಪ್ಲೇಟ್ ಏಕೆ? ಹಾಕಿಸಬೇಕು, ನಂಬರ್ ಪ್ಲೇಟ್ ಹೇಗಿರುತ್ತದೆ? ಇಲ್ಲಿದೆ ಆನ್ಲೈನ್ ನಲ್ಲಿ ಬುಕ್ ಮಾಡಲು ವೆಬ್ಸೈಟ್ ಲಿಂಕ್

ಆತ್ಮೀಯ ಓದುಗ ಮಿತ್ರರೇ ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆಯೇ 2019 ಕ್ಕಿಂತ ಮುಂಚಿತವಾಗಿ ಖರೀದಿಸಿ ವಾಹನ ನೊಂದಣಿ ಮಾಡಿಕೊಂಡಿರುವ ಸಾರ್ವಜನಿಕರು 19 ಫೆಬ್ರವರಿ 2024ರ ಒಳಗಾಗಿ ತಮ್ಮ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಆನ್ಲೈನ್ ಮೂಲಕ ಬುಕ್ ಮಾಡಿ ತಮ್ಮ ವಾಹನಕ್ಕೆ ಅಳವಡಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

HSRP number plate-2024: HSRP ನಂಬರ್ ಪ್ಲೇಟ್ ಏಕೆ? ಹಾಕಿಸಬೇಕು, ನಂಬರ್ ಪ್ಲೇಟ್ ಹೇಗಿರುತ್ತದೆ? ಇಲ್ಲಿದೆ ಆನ್ಲೈನ್ ನಲ್ಲಿ ಬುಕ್ ಮಾಡಲು ವೆಬ್ಸೈಟ್ ಲಿಂಕ್
HSRP number booking link

ಆತ್ಮೀಯ ಓದುಗ ಮಿತ್ರರೇ ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆಯೇ 2019 ಕ್ಕಿಂತ ಮುಂಚಿತವಾಗಿ ಖರೀದಿಸಿ ವಾಹನ ನೊಂದಣಿ ಮಾಡಿಕೊಂಡಿರುವ ಸಾರ್ವಜನಿಕರು 19 ಫೆಬ್ರವರಿ 2024ರ ಒಳಗಾಗಿ ತಮ್ಮ ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಆನ್ಲೈನ್ ಮೂಲಕ ಬುಕ್ ಮಾಡಿ ತಮ್ಮ ವಾಹನಕ್ಕೆ ಅಳವಡಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ.

ಒಂದು ವೇಳೆ ಈ ಕೊನೆಯ ದಿನಾಂಕದ ಒಳಗಾಗಿ HSRP ನಂಬರ್ ಪ್ಲೇಟ್ ಅನ್ನು ನಿಮ್ಮ ವಾಹನಕ್ಕೆ ಅವಳಡಿಸಿಕೊಳ್ಳದೇ ಇದ್ದಲ್ಲಿ ಟ್ರ‍ಾಪಿಕ್ ಪೋಲಿಸರಿಂದ ದಂಡ ಹಾಕಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಎಲ್ಲಾ ಕಾರಣಗಳಿಂದ ಈಗಾಗಲೇ ಅನೇಕ ಜನರು ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ ಅದರೆ ಇನ್ನು ಹಲವು ಜನರು ಈ ಕುರಿತು ಜಾಗೃತರಾಗಿರುವುದಿಲ್ಲ ಇದಲ್ಲದೇ ಇನ್ನೊಂದು ವರ್ಗದ ಜನರಿಗೆ ಈ ನಂಬರ್ ಪ್ಲೇಟ್ ಹೇಗಿರುತ್ತದೆ? ಇದನ್ನು ಏಕೆ ನಮ್ಮ ವಾಹನಕ್ಕೆ ಹಾಕಿಸಿಕೊಳ್ಳಬೇಕು ಎನ್ನುವ ಗೊಂದಲಗಳಿದ್ದು ಈ ಕುರಿತು ಸಂಪೂರ್ಣ ವಿವರವನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: HSRP number plate-ನಿಮ್ಮ ಮೊಬೈಲ್ ನಲ್ಲೇ HSRP ನಂಬರ್ ಪ್ಲೇಟ್ ಬುಕ್ ಮಾಡಲು ಲಿಂಕ್ ಬಿಡುಗಡೆ!

HSRP ನಂಬರ್ ಪ್ಲೇಟ್ ಏಕೆ? ಹಾಕಿಸಬೇಕು?

HSRP ಎಂದರೆ "ಹೈ ಸೆಕ್ಯುರಿಟಿ ರಿಜಿಸ್ಟರ್ ಪ್ಲೇಟ್"(HIGH SECURITY REGISTRATION PLATES) ಎಂದು ಈ ರೀತಿಯ ನಂಬರ್ ಪ್ಲೇಟ್ ಗಳನ್ನು ಸಾರ್ವಜನಿಕರು ಏಕೆ ತಮ್ಮ ವಾಹನಗಳಿಗೆ ಹಾಕಿಸಬೇಕು ಎಂದರೆ ಈ ನಂಬರ್ ಪ್ಲೇಟ್ ಒಮ್ಮೆ ನಿಮ್ಮ ವಾಹನಕ್ಕೆ ಅಳವಡಿಸಿದರೆ ಮುಗಿತ್ತು ಮತ್ತೆ ಮರು ಬಳಕೆ ಮಾಡಲಾಗದ ಹಾಗೆ ಲಾಕ್ ಮಾಡಲಾಗಿರುತ್ತದೆ.

ಇದನ್ನು ಹೊರತುಪಡಿಸಿಯು ಯಾರಾದರು ನಿಮ್ಮ ವಾಹನದ ನಂಬರ್ ಪ್ಲೇಟ್ ಬದಲಾಯಿಸಲು ಯತ್ನಿಸಿದಲ್ಲಿ ಈ ಪ್ಲೇಟ್ ನಾಶವಾಗಿ ಹೋಗುತ್ತದೆ.

ಈ ಕಾರಣದಿಂದಾಗಿ ಕಳ್ಳರನ್ನು ಅಥವಾ ಇತರೆ ಕಾನೂನು ಬಾಹಿರ ಚಟುವಟಿಗೆ ನಂಬರ್ ಪ್ಲೇಟ್ ಬದಲಾಯಿಸುವವರನ್ನು ಸುಲಭವಾಗಿ ಪೋಲಿಸರಿಗೆ ಗುರುತಿಸಲು ಇದು ನಂಬರ್ ಪ್ಲೇಟ್ ಗಳ ಅಳವಡಿಕೆಯಿಂದ ಸಾಧ್ಯವಾಗುತ್ತದೆ.

ಇದನ್ನೂ ಓದಿ: PMFME ಯೋಜನೆಯಡಿ ಸ್ವ-ಉದ್ಯೋಗ ಆರಂಭಿಸಲು 15 ಲಕ್ಷ ದವರೆಗೆ ಶೇ 50% ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

HSRP ನಂಬರ್ ಪ್ಲೇಟ್ ಹೇಗಿರುತ್ತದೆ?

1) HSRP ನಂಬರ್ ಪ್ಲೇಟ್ ನಲ್ಲಿರುವ ಎಲ್ಲಾ ಅಕ್ಷರಗಳು ಒಂದೇ ರೀತಿಯ ಗಾತ್ರವನ್ನು ಒಂದಿದ್ದು ಮತ್ತು ಒಂದೇ ಬಗ್ಗೆಯ ಫಾಂಟ್ ನಿಂದ ಕೂಡಿರುತ್ತವೆ.

2) ನಂಬರ್ ಪ್ಲೇಟ್ ನ ಎಡಭಾಗದಲ್ಲಿ ವಾಹನ ವರ್ಗದ ಆಧಾರದ ಮೇಲೆ ಬಣದ ಗುರುತನ್ನು ಮಾಡಲಾಗಿರುತ್ತದೆ. ಉದಾಹರಣೆಗೆ ಖಾಸಗಿ ವಾಹನಗಳಿಗೆ ಕಪ್ಪು ಬಣ್ಣದ ಸಂಖ್ಯೆಗಳಿರುವ ಮತ್ತು ಇಂಡಿಯಾ(IND) ಎಂದು ಹಾಟ್ ಸ್ಟ್ಯಾಂಪ್ ಹಾಕಲಾಗಿರುತ್ತದೆ.

HSRP Registration- HSRP ನಂಬರ್ ಪ್ಲೇಟ್ ಚಿತ್ರ:

ಇಲ್ಲಿದೆ ಆನ್ಲೈನ್ ನಲ್ಲಿ ಬುಕ್ ಮಾಡಲು ವೆಬ್ಸೈಟ್ ಲಿಂಕ್:

ಇಲ್ಲಿಯವರೆಗೆ ಈ ನಂಬರ್ ಪ್ಲೇಟ್ ಅನ್ನು ಹಾಕಿಸಿಕೊಳ್ಳದವರು ಕೂಡಲೇ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಮ್ಮ  ಪುಟದ ಇನ್ನೊಂದು ಅಂಕಣ ಭೇಟಿ ಮಾಡಿ ಆನ್ಲೈನ್ ನಲ್ಲಿ HSRP ನಂಬರ್ ಪ್ಲೇಟ್ ಹೇಗೆ ಬುಕ್ ಮಾಡಬೇಕು? ಎನ್ನುವ ಸಂಪೂರ್ಣ ಮಾಹಿತಿ ಮತ್ತು ವೆಬ್ಸೈಟ್ ಲಿಂಕ್ ಪಡೆದುಕೊಳ್ಳಬಹುದು.

ಇದನ್ನೂ ಓದಿ: Nadakacheri- ನಾಡಕಚೇರಿಯಲ್ಲಿ ಯಾವೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು? ಎಷ್ಟು ಶುಲ್ಕ ಪಾವತಿ ಮಾಡಬೇಕು?

ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ವೆಬ್ಸೈಟ್ ಲಿಂಕ್: click here
HSRP ನಂಬರ್ ಪ್ಲೇಟ್ ಬುಕ್ ಮಾಡಲು ಲಿಂಕ್: Book Now
ಸಹಾಯವಾಣಿ ಸಂಖ್ಯೆಗಳು: 9449863429 ಅಥವಾ 9449863426