Indian Army Recruitment-2024: ಭಾರತೀಯ ಸೇನೆಯಲ್ಲಿ ₹56,100 ಸ್ಟೈಪೆಂಡ್ ನೊಂದಿಗೆ ಟಿಜಿಸಿ ತರಬೇತಿಗೆ ಅರ್ಜಿ ಆಹ್ವಾನ!

ಭಾರತೀಯ ಸೇನೆಯು 2025 ಜನವರಿ ಸಾಲಿಗೆ ಟೆಕ್ನಿಕಲ್ ಎಂಟ್ರಿ ಸ್ಕೀಮ್ ತರಬೇತಿಗೆ ನೇಮಕಾತಿ(Indian Army TGC Recruitment ) ಮಾಡಿಕೊಳ್ಳಲು ಭಾರತೀಯ ಸೇನೆಯು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದರ ಕುರಿತು ಪ್ರಕಟಣೆಯ ವಿವರ ಇಲ್ಲಿದೆ.

Indian Army Recruitment-2024: ಭಾರತೀಯ ಸೇನೆಯಲ್ಲಿ ₹56,100 ಸ್ಟೈಪೆಂಡ್ ನೊಂದಿಗೆ ಟಿಜಿಸಿ ತರಬೇತಿಗೆ ಅರ್ಜಿ ಆಹ್ವಾನ!
Indian Army Recruitment-2024

ಭಾರತೀಯ ಸೇನೆಯು 2025 ಜನವರಿ ಸಾಲಿಗೆ ಟೆಕ್ನಿಕಲ್ ಎಂಟ್ರಿ ಸ್ಕೀಮ್ ತರಬೇತಿಗೆ ನೇಮಕಾತಿ(Indian Army TGC Recruitment ) ಮಾಡಿಕೊಳ್ಳಲು ಭಾರತೀಯ ಸೇನೆಯು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದ್ದು, ಇದರ ಕುರಿತು ಪ್ರಕಟಣೆಯ ವಿವರ ಇಲ್ಲಿದೆ.

ಪರ್ಮನೆಂಟ್ ಕಮಿಷನರ್ ಅಡಿಯಲ್ಲಿ ನೀಡಲಾಗುವ ಈ ತರಬೇತಿಯು ಮಿಲಿಟರಿ ಟ್ರೈನಿಂಗ್ ಮತ್ತು ಟೆಕ್ನಿಕಲ್ ಟ್ರೈನಿಂಗ್ ಒಳಗೊಂಡಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದ್ದು, ಆಸಕ್ತ ಅಭ್ಯರ್ಥಿಗಳು ಮೇ 9ನೇ ತಾರೀಕಿನ ಒಳಗಾಗಿ ಅರ್ಜಿ ಸಲ್ಲಿಸಿ. 

ಇದನ್ನೂ ಓದಿ: Rain forecast- ಇಲ್ಲಿದೆ ರಾಜ್ಯದ ಮಳೆ ಮುನ್ಸೂಚನೆ ಸಮಗ್ರ ಮಾಹಿತಿ!

Indian Army TGC Recruitment 2024 - ಭಾರತೀಯ ಸೇನೆಯ ಈ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು : 

ಈ ತರಬೇತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಿಂದ ಸಂಬಂಧಿಸಿದ ವಿಷಯಗಳಲ್ಲಿ ಇಂಜಿನಿಯರಿಂಗ್ ಪದವಿ (B. E ) ಮುಗಿಸಿರುವವರು ಅರ್ಹರಿರುತ್ತಾರೆ. ಅದೇ ರೀತಿ ನಿಗದಿತ ವಿದ್ಯಾರ್ಹತೆಗೆ ಸಂಬಂಧಿಸಿದಂತೆ ಪರೀಕ್ಷೆಯನ್ನು ಬರೆದು ಪಲಿತಾಂಶದ ನಿರೀಕ್ಷೆಯಲ್ಲಿರುವವರು ಕೂಡ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ. ಆದರೆ ಅಭ್ಯರ್ಥಿಗಳು 2025ರ ಜನವರಿ ಒಂದನೇ ತಾರೀಖಿನ ಒಳಗಾಗಿ ನಿಗದಿಪಡಿಸಲಾಗಿರುವ ವಿದ್ಯಾರ್ಹತೆಯನ್ನು ಮುಗಿಸಿರಬೇಕು. 

Age Limit- ವಯೋಮಿತಿ ಮಾನದಂಡ : 

Indian Army TGC Recruitment- ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 20 ರಿಂದ 27 ವರ್ಷದೊಳಗಿನವರಿರಬೇಕು, ಅರ್ಥಾತ್ 1998ರ ಜನವರಿ 2 ರಿಂದ 2005ರ ಜನವರಿ ಒಂದನೇ ತಾರೀಖಿನ ಒಳಗೆ ಜನಿಸಿರಬೇಕು. 

ಇದನ್ನೂ ಓದಿ: Co-operative Bank Recruitment-2024: ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗವಕಾಶ! 19 ಏಪ್ರಿಲ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನ!

Selection process- ಆಯ್ಕೆ ಪ್ರಕ್ರಿಯೆ ವಿವರ ಮತ್ತು ತರಬೇತಿ ವಿವರ : 

ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳು ನಿಗದಿಪಡಿಸಲಾಗಿರುವ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗುವುದು. ನಂತರದಲ್ಲಿ ಅಭ್ಯರ್ಥಿಗಳಿಗೆ SSB Interview ಹಾಗೂ ವೈದ್ಯಕೀಯ ಪರೀಕ್ಷೆ ನಡೆಸುವುದರ ಮುಕಾಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಆಯ್ಕೆಯಾದ ಅಭ್ಯರ್ಥಿಗಳಿಗೆ ಡೆಹರಾಡೂನ್ ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಒಟ್ಟು 12 ವಾರಗಳ ಮಿಲಿಟರಿ ಹಾಗೂ ಟೆಕ್ನಿಕಲ್ ಟ್ರೈನಿಂಗ್ (Military and Technical Training) ನೀಡಲಾಗುವುದು. ತರಬೇತಿ ಮುಗಿದ ನಂತರ ಅಭ್ಯರ್ಥಿಗಳು ಲೆಫ್ಟಿನೆಂಟ್ ಪದವಿಯಲ್ಲಿ ಸೇವೆ ಮಾಡುವ ಅವಕಾಶವಿದೆ. 

ಸ್ಟೈಪೆಂಡ್ - ತರಬೇತಿಯೊಂದಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ₹56,100/- ಸ್ಟೈಫನ್ ಕೂಡ ನೀಡಲಾಗುತ್ತದೆ. 

ಇದನ್ನೂ ಓದಿ: Railway SI & Constable Recruitment: 4500+ SI ಹಾಗೂ ಕಾನ್ ಸ್ಟೇಬಲ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ!

How to apply- ಅರ್ಜಿ ಸಲ್ಲಿಸುವ ವಿಧಾನ - 

ಅರ್ಹ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ ನಂತರದಲ್ಲಿ ತೆರೆಯುವ ವೆಬ್ ಪುಟದಲ್ಲಿ ಕಾಣುವ "Officer Entry Apply/Login" ಬಟನ್ ಮೇಲೆ ಕ್ಲಿಕ್ ಮಾಡಿ ನೊಂದಣಿ ಮಾಡುವುದರ ಮುಖಾಂತರ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಬಹುದು. 

Usefull website links- ಅವಶ್ಯಕ ಲಿಂಕ್ ಗಳು:

ಅರ್ಜಿ ಸಲ್ಲಿಸಲು ಲಿಂಕ್: Apply Now 
ಸಹಾಯವಾಣಿ : 011-20862673
Notification : Download Now