KPSC Recruitments 2024- KPSC ಯಿಂದ 277 ಹುದ್ದೆಗಳಿಗೆ ಅರ್ಜಿ ಅಹ್ವಾನ! ಜಲ ಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿ.

ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ನಾಗರಿಕ ಸೇವಾ ನೇರ ನೇಮಕಾತಿ(KPSC Recruitments) ನಿಯಮಗಳ ಅನ್ವಯ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ 'ಬಿ' ವೃಂದದ 277 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

KPSC Recruitments 2024- KPSC ಯಿಂದ 277 ಹುದ್ದೆಗಳಿಗೆ ಅರ್ಜಿ ಅಹ್ವಾನ! ಜಲ ಸಂಪನ್ಮೂಲ ಇಲಾಖೆಯಲ್ಲಿ ನೇಮಕಾತಿ.
KPSC Recruitments 2024

ಕರ್ನಾಟಕ ಲೋಕಸೇವಾ ಆಯೋಗ ಕರ್ನಾಟಕ ನಾಗರಿಕ ಸೇವಾ ನೇರ ನೇಮಕಾತಿ(KPSC Recruitments) ನಿಯಮಗಳ ಅನ್ವಯ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ 'ಬಿ' ವೃಂದದ 277 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

Karnataka Public Service Commission - ಕರ್ನಾಟಕ ಲೋಕಸೇವಾ ಆಯೋಗ ರಾಜ್ಯದ ಒಟ್ಟು 9 ಇಲಾಖೆಗಳಲ್ಲಿನ ಒಟ್ಟು 277 ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳ ನೇಮಕಾತಿಯ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ.

 ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು, ವಯೋಮಿತಿ ಮಾನದಂಡ, ಅರ್ಜಿ ಶುಲ್ಕ ಮಾಹಿತಿ, ಪ್ರಮುಖ ದಿನಾಂಕಗಳನ್ನು ಇಲ್ಲಿ ವಿವರಿಸಲಾಗಿದ್ದು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ. 

ಇದನ್ನೂ ಓದಿ: KPSC Group C Jobs Application - ರಾಜ್ಯದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ!

KPSC Recruitment Details : ನೇಮಕಾತಿ ವಿವರ 

1. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ - 92 ಹುದ್ದೆಗಳು
2. ಜಲ ಸಂಪನ್ಮೂಲ ಇಲಾಖೆ - 90 
3. ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ - 24
4. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ - 21  
5. ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ - 20
6. ಜಲ ಸಂಪನ್ಮೂಲ ಇಲಾಖೆ - 10
7. ಕಾರ್ಖಾನೆಗಳು, ಬಾಯ್ಲ್ ರ್ ಗಳು, ಕೈಗಾರಿಕಾ ಸುರಕ್ಷಿತ ಮತ್ತು ಸ್ವಾಸ್ಥ್ಯ ಇಲಾಖೆ (ಕಾರ್ಖಾನೆಗಳ ಸಹಾಯಕ ನಿರ್ದೇಶಕರು) - 07 
8. ಕಾರ್ಖಾನೆಗಳು, ಬಾಯ್ಲ್ ರ್ ಗಳು, ಕೈಗಾರಿಕಾ ಸುರಕ್ಷಿತ ಮತ್ತು ಸ್ವಾಸ್ಥ್ಯ ಇಲಾಖೆ (ಬಾಯ್ಲ್ ರ್ ಗಳ ಸಹಾಯಕ ನಿರ್ದೇಶಕರು) - 03
9. ಅಂತರ್ಜಲ ನಿರ್ದೇಶನಾಲಯ - 10 ಹುದ್ದೆಗಳು 

Important dates- ನೇಮಕಾತಿಗೆ ನಿಗದಿಪಡಿಸಿರುವ ಕಾಲಮಿತಿ : 

• ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ : 15 ಏಪ್ರಿಲ್ 2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 14 ಮೇ 2024
• ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ : 14 ಮೇ 2024
• ಸ್ಪರ್ಧಾತ್ಮಕ ಪರೀಕ್ಷಾ ದಿನಾಂಕ : 11 ಆಗಸ್ಟ್ 2024

ಇದನ್ನೂ ಓದಿ: Parihara - 34 ಲಕ್ಷ ರೈತರ ಖಾತೆಗೆ ಈ ದಿನ ಜಮಾ ಅಗಲಿದೆ 2 ನೇ ಕಂತಿನ ಬರ ಪರಿಹಾರ!

Education Qualification- ನೇಮಕಾತಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ವಿದ್ಯಾರ್ಹತೆ ಮತ್ತು ವಯೋಮಿತಿ : 

ಕರ್ನಾಟಕ ಲೋಕಸೇವಾ ಆಯೋಗವು 9 ಇಲಾಖೆಗಳ ನೇಮಕಾತಿಗೆ ವಿವರವಾದ ಅಧಿಸೂಚನೆಯನ್ನು ಹೊರಡಿಸಿದ್ದು, ಈ pdf ಅನ್ನು ಕೆಳಗಿನ ಭಾಗದಲ್ಲಿ ನೀಡಿರುತ್ತೇವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅದನ್ನು ಡೌನ್ಲೋಡ್ ಮಾಡಿಕೊಂಡು ಅರ್ಹತೆಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸಿ.

Age limit-ವಯೋಮಿತಿ ಮಾನದಂಡ : 

ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು - 18 ವರ್ಷ ಗರಿಷ್ಠ ವಯೋಮಿತಿಯು ಸಾಮಾನ್ಯ ವರ್ಗದ ಅಭ್ಯರ್ಥಿಗಳು 35 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ವಯೋ ಸಡಿಲಿಕೆ ಅನ್ವಯವಾಗಲಿದೆ.

ಇದನ್ನೂ ಓದಿ: Crop loan-ರೈತರು ಬೆಳೆ ಸಾಲ ಪಡೆಯಲು ತಪ್ಪದೇ ಈ ಕೆಲಸ ಮಾಡಿ!

ವೇತನ ಶ್ರೇಣಿ: ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳ ಸಂಬಳವು ನೇಮಕಾತಿ ನಿಯಮಗಳ ಪ್ರಕಾರ ಇರಲಿದೆ. 

Application fee-ಅರ್ಜಿ ಶುಲ್ಕ : 

ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : ರೂ.300/-
ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : ರೂ.150/-
ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ರೂ.50/-
ಇನ್ನುಳಿದ ವರ್ಗದ ಅಭ್ಯರ್ಥಿಗಳಿಗೆ : ಶುಲ್ಕ ವಿನಾಯಿತಿ ಇದೆ.

Useful website links- ಅರ್ಜಿ ಸಲ್ಲಿಸಲು ಅವಶ್ಯಕ ಲಿಂಕ್ ಗಳು : 

ಅರ್ಜಿ ಸಲ್ಲಿಸಲು ಲಿಂಕ್- Apply Now