Hutti Gold Mine Recruitment-2024: ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ 168 ಹುದ್ದೆಗಳಿಗೆ ನೇಮಕಾತಿ!

ದೇಶದಲ್ಲಿಯೇ ಚಿನ್ನದ ಉತ್ಪಾದನೆ ಮಾಡುವುದರಲ್ಲಿ ಅಗ್ರಸ್ಥಾನ ಹೊಂದಿರುವಂತಹ ರಾಯಚೂರಿನ ಹಟ್ಟಿ ಚಿನ್ನದ ಗಣಿ(Hutti Gold Mine Jobs)ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಯ ಅರ್ಜಿಗೆ ಸಂಬಂಧಿಸಿದಂತೆ ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಸೇರಿದಂತೆ ಪ್ರಮುಖ ವಿವರಗಳನ್ನು ಇಲ್ಲಿ ನೀಡಲಾಗಿದೆ.

Hutti Gold Mine Recruitment-2024: ರಾಯಚೂರಿನ ಹಟ್ಟಿ ಚಿನ್ನದ ಗಣಿಯಲ್ಲಿ 168 ಹುದ್ದೆಗಳಿಗೆ ನೇಮಕಾತಿ!
Hutti Gold Mine Recruitment-2024

ದೇಶದಲ್ಲಿಯೇ ಚಿನ್ನದ ಉತ್ಪಾದನೆ ಮಾಡುವುದರಲ್ಲಿ ಅಗ್ರಸ್ಥಾನ ಹೊಂದಿರುವಂತಹ ರಾಯಚೂರಿನ ಹಟ್ಟಿ ಚಿನ್ನದ ಗಣಿ(Hutti Gold Mine Jobs)ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿಯನ್ನು ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ನೇಮಕಾತಿಯ ಅರ್ಜಿಗೆ ಸಂಬಂಧಿಸಿದಂತೆ ಅರ್ಹತೆ, ಅರ್ಜಿ ಸಲ್ಲಿಕೆ ವಿವರ ಸೇರಿದಂತೆ ಪ್ರಮುಖ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಹಟ್ಟಿ ಚಿನ್ನದ ಗಣಿ ಕಂಪನಿಯು ಮಾರ್ಚ್ ತಿಂಗಳಿನಲ್ಲಿಯೇ ಅಧಿಸೂಚನೆ ಹೊರಡಿಸಿ ಅರ್ಜಿ ಆಹ್ವಾನಿಸಲಾಗಿತ್ತು. ಹಿಂದಿನ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಮೇ 30, 2024 ಕ್ಕೆ ನಿಧಿಪಡಿಸಲಾಗಿತ್ತು. ಹಲವಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕವನ್ನು ಇದೀಗ ಜೂನ್ 16ನೇ ತಾರೀಖಿನವರೆಗೆ ವಿಸ್ತರಿಸಲಾಗಿದೆ.

ಇದನ್ನೂ ಓದಿ: HSRP Number plate-ನಿಮ್ಮ ವಾಹನಕ್ಕೆ ಎಚ್.ಎಸ್.ಆರ್.ಪಿ ನಂಬರ್ ಪ್ಲೇಟ್ ಹಾಕಿಸಲು ಇದು ಕೊನೆಯ ಅವಕಾಶ!

Hutti Gold Mine Company Recruitment Details - ನೇಮಕಾತಿ ಮಾಹಿತಿ : 

• ನೇಮಕಾತಿ ಸಂಸ್ಥೆ : ಹಟ್ಟಿ ಗೋಲ್ಡ್ ಮೈನ್ ಕಂಪನಿ
• ನೇಮಕಾತಿ ಹುದ್ದೆಗಳು : 168
• ಉದ್ಯೋಗ ಸ್ಥಳ : ರಾಯಚೂರು 

ಖಾಲಿ ಹುದ್ದೆಗಳ ವಿವರ - ರಾಯಚೂರಿನ ಹಟ್ಟಿ ಗೋಲ್ಡ್ ಮೈನ್ ಕಂಪನಿ ನಿಯಮಿತದಲ್ಲಿ ಸೆಕ್ಯೂರಿಟಿ ಗಾರ್ಡ್, ಭದ್ರತಾ ನಿರೀಕ್ಷಕರು ಸೇರಿದಂತೆ ಹಲವಾರು ಹುದ್ದೆಗಳಿಗೆ ಈ ಒಂದು ನೇಮಕಾತಿ ನಡೆಯುತ್ತಿದೆ. ಹುದ್ದೆಗಳ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳ ಕೆಳಗೆ ನೀಡಿರುವಂತಹ ಅಧಿಸೂಚನೆಯನ್ನು ಪರಿಶೀಲಿಸಬಹುದು. 

ಶೈಕ್ಷಣಿಕ ಅರ್ಹತೆ - ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ವಿಷಯಗಳಲ್ಲಿ ದ್ವಿತೀಯ ಪಿಯುಸಿ, ಡಿಪ್ಲೋಮಾ, ಪದವಿ ಹಾಗೂ ಐಟಿಐ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಇದನ್ನೂ ಓದಿ: Parihara amount-2024: ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣ ಪಡೆಯಿರಿ!

ಮಾಸಿಕ ವೇತನ - ಆಯ್ಕೆಯಾಗುವಂತಹ ಅಭ್ಯರ್ಥಿಗಳಿಗೆ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಮಾಸಿಕ ವೇತನವನ್ನು ಅಭ್ಯರ್ಥಿಗಳು ಆಯ್ಕೆಯಾಗುವ ಹುದ್ದೆಗಳಿಗೆ ಅನುಗುಣವಾಗಿ ₹20,920/- ಯಿಂದ ₹48,020 ರವರೆಗೆ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ವಯೋಮಿತಿ ಮಾನದಂಡ - Age limit and Age Relaxation : 

ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಹೊಂದಿರಬೇಕು ಮತ್ತು ಗರಿಷ್ಠ 35 ವರ್ಷದ ಒಳಗಿರಬೇಕು.
ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ಈ ಕೆಳಗಿನಂತೆ ವಯೋ ಸಡಿಲಿಕೆ ನೀಡಲಾಗುತ್ತದೆ.
• ಪ್ರವರ್ಗ 2a 2b 3a 3b ವರ್ಗದ ಅಭ್ಯರ್ಥಿಗಳಿಗೆ - 3 ವರ್ಷ 
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ವರ್ಗದ ಅಭ್ಯರ್ಥಿಗಳಿಗೆ - 5 ವರ್ಷ

ಇದನ್ನೂ ಓದಿ: How to link pan card aadhar card: ಪ್ಯಾನ್ ಕಾರ್ಡ್ ಗೆ ಆಧಾರ್ ಲಿಂಕ್ ಮಾಡದವರಿಗೆ ಶಾಕಿಂಗ್ ನ್ಯೂಸ್! 

ಆಯ್ಕೆ ವಿಧಾನ - ಅರ್ಜಿ ಸಲ್ಲಿಸಿದಂತಹ ಅರ್ಹ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ನಡೆಸಿ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆಯನ್ನು ನಡೆಸಿ ಹುದ್ದೆಗಳಿಗೆ ಅಂತಿಮವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಶುಲ್ಕ ಮಾಹಿತಿ:
 
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600ರೂ, ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ಅಭ್ಯರ್ಥಿಗಳಿಗೆ 300ರೂ. ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1, ಮಾಜಿ ಸೈನಿಕ ವರ್ಗದ ಅಭ್ಯರ್ಥಿ ಹಾಗೂ ವಿಶೇಷ ಚೇತನ ಅಭ್ಯರ್ಥಿಗಳಿಗೆ 100ರೂ.

ಅರ್ಜಿ ಸಲ್ಲಿಸಲು ವಿಸ್ತರಿಸಲಾದ ಕೊನೆಯ ದಿನಾಂಕ - 16ನೇ ಜೂನ್ 2024 

ನೇಮಕಾತಿಯ ಅವಶ್ಯಕ ಲಿಂಕ್ ಗಳು - 

• ಅರ್ಜಿ ಸಲ್ಲಿಕೆಯ ಡೈರೆಕ್ಟ್ ಲಿಂಕ್ : Click here

• ಕೊನೆಯ ದಿನಾಂಕ ವಿಸ್ತರಿಸಲಾದ ಪ್ರಕಟಣೆ : ವೀಕ್ಷಿಸಿ 
• ಅಧಿಕೃತ ಅಧಿಸೂಚನೆ (HK) : ವೀಕ್ಷಿಸಿ 
• ಅಧಿಕೃತ ಅಧಿಸೂಚನೆ (RPC) : ವೀಕ್ಷಿಸಿ