Micro credit loan scheme- ಪ್ರೇರಣಾ ಯೋಜನೆಯಡಿ ಸಹಾಯಧನದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನ!
Micro credit loan: ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನೊಂದಾಯಿತ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಪ್ರೇರಣಾ (ಮೈಕ್ರೋಕ್ರೆಡಿಟ್) ಯೋಜನೆಯಡಿ ಸಹಾಯಧನದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ನೊಂದಾಯಿತ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಪ್ರೇರಣಾ (ಮೈಕ್ರೋಕ್ರೆಡಿಟ್) ಯೋಜನೆಯಡಿ ಸಹಾಯಧನದಲ್ಲಿ ಸಾಲ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರೇರಣಾ (ಮೈಕ್ರೋಕ್ರೆಡಿಟ್) ಯೋಜನೆಯಡಿ ಪರಿಶಿಷ್ಟ ಜಾತಿ/ಪಂಗಡದ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಕಿರು ಆರ್ಥಿಕ ಚಟುವಟಿಕೆಗಳಿಗಾಗಿ ಸಾಲ ಮತ್ತು ಸಹಾಯಧನ ಸೌಲಭ್ಯ ನೀಡಲು ಸಮಾಜ ಕಲ್ಯಾಣ ಇಲಾಖೆಯಡಿಯ ವಿವಿಧ ನಿಗಮಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಫಲಾನುಭವಿಗಳು ಅಗತ್ಯ ದಾಖಲಾತಿಗಳ ಸಮೇತ ಆನ್ಲೈನ್ ಮೂಲಕ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ ಈ ಯೋಜನೆಯ ಪ್ರಯೋಜನ ಪಡೆಯಬವುದು.
ಇದನ್ನೂ ಓದಿ: fruits ID: ರೈತರಿಗೆ FID ನಂಬರ್ ರಚನೆ ಕುರಿತು ಮತ್ತೊಂದು ಹೊಸ ಪ್ರಕಟಣೆ!
ಎಷ್ಟು ಸಹಾಯಧನ ಪಡೆಯಬವುದು?
ಈ ಯೋಜನೆಯ ಮೂಲಕ ನೊಂದಾಯಿತ ಮಹಿಳಾ ಸ್ವ-ಸಹಾಯ ಸಂಘಗಳಿಗೆ(ಕನಿಷ್ಠ 10 ಸದಸ್ಯರನ್ನು ಹೊಂದಿರಬೇಕು) ಕಿರು ಆರ್ಥಿಕ ಚಟುವಟಿಕೆಗಳಿಗೆ/ಸ್ವ-ಉದ್ಯೋಗ ಆರಂಭಿಸಲು ಸಾಲ ನೀಡುವುದರ ಜೊತೆಗೆ ಸಹಾಯಧನ ಸೌಲಭ್ಯ ನೀಡಲಾಗುತ್ತದೆ.
ಒಟ್ಟು ರೂ 2.5 ಲಕ್ಷ ಕ್ಕೆ ರೂ 1.5 ಲಕ್ಷ ಸಹಾಯಧನ ನೀಡುವುದರ ಜೊತೆಗೆ ಬಾಕಿ ಉಳಿದ 1.00 ಲಕ್ಷಕ್ಕೆ ಶೇಕಡ 4ರ ಬಡ್ಡಿದರದಲ್ಲಿ ಸಾಲ ಒದಗಿಸಲಾಗುತ್ತದೆ.
ಇದನ್ನೂ ಓದಿ: Annabhagya november amount-2023: ಅನ್ನಭಾಗ್ಯ ಯೋಜನೆ ನವೆಂಬರ್ ತಿಂಗಳ ಹಣ ಜಮಾ! ಈ ಎರಡು ವಿಧಾನ ಅನುಸರಿಸಿ ನಿಮಗೆ ಎಷ್ಟು ಹಣ ಬಂದಿದೆ ಎಂದು ಚೆಕ್ ಮಾಡಿ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
- ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ
- ಆದಾಯ ಮಿತಿ ಗ್ರಾಮೀಣ ಪ್ರದೇಶದಲ್ಲಿ ರೂ.1.5 ಲಕ್ಷ, ನಗರ ಪ್ರದೇಶದಲ್ಲಿ ರೂ.2.00 ಲಕ್ಷ
- ಸ೦ಘವು ನೋಂದಣಿಯಾಗಿದ್ದು ಕನಿಷ್ಠ 10 ಜನ ಸದಸ್ಯರನ್ನು ಒಳಗೊಂಡಿರಬೇಕು
- ಕುಟುಂಬದ ಪಡಿತರ ಚೀಟಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಆಸಕ್ತ ಅರ್ಹ ಅರ್ಜಿದಾರರು 29 ನವೆಂಬರ್ 2023ರ ಒಳಗಾಗಿ ಸೇವಾ ಸಿಂಧು ಪೋರ್ಟಲ್ ಮೂಲಕ ಅಗತ್ಯ ದಾಖಲಾತಿಗಳನ್ನು ಒದಗಿಸಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಎಲ್ಲಿ ಅರ್ಜಿ ಸಲ್ಲಿಸಬೇಕು?
ಅರ್ಹ ಸ್ವ-ಸಹಾಯ ಗುಂಪಿನ ಸದಸ್ಯರು ಕೊನೆಯ ದಿನಾಂಕದ ಒಳಗಾಗಿ ನಿಮ್ಮ ಹತ್ತಿರದ ಗ್ರಾಮ್ ಒನ್ ಬೆಂಗಳೂರು ಒನ್ ಅಥವಾ ಕಂಪ್ಯೂಟರ್ ಸೆಂಟರ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: akrama-sakrama yojana: ಅಕ್ರಮ ಸಕ್ರಮ ಯೋಜನೆಯಡಿ ಜಮೀನು ಪಡೆಯಲು ರಾಜ್ಯ ಸರಕಾರದಿಂದ ನೂತನ ಕ್ರಮ ಚಾರಿ!
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ:
ಆಸಕ್ತ ಅರ್ಜಿದಾರರು ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಕಲ್ಯಾಣ ಮಿತ್ರ 24x7 ಸಹಾಯವಾಣಿ: 9482300400 ಸಂಖ್ಯೆಗೆ ಕರೆ ಮಾಡಿ.
ಸೇವಾ ಸಿಂಧು ಪೋರ್ಟಲ್ ಲಿಂಕ್:
ಅರ್ಜಿ ಸಲ್ಲಿಸಲು ಸೇವಾ ಸಿಂಧು ಪೋರ್ಟಲ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ.