October Pension amount-2023: 77.6 ಲಕ್ಷ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ಪಿಂಚಣಿ ಹಣ ಜಮೆ! ನಿಮಗೆ ಬಂತಾ ಚೆಕ್ ಮಾಡಿ.

October Pension amount-2023: ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆಗಳನ್ನು ನಿರ್ದೇಶನಾಲಯ ವತಿಯಿಂದ  ಅಕ್ಟೋಬರ್ ತಿಂಗಳ  ಪಿಂಚಣಿ(pinchani) ಹಣವನ್ನು ರಾಜ್ಯದ ಒಟ್ಟು 77,63,513 ಫಲಾನುಭವಿಗಳಿಗೆ DBT ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. 

October Pension amount-2023: 77.6 ಲಕ್ಷ ಫಲಾನುಭವಿಗಳಿಗೆ ಅಕ್ಟೋಬರ್ ತಿಂಗಳ ಪಿಂಚಣಿ ಹಣ ಜಮೆ! ನಿಮಗೆ ಬಂತಾ ಚೆಕ್ ಮಾಡಿ.
October Pension amount-2023

October Pension amount-2023: ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ಯೋಜನೆಗಳನ್ನು ನಿರ್ದೇಶನಾಲಯ ವತಿಯಿಂದ  ಅಕ್ಟೋಬರ್ ತಿಂಗಳ  ಪಿಂಚಣಿ(pinchani) ಹಣವನ್ನು ರಾಜ್ಯದ ಒಟ್ಟು 77,63,513 ಫಲಾನುಭವಿಗಳಿಗೆ DBT ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. 

ಈ ಯೋಜನೆಯಲ್ಲಿ ಅಂದರೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ, ವಿಧವಾ ಪಿಂಚಣಿ ಯೋಜನೆ, ಅಂಗವಿಕಲ ಪಿಂಚಣಿ, ಸಂಧ್ಯಾ ಸುರಕ್ಷಾ ಯೋಜನ, ಮನಸ್ವಿನಿ, ಮೈತ್ರಿ, ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ ಯೋಜನೆ, ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಯೋಜನೆ, 

ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿಯನ್ನು ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳು ನಿಮಗೆ ಹಣ ಬಂದಿರುವುದನ್ನು ನಿಮ್ಮ ಮೊಬೈಲ್ ನಲ್ಲೇ ಈ ಕೆಳಗೆ ನೀಡಿರುವ ವೆಬ್ಸೈಟ್ ಭೇಟಿ ಮಾಡಿ ಖಚಿತಪಡಿಸಿಕೊಳ್ಳಬವುದು.

ಇದನ್ನೂ ಓದಿ: load shedding: ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದ ರಾಜ್ಯದ ಜನತೆಗೆ ನೆಮ್ಮದಿ ಸುದ್ದಿ ನೀಡಿದ ರಾಜ್ಯ ಸರಕಾರ!

October Pension amount satus check-ಅಕ್ಟೋಬರ್ ತಿಂಗಳ ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ಫಲಾನುಭವಿಗಳು ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯದ ಅಧಿಕೃತ ಜಾಲತಾಣ ಭೇಟಿ ಮಾಡಿ ಪಿಂಚಣಿ ಯೋಜನೆಯಡಿ ನಿಮ್ಮ ಖಾತೆಗೆ ಹಣ ಜಮಾ ಅಗಿರುವುದನ್ನು ಚೆಕ್ ಮಾಡಿಕೊಳ್ಳಬವುದು.

ಈ ವೆಬ್ಸೈಟ್ ನಲ್ಲಿ ಅರ್ಜಿ ಸ್ಥಿತಿ ಪರೀಶಿಲಿಸಲು ಪಿಂಚಣಿದಾರರ Beneficiary ID ಬೇಕಾಗುತ್ತದೆ ಮೊದಲು ಈ ಐಡಿಯನ್ನು ತೆಗೆದುಕೊಂಡು ನಂತರ ಈ ಐಡಿ ಹಾಕಿ ಪರಿಶೀಲಿಸಬೇಕು.

Pinchani status check- ಪಿಂಚಣಿದಾರರ Beneficiary ID ತೆಗೆದುಕೊಳ್ಳುವ ವಿಧಾನ: 

ವಿಶೇಷ ಸೂಚನೆ: ಮೊದಲಿಗೆ ಕ್ರೋಮ್ ಬಳಕೆ ಮಾಡುವವರು ತಮ್ಮ ಮೊಬೈಲ್ ನಲ್ಲಿ "Desktop view" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಈ ವೆಬ್ಸೈಟ್ ಪ್ರವೇಶ ಮಾಡಬೇಕು ಏಕೆಂದರೆ ಎಲ್ಲಾ ಆಯ್ಕೆಗಳು ಸರಿಯಾಗಿ ಗೋಚರಿಸುತ್ತವೆ ಅದ ಕಾರಣ.

Step-1: ಮೊದಲಿಗೆ ಇಲ್ಲಿ ಕ್ಲಿಕ್ ಮಾಡಿ> Pension Beneficiary ID ಫಲಾನುಭವಿಯ ಜಿಲ್ಲೆ, ತಾಲ್ಲೂಕು, ಗ್ರಾಮೀಣ/ನಗರ, ಹೋಬಳಿ, ಗ್ರಾಮ ಆಯ್ಕೆ ಮಾಡಿಕೊಂಡು ಇದೆ ಪೇಜ್ ನಲ್ಲಿ ತೋರಿಸುವ ಕ್ಯಾಪ್ಚರ್ ಕೋಡ ಅನ್ನು ನಮೂದಿಸಿ "Search" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: sheep and goat training- ಶೇ 50% ಸಹಾಯಧನದಲ್ಲಿ ಕುರಿ-ಆಡು ಸಾಕಾಣಿಕೆ ಆರಂಭಿಸಲು ಇಲ್ಲಿದೆ ಸುವರ್ಣಾವಕಾಶ!

Step-2: ತದನಂತರ ನೀವು ಆಯ್ಕೆ ಮಾಡಿದ ಗ್ರಾಮದ ಎಲ್ಲಾ ಪಿಂಚಣಿದಾರರ ಐಡಿ ಹೆಸರು ಇತ್ಯಾದಿ ವಿವರ ಗೋಚರಿಸುತ್ತದೆ ಇದರಲ್ಲಿ ನಿಮ್ಮ ಹೆಸರನ್ನು ಹುಡುಕಿ ನಿಮ್ಮ ಹೆಸರಿನ ಮುಂದೆ ಕಾಣುವ ಪಿಂಚಣಿದಾರರ Beneficiary ID ಅನ್ನು ಒಂದು ಕಡೆ ಬರೆದಿಟ್ಟುಕೊಳ್ಳಬೇಕು. 

ಪಿಂಚಣಿದಾರರ Beneficiary ID ಬಳಕೆ ಮಾಡಿ ಪಿಂಚಣಿ ಹಣ ಜಮಾ ಅಗಿರುವುದನ್ನು ಚೆಕ್ ಮಾಡುವ ವಿಧಾನ:

ಮೇಲೆ ತಿಳಿಸಿರುವ ಹಂತಗಳನ್ನು ಅನುಸರಿಸಿ ನಿಮ್ಮ ಪಿಂಚಣಿದಾರರ ಐಡಿ ಅನ್ನು ತೆಗೆದುಕೊಂಡ ಬಳಿಕ ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ನಿಮಗೆ ಅಕ್ಟೋಬರ್ ತಿಂಗಳ ಪಿಂಚಣಿ ಹಣ ವರ್ಗಾವಣೆ ಅಗಿದಿಯೋ ಅಥವಾ ಇಲ್ಲವೋ ಎಂದು ತಿಳಿಯಬವುದು. 

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ ಮಾಡಿ> Pension status check ಪಿಂಚಣಿದಾರರ Beneficiary ID ಅನ್ನು ನಮೂದಿಸಬೇಕು ತದನಂತರ ಅಲ್ಲೇ ಗೋಚರಿಸುವ ಕ್ಯಾಪ್ಚರ್ ನಮೂದಿಸಿ "Search" ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: free sewing machine scheme-2023: ಉಚಿತವಾಗಿ ವಿದ್ಯುತ್‌ ಚಾಲಿತ ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ!

Step-2: ಇದೆ ಪೇಜ್ ನಲ್ಲಿ ಕೊನೆಯಲ್ಲಿ ತೋರಿಸುವ "Click here to get payment details from SSP portal" ಈ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ Beneficiary ID ಮತ್ತು ಕ್ಯಾಪ್ಚರ್ ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮಗೆ ಎಷ್ಟು ಹಣ ಜಮಾ ಅಗಿದೆ, ಯಾವ ದಿನದಂದು ಹಣ ವರ್ಗಾವಣೆ ಅಗಿದೆ, UTR ನಂಬರ್, ಬ್ಯಾಂಕ್ ಖಾತೆಯ ಮೊದಲ ಸಂಖ್ಯೆ, ಕೊನೆಯಲ್ಲಿ ಪಾವತಿ ಸ್ಥಿತಿ/Payment statu- "Success" ಎಂದು ತೋರಿಸುತ್ತದೆ.

ಇದನ್ನೂ ಓದಿ: FID Number-2023: ಈ ನಂಬರ್ ಹೊಂದಿದ ರೈತರಿಗೆ ಮಾತ್ರ ಬರ ಪರಿಹಾರ ಮೊತ್ತ ಜಮೆ! ಕೂಡಲೇ FID ಮಾಡಿಸಿಕೊಳ್ಳಿ.

pension schemes details-2023: ಯಾವೆಲ್ಲ ಯೋಜನೆಯಡಿ ಎಷ್ಟು ಹಣ ವರ್ಗಾವಣೆ ವರ್ಗಾಹಿಸಲಾಗುತ್ತದೆ?

1)ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ- A) 60 ರಿಂದ 64 ವರ್ಷದ ಒಳಗಿನವರಿಗೆ- Rs. 800 , B) 65ವರ್ಷ ಮೇಲ್ಪಟ್ಟವರಿಗೆ- Rs. 1,200 
2)ವಿಧವಾ ಪಿಂಚಣಿ ಯೋಜನೆ- Rs. 800
3)ಅಂಗವಿಕಲ ಪಿಂಚಣಿ- Rs. 800 ರಿಂದ Rs. 2000 ರವರೆಗೆ.
4)ಸಂಧ್ಯಾ ಸುರಕ್ಷಾ ಯೋಜನ- Rs. 1200
5)ಮನಸ್ವಿನಿ- Rs. 800
6)ಮೈತ್ರಿ- Rs. 800
7)ಸಾಲದ ಭಾದೆಯಿಂದ ಸಂಕಷ್ಟಕ್ಕೆ ಒಳಗಾಗಿ ಆತ್ಮಹತ್ಯ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ ಯೋಜನೆ- Rs. 800
8)ಆಸಿಡ್‌ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಯೋಜನೆ- Rs. 10,000
9)ಎಂಡೋಸಲ್ಫಾನ್‌ ಸಂತ್ರಸ್ಥರಿಗೆ ಮಾಸಿಕ ಪಿಂಚಣಿ ಯೋಜನೆ- Rs. 2000 ರಿಂದ Rs. 4000 ರವರೆಗೆ.

ಇದನ್ನೂ ಓದಿ: Annabhagya DBT Status: "ಅನ್ನಭಾಗ್ಯ ಯೋಜನೆ" ರೂ 240 ಕೋಟಿ ಸೆಪ್ಟೆಂಬರ್ ತಿಂಗಳ ಅಕ್ಕಿ ಹಣ ವರ್ಗಾವಣೆ! ನಿಮ್ಮ ಖಾತೆಗೆ ಬಂತಾ ಚೆಕ್ ಮಾಡಿ.